Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತಮಿಳುನಾಡಿನ ಈ ನಗರದಲ್ಲಿ ಅತೀ ಹೆಚ್ಚು ವಿವಾಹೇತರ ಸಂಬಂಧ!!
ವಿಶ್ವದಾದ್ಯಂತ ನಾವಿಂದು ಡೇಟಿಂಗ್ ಸಂಸ್ಕೃತಿ ಬೆಳೆದಿರುವುದು ನೋಡಬಹುದು. ಅದ್ರಲ್ಲೂ ನಾವು ಹಲವು ದೇಶಗಳು ಡೇಟಿಂಗ್ ವಿಚಾರಕ್ಕೆ ಸುದ್ದಿಯಾಗುತ್ತಿರುವುದು ಸಹ ನೋಡಿದ್ದೇವೆ. ಭಾರತದಲ್ಲು ಕೂಡ ಡೇಟಿಂಗ್ ಸಂಸ್ಕೃತಿ ಹೆಚ್ಚಾಗುತ್ತಿದೆ. ಯುವಪೀಳಿಗೆ ಈಗ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಒಲವು ಹೊಂದಿರುವುದನ್ನು ನಾವು ನೋಡಬಹುದು. ಹೆಚ್ಚಾಗಿ ಆಪ್‌ಗಳು ಈಗ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ.
ಇನ್ನು ವಿವಾಹೇತರ ಸಂಬಂಧಗಳು ಕೂಡ ಇತ್ತೀಚಿಗೆ ಹೆಚ್ಚಾಗುತ್ತಿರುವುದು ನಾವು ನೋಡುತ್ತಿದ್ದೇವೆ. ವಿವಾಹವಾದರು ಮತ್ತೊಂದು ಸಂಬಂಧಗಳ ಬೆಳೆಸಿಕೊಳ್ಳುವುದು ಕೂಡ ನಾವು ನೋಡಬಹುದು. ಸದ್ಯ ಈಗ ಇಡೀ ಭಾರತದಲ್ಲಿ ತಮಿಳುನಾಡಿನ ಒಂದು ನಗರ ಅತೀ ಹೆಚ್ಚು ವಿವಾಹೇತರ ಸಂಬಂಧಳಿಂದ ಸುದ್ದಿಯಾಗುತ್ತಿದೆ.

ಜಾಗತಿಕ ಡೇಟಿಂಗ್ ವೇದಿಕೆಯಾದ ಆಶ್ಲೇ ಮ್ಯಾಡಿಸನ್, ವಿವಾಹೇತರ ಸಂಬಂಧಗಳ ಬಯಸುವ ವ್ಯಕ್ತಿಗಳಿಗೆಂದೇ ರಚನೆಯಾದ ವೇದಿಕೆಯಾಗಿದೆ. ಜೂನ್ 2025 ರ ಹೊಸ ಬಳಕೆದಾರರ ಡೇಟಾವನ್ನು ಬಿಡುಗಡೆ ಮಾಡಿದೆ, ಇದು ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಸೈನ್‌ಅಪ್‌ಗಳ ಹೆಚ್ಚಳದಿಂದಾಗಿ ಭಾರತವನ್ನು ತನ್ನ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳ ಸಾಲಿನಲ್ಲಿ ಇರಿಸಿದೆ.
ಈ ವೇದಿಕೆಯ ವರದಿಯ ಪ್ರಕಾರ ತಮಿಳುನಾಡಿನ ಕಾಂಚೀಪುರಂ ಭಾರತದಲ್ಲೇ ಅತ್ಯಧಿಕ ಸೈನ್ ಅಪ್ ಕಂಡಿದೆ. ಇದರ ನಂತರ ದೆಹಲಿ, ಮುಂಬೈ ನಗರಗಳಿವೆ. 2024ರಲ್ಲಿ ಈ ಸೈಟ್‌ನಲ್ಲಿ ಹೆಚ್ಚು ಸಕ್ರೀಯ ಬಳಕೆದಾರರ ನೋಡಲಾಗಿದೆ. ಈ ನಗರವು ಶ್ರೇಣಿ 2ರಲ್ಲಿದ್ದರೂ ಮೆಟ್ರೋ ನಗರಗಳಿಗಿಂತಲೂ ಹೆಚ್ಚು ಸೈನ್‌ಅಪ್ ಆಗಿರುವುದು ಅಚ್ಚರಿ ಮೂಡಿಸಿದೆ.
ಆಶ್ಲೇ ಮ್ಯಾಡಿಸನ್ ಸೈನ್‌ಅಪ್‌ಗಳು ಹೊಸದಾಗಿ ಬಿಡುಗಡೆ ಮಾಡಿದ ಟಾಪ್ 20 ಭಾರತೀಯ ಜಿಲ್ಲೆಗಳ ಪಟ್ಟಿಯಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶದ ಒಂಬತ್ತು ಸ್ಥಳಗಳು ಸೇರಿವೆ. ಹಾಗೆ ಮುಂಬೈನ ಟಾಪ್ 20ರಲ್ಲೂ ಸ್ಥಾನ ಪಡೆದಿಲ್ಲ. ಆದ್ರೆ ಜೈಪುರ್, ರಾಯ್‌ಗಢ, ಕಾಮರೂಪ್, ಚಂಡೀಗಢ ನಗರಗಳು ಸ್ಥಾನ ಪಡೆದಿವೆ.
