ನಿಮ್ಮ ಕ್ರಷ್ ಗಮನವನ್ನು ನಿಮ್ಮತ್ತ ಸೆಳೆಯೋದು ಹೇಗೆ!

"ಕ್ರಷ್‌" ಇಂಥವರ ಮೇಲೆ ಆಗುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಯಾರ ಮೇಲೆ ಬೇಕಾದರೂ ಆಗಬಹುದು. ಕೊನೆ ಪಕ್ಷ ನಾನು ಯಾರನ್ನೂ ಪ್ರೀತಿಸಿಲ್ಲ ಅಂತ ಹೇಳೋರು ಇರ್ಬಹುದು. ಆದ್ರೆ ನನಗೆ ಕ್ರಷ್‌ ಆಗಿಲ್ಲ ಅಂತ ಹೇಳೋರು ಬಹುಶಃ ಯಾರು ಇಲ್ಲ ಅನ್ಸುತ್ತೆ.

ಕೆಲವೊಂದು ಸಾರಿ ನಮಗೆ ಯಾರ ಮೇಲೆ ಕ್ರಷ್‌ ಇರುತ್ತೋ ಅದು ಪ್ರೀತಿಯಾಗಿ ಬದಲಾಗೋ ಸಾಧ್ಯತೆ ಇದೆ. ಆದರೆ ಮುಖ್ಯವಾದ ವಿಚಾರ ಅಂದ್ರೆ ನಮಗೆ ಒಬ್ಬರ ಮೇಲೆ ಕ್ರಷ್‌ ಆಗಿರೋದು ನಿಜ. ಅವರನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸಿಗೆ ಖುಷಿಯಾಗುತ್ತೆ. ಮುಖದಲ್ಲೊಂದು ನಗು ಮೂಡುತ್ತೆ. ಆದ್ರೆ ಅದೇ ನಿಮ್ಮ ಕ್ರಷ್‌ ನಿಮ್ಮನ್ನ ನೋಟಿಸ್‌ ಮಾಡ್ಬೇಕಲ್ವಾ? ಹಾಗಾದ್ರೆ ನಿಮ್ಮ ಕ್ರಷ್‌ ನಿಮ್ಮನ್ನು ನೋಡೋ ಹಾಗೆ ಮಾಡೋದಕ್ಕೆ ಏನ್‌ ಮಾಡ್ಬೇಕು? ನೀವು ಈ ಟಿಪ್ಸ್‌ ಫಾಲೋ ಮಾಡಿದ್ರೆ ಖಂಡಿತ ನಿಮ್ಮ ಕ್ರಷ್‌ ನಿಮ್ಮನ್ನ ಗಮನಿಸ್ತಾರೆ.

Smart Ways to Get Your Crush Notice You in Kannada

1. ಮಾತನಾಡಿ

ನಿಮಗೆ ಯಾರ ಮೇಲಾದ್ರು ಕ್ರಷ್‌ ಆದ್ರೆ ಸುಮ್ಮನೆ ಇರಬೇಡಿ. ಅದು ಆಫೀಸ್‌ನಲ್ಲಿ ಆಗಿರ್ಬಹುದು ಅಥವಾ ಕಾಲೇಜು. ನೀವು ಸುಮ್ಮನಿದ್ದಷ್ಟು ನಿಮ್ಮನ್ನು ಆಕೆ/ಆತ ಗಮನಿಸೋದಿಲ್ಲ. ಹೀಗಾಗಿ ಯಾರ ಜೊತೆಯಾದರೂ ಪರವಾಗಿಲ್ಲ ಚೆನ್ನಾಗಿ ಮಾತನಾಡಿ. ಸಾಧ್ಯವಾದರೆ ನಿಮ್ಮ ಕ್ರಷ್‌ ಬಳಿ ಮಾತನಾಡೋದಕ್ಕೆ ಪ್ರಯತ್ನಿಸಿ. ಹೀಗೆ ಮಾತನಾಡುತ್ತಾ ನಿಮ್ಮ ಮನಸ್ಸಿನ ಮಾತನ್ನು ಅವರ ಬಳಿ ಹೇಳಿಕೊಳ್ಳಬಹುದು.

2. ಬುದ್ಧಿವಂತಿಕೆ ತೋರಿಸಿ

ನೀವು ಎಲ್ಲಾ ಕೆಲಸದಲ್ಲೂ ಸ್ಮಾರ್ಟ್‌ ಆಗಿರಬೇಕು. ಕೆಲಸದ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿ. ಅಥವಾ ಕಾಲೇಜಿನಲ್ಲಿ ನಿಮ್ಮ ಐಡಿಯಾಗಳನ್ನು ಎಲ್ಲರ ಮುಂದೆ ಹಂಚಿಕೊಳ್ಳಿ. ಆಗ ಖಂಡಿತ ನಿಮ್ಮ ಕ್ರಷ್‌ ನಿಮ್ಮನ್ನು ನೋಟಿಸ್‌ ಮಾಡುತ್ತಾರೆ. ನೀವು ಬುದ್ಧಿವಂತ ಎಂದು ಆತ/ಆಕೆಗೆ ಗೊತ್ತಾದರೆ ಅವರೇ ನಿಮ್ಮ ಬಳಿ ಸಹಾಯ ಕೇಳಬಹುದು.

3. ನಿಮ್ಮ ನಡತೆ ಚೆನ್ನಾಗಿರಲಿ

ಒರ್ವ ಮನುಷ್ಯನ ಜೀವನದಲ್ಲಿ ನಡೆತೆ ತುಂಬಾನೇ ಮುಖ್ಯವಾಗುತ್ತದೆ. ಮಾತು ಯಾವತ್ತಿಗೂ ಮಿತಿ ಮೀರಬಾರದು. ಯಾರೊಂದಿಗೂ ಕೂಡ ಕೆಟ್ಟದ್ದಾಗಿ ಮಾತನಾಡಬೇಡಿ. ಯಾರೊಂದಿಗೂ ಕೆಟ್ಟದ್ದಾಗಿ ನಡೆದುಕೊಳ್ಳಬೇಡಿ. ಮುಖ್ಯವಾಗಿ ನಿಮ್ಮ ಕ್ರಷ್‌ಗೆ ಯಾವ ರೀತಿ ಇದ್ರೆ ಇಷ್ಟ ಆಗುತ್ತೆ ಅನ್ನೋದನ್ನ ತಿಳಿದುಕೊಳ್ಳಿ. ಅವರ ಮುಂದೆ ಹಾಗೇ ಇರೋದಕ್ಕೆ ಪ್ರಯತ್ನಿಸಿ.

4. ನಿಮ್ಮ ಡ್ರೆಸ್ಸಿಂಗ್‌ ಸ್ಟೈಲ್‌ ಚೆನ್ನಾಗಿರಲಿ

ನಮ್ಮ ಲುಕ್‌ ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಹೇರ್‌ ಸ್ಟೈಲ್‌ ಹಾಗೂ ