Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಎಷ್ಟೊಂದು ಚೆನ್ನಾಗಿ ಪ್ರೀವೆಡ್ಡಿಂಗ್ ಫೋಟೋಶೂಟ್... ಮಾಡಿದರೆ ಹೀಗೆ ಮಾಡಬೇಕಪ್ಪಾ....
ಇತ್ತೀಚೆಗೆ ಪ್ರೀವೆಡ್ಡಿಂಗ್ ಶೂಟ್ ಎಂಬುವುದು ಸಾಮಾನ್ಯವಾಗಿದೆ, ಮದುವೆಗೆ ಫೋಟೋಗ್ರಫಿ ಮಾಡುವುದು ಇದ್ದೇ ಇರುತ್ತದೆ, ಆದರೆ ಈ ಪ್ರೀ ವೆಡ್ಡಿಂಗ್‌ನಲ್ಲಿ ಗಂಡು-ಹೆಣ್ಣು ಕೆಲವೊಂದು ಒಳ್ಳೆಯ ಸ್ಥಳಗಳಿಗೆ ಫೋಟೋಶೂಟ್ ಮಾಡಿಸಿ ಬರುತ್ತಾರೆ.
ಆ ಫೋಟೋಗಳು, ವೀಡಿಯೋಗಳು ಮದುವೆ ಆಲ್ಬಂಗಿಂತ ತುಂಬಾನೇ ಚೆನ್ನಾಗಿರುತ್ತದೆ, ಏಕೆಂದರೆ ಮದುವೆಯಲ್ಲಿ ಅಷ್ಟೊಂದು ತಾಳ್ಮೆಯಿಂದ ಫೋಟೋ ತೆಗಿಸಿಕೊಳ್ಳಲು ಸಾಧ್ಯವಾಗಲ್ಲ, ಮುಹೂರ್ತ ಮೀರುತ್ತಿದೆ, ಹುಡುಗನ ಮನೆಗೆ ಶುಭ ಸಮಯದಲ್ಲಿ ಕಳುಹಿಸಬೇಕು ಹೀಗೆ ಮದುವೆ ಆಚರಣೆಗಳಿಂದಾಗಿ ನಾವು ಬಯಸಿದಂತೆ ಫೋಟೋ ತೆಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ನಲ್ಲಾದರೆ ನಾವು ಬಯಸಿದಂತೆ ಫೋಟೋ ಅಥವಾ ವೀಡಿಯೋಗಳನ್ನು ತೆಗಿಯಬಹುದು, ಆದ್ದರಿಂದ ಈ ಪ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳಲು ಮದುಮಗ-ಮದುಮಗಳು ತುಂಬಾನೇ ಇಷ್ಟಪಡುತ್ತಾರೆ.

ಕೆಲವೊಂದು ಪ್ರೀವೆಡ್ಡಿಂಗ್ ಫೋಟೋಶೂಟ್‌ಗಳು ತುಂಬಾನೇ ಗಮನ ಸೆಳೆಯುತ್ತವೆ, ಕೆಲವೊಂದು ಪ್ರೀವೆಡ್ಡಿಂಗ್ ಫೋಟೋಶೂಟ್‌ಗೆ ತುಂಬಾನೇ ಮೆಚ್ಚುಗೆ ಸಿಕ್ಕರೆ, ಕೆಲವೊಂದು ಬೋಲ್ಡ್ ಪ್ರೀವೆಡ್ಡಿಂಗ್ ಫೋಟೋಶೂಟ್‌ಗೆ ಟೀಕೆಗಳೂ ಬಂದಿವೆ. ಆದರೆ ಆ ಎಲ್ಲಾ ಪ್ರೀವೆಡ್ಡಿಂಗ್ ವೀಡಿಯೋಗಿಂತ ಈ ಪ್ರೀವೆಡ್ಡಿಂಗ್ ವೀಡಿಯೋ ತುಂಬಾನೇ ಗಮನಸೆಳೆದಿದ್ದು ಟ್ರೆಂಡ್‌ನಲ್ಲಿದೆ.
ತುಂಬಾನೇ ಅರ್ಥಪೂರ್ಣವಾಗಿದೆ ಈ ಪ್ರೀವೆಡ್ಡಿಂಗ್ ಫೋಟೋಶೂಟ್
ಓಂಕಾರದಿಂದ ಈ ವೀಡಿಯೋ ಪ್ರಾರಂಭವಾಗುತ್ತದೆ. ಆ ವ್ಯಕ್ತಿ ನದಿ ನೀರಿನಲ್ಲಿ ಮಿಂದು ಸೂರ್ಯನಿಗೆ ಆರ್ಘ್ಯ ಅರ್ಪಿಸಿ ನಂತರ ಭಕ್ತಿಯಿಂದ ದೇವಾಲಯಕ್ಕೆ ಬರುತ್ತಾನೆ. ನಂತರ ಮಂತ್ರಗಳನ್ನು ಪಠಿಸಿ ದೇವಾಲಯಕ್ಕೆ ನಡೆದು ಬರ್ತಾ ಇರ್ತಾನೆ. ಇತ್ತ ಹುಡುಗಿ ನದಿಯಿಂದ ನೀರು ತಂದು ಮನೆ ಮುಂದೆ ನೀರು ಚಿಮುಕಿಸಿ ನಂತರ ರಂಗೋಲಿ ಬಿಟ್ಟು ದೇವರಿಗೆ ಹೂಗಳನ್ನು ತರುತ್ತಾಳೆ. ಆತನಿಗೆ ಆ ಹೂವುಗಳನ್ನು ಶಿವಲಿಂಗ್ಕ್ಕೆ ಅರ್ಪಿಸಲು ನೀಡುತ್ತಾಳೆ.
ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ ಇಬ್ಬರು ದೇವರನ್ನು ಪ್ರಾರ್ಥಿಸುತ್ತಾರೆ. ಈಕೆ ದೇವರ ಪ್ರಸಾದ ತಯಾರಿಸಲು ತೆಂಗಿನಕಾಯಿ ತುರಿಯುವಾಗ ಕೈಗೆ ಗಾಯವಾಗುತ್ತೆ, ಆವಾಗ ಆತ ತೆಂಗಿನಕಾಯಿ ತುರಿದು ದೇವರಿಗೆ ಪ್ರಸಾದ ತಯಾರಿಸಿ ಅದನ್ನು ಶಿವನಿಗೆ ಅರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ನಂತರ ಇಬ್ಬರು ಸೇರಿ ದೇವಾಲಯಕ್ಕೆ ಬಂದವರಿಗೆ ಪ್ರಸಾದ ನೀಡುತ್ತಾರೆ. ನಂತರ ಅರಳಿ ಮರಕ್ಕೆ ಸುತ್ತು ಬಂದು, ಆತ ಧಾರ್ಮಿಕ ಗ್ರಂಥ ಓದುತ್ತಾನೆ, ನಂತರ ಇಬ್ಬರು ಜೊತೆಯಾಗಿ ನಡೆದು ಹೋಗುತ್ತಾರೆ.
ಶಿವಾರ್ಚಕ ಮಧು ದೀಕ್ಷಿತ್ ಎಂಬವರ ಪ್ರೀವೆಡ್ಡಿಂಗ್ ಫೋಟೋಶೂಟ್ ಇದಾಗಿದೆ. ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ಶಿವಾರ್ಚಕ ಮಧು ದೀಕ್ಷಿತ್ ಅವರ ಸಾಮಾಜಿಕ ತಾಣವನ್ನು ಗಮನಿದಿದಾಗ ಅವರು ಧಾರ್ಮಿಕ ವಿಷಯಗಳ ಕಡೆ ಹೆಚ್ಚು ಆಸಕ್ತಿ ಹೊಂದಿದವರಂತೆ ಕಾಣುತ್ತಾರೆ, ಹಾಗಾಗಿ ತಮ್ಮ ಪ್ರೀವೆಡ್ಡಿಂಗ್ ಫೋಟೋಶೂಟ್ ಈ ರೀತಿ ಮಾಡಿರಬಹುದು. ಇವರು ಚನ್ನಪಟ್ಟಣದವರಾಗಿದ್ದು ಇವರ ಪ್ರೀವೆಡ್ಡಿಂಗ್ ಫೋಟೋಶೂಟ್ ಕಾನ್ಸೆಪ್ಟ್ ತುಂಬಾನೇ ಗಮನ ಸೆಳೆದಿದೆ. ಪ್ರೀವೆಡ್ಡಿಂಗ್ ಫೋಟೋಶೂಟ್ ಅಂದರೆ ಹೀಗಿರಬೇಕು ಎಂಬಂತೆ ಇದೆ.
ರೊಮ್ಯಾಂಟಿಕ್ ಫೋಟೋಗಳ ಮೂಲಕ ನೋಡುಗರಿಗೆ ಮುಜುಗರ ತರುವುದಕ್ಕಿಂತ ಇದು ತುಂಬಾನೇ ಬೆಸ್ಟ್
ಪ್ರೀವೆಡ್ಡಿಂಗ್ ವೀಡಿಯೋ, ಫೋಟೋಗಳನ್ನು ಮದುವೆ ಮಂಟಪದಲ್ಲಿ ಡಿಸ್‌ಪ್ಲೇ ಮಾಡುತ್ತಾರೆ, ಆದರೆ ಕೆಲವು ಜೋಡಿಗಳ ತುಂಬಾನೇ ರೊಮ್ಯಾಂಟಿಕ್ ಪೋಸ್ ಫೋಟೋಗಳು ಹಿರಿಯರಿಗೆ ಕಿರಿಕಿರಿ ಮೂಡಿಸಬಹುದು, ಚಿಕ್ಕ ಮಕ್ಕಳು ಕೂಡ ನೋಡುತ್ತಾರೆ, ಆದ್ದರಿಂದ ಮದುವೆಯಲ್ಲಿ ಪ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸುವಾಗ ಸ್ವಲ್ಪ ವಿಭಿನ್ನವಾಗಿ ಫೋಟೋಶೂಟ್ ಮಾಡಿದರೆ ಅದು ಖಂಡಿತ ಗಮನ ಸೆಳೆಯುತ್ತದೆ.
ರೈತರ ವೀಡಿಯೋ, ಗಾರೆ ಕೆಲಸ ಮಾಡುವ ವೀಡಿಯೋ ಈ ಹಿಂದೆ ಕೂಡ ಕೆಲವೊಂದು ಪ್ರೀವೆಡ್ಡಿಂಗ್ ಫೋಟೋಗಳು ತುಂಬಾ ವೈರಲ್ ಆಗಿತ್ತು. ಈ ವೀಡಿಯೋ ನೋಡಿ ನಿಮಗೂ ಇಷ್ಟವಾಗಿರಬಹುದು ಅಲ್ವೇ? ಅಲ್ಲದೆ ಮದುವೆ ಗೊತ್ತಾಗಿರುವ ಜೋಡಿಗಳು ಇದಕ್ಕಿಂತ ಸೂಪರ್ ಆಗಿ ಮಾಡಲು ಪ್ಲ್ಯಾನ್ ಮಾಡಬಹುದು.



Click it and Unblock the Notifications