Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವ್ಯಾಲೆಂಟೈನ್ಸ್ ದಿನ 2024: ಇವರ ಲವ್ - ಬ್ರೇಕಪ್ ಕತೆ ಕೇಳಿದರೆ ಅಯ್ಯೋ ಪಾಪ ಅನಿಸುತ್ತೆ!
ಫೆಬ್ರವರಿ 14 ವ್ಯಾಲೆಂಟೈನ್ಸ್ ದಿನ, ಈ ದಿನ ಹೇಳಲು ಹಲವು ಸುಂದರ ಕತೆಗಳಿರುತ್ತದೆ, ಆದರೆ ಕೆಲವರ ಸ್ಟೋರಿ ಕೇಳಿದಾಗ ನಗು ಬರುತ್ತದೆ ಜೊತೆಗೆ ಅಯ್ಯೊ ಪಾಪ ಅನಿಸುತ್ತದೆ, ಹೌದು ಕೆಲವರು ವ್ಯಾಲೆಂಟೈನ್ಸ್ ದಿನ ತಮಗಾದ ಅನುಭದ ಬಗ್ಗೆ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿದ್ದಾರೆ, ಅವುಗಳಲ್ಲಿ ಕೆಲವು ಕತೆಗಳು ನಿಮಗಾಗಿ...

1. ಹೂವಿನ ಬೊಕ್ಕೆ ಹಿಂದಿನ ಕತೆ
ಆತ ನನಗೆ ತುಂಬಾ ಸುಂದರವಾದ ಹೂವಿನ ಬೊಕ್ಕೆ ನೀಡಿದ , ಉದ್ದ ದಂಟುವಿರುವ ಹೂವುಗಳನ್ನು ನನಗೆ ನೀಡಿದ್ದ , ಅದನ್ನು ನೋಡಿ ನನಗೆ ತುಂಬಾ ಖುಷಿಯಾಗಿತ್ತು, ಅದಾಗಿ ಸ್ವಲ್ಪ ದಿನಗಳಾದ ಮೇಲೆ ನಮ್ಮ ಸಂಬಂಧ ಮುರಿದು ಬಿತ್ತು, ತಿಂಗಳ ಬಳಿಕ ಕ್ರೆಡಿಟ್ ಬಿಲ್ ಬಂತು ನೋಡಿದರೆ ಆತ ಆ ಬೊಕ್ಕೆಯನ್ನು ನನ್ನ ಕ್ರೆಡಿಟ್ ಕಾರ್ಡ್ ಉಜ್ಜಿ ತಂದಿದ್ದ.
2. ಅಜ್ಜಿ ಕೈ ಸೇರಿದ ಪ್ರೇಮದ ಗಿಫ್ಟ್ಸ್
ನನ್ನ ಇಬ್ಬರು ಕ್ಲಾಸ್‌ಮೇಟ್ ಡೇಟಿಂಗ್ ಮಾಡುತ್ತಿದ್ದರು, ಅವರ ಪ್ರೀತಿ ಶುರುವಾಗಿ ಒಂದು ವಾರವಾಗಿತ್ತು ಅಷ್ಟೇ, ಆತ ವ್ಯಾಲೆಂಟೈನ್ಸ್ ದಿನಕ್ಕೆ ನೀಡಲು ದೊಡ್ಡ ಚಾಕೋಲೆಟ್ ಬಾಕ್ಸ್, ಗಿಫ್ಟ್ಸ್ ಎಲ್ಲಾ ಖರೀದಿಸುತ್ತಾನೆ, ಆದರೆ ವ್ಯಾಲೆಂಟೈನ್ಸ್ ದಿನದ ಹಿಂದಿನ ದಿನವೇ ಬ್ರೇಕಪ್ ಆಗುತ್ತೆ, ಆತ ತಾನು ತಂದ ಚಾಕೋಲೆಟ್ ಹಾಗೂ ಗಿಫ್ಟ್ಸ್ ಆತನ ಅಜ್ಜಿಗೆ ಕೊಡುತ್ತಾನೆ.
3. ಚಾಕೋಲೆಟ್ ಕೊಟ್ಟು ಬ್ರೇಕಪ್
ನಾನು ಒಬ್ಬರನ್ನು ತುಂಬಾನೇ ಸೀಕ್ರೆಟ್ ಆಗಿ ಲವ್ ಮಾಡುತ್ತಿದ್ದೆ, ಆತ ಒಂದು ಚಾಕೋಲೆಟ್ ಜೊತೆ ಒಂದು ಲೆಟರ್ ಇಟ್ಟು ನೀಡುತ್ತಾನೆ, ಬಿಡಿಸಿ ನೋಡಿದರೆ ನಾವು ಬ್ರೇಕಪ್ ಆಗುವ ಅಂತ ಬರೆದಿರುತ್ತಾನೆ, ಅವನಿಗೆ ಬೇರೆ ಹುಡುಗಿ ಮೇಲೆ ಕ್ರಷ್ ಅಂತೆ, ಅವನು ಕೊಟ್ಟ ಚಾಕೋಲೆಟ್ ಮಾತ್ರ ಸೂಪರ್ ಆಗಿತ್ತು.
ಮದುವೆಯಾದ ಮೇಲೆ ಮಾತ್ರ ಎಲ್ಲಾ ಅಂದೆ
ನಾವಿಬ್ಬರು ಪ್ರೀತಿಸಲು ಶುರು ಮಾಡಿ ಕೆಲವು ದಿನಗಳ ಆಗಿತ್ತು ಅಷ್ಟೇ, ಅಷ್ಟರಲ್ಲಿ ವ್ಯಾಲೆಂಟೈನ್ಸ್ ಡೇ ಬಂತು, ಹೊಸ ಪ್ರೇಮಿಗಳು ಬೇರೆ, ಆ ದಿನ ತುಂಬಾ ಖುಷಿಯಾಗಿ ಸುತ್ತಾಡಿದೆವು, ಆತ ನನಗೆ ತುಂಬಾನೇ ಗಿಫ್ಟ್ ನೀಡಿದ, ಇಬ್ಬರು ಮೂವಿಗೆ ಹೋಗಿ ರಾತ್ರಿ ನನ್ನ ಫ್ಲ್ಯಾಟ್‌ಗೆ ಮರಳಿದೆವು, ಆತ ನೋಡಿದರೆ ತುಂಬಾನೇ ಕ್ಲೋಸ್ ಆಗಿ ಹತ್ರ ಬಂದ, ನಾನು ಇದೆಲ್ಲಾ ಈಗ ಬೇಡ, ಮದುವೆ ಆದ ಮೇಲಷ್ಟೇ ಅಂದೆ, ತಕ್ಷಣವೇ ಆತನಿಗೆ ಕೋಪ ಬಂತು. ನಾನು ನಿನಗಾಗಿ ಇಷ್ಟೆಲ್ಲಾ ಮಾಡಿದೆ, ಆದರೆ ನಿನಗೆ ನನಗಾಗಿ ಇಷ್ಟೂ ಮಾಡಲು... ಎಂದು ಹೇಳುವಷ್ಟರಲ್ಲಿ ಏನು? ಅಂತ ಕೋಪದಲ್ಲಿ ಕೇಳಿದೆ, ಅವನು ಏನೂ ಮಾತನಾಡಿಲ್ಲ, ಆವಾಗ ನಾನು ನೀನು ಈ ಉದ್ದೇಶಕ್ಕೆ ನನಗೆ ಇದೆಲ್ಲಾ ಕೊಡಿಸಿದೆಯಾ? ಈಗಲೇ ಇಲ್ಲಿಂದ ಹೊರಡು ಅಂತೀನಿ, ಹೀಗೆ ನಮ್ಮ ಲವ್ ಬ್ರೇಕಪ್ ಆಯ್ತು... ಅವನು ಕೊಟ್ಟ ವಸ್ತುಗಳನ್ನು ಕಸದ ಬುಟ್ಟಿ ಹಾಕಲಿಲ್ಲ, ಅದನ್ನು ತೆಗೆದುಕೊಂಡು ಹೋಗಲು ಅವನು ಬರಬಹುದು, ಅಂಥವನು ಅವನು...
ಮೇಕಪ್ ಮಾಡಿ ಅವಾಂತರ
ನಾನು ವ್ಯಾಲೆಂಟೈನ್ಸ್ ದಿನದಂದು ನನ್ನ ಗಂಡನ ಜೊತೆಗೆ ಔಟಿಂಗ್ ಹೋಗಬೇಕೆಂದಿದ್ದೆ, ಈ ದಿನ ಸ್ಪೆಷಲ್ ಇನ್ನೂ ಸ್ವಲ್ಪ ಚೆನ್ನಾಗಿ ಕಾಣುವ ಎಂದು ಮೇಕಪ್ ಮಾಡಿಸುವ ಆಲೋಚನೆ ಬಂತು, ನನ್ನ ಫ್ರೆಂಡ್ ನನಗೆ ಅವಳ ಫ್ರೆಂಡ್ ಚೆನ್ನಾಗಿ ಮೇಕಪ್ ಮಾಡುತ್ತಾಳೆ ಎಂದು ಹೇಳಿದ್ದಳು, ಅದರಂತೆ ಮೇಕಪ್ ಮಾಡಿಸಲು ತೀರ್ಮಾನಿಸಿ ಹೋದೆ, ಅವಳ ಮೇಕಪ್ ಎಲ್ಲಾ ಮುಗಿದ ಮೇಲೆ ಕನ್ನಡಿ ನೋಡಿದರೆ ನನಗೆ ಭಯವಾಯ್ತು, ನನ್ನ ಸ್ಕಿನ್ ಟೋನ್‌ಗೂ ಅವಳು ಮಾಡಿದ ಮೇಕಪ್‌ಗೂ ಸ್ವಲ್ಪ ಹೋಲಿಕೆ ಇರಲಿಲ್ಲ, ವಿಚಿತ್ರ ಅನಿಸಿತು, ಅವಳಿಗೆ ಥ್ಯಾಂಕ್ಸ್ ಹೇಳಿ ದುಡ್ಡು ಕೊಟ್ಟು ಸೀದಾ ಮನೆಗೆ ಹೋಗಿ ಮೇಕಪ್ ತೊಳೆದುಕೊಂಡೆ.
