Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ವ್ಯಾಲೆಂಟೈನ್ಸ್ ವೀಕ್: ಫೆಬ್ರವರಿ 7-14ರ ಈ ವಾರ ತುಂಬಾ ವಿಶೇಷವಾದದ್ದು ಏಕೆ?
ಫೆಬ್ರವರಿ ಬಂತೆಂದರೆ ಪ್ರೇಮ ಜ್ವರದ ತಿಂಗಳು ಅದರಲ್ಲೂ ಫೆಬ್ರವರಿ 7-14ರವರೆಗೆ ಈ ಪ್ರೇಮ ಜ್ವರ ಜ್ವರ ಹೆಚ್ಚಾಗುವುದು, ಏಕೆಂದರೆ ಫೆಬ್ರವರಿ 7-24ರವರೆಗೆ ಪ್ರತಿಯೊಂದು ದಿನವು ಪ್ರೇಮಿಗಳಿಗೆ ತುಂಬಾ ಮುಖ್ಯವಾದ ದಿನಗಳಾಗಿರುತ್ತದೆ, ಒಂದೊಂದು ದಿನ ಒಂದೊಂದು ಕನವರಿಕೆ. ಬನ್ನಿ ಆ ಸ್ಪೆಷಲ್ 7 ದಿನಗಳ ಅರ್ಥವನ್ನು ತಿಳಿಯೋಣ:

ರೋಸ್‌ಡೇ (ಫೆಬ್ರವರಿ 7)
ರೋಸ್ ದಿನದಿಂದ ಪ್ರೇಮಿಗಳ ದಿನದ ಸಂಭ್ರಮ ಶುರುವಾಗುವುದು. ಕೆಂಪು ಗುಲಾಬಿಗಳನ್ನು ಕೊಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಿಪಡಿಸಲಾಗುವುದು. ಕೆಂಪು ಗುಲಾಬಿ ಪ್ರೀತಿ ಹಾಗೂ ಆಕರ್ಷಣೆಯ ಸಂಕೇತ.
ಪ್ರಪೋಸ್ ಡೇ(ಫೆಬ್ರವರಿ 8)
ತಮ್ಮ ಪ್ರೇಮಿಗೆ ಮನಸ್ಸಿನ ಪ್ರೀತಿಯನ್ನು ಹೇಳುವ ದಿನ. ನಿಮ್ಮ ಜೀವನದಲ್ಲಿ ಅವರು ಎಷ್ಟು ಮುಖ್ಯ ಎಂಬುವುದನ್ನು ಮುಕ್ತವಾಗಿ ಹೇಳುವ ದಿನ. ನಾವಿಬ್ಬರು ಜೀವನ ಪೂರ್ತಿ ಜೊತೆಯಾಗಿ ಇರೋಣ ಎಂದು ಪ್ರಾಮಿಸ್ ಮಾಡುವ ದಿನ.
ಚಾಕೋಲೆಟ್ ದಿನ (ಫೆಬ್ರವರಿ 9)
ಚಾಕೋಲೆಟ್ ನೀಡಿ ನಮ್ಮ ಪ್ರೀತಿ ಹೀಗೆ ಇರಲಿ ಎಂದು ಬಯಸುವ ದಿನ. ಈ ದಿನ ಪ್ರೇಮಿಗಳು ಪರಸ್ಪರ ಚಾಕೋಲೆಟ್ ನೀಡ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲಾಗುವುದು.
ಟೆಡ್ಡಿ ದಿನ (ಫೆಬ್ರವರಿ 10)
ಪ್ರೇಮಿ ನೀಡುವ ಟೆಡ್ಡಿ ಬರೀ ಒಂದು ವಸ್ತು ಆಗಿರಲ್ಲ, ಅದಕ್ಕೆ ಜೀವ ಇಲ್ಲದಿದ್ದರೂ ಪ್ರೀತಿಯ ಜೀವ ತುಂಬುತ್ತೇವೆ. ಆ ಟೆಡ್ಡಿಯನ್ನು ನಾವು ಪ್ರೀತಿಸಿದವರನ್ನು ಇಷ್ಟಪಟ್ಟಷ್ಟೇ ಇಷ್ಟಪಡುತ್ತೇವೆ. ನೀವು ಕೊಡುವ ಟೆಡ್ಡಿ ನಿಮ್ಮ ಪ್ರೇಮಿ ಮುಖದಲಗಲಿ ನಗು ಬರಿಸುತ್ತದೆ.
