Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಪ್ರೇಮಿಗಳ ದಿನ ಗೆಳೆಯನಿಗೆ ಈ ಗಿಫ್ಟ್ ನೀಡಿ..! ಇಲ್ಲಿವೆ ಕೆಲವು ಟಿಪ್ಸ್..!
ಫೆಬ್ರವರಿ 14ಕ್ಕೆ ಇನ್ನೇನು ಕೆಲವೇ ದಿನ ಬಾಕಿ ಉಳಿದಿದೆ. ವಿಶ್ವದಾದ್ಯಂತ ಪ್ರೇಮಿಗಳ ದಿನವಾಗಿ ಫೆಬ್ರವರಿ 14ನ್ನು ಆಚರಿಸಲಾಗುತ್ತದೆ. ಫೆಬ್ರವರಿ 14ಕ್ಕೂ ಮೊದಲು ವಾರದ ಮುನ್ನವೇ ಈ ದಿನಕ್ಕೆ ತಯಾರಿ ಆರಂಭವಾಗಿರುತ್ತದೆ. ಯುವ ಸಮುದಾಯ ಈ ದಿನಕ್ಕಾಗಿ ಕಾದು ಕುಳಿತಿದೆ.
ಈ ದಿನದಂದು ತಮ್ಮ ಗೆಳಯ, ಗೆಳತಿಗೆ ಪ್ರೇಮ ನಿವೇದನ ಮಾಡಲಾಗುತ್ತದೆ. ಅಲ್ಲದೆ ಅಂದು ವಿಶೇಷವಾಗಿ ಗಿಫ್ಟ್ ನೀಡಿ ಅವರ ಪ್ರೀತಿ ಹೇಳಿಕೊಳ್ಳುತ್ತಾರೆ. ಹಾಗಾದರೆ ಆ ದಿನದಂದು ನಿಮ್ಮ ಗೆಳೆಯನಿಗೆ ಯಾವ ರೀತಿಯ ಗಿಫ್ಟ್ ನೀಡಬೇಕು? ಎಂಬ ಕುರಿತು ಕೆಲವು ಸಲಹೆಯನ್ನು ನೀಡಲಾಗಿದೆ ನೋಡಿ.
ಆದ ದಿನ ಪ್ರೀತಿ ಪಾತ್ರರಿಗೆ ಗ್ರೀಟಿಂಗ್ ಕಾರ್ಡ್‌ಗಳು, ಹೂವುಗಳು, ಚಾಕೊಲೇಟ್‌ಗಳು ಮತ್ತು ಇತರ ಉಡುಗೊರೆಗಳ ನೀಡುತ್ತಾರೆ. ತಮ್ಮ ಗೆಳೆಯ-ಗೆಳತಿ, ಗಂಡ-ಹೆಂಡತಿ ಅಥವಾ ತಮ್ಮ ಪ್ರೀತಿಪಾತ್ರರ ಜೊತೆ ಸೇರಿ ಈ ದಿನವನ್ನು ವಿಶೇಷವಾಗಿಸುತ್ತಾರೆ.

ಬಟ್ಟೆ ಮತ್ತು ವ್ಯಾಲೆಟ್
ಪ್ರೇಮಿಗಳ ದಿನದಂದು, ನೀವು ನಿಮ್ಮ ಗೆಳೆಯನಿಗೆ ಬಟ್ಟೆ ಮತ್ತು ವ್ಯಾಲೆಟ್ ಅನ್ನು ಉಡುಗೊರೆಯಾಗಿ ನೀಡಬಹುದು. ಇದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಹುಡುಗರು ವ್ಯಾಲೆಟ್ ಅನ್ನು ಖರೀದಿಸುವು ತುಂಬ ಅಪರೂಪ ಯಾರಾದರು ಗಿಫ್ಟ್ ಮಾಡುವವರೆಗೂ ಹಳೆಯ ವ್ಯಾಲೆಟ್ ಅನ್ನೇ ಬಳಸುತ್ತಿರುತ್ತಾರೆ. ಹೀಗಾಗಿ ವ್ಯಾಲೆಟ್ ನೀಡಿದರೆ ಅವರು ಸದಾ ನೆನಪಲ್ಲಿ ಇಟ್ಟುಕೊಳ್ಳುತ್ತಾರೆ. ಇದಲ್ಲದೆ ಬಟ್ಟೆಯನ್ನು ಗಿಫ್ಟ್ ಆಗಿ ನೀಡಬಹುದು. ಗೆಳೆಯನಿಗೆ ಆತನ ಇಷ್ಟದ ಬಣ್ಣದ ಶರ್ಟ್, ಪ್ಯಾಂಟ್, ಟಿ ಶರ್ಟ್ ಗಿಫ್ಟ್ ಮಾಡಬಹುದು.
