Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
Valentines Day 2025: ಪ್ರೇಮಿಗಳ ದಿನ ಹಂಚಿಕೊಳ್ಳಲು ಇಲ್ಲಿವೆ 10 ಅದ್ಭುತ ಎಐ ರಚಿತ ಫೋಟೋಗಳು..!!
ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನ ಆಚರಿಸುತ್ತಾರೆ ಅನ್ನೋದು ನಿಮಗೀ ತಿಳಿದಿದೆ. ತಮ್ಮ ಪ್ರೀತಿ ಪಾತ್ರರಿಗೆ ಈ ದಿನ ವಿಶೇಷವಾಗಿ ಮೀಸಲಿಟ್ಟು ಅವರ ಜೊತೆಗೆ ಕಳೆಯಲು ಬಯಸುವ ದಿನವಾಗಿದೆ. ವಿಶ್ವದಾದ್ಯಂತ ಪ್ರೇಮಿಗಳು ದಿನ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಕಳೆದೊಂದು ವಾರದಿಂದಲೂ ಈ ಪ್ರೇಮಿಗಳ ವಾರ ನಡೆಯುತ್ತಿದೆ. ಒಂದೊಂದು ದಿನ ಒಂದೊಂದು ಆಚರಣೆಯಲ್ಲಿ ಯುವ ಪ್ರೇಮಿಗಳು ಭಾಗಿಯಾಗೋದು ನೋಡಬಹುದು.

ಪ್ರತಿ ವರ್ಷ ಪ್ರಪಂಚದಾದ್ಯಂತದ ಜನರು ತಮ್ಮ ವಿಶೇಷ ವ್ಯಕ್ತಿ ಅಥವಾ ತಮ್ಮ ಪ್ರೀತಿಪಾತ್ರರೊಡನೆ ತಮ್ಮ ಪ್ರೀತಿ ಮತ್ತು ವಿಶ್ವಾಸವನ್ನು ವ್ಯಕ್ತಪಡಿಸಲು ಈ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಪ್ರೇಮಿಗಳ ದಿನವು ರೋಸ್ ಡೇ ಇಂದ ಆರಂಭಗೊಂಡು ಕಿಸ್ ಡೇ ವರೆಗೆ ಅಂದರೆ 7 ದಿನಗಳ ಕಾಲ ನಡೆಯುತ್ತೆ. ಕೊನೆಯದಿನ ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತದೆ.
ಕೆಲವು ಇತಿಹಾಸ ತಜ್ಞರು ಹೇಳುವ ಹಾಗೆ ವ್ಯಾಲೆಂಟೈನ್ ಎಂಬ ಸಾಧು ಒಬ್ಬ ಫೆಬ್ರವರಿ 14ರಂದು ಮರಣ ಹೊಂದಿದ್ದ. ಆತನ ನೆನಪಿಗಾಗಿ ವ್ಯಾಲೆಂಟೈನ್ಸ್ ಡೇ ಎಂದು ಆಚರಿಸಲಾಗಿತ್ತು ಎಂದು ಕೂಡ ಹೇಳಲಾಗುತ್ತದೆ. ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶದಲ್ಲಿ ಮೊದಲ ಬಾರಿಗೆ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗಿತ್ತು ಎಂದು ಉಲ್ಲೇಖಗಳಿವೆ.
ಹಾಗೆ ಈ ಸಮಯದಲ್ಲಿ ಪಕ್ಷಿಗಳು ಗೂಡು ಕಟ್ಟಿ ಮರಿ ಮಾಡುತ್ತವೆ ಅವುಗಳ ಸಂತಾನೋತ್ಪತ್ತಿ ಸಮಯವಿದು ಎಂದು ಅವುಗಳಿಗಾಗಿ ಒಂದು ದಿನ ಮೀಸಲಿಟ್ಟು ನೀರು, ಆಹಾರ ನೀಡುತ್ತಿದ್ದರಂತೆ.
ವ್ಯಾಲೆಂಟೈನ್ ತಾಯಿ ದೇವತೆ ಬಗ್ಗೆ ನಿಮಗೆ ಗೊತ್ತಾ?
ನಿಮಗೆ ಪ್ರೇಮಿಗಳ ದಿನ ಆಚರಣೆ ಕುರಿತು ತಿಳಿದಿದೆ. ಆದ್ರೆ ಈ ಪ್ರೇಮಿಗಳ ದಿನದ ತಾಯಿ ಎಂದು ಮಹಿಳೆಯೊಬ್ಬರನ್ನು ಕರೆಯಲಾಗಿದೆ. 1840ರ ಸಮಯದಲ್ಲಿ ಅಮೆರಿಕದಲ್ಲಿ ಈ ಪ್ರೇಮಿಗಳ ದಿನ ಬಹಳ ಫೇಮಸ್ ಆಗಿತ್ತು, ಇದಕ್ಕೆ ತಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಪ್ರೀತಿಯ ಸಂದೇಶ ನೀಡಲು ಕೈಯಿಂದ ಕಾರ್ಡ್‌ಗಳ ಬರೆಯುತ್ತಿದ್ದರು.
ಆದ್ರೆ ಇದನ್ನೇ ಹೊಸ ರೀತಿಯ ಕಾರ್ಡ್‌ಗಳ ಮೂಲಕ ಪ್ರೇಮಿಗಳ ದಿನ ಕಲರ್‌ಫುಲ್ ಮಾಡಿದ್ದು, ಈ Esther A. Howland ಎಂಬ ಮಹಿಳೆ. ಆಕೆ ಕೈಯಿಂದ ರಚಿಸಿದ್ದ ಕಾರ್ಡ್‌ಗಳನ್ನು ಪ್ರೇಮಿಗಳ ದಿನದಂದು ಮಾರಾಟ ಮಾಡಲು ಮುಂದಾಗಿದ್ದಳು.
ಈ ಪ್ರೇಮಿಗಳ ದಿನದಂದು ಎಲ್ಲರು ವಿಶೇಷ ರೀತಿಯ ಈ ಕಾರ್ಡ್‌ಗಳನ್ನು ಖರೀದಿಸುತ್ತಿದ್ದರು. ಹೀಗಾಗಿ ಆಕೆ ಬಹಳ ಫೇಮಸ್ ಆದಳು, ಇದಾದ ಬಳಿಕ ವಿಶ್ವದ ಮೂಲೆ ಮೂಲೆಯಲ್ಲೂ ಈ ಗ್ರೀಟಿಂಗ್ ಕಾರ್ಟ್‌ಗಳ ನೀಡುವ ಹವ್ಯಾಸವೂ ಬೆಳೆದು ಬಂದಿದೆ.
ಪ್ರೇಮಿಗಳ ದಿನದಂದು ಸಾಮಾನ್ಯವಾಗಿ ಒಂದು ಗಿಫ್ಟ್ ಜೊತೆಗೆ ಗುಲಾಬಿ ಹೂವು ನೀಡುವುದು ನೋಡಿದ್ದೇವೆ. ಈ ಸಂಪ್ರದಾಯವು 17ನೇ ಶತಮಾನದಲ್ಲಿ ಆರಂಭಗೊಂಡಿತು ಎಂದು ಹೇಳಲಾಗಿದೆ. ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಕೆಂಪು ಗುಲಾಬಿ ನೀಡುವುದು ನಡೆದುಕೊಂಡು ಬಂದಿದೆ.
ನಂತರ ಸ್ವೀಡನ್ ರಾಜ ಎರಡನೇ ಚಾರ್ಲ್ಸ್ ಪರ್ಷಿಯಾಗೆ ಪ್ರವಾಸ ಹೊರಟ ಸಂದರ್ಭದಲ್ಲಿ ಯೂರೋಪ್‌ನಲ್ಲಿ ಈ ಪ್ರೇಮಿಗಳ ದಿನದಂದು ಗುಲಾಬಿ ಹೂವುಗಳ ಮೂಲಕ ತಮ್ಮ ಮನದಾಳದ ಸಂದೇಶ ತಲುಪಿಸುವ ಪ್ರಕ್ರಿಯೆ ಪರಿಚಯಿಸಿದ ಎಂದು ನಂಬಲಾಗಿದೆ.



Click it and Unblock the Notifications







