Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
Relationship: ಪುರುಷರು ಸಂತೋಷವಾಗಿದ್ದಾಗ ಸ್ತ್ರೀಯಿಂದ ಬಯಸೋದೇನು? ಈ ಅಂಶ ನೀವು ತಿಳಿದಿರಲೇಬೇಕು?
ಜೀವನದ ಉದ್ದಕ್ಕೂ ನೀವು ಒಂದಲ್ಲಾ ಒಂದು ರೀತಿಯ ಸಂಬಂಧವನ್ನು ಅಥವಾ ಒಂದೊಂದು ರೀತಿಯ ಜವಾಬ್ದಾರಿಯನ್ನು ಹೊರುತ್ತೀರಿ. ಅದ್ರಲ್ಲೂ ಪುರುಷರಾಗಿದ್ದರೆ ನೀವು ಮಗನಾಗಿ, ಅಣ್ಣನಾಗಿ, ತಮ್ಮನಾಗಿ, ಪತಿಯಾಗಿ, ತಂದೆಯಾಗಿ ಹೀಗೆ ಹತ್ತಾರು ಸಂಬಂಧಗಳನ್ನ, ಜವಾಬ್ದಾರಿಗಳನ್ನು ಪೂರೈಸಬೇಕಾಗುತ್ತೆ. ಸಾಮಾನ್ಯವಾಗಿ ಪುರುಷರು ಎಂದು ಕರೆಯಲಾದರು ಅವರಲ್ಲಿನ ಪಾತ್ರಗಳು ಬೇರೆ ಬೇರೆಯಾಗಿರಲಿವೆ.
ಹಾಗೆ ಸಂಬಂಧಗಳಲ್ಲಿ ನಾವು ಉತ್ತಮ ಅಥವಾ ಕಳಪೆ ಎಂದು ಪರಿಗಣಿಸಲಾಗದು. ಆದ್ರೆ ಯಾವ ಸಂಬಂಧವನ್ನು ಗಡೆಗಣಿಸದೆ ಅವರು ಜೀವನದ ಉದ್ದಕ್ಕೂ ಅದನ್ನು ನಿಭಾಯಿಸಬೇಕಾಗುತ್ತದೆ. ಇನ್ನು ಪುರುಷ ಹಾಗೂ ಸ್ತ್ರೀ ಸಂಬಂಧಗಳಲ್ಲಿಯೂ ಹಲವು ಪಾತ್ರಗಳ ನೋಡಬಹುದು. ಹಾಗೆ ಪುರುಷ ಮತ್ತು ಸ್ತ್ರೀ ಸಂಬಂಧದಲ್ಲಿ ಪತಿ ಪತಿಯ ಸಂಬಂಧ ಬಹಳ ಪ್ರಮುಖ ಎನ್ನಬಹುದು.

ಹಾಗೆ ಈ ಪತಿ ಪತ್ನಿ ಸಂಬಂಧ ಹೆಚ್ಚು ಅರ್ಥಪೂರ್ಣವಾಗುವುದು ಒಬ್ಬರನೊಬ್ಬರು ಚೆನ್ನಾಗಿ ಅರಿತುಕೊಂಡಾಗ ಮಾತ್ರ. ಹಾಗಾದ್ರೆ ಇಬ್ಬರ ಸಂಬಂಧಗಳು ಮಧುರವಾಗಿರಬೇಕಾದರೆ ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಇನ್ನು ಪುರುಷರು ತನ್ನ ಗೆಳತಿಯಿಂದ ಅಥವಾ ಸ್ತ್ರೀ ಯಿಂದ ಬಯಸುವುದು ಏನು ಎಂಬುದನ್ನು ತಿಳಿದುಕೊಂಡಿದ್ದರೆ ಸಾಕು ಹಲವು ಸಂಬಂಧಗಳು ಅರ್ಥಪೂರ್ಣವಾಗುತ್ತದೆ.
ಅದರಲ್ಲು ಪತಿ ಯಾವುದಾದರು ಕ್ಷಣದಲ್ಲಿ ಸಂತೋಷವಾಗಿದ್ದರೆ ಅಥವಾ ಯಾವುದಾದರು ವಿಚಾರವೊಂದರಿಂದ ಆತ ಸಂತಸವಾಗಿದ್ದರೆ ಆ ಕ್ಷಣವನ್ನು ಮತ್ತಷ್ಟು ಸಂಭ್ರಮದಿಂದ ನೋಡಲು ಆತ ಬಯಸುತ್ತಾನೆ. ಹಾಗೆ ಇದೇ ಸಮಯದಲ್ಲಿಯೇ ಆತ ಬೇಸರಕ್ಕೂ ಒಳಗಾಗುವ ಸನ್ನಿವೇಶಗಳಿಗೆ ಒಳಗಾಗುತ್ತಾನೆ. ಏಕೆಂದರೆ ಆತನ ಸಂತೋಷದಲ್ಲಿದ್ದಾಗ ಆತನಿಗೆ ಸಹಕಾರ ಅಥವಾ ಪತ್ನಿಯಿಂದ ಆತ ಹಲವು ರೀತಿಯ ವಿಚಾರ ಬಯಸುತ್ತಾನೆ.
