Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಮುತ್ತಿನ ಹಿಂದಿದೆ ಹತ್ತಾರು ಅರ್ಥಗಳು..ಚುಂಬನದ ಒಳಾರ್ಥಗಳಿವು..!
ಪ್ರೇಮಿಗಳ ವಾರವೇನೋ ಆರಂಭವಾಗಿದೆ. ಪ್ರೇಮಿಗಳ ದಿನಾಚರಣೆಗೆ ಕೆಲವೇ ದಿನ ಬಾಕಿ ಇದೆ. ಫೆ.14ರಂದು ಪ್ರೇಮಿಗಳ ದಿನಾಚರಣೆಗಾಗಿ ಯುವ ಸಮುಹ ಕಾದು ಕುಳಿತಿದೆ. ತಮ್ಮ ಪ್ರೀತಿ ಪಾತ್ರರೊಂದಿಗೆ ಅಂದು ಪ್ರೇಮಿಗಳ ದಿನ ಆಚರಿಸಲು ಮುಂದಾಗಿದೆ. ಈ ನಡುವೆ ಪ್ರೇಮಿಗಳ ವಾರದ ಕಿಸ್ ಡೇ ಸಹ ಆಗಮಿಸುತ್ತಿದೆ.
ಫೆ.13ರಂದು ಕಿಸ್ ಡೇ ಆಚರಿಸಲಾಗುತ್ತದೆ. ಕಿಸ್ ಪ್ರೀತಿಯನ್ನು ವ್ಯಕ್ತಪಡಿಸುವ ಅತ್ಯಂತ ಜನಪ್ರಿಯ ವಿಧಾನವಾಗಿದೆ. ವಯಸ್ಕರಾಗಲಿ ಅಥವಾ ಮಗುವಾಗಲಿ, ನಾವು ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಕಿಸ್ ಅನ್ನು ಮಾಧ್ಯಮವಾಗಿ ಬಳಸುತ್ತೇವೆ.

ನಮ್ಮ ಪ್ರೀತಿ ಪಾತ್ರರಿಗೆ, ಇಲ್ಲವೆ ನಮ್ಮ ಪ್ರಿಯವಾದ ವಸ್ತುವಿಗೆ, ಸಾಕು ಪ್ರಾಣಿಗಳಿಗೆ ನಾವು ಕಿಸ್ ಮಾಡುತ್ತೇವೆ. ಹಣೆ, ಕೆನ್ನೆ ಮತ್ತು ತುಟಿಗಳ ಮೇಲೆ ಹೆಚ್ಚು ಚುಂಬಿಸಲು ಇಷ್ಟಪಡುತ್ತಾರೆ. ಆದರೆ ಮುತ್ತಿನ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಿಷ್ಟು ವಿಚಾರಗಳಿವೆ. ಈ ಕಿಸ್ ಡೇ 2024 ರಂದು, ನಾವು ದೇಹದ ವಿವಿಧ ಭಾಗಗಳಲ್ಲಿ ಚುಂಬನದ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ತುಟಿಗೆ ಮುತ್ತಿಡುವ ಅರ್ಥ
ನಿಮ್ಮ ಪ್ರೀತಿಪಾತ್ರರು ಮಾತ್ರ ನಿಮ್ಮ ತುಟಿಗಳಿಗೆ ಚುಂಬಿಸುತ್ತಾರೆ. ನೀವು ಅತೀಯಾಗಿ ಪ್ರೀತಿಸುವ ವ್ಯಕ್ತಿ ಮಾತ್ರ ತುಟಿಯ ಮೇಲೆ ಮುತ್ತಿಡುವ ಹಕ್ಕು ಹೊಂದಿರುತ್ತಾನೆ. ಅದು ತಂದೆಯಾಗಿರಲಿ, ತಾಯಿಯಾಗಿರಲಿ, ಸಹೋದರ ಸಹೋದರಿಯೇ ಆಗಿರಲಿ ತುಟಿಯ ಮೇಲೆ ಮುತ್ತಿಡುವುದಿಲ್ಲ. ಆದರೆ ನಿಮ್ಮ ತುಟಿಯ ಮೇಲೆ ಮುತ್ತಿಡುವುದು ನಿಮ್ಮ ಗೆಳೆಯ ಇಲ್ಲವೆ ಗೆಳತಿ ಮಾತ್ರ ಆಗಿರುತ್ತಾರೆ. ಅಂದರೆ ತುಟಿ ಮೇಲಿನ ಚುಂಬನವು ದೇಹದ ಕೊಬ್ಬನ್ನು ಸಹ ಕರಗಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿತ್ತು. ದೀರ್ಘ ಚುಂಬನವು ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೂ ಉತ್ತಮ ಔಷಧ ಅಂತಲೂ ತಜ್ಞರು ತಿಳಿಸಿದ್ದರು.