ಪ್ರಾಮಿಸ್ ದಿನ (ಫೆಬ್ರವರಿ 11)
ನಾನೆಂದೂ ನಿನ್ನನ್ನು ಬಿಟ್ಟು ದೂರ ಹೋಗಲ್ಲ ಎಂದು ಪ್ರಾಮಿಸ್ ಮಾಡುವ ದಿನ. ಕಷ್ಟವಿರಲಿ-ಸುಖವಿರಲಿ ನಾನು ನಿನ್ನವನು, ನೀನು ನನ್ನವಳು ಎಂದು ಪ್ರಾಮಿಸ್ ಮಾಡುವ ದಿನ. ಎರಡು ಹೃದಯಗಳು ಒಂದಾದ ಮೇಲೆ ಬದುಕಿನಲ್ಲಿ ಒಟ್ಟಿಗೆ ಇರುತ್ತೇವೆ ಎಂದು ಪ್ರಾಮಿಸ್ ಮಾಡುವ ದಿನ.
ಹಗ್ ಡೇ (ಫೆಬ್ರವರಿ 12)
ನಮ್ಮ ಸಂಗಾತಿ ಪ್ರೀತಿಯ ಅಪ್ಪುಗೆ ನಮ್ಮೆಲ್ಲಾ ನೋವು ಮರೆಸುತ್ತದೆ, ಮನಸ್ಸಿಗೆ ಖುಷಿ ನೀಡುತ್ತದೆ, ಸಂಗಾತಿಯ ಅಪ್ಪುಗೆಯಿಂದ ಸಿಗುವ ಹಿತ ಅನುಭವದಲ್ಲಿ ಕಳೆದು ಹೀಗುತ್ತೇವೆ. ಅಪ್ಪುಗೆಯ ಆ ವ್ಯಕ್ತಿಯ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ.
ಕಿಸ್ ಡೇ (ಫೆಬ್ರವರಿ 13)
ಪ್ರೇಮಿಗಳು ಮುತ್ತು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಈ ದಿನವನ್ನು ಸಂಭ್ರಮಿಸುತ್ತಾರೆ. ಈ ಮುತ್ತು ಜೋಡಿಯ ನಡುವೆ ಪ್ರೀತಿಯ ಕಿಚ್ಚು ಹೆಚ್ಚಿಸುತ್ತದೆ.
ವ್ಯಾಲೆಂಟೈನ್ಸ್ ದಿನ (ಫೆಬ್ರವರಿ 14)
ಪ್ರೇಮಿಗಳ ದಿನ, ಪ್ರಪಂಚದ ಹಲವು ಕಡೆ ಪ್ರೇಮಿಗಳು ಈ ದಿನವನ್ನು ಸಂಭ್ರಮಿಸಲಾಗುವುದು. ಈ ಪ್ರೀತಿಯ ಸಂಭ್ರಮ ಬರೀ ವ್ಯಾಲೆಂಟೈನ್ಸ್‌ಗೇ ಮಾತ್ರ ಮೀಸಲಾಗಿರಲಿದೆ, ಆ ಪ್ರೀತಿ ಜೀವನ ಪೂರ್ತಿ ಗಟ್ಟಿಯಾಗಿರಬೇಕು, ಏನೇ ಬಂದರೂ ಪ್ರೀತಿಯ ಆಳ ಮತ್ತಷ್ಟು ಹೆಚ್ಚಬೇಕೇ ಹೊರತು ಕಡಿಮೆಯಾಗಬಾರದು, ಅದುವೇ ನಿಜವಾದ ಪ್ರೀತಿ.
ಪ್ರೀತಿ ಮಾಡುವಾಗ ಜಾಗ್ರತೆವಹಿಸಿ, ಸರಿಯಾದ ವ್ಯಕ್ತಿ ನಿಮ್ಮ ಬಾಳಲ್ಲಿ ಬಂದರೆ ಮಾತ್ರ ನಿಮ್ಮ ಬಾಳು ಚೆನ್ನಾಗಿರುತ್ತದೆ.



Click it and Unblock the Notifications
