Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಈ 6 ಗುಣಗಳಿದ್ದರೆ ಮಾತ್ರ ಅಪ್ಪ ತನ್ನ ಮಕ್ಕಳಿಂದ ನನ್ನಪ್ಪ ಸೂಪರ್ ಅನಿಸಿಕೊಳ್ಳಲು ಸಾಧ್ಯ
ಎಲ್ಲಾ ಮಕ್ಕಳಿಗೆ ತನ್ನ ಅಪ್ಪನೇ ಸೂಪರ್ ಹೀರೋ.... ಎಷ್ಟೋ ಗುಣಗಳನ್ನು ಮಕ್ಕಳು ಅಪ್ಪನ ನೋಡಿ ಕಲಿಯುತ್ತಾರೆ. ಮನೆಯಲ್ಲಿ ಅಪ್ಪ ಅಮ್ಮನ ಹೇಗೆ ನಡೆಸಿಕೊಳ್ಳುತ್ತಾರೆ ಎಂದು ನೋಡಿ ಮುಂದೆ ಅವರು ಮದುವೆಯಾದಾಗ ತಮ್ಮ ಪತ್ನಿ ಜೊತೆ ಅದೇ ರೀತಿ ನಡೆದುಕೊಳ್ಳುತ್ತಾರೆ. ತನಗೆ ಮಗು ಜನಿಸಿದಾಗ ಆತ ಅಪ್ಪನಾಗುತ್ತಾನೆ, ಆದರೆ ಆ ವ್ಯಕ್ತಿ ಒಂದೊಳ್ಳೆಯ ಅಪ್ಪನಾಗಲು ಅವನಲ್ಲಿ ಈ ಗುಣಗಳಿರಬೇಕಾಗುತ್ತದೆ:

ಅಪ್ಪ ತನ್ನ ಕುಟುಂಬವನ್ನು ರಕ್ಷಣೆ ಮಾಡುವವನು ಆಗಿರಬೇಕು
ಪತ್ನಿ ಹಾಗೂ ಮಕ್ಕಳನ್ನು ರಕ್ಷಿಸುವವನು ಆಗಿರಬೇಕು, ಮನೆಯನ್ನು ನೋಡಿಕೊಳ್ಳುವವನು ಆಗಿರಬೇಕು, ತನ್ನ ಮಕ್ಕಳನ್ನು ಸದಾ ರಕ್ಷಣೆ ಮಾಡುವವನು ಆಗಿರಬೇಕು. ಇಲ್ಲಿ ಬಡವ-ಶ್ರೀಮಂತ ಅಂತ ಬರಲ್ಲ, ತಾನು ಬಡವನಾದರೂ ಕಷ್ಟಪಟ್ಟು ದುಡಿದು ಮಕ್ಕಳನ್ನು ಓದಿಸಿ ಒಳ್ಳೆಯ ನೆಲೆಯಲ್ಲಿ ಕಾನಬೇಕೆಂದು ದುಡಿಯುವ ಎಷ್ಟೋ ಪುರುಷರನ್ನು ಕಾಣಬಹುದು.
ಅಪ್ಪನ ಮೇಲೆ ಅಗಾಧ ನಂಬಿಕೆ ಮತ್ತು ಸುರಕ್ಷತೆ ಭಾವನೆ ಇರಬೇಕು
ನನ್ನ ಅಪ್ಪ ಎಂದಿಗೂ ಕೈ ಬಿಡಲ್ಲ ಎಂಬ ಅಗಾಧ ನಂಬಿಕೆ ಮಕ್ಕಳಿಗೆ ಬರಬೇಕೆಂದರೆ ಅಪ್ಪನ ವರ್ತನೆ ಆ ರೀತಿ ಇರಬೇಕು, ಅಲ್ಲದೆ ಅಪ್ಪನಾದವನು ತನ್ನ ಮಕ್ಕಳ ಹಾಗೂ ಕುಟುಂಬದ ಸುರಕ್ಷತೆ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಕುಡಿದು ಬರುವುದು ಆಗಾಗ ಮನೆ ಬಿಟ್ಟು ಹೋಗುವುದು, ಆದರೆ ಬೇರೆ ಸಂಬಂಧದಲ್ಲಿದ್ದು ಕುಟುಂಬವನ್ನು ನೋಡದೇ ಇರುವ ಅಪ್ಪನ ಮೇಲೆ ಮಕ್ಕಳಿಗೆ ನಂಬಿಕೆಯಾಗಲಿ, ಸುರಕ್ಷತೆಯಾಗಲಿ ಬರುವುದಿಲ್ಲ. ಹಾಗಾಗಿ ಒಂದೊಳ್ಳೆಯ ಅಪ್ಪ ಅನಿಸಿಕೊಳ್ಳಲು ಈ ಬಗ್ಗೆ ಗಮನಹರಿಸಬೇಕು.