ಅದರಲ್ಲೂ ಪುರುಷರು ಸಂತೋಷದ ಕ್ಷಣವನ್ನು ಕಳೆಯುವಾಗ ಸ್ತ್ರೀಯಿಂದ ಏನು ಬಯಸುತ್ತಾರೆ ಎಂಬುದನ್ನು ತಿಳಿದರೆ ಸಂಬಂಧಗಳು ಮಧುರವಾಗಿ ಸಾಗಲಿದೆ. ಹಾಗಾದ್ರೆ ಸಂತಸದಲ್ಲಿರುವ ಪುರುಷನು ಸ್ತ್ರೀ ಯಿಂದ ಏನನ್ನು ಬಯಸುತ್ತಾನೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಪ್ತತೆಯ ಮಾತುಗಳು
ಪುರುಷರು ಸಂತೋಷದ ಕ್ಷಣಗಳನ್ನು ಅನುಭವಿಸುವಾಗ ಸಾಮಾನ್ಯವಾಗಿ ಅವರು ತಮ್ಮ ಆಪ್ತರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ. ಸಂತೋಷವನ್ನು ಹಂಚಿಕೊಳ್ಳಲು ಬಯಸುತ್ತಾರೆ. ಹೀಗಾಗಿ ಪುರುಷರು ಸಂತೋಷಕ್ಕೆ ಒಳಗಾಗುವ ಯಾವುದೇ ವಿಚಾರಗಳಿದ್ದರೆ ಅವರು ಸ್ತ್ರೀ ಜೊತೆಗೆ ಮಾತುಕತೆಯನ್ನು ಬಯಸುತ್ತಾರೆ. ಆತ ಪತ್ನಿಯಿಂದಲೂ ಕೂಡ ಅಂತಹ ಸಂತೋಷದ ಕ್ಷಣ ಹೆಚ್ಚಿಸಲು ಮಧುರವಾಗು ಮಾತುಗಳ ಬಯಸುತ್ತಾನೆ.
ಆಲಿಂಗನ
ಪುರುಷನೊಬ್ಬ ಅತ್ಯಂತ ಖುಷಿಯ ಕ್ಷಣವನ್ನು ಆನಂದಿಸುತ್ತಿರುವಾಗ ಆತ ಪತ್ನಿಯೊಂದಿಗೆ ಸುಮಧುರ ಕ್ಷಣ ಕಳೆಯುವ ಆಸೆ ಹೊಂದಿರುತ್ತಾರೆ. ಪತ್ನಿಯಿಂದ ಆತ ಆಲಿಂಗನ ಬಯಸುತ್ತಾರೆ. ಇದು ಅವರ ಖುಷಿಯನ್ನು ದುಪ್ಪಟ್ಟಾಗಿಸಲಿದೆ. ಹಾಗೆ ಅವರು ಈ ಆಲಿಂಗನವನ್ನು ಬಹಳದಷ್ಟು ಸಮಯ ನೆನಪಿನಲ್ಲಿಡುತ್ತಾರೆ. ಹೀಗಾಗಿ ಪುರುಷರು ಸಂತೋಷದ ಕ್ಷಣವನ್ನು ಆದಷ್ಟು ಪತ್ನಿಯೊಂದಿಗೆ ಯಾವಾಗಲು ಹಂಚಿಕೊಳ್ಳುತ್ತಾರೆ.
ಪ್ರೋತ್ಸಾಹ
ಪತಿ ಸಂತೋಷದಲ್ಲಿದ್ದಾಗ ಅಥವಾ ಆತನ ಸಂತೋಷಕ್ಕೆ ಕಾರಣವಾಗಿರುವ ವಿಚಾರವನ್ನು ತಿಳಿಸಿದಾಗ ಅದನ್ನು ಪ್ರೋತ್ಸಾಹಿಸುವಂತೆ ಆತ ಬಯಸುತ್ತಾನೆ. ಒಂದು ವೇಳೆ ಆತನ ಸಂತೋಷಕ್ಕೆ ಕಾರಣವಾದ ವಿಚಾರವನ್ನು ನೀವು ತೆಗಳಿದರೆ ಅಥವಾ ಆ ಕುರಿತು ಅಸಡ್ಡೆ ತೋರಿದರೆ ಅವರಲ್ಲಿ ನಿಮ್ಮ ಮೇಲೆ ಉತ್ತಮ ಭಾವನೆ ಉಂಟು ಮಾಡದೆ ಇರಬಹುದು.
ಪ್ರವಾಸ
ಸಂತಸದ ಕ್ಷಣಗಳಲ್ಲಿ ಪುರುಷರು ಯಾವಾಗಲು ಹೊರಗೆ ಪ್ರವಾಸ ಹೊರಡಲು ಸಿದ್ಧರಾಗುತ್ತಾರೆ. ಅದರಲ್ಲೂ ತಮ್ಮ ಪತ್ನಿ, ಗೆಳತಿಯ ಜೊತೆಗೆ ಅವರು ಪ್ರವಾಸ ಹೊರಡಲು ಮುಂದಾಗಬಹುದು, ಅದರಲ್ಲೂ ಸಿನಿಮಾ, ದೇವಾಲಯದಂತಹ ಸ್ಥಳಗಳನ್ನ ಕೂಡ ನೋಡಲು ಅವರು ಮುಂದಾಗುತ್ತಾರೆ. ಇಂತಹ ಸಮಯದಲ್ಲಿ ಸ್ತ್ರೀ ಆದವರ ಸಹಕಾರ ಇಲ್ಲದಿದ್ದರೆ ಅವರ ಮನಸ್ಸಿಗೆ ನೋವುಂಟಾಗಬಹುದು.



Click it and Unblock the Notifications