ಕೈಮೇಲೆ ಚುಂಬನದ ಅರ್ಥ
ಕೈಗೆ ಮುತ್ತು ಕೊಡುವುದು ಎಂದರೆ ಅವರ ಪ್ರೀತಿಗೆ ಶರಣಾಗುವುದು ಎಂದರ್ಥ. ಅದಕ್ಕಾಗಿಯೇ ಜನರು ಉಂಗುರವನ್ನು ಧರಿಸಿದ ನಂತರ ತಮ್ಮ ಸಂಗಾತಿಯ ಕೈಗಳ ಹಿಡಿದು ಚುಂಬಿಸುತ್ತಾರೆ. ಇದಲ್ಲದೆ, ನಿಮ್ಮ ಸಹೋದ್ಯೋಗಿ ಅಥವಾ ಪಾಲುದಾರರು ನಿಮ್ಮ ಕೈಗೆ ಮುತ್ತಿಟ್ಟರೆ, ಅವರು ನಿಮ್ಮ ಯಾವುದೋ ವಿಚಾರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ.
ಹಣೆಯ ಚುಂಬನದ ಅರ್ಥ
ಹಣೆಯ ಮೇಲೆ ಮುತ್ತು ನೀಡುವುದು ಎಂದರೆ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮತ್ತು ಭಯವನ್ನು ಓಡಿಸುವುದು ಎಂದರ್ಥ. ಆದ್ದರಿಂದಲೇ ಪೋಷಕರಿಂದ ಹಿಡಿದು ಶಿಕ್ಷಕರವರೆಗೆ ಎಲ್ಲರೂ ಮಕ್ಕಳ ಹಣೆಗೆ ಮುತ್ತಿಡುತ್ತಾರೆ. ಹಣೆಯ ಮೇಲೆ ಮುತ್ತಿಡುವುದು ಸಹ ಕಾಳಜಿಯ ಸಂಕೇತವಾಗಿದೆ. ನಿಮ್ಮ ಸಂಗಾತಿ ಎಂದಾದರೂ ಆಶ್ಚರ್ಯ ಅಥವಾ ಅಸಮಾಧಾನಗೊಂಡರೆ, ಆಕೆಯ ಹಣೆಗೆ ಮುತ್ತಿಡಲು ಮರೆಯಬೇಡಿ.
ಇಯರ್‌ಲೋಬ್ ಕಿಸ್‌ನ ಅರ್ಥ
ಗಂಡ-ಹೆಂಡತಿ ಮತ್ತು ಗೆಳತಿ-ಗೆಳೆಯರು ಮಾತ್ರ ಕಿವಿಯ ಕೆಳಭಾಗದಲ್ಲಿ ಮುತ್ತು ಕೊಡಲು ಇಷ್ಟಪಡುತ್ತಾರೆ. ಇದು ಪಾಲುದಾರನ ಚೇಷ್ಟೆಯ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಆದ್ದರಿಂದ, ನಿಮ್ಮ ಸಂಗಾತಿ ಎಂದಾದರೂ ನಿಮ್ಮ ಕಿವಿಗೆ ಚುಂಬಿಸಿದರೆ, ಅವರಿಗೆ ಸಂತೋಷವಾಗಿದೆ ಎಂದರ್ಥ
ಕಾಲರ್ ಬೋನ್ ಕಿಸ್
ಕಾಲರ್ ಬೋನ್ ಕಿಸ್ ಅಂದರೆ ಭುಜ ಭಾಗಕ್ಕೆ ಹಿಂದಿನಿಂದ ಬಂದು ಚುಂಬಿಸುವುದು. ಇದು ಅನ್ಯೋನ್ಯತೆಯನ್ನು ಸೂಚಿಸುತ್ತದೆ. ದೈಹಿಕ ಆಕರ್ಷಣೆಯನ್ನು ವ್ಯಕ್ತಪಡಿಸಲು ಇದು ಉತ್ತಮ ಮಾರ್ಗವಾಗಿದೆ!
ಕೆನ್ನೆ ಚುಂಬನದ ಅರ್ಥ
ಕೆನ್ನೆಗೆ ಮುತ್ತು ಎಂದರೆ ವಿಪರೀತ ಮುದ್ದು. ನಿಮ್ಮ ಮುಗ್ಧತೆ ಮತ್ತು ಬಾಲಿಶ ಅಭ್ಯಾಸಗಳನ್ನು ನೋಡಿ, ನಿಮ್ಮ ಸಂಗಾತಿಯು ನಿಮ್ಮ ಕೆನ್ನೆಗೆ ಮುತ್ತು ನೀಡಬಹುದು. ಆದ್ದರಿಂದ, ಕಿಸ್ ಅನ್ನು ಬೇರೆ ಯಾವುದೇ ಕೋನದಿಂದ ಅರ್ಥಮಾಡಿಕೊಳ್ಳಬೇಡಿ. ಮಕ್ಕಳಿಗೂ ಕೆನ್ನೆಯ ಮೇಲೆ ಮುತ್ತಿಡಲಾಗುತ್ತದೆ. ಈ ರೀತಿ ಮುತ್ತಿಡುವುದು ಮುಗ್ದತೆಯ ಸಂಕೇತವಾಗಿದೆ.



Click it and Unblock the Notifications