ಭಾರತದಲ್ಲಿ ವಿವಾಹ ಸಂಬಂಧಿ ಸಮಸ್ಯೆ ಹೆಚ್ಚಾಗುತ್ತಿದ್ಯಾ?
ಏಪ್ರಿಲ್‌ನಲ್ಲಿ ಆಶ್ಲೇ ಮ್ಯಾಡಿಸನ್ ಸಮೀಕ್ಷೆಯ ಫಲಿತಾಂಶಗಳನ್ನು ಹಂಚಿಕೊಂಡಿದೆ, ಇದು ಭಾರತ ಮತ್ತು ಬ್ರೆಜಿಲ್ ವಯಸ್ಕರಲ್ಲಿ ಅತಿ ಹೆಚ್ಚು ದಾಂಪತ್ಯದಲ್ಲಿನ ವಂಚನೆ ಪ್ರಕರಣಗಳಿವೆ ಎಂದು ಬಹಿರಂಗಪಡಿಸಿದೆ. ಅದರಲ್ಲೂ ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಸುಮಾರು 53ರಷ್ಟು ಮಂದಿ ವಿವಾಹೇತರ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ದತ್ತಾಂಶವು ವಿವಾಹೇತರ ಸಂಬಂಧದಲ್ಲಿ ಜನರ ತೊಡಗುವಿಕೆಯ ಗಮನಾರ್ಹ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ - ಸಮೀಕ್ಷೆಗೆ ಒಳಗಾದ ವಯಸ್ಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ದಾಂಪತ್ಯ ದ್ರೋಹವನ್ನು ಒಪ್ಪಿಕೊಳ್ಳುವುದರೊಂದಿಗೆ ಭಾರತವು ಆಧುನಿಕ ಸಂಬಂಧಗಳನ್ನು ಮರು ವ್ಯಾಖ್ಯಾನಿಸುವಲ್ಲಿ ಮುಂಚೂಣಿಯಲ್ಲಿದೆ.
ಭಾರತವು ಈಗಾಗಲೇ ನಮ್ಮ ಜಾಗತಿಕ ಮಾರುಕಟ್ಟೆಗಳಲ್ಲಿ ಆರನೇ ಸ್ಥಾನದಲ್ಲಿದೆ ಮತ್ತು ವರ್ಷದ ಅಂತ್ಯದ ವೇಳೆಗೆ ಅದು ಇನ್ನೂ ಹೆಚ್ಚಿನ ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಆಶ್ಲೇ ಮ್ಯಾಡಿಸನ್‌ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಪಾಲ್ ಕೀಬಲ್ ಹೇಳಿದ್ದಾರೆ.
ಇದಕ್ಕೂ ಮೊದಲು ಕೂಡ ಡೇಟಿಂಗ್ ಆಪ್ ಒಂದು ಇದೇ ರೀತಿಯ ವಿಚಾರವಾಗಿ ಸಮೀಕ್ಷೆ ನಡೆಸಿತ್ತು, ಈ ಸಮಯದಲ್ಲೂ ಕೂಡ ಮೆಟ್ರೋ ಸಿಟಿಗಳಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚಾಗಿರುವುದು ಹಾಗೆ ನಗರ ಪ್ರದೇಶಗಳು, ಈಗ ತಾನೆ ದೊಡ್ಡದಾಗಿ ನಗರ ಸ್ಥಾನ ಪಡೆದುಕೊಳ್ಳುತ್ತಿರುವ ಪ್ರದೇಶದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದನು ನಾವಿಲ್ಲಿ ನೆನೆಯಬಹುದು. ಇದಲ್ಲದೆ ಇತ್ತೀಚಿಗೆ ಈ ವಿವಾಹೇತರ ಸಂಬಂಧಗಳ ಕಾರಣದಿಂದಾಗಿ ಹತ್ತು ಹಲವು ಅಪರಾಧ ಕೃತ್ಯಗಳು ಕೂಡ ವರದಿಯಾಗುತ್ತಿರುವುದು ಸಹ ನೋಡಬಹುದು. ಡಿಜಿಟಲ್ ಯುಗದಲ್ಲಿ ಸಂಬಂಧಗಳು ಬಹುಬೇಗ ಹಾಳಾಗುತ್ತಿರುವುದಕ್ಕೆ ಕಣ್ಮುಂದೆಯೇ ಸಾಕ್ಷಿಗಳು ಕೂಡ ಸಿಗುತ್ತಿವೆ.



Click it and Unblock the Notifications