ಬ್ರೇಕಪ್ ಆದ ಮೇಲೂ ಅವನ ಜೊತೆ ಇರಬೇಕಾಯ್ತು
ನಮ್ಮದು ಲಾಂಗ್ ಡಿಸ್ಟೇನ್ಸ್ ಲವ್ ಆಗಿತ್ತು, ಆದರೆ ಈ ಲವ್ ಸರಿ ಆಗುತ್ತಿರಲಿಲ್ಲ, ಎಂಡ್ ಮಾಡಬೇಕೆಂದು ತೀರ್ಮಾನಿಸಿದೆ, ವೀಕೆಂಡ್ ಬರಲಿ ಅವನಿರುವ ಕಡೆ ಹೋಗಿ ಹೇಳಿ ಬರುವ ಅಂತ ಇದ್ದೆ, ಆದರೆ ಆ ವೀಕೆಂಡ್ ವ್ಯಾಲೆಂಟೈನ್ಸ್ ಡೇ ಆಗಿತ್ತು, ಆತ ನನ್ನನ್ನು ಒಂದು ಡಿನ್ನರ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಬ್ರೇಕಪ್ ಬಗ್ಗೆ ಹೇಳಿದ, ಆರ್ಡರ್ ಮಾಡಿದ ಫುಡ್ಸ್ ತಿನ್ನಲಿಲ್ಲ, ವೇಯ್ಟರ್ ಬಂದು ಆಲ್ ಒಕೆ ಎಂದು ಕೇಳಿದ, ಅಲ್ಲಿಂದ ಮರಳಿ ಹೋಗಬೇಕು ಎಂದಿರುವಾಗ ಅವತ್ತು ನಾನು ಹೋಗಬೇಕಾಗಿದ್ದ ಟ್ರೈನ್ ಕ್ಯಾನ್ಸಲ್ ಆಗಿತ್ತು, ಆತ ನನ್ನನ್ನು ಡಂಪ್ ಮಾಡಿದ ಮೇಲೂ ಆ ದಿನ ಅವನ ಮನೆಯಲ್ಲಿ ಇರಬೇಕಾಯ್ತು.
ವ್ಯಾಲೆಂಟೈನ್ಸ್ ಡೇಗೆ ಮನೆಗೆ ಕರೆದಾಗ
ನನ್ನ ಎಕ್ಸ್ ವ್ಯಾಲೆಂಟೈನ್ಸ್ ಡೇಗೆ ಅವನ ಮನೆಗೆ ಕರೆದಿದ್ದ, ನನಗೆ ತುಂಬಾ ಖುಷಿ, ವ್ಯಾಲೆಂಟೈನ್ಸ್ ಡೇ ಬಗ್ಗೆ ತುಂಬಾ ಕನಸು ಕಂಡು ಅವನ ಮನೆಗೆ ಹೋದೆ, ಅವನ ಮನೆಗೆ ಹೋಗುವಾಗ ಪೆನ್ ಹಾಗೂ ನೋಟ್‌ಬುಕ್ಸ್ ಗಿಫ್ಟ್ಸ್ ತಗೊಂಡೆ, ಅವನಿಗೆ ಡ್ರಾಯಿಂಗ್ ಅಂದರೆ ತುಂಬಾ ಇಷ್ಟ, ಹಾಗಾಗಿ ಅವುಗಳನ್ನು ಗಿಫ್ಟ್ಸ್ ನೀಡಲು ಯೋಚಿಸಿದ್ದೆ, ಅವನ ಮನೆಗೆ ಹೋದರೆ ಅವನ ವರ್ತನೆ ವಿಚಿತ್ರ ಅನಿಸಿತು, ಆತನಿಗೆ ಗಿಫ್ಟ್ಸ್ ನೀಡಿದೆ ಆಗ ಆತನ ನಾವಿಬ್ಬರು ಬ್ರೇಕಪ್ ಮಾಡುವ ಅಂತ ಕೇಳ್ತಾನೆ, ಅಲ್ಲಿಗೆ ಆ ಪ್ರೀತಿ ಕೊನೆಯಾಯ್ತು.
ಸಂಗಾತಿಗೆ ಪ್ರತಿನಿತ್ಯ ಅಪ್ಪುಗೆ ನೀಡಿದರೆ ಬದುಕಿಗೆ ಇಷ್ಟೆಲ್ಲಾ ಒಳಿತಿದೆ ಗೊತ್ತಾ?



Click it and Unblock the Notifications