ಕೇಕ್
ಪ್ರೇಮಿಗಳ ದಿನದಂದು ನಿಮ್ಮ ಗೆಳೆಯನಿಗೆ ಏನಾದರೂ ಉಡುಗೊರೆಯನ್ನು ನೀಡಲು ನೀವು ಬಯಸಿದರೆ, ನೀವು ಕೇಕ್ ಅನ್ನು ನೀಡಬಹುದು. ಮೊದಲಿಗೆ, ನಿಮ್ಮ ಗೆಳೆಯನ ನೆಚ್ಚಿನ ಫ್ಲೇವರ್ ಯಾವುದು ಎಂಬುದನ್ನು ತಿಳಿದುಕೊಳ್ಳಿ. ನಂತರ ಕೇಕ್ ಮೇಲೆ ನಿಮ್ಮ ಇಷ್ಟದ ಸಾಲುಗಳ ಬರೆಯಬಹುದು. ಇಲ್ಲವೆ ಇಬ್ಬರ ಹೆಸರು ಕೇಕ್ ಮೇಲೆ ಬರೆಸಿ ಆತನಿಗೆ ನೀಡಬಹುದು.
ಕೈ ಗಡಿಯಾರ
ವಾಸ್ತವವಾಗಿ, ಹೆಚ್ಚಿನ ಹುಡುಗರು ವಾಚ್ ಧರಿಸಲು ಇಷ್ಟಪಡುತ್ತಾರೆ. ನೀವು ಬಯಸಿದರೆ ಪ್ರೇಮಿಗಳ ದಿನದಂದು ನಿಮ್ಮ ಗೆಳೆಯನಿಗೆ ಕೈ ಗಡಿಯಾರವನ್ನು ಉಡುಗೊರೆಯಾಗಿ ನೀಡಬಹುದು. ನೀವು ಸುಲಭವಾಗಿ ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಪಡೆಯಬಹುದು. ಕೆಲ ಹುಡುಗರು ವಾಚ್‌ಗಳ ಸಂಗ್ರಹಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇಲ್ಲದೆ ಒಂದಕ್ಕಿಂತ ಹೆಚ್ಚಿನ ವಾಚ್ ಬಳಸಲು ಹುಡುಗರು ಇಷ್ಟಪಡುತ್ತಾರೆ.
ಪವರ್ ಬ್ಯಾಂಕ್
ಪ್ರೇಮಿಗಳ ದಿನದಂದು, ನಿಮ್ಮ ಗೆಳೆಯನಿಗೆ ನೀವು ಪವರ್ ಬ್ಯಾಂಕ್ ಅನ್ನು ಉಡುಗೊರೆಯಾಗಿ ನೀಡಬಹುದು. ನಿಮ್ಮ ಸ್ನೇಹಿತ ಖಂಡಿತವಾಗಿಯೂ ಈ ಉಡುಗೊರೆಯನ್ನು ಇಷ್ಟಪಡುತ್ತಾನೆ.ಹೆಚ್ಚಿನವರು ಪವರ್ ಬ್ಯಾಂಕ್ ಖರೀದಿಸಲು ಇಷ್ಟಪಡುವುದಿಲ್ಲ ಆದರೆ ಅದರ ಅವಶ್ಯಕತೆ ಅವರಿಗೆ ತುಂಬಾನೆ ಇರುತ್ತದೆ. ಆದರೆ ಹಲವು ಕಾರಣಗಳಿಂದಾಗಿ ಪವರ್ ಬ್ಯಾಂಕ್ ಖರೀದಿಯ ಮನಸ್ಸು ಮಾಡಿರುವುದಿಲ್ಲ. ಒಂದು ವೇಳೆ ಯಾರಾದರೂ ಗಿಫ್ಟ್ ನೀಡಿದರೆ ತುಂಬ ಖುಷಿಯಾಗುತ್ತಾರೆ.
ವೈರ್‌ಲೆಸ್ ಇಯರ್‌ಫೋನ್‌ಗಳು
ಈ ವರ್ಷ ಪ್ರೇಮಿಗಳ ದಿನದಂದು ನಿಮ್ಮ ಗೆಳೆಯನಿಗೆ ಏನು ಉಡುಗೊರೆ ನೀಡಬಹುದು ಎಂದು ನೀವು ಯೋಚಿಸುತ್ತಿದ್ದರೆ, ವೈರ್‌ಲೆಸ್ ಇಯರ್‌ಫೋನ್ ಉತ್ತಮವಾಗಿರುತ್ತದೆ. ಹುಡುಗರ ಬಳಿ ಈ ಗ್ಯಾಜೆಟ್ ಇದ್ದರೂ ಹೊಸದನ್ನು ಖರೀದಿಸಲು ಅವರು ಯೋಚಿಸಿರುತ್ತಾರೆ.
ಫೋಟೋ ಫ್ರೇಮ್
ಪ್ರೇಮಿಗಳ ದಿನದಂದು ನಿಮ್ಮ ಗೆಳೆಯನಿಗೆ ಉಡುಗೊರೆಯನ್ನು ನೀಡಲು ನೀವು ಬಯಸಿದರೆ, ಫೋಟೋ ಫ್ರೇಮ್ ಉತ್ತಮ ಆಯ್ಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಫೋಟೋ ಫ್ರೇಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ ನಿಮ್ಮ ಸ್ನೇಹಿತನ ಅಥವಾ ಗೆಳೆಯನ ಫೋಟೋವನ್ನು ಫ್ರೇಮ್ ಹಾಕಿಸಿ ನೀಡುವುದು ಸದಾ ಅವರ ನೆನಪಲ್ಲಿ ಉಳಿಯುವಂತೆ ಮಾಡುತ್ತದೆ.



Click it and Unblock the Notifications