ಮಕ್ಕಳಿಗೆ ಬದುಕು ಹೇಳಿ ಕೊಡುವವನು
ತಪ್ಪುಗಳನ್ನು ತಿದ್ದಿ, ಸೋತಾಗು ಕೈ ನೀಡಿ ಎಬ್ಬಿಸಿ ನಾನು ಇದ್ದೀನಿ ಎಂದು ಹೇಳುವ ಅಪ್ಪನೇ ನಿಜಕ್ಕೂ ಗ್ರೇಟ್. ಇಂಥ ಅಪ್ಪನ ಪಡೆದ ಮಕ್ಕಳು ಜೀವನದಲ್ಲಿ ಎಂದಿಗೂ ಸೋಲಲ್ಲ, ಏಕೆಂದರೆ ಅಪ್ಪನಿಂದ ಬದುಕಿನ ಪಾಠ ಕಲಿತಿರುತ್ತಾರೆ.
ಮಕ್ಕಳ ಬದುಕಿಗೆ ಅವಶ್ಯಕವಾದ್ದನ್ನು ಪೂರೈಸಬೇಕು
ಮಕ್ಕಳು ಕಾರು ಬೇಕು, ಮೊಬೈಲ್ ಬೇಕು ಎಂದರೆ ಕೊಡಿಸಿ ಅಂತ ಹೇಳುತ್ತಿಲ್ಲ, ಆದರೆ ಮಕ್ಕಳ ಭವಿಷ್ಯಕ್ಕಾಗಿ ಅಪ್ಪ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು, ಆಸ್ತಿ ಮಾಡದಿದ್ದರೂ ಪರ್ವಾಗಿಲ್ಲ, ಆದರೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವುದು ಪೋಷಕರ ಜವಾಬ್ದಾರಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು.
ಮಕ್ಕಳ ತಾಯಿಯನ್ನು ಗೌರವಿಸಿ
ನೀವು ನಿಮ್ಮ ಪತ್ನಿ ಜೊತೆ ಹೇಗೆ ವರ್ತಿಸುತ್ತೀರಿ ಎಂಬುವುದನ್ನು ನಿಮ್ಮ ಮಕ್ಕಳು ಗಮನಿಸುತ್ತಾರೆ, ನೀವು ಪತ್ನಿಯನ್ನು ನೋಡಿಕೊಂಡರೆ ಮಕ್ಕಳಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚುತ್ತದೆ, ಅಲ್ಲದೆ ಗಂಡ-ಹೆಂಡತಿ ಸಂಬಂಧ ಚೆನ್ನಾಗಿದ್ದರೆ , ಇದು ಕೂಡ ಮಕ್ಕಳ ಬೆಳವಣಿಗೆಗೆ ಸಹಕಾರಿ. ಗಂಡ-ಹೆಂಡತಿ ಸಂಬಂಧ ಚೆನ್ನಾಗಿರದಿದ್ದರೆ ಅದು ಮಕ್ಕಳ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುವುದು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಬೇಕು. ಹೆಂಡತಿ ಜೊತೆ ಗೌರವದಿಂದ ನಡೆದುಕೊಳ್ಳಬೇಕು, ನಿಮ್ಮ ನಡುವಿನ ಸಮಸ್ಯೆ ಮಕ್ಕಳ ಎದುರು ಚರ್ಚಿಸಲು ಹೋಗದಿರಿ.
ಮಕ್ಕಳ ಜೊತೆ ಸಮಯ ಕಳೆಯಬೇಕು
ತಂದೆಯಾದ ಮೇಲೆ ಜವಾಬ್ದಾರಿ ಹೆಚ್ಚಾಗುವುದು. ಎಷ್ಟು ದುಡಿದರೂ ಸಾಕಾಗಲ್ಲ, ಕೆಲಸದ ಒತ್ತಡ, ಮಾನಸಿಕ ಒತ್ತಡ ಎಲ್ಲವೂ ಇರುತ್ತದೆ, ಆದರೆ ಪಾಪ ಮಕ್ಕಳಿಗೆ ಇದೆಲ್ಲವೂ ಗೊತ್ತಿರುವುದಿಲ್ಲ, ಅವರ ಜೊತೆಯೂ ಸಮಯ ಕಳೆಯಬೇಕು, ನಾವು ಇಷ್ಟೆಲ್ಲಾ ಕಷ್ಟಪಡುವುದು ಮಕ್ಕಳಿಗಾಗಿ ಅಲ್ವಾ, ಅವರಿಗೂ ಸ್ವಲ್ಪ ಸಮಯ ನೀಡಲು ಪ್ರಯತ್ನಿಸಬೇಕು, ಇದರಿಂದ ಅಪ್ಪ-ಮಕ್ಕಳ ಬಾಂಧವ್ಯ ಚೆನ್ನಾಗಿರಬೇಕು. ಈ ಎಲ್ಲಾ ಗುಣಗಳಿರುವವರು ಒಳ್ಳೆಯ ಅಪ್ಪ ಅನಿಸಿಕೊಳ್ಳುತ್ತಾರೆ.



Click it and Unblock the Notifications