Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ದುಡ್ಡಿಗಿಂತ ಪ್ರೀತಿ ಮುಖ್ಯ ಎಂದು 2500 ಕೋಟಿ ಆಸ್ತಿಯನ್ನೇ ಬೇಡ ಎಂದು ಬಿಟ್ಟು ಬಂದಳು!
ಹಣಕ್ಕಾಗಿ ಏನೇನೋ ಮಾಡುವವರನ್ನು ನೋಡುತ್ತೇವೆ, ಆದರೆ ಪ್ರೀತಿಗಾಗಿ ಕೋಟ್ಯಾಂತರ ರುಪಾಯಿ ಆಸ್ತಿ ಬಿಟ್ಟು ಬರುವವರು ಬಲು ಅಪರೂಪ. ಈಕೆಯ ಹೆಸರು ಏಂಜಲೈನ್ ಫ್ರಾನ್ಸಿಸ್.
ಆಗರ್ಭ ಶ್ರೀಮಂತನ ಮಗಳು. ಅವಳು ಬಯಸಿದ್ದೆಲ್ಲಾ ಅವಳ ಕಾಲುಬುಡಕ್ಕೆ ಬರುತ್ತಿತ್ತು... ಆದರೆ ಆಕೆಯನ್ನು ಪ್ರೀತಿ, ಅದರಲ್ಲೂ ಸಾಮಾನ್ಯ ವ್ಯಕ್ತಿ ಮೇಲೆ ಮೂಡಿದ ಪ್ರೀತಿ. ಆತನಿಗೋಸ್ಕರ ಕೋಟ್ಯಾಂತರ ರುಪಾಯಿ, ಆ ಶ್ರೀಮಂತಿಕೆ ಎಲ್ಲಾ ಬಿಡಲು ಸಿದ್ಧಳಾಗುತ್ತಾಳೆ.

ಅವಳು ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಮದುವೆಯಾಗಲು ಸರಿಸುಮಾರು 2500 ಕೋಟಿ ಆಸ್ತಿ ಬಿಟ್ಟು ತನ್ನ ಪ್ರೀತಿಸಿದವನಿಗಾಗಿ ಬಂದಿದ್ದಾರೆ. ದುಡ್ಡಿಗಿಂತ ಪ್ರೀತಿಯೇ ಮುಖ್ಯ ಎಂದು ಬಂದ ಹುಡುಗಿ. ಈಕೆಯ ಲವ್‌ಸ್ಟೋರಿ ತುಂಬಾನೇ ಸದ್ದು ಮಾಡುತ್ತಿದೆ. ಇವರ ಕತೆ ನಿಜವಾದ ಪ್ರೀತಿಗೆ ಒಂದು ಉದಾಹರಣೆ... ಪ್ರೀತಿಗೆ ಬಡವ-ಶ್ರೀಮಂತ, ಜಾತಿ ಎಂಬುವುದು ತಿಳಿದೇ ಇಲ್ಲ... ಪ್ರೀತಿ ಬಯಸುವುದು ಪ್ರೀತಿ ಮಾತ್ರ.
ಅವಳು ಹಾಗೂ ಆಕೆಯ ಬಾಯ್‌ಫ್ರೆಂಡ್ ಜೆಡಿಯಾ ಫ್ರಾನ್ಸಿಸ್ ಮೊದಲು ಭೇಟಿಯಾಗಿದ್ದು ಆಕ್ಸ್‌ಫರ್ಡ್ ಯೂವರ್ಸಿಟಿಯಲ್ಲಿ. ಅವರಿಬ್ಬರ ಪರಿಷಯ ಸ್ನೇಹವಾಗಿ ಗಟ್ಟಿಯಾದ ಪ್ರೀತಿಯಾಗಿ ಬದಲಾಗುತ್ತೆ. ಇವರ ಪ್ರೀತಿ ಮನೆಯವರಿಗೆ ತಿಳಿಯುತ್ತದೆ. ಅಲ್ಲಿ ಅವರಿಗೆ ತೀವ್ರ ಪ್ರತಿರೋಧ ಎದುರಾಗುವುದು. ಮಗಳು ಒಬ್ಬ ಸಾಮಾನ್ಯ ಹುಡಗನನ್ನು ಮದುವೆಯಾಗುವುದು ಅವರಿಗೆ ಇಷ್ಟವಾಗಲ್ಲ.
ಆಕೆಯ ತಂದೆ ಮಲೇಷ್ಯಾ ದೊಡ್ಡ ಬ್ಯುಸ್‌ನೆಸ್‌ಮ್ಯಾನ್. ಮನೆಯವರು ನಿನಗೆ ಪ್ರೀತಿ ಮುಖ್ಯನಾ, ಈ ಮನೆ ಮುಖ್ಯನಾ ಎಂದು ಕೇಳಿದಾಗ ಅವಳು ಪ್ರೀತಿಯನ್ನು ಆಯ್ಕೆ ಮಾಡುತ್ತಾಳೆ. ಮನೆಯಿಂದ ಒಂದಿಷ್ಟೂ ಹಣ ಸಿಗಲ್ಲ ಎಂದು ಹೇಳಿದರೂ ಹಣಕ್ಕೆ ಆಸೆ ಪಡದೆ ಪ್ರಿತಿಗೆ ಬೆಲೆಕೊಟ್ಟು ಬಾಯ್‌ಫ್ರೆಂಡ್ ಜೊತೆ ಮದುವೆಯಾಗುತ್ತಾರೆ.
ಪ್ರೀತಿಯ ಬೆಲೆ ಗೊತ್ತಿತ್ತು ಏಂಜಲೈನ್ ಫ್ರಾನ್ಸಿಸ್‌ಗೆ
ಫ್ರಾನ್ಸಿಸ್ ತಂದೆ ತಾಯಿ ವಿಚ್ಛೇದನವಾದಾಗ ಫ್ರಾನ್ಸಿಸ್ ತಂದೆ ಜೊತೆ ಇರುತ್ತಾರೆ. ಅವರಿಗೆ ಪ್ರೀತಿಯ ಬೆಲೆ ಏನೆಂಬುವುದು ಗೊತ್ತಾಗುವುದೇ ಆವಾಗ... ತಂದೆ -ತಾಯಿಯ ಪ್ರೀತಿಗಾಗಿ ಹಂಬಲಿಸುತ್ತಾರೆ. ತಂದೆ ಬ್ಯುಸ್‌ನೆಸ್ ಅಂತ ಬ್ಯುಸಿಯಾಗಿದ್ದರು. ಯೌವನ ಪ್ರಾಯದಲ್ಲಿ ಪ್ರೀತಿಯಲ್ಲಿ ಬಿದ್ದಾಗ ಆಕೆಗೆ ನಿಜವಾದ ಪ್ರೀತಿ ಏನೆಂಬುವುದು ಗೊತ್ತಾಗುವುದು.
ಹೀಗಾಗಿ ಯಾವುದೇ ಕಾರಣಕ್ಕೆ ತಾನು ಪ್ರೀತಿಸಿದ ಹುಡುಗನನ್ನು ಬಿಟ್ಟು ಕೊಡಲು ಸಿದ್ಧವಾಗಲ್ಲ, ಆದರೆ ಮನೆಯವರಿಗೆ ಒಬ್ಬ ಸಾಮಾನ್ಯ ಹುಡುಗನನ್ನು ಮದುವೆಯಾಗುವುದು ಇಷ್ಟವಿರಲ್ಲ. ನೀನು ಅವನನ್ನು ಮದುವೆಯಾದರೆ ಇಷ್ಟು ಕೋಟಿ ಬೆಲೆ ಬಾಳುವ ಆಸ್ತಿ ಕೊಡಲ್ಲ ಅಂತಾರೆ, ಆದರೆ ಪ್ರೀತಿ ಮುಂದೆ ಆಸ್ತಿ ದುರ್ಬಲವಾಯ್ತು.
ಈ ರೀತಿ ಪ್ರೀತಿಗಾಗಿ ಆಸ್ತಿ ಬಿಟ್ಟು ಬಂದ ಸ್ಟೋರಿ ಇದೇ ಮೊದಲಲ್ಲ
ಇತಿಹಾಸ ನೋಡಿದರೆ ಇಂಥ ಅನೇಕ ಕತೆಗಳು ಸಿಗುತ್ತವೆ, ಪ್ರೀತಿಗಾಗಿ ದೇಶ ಬಿಟ್ಟು ಬಂದವರು ಇದ್ದಾರೆ, ಪ್ರೀತಿಗಾಗಿ ಎಲ್ಲಾ ಆಸ್ತಿ ಬಿಟ್ಟು , ಮನೆಯಿಂದ ಹೊರ ಬಂದು ಜೀವಿಸುವವರು ಇದ್ದಾರೆ. ಈ ರೀತಿಯ ಪ್ರೇಮ ಪ್ರಕರಣ 2021ರಲ್ಲಿ ಸದ್ದು ಮಾಡಿತು. ಜಪಾನ್ ರಾಜಕುಮಾರಿ ಮಾಕೋ ಮದುವೆಯಾಗಿದ್ದು ಕೂಡ ಒಬ್ಬ ಸಾಮಾನ್ಯ ವ್ಯಕ್ತಿಯನ್ನು. ಕಾಲೇಜ್‌ನಲ್ಲಿ ಪ್ರೀತಿಸಿದ ಸಾಮಾನ್ಯ ಹುಡುಗನನ್ನು ಮದುವೆಯಾಗಲು ಇಡೀ ರಾಜಮನೆತನ, ಅದರ ಸೌಕರ್ಯ ತೊರೆದು ಬರುತ್ತಾಳೆ.
ಪ್ರೀತಿಗೆ ಈ ಜಗತ್ತೇ ಗೆಲ್ಲುವ ಶಕ್ತಿಯಿದೆ
ಪ್ರೀತಿಗೆ ಅದ್ಭುತವಾದ ಶಕ್ತಿಯಿದೆ, ಏನೂ ಇಲ್ಲದ ವ್ಯಕ್ತಿಯನ್ನು ದೊಡ್ಡ ವ್ಯಕ್ತಿಯನ್ನಾಗಿಸುವ ಶಕ್ತಿ ಪ್ರೀತಿಗಿದೆ. ಈ ಪ್ರೀತಿ ಅಂತ ಮೂಡಿದಾಗ ಅಲ್ಲಿ ಅಂತಸ್ತು, ಜಾತಿ ಯಾವುದೂ ಮುಖ್ಯವಾಗಲ್ಲ, ಒಬ್ಬರಿಗೊಬ್ಬರು ಜೀವ ಕೊಡುವಷ್ಟು ಪ್ರೀತಿಸುತ್ತಾರೆ, ಏನನ್ನು ಬೇಕಾದರೂ ಮಾಡಬಹುದು ಎಂಬ ಶಕ್ತಿ ನೀಡುವುದು ಪ್ರೀತಿ ಮಾತ್ರ.



Click it and Unblock the Notifications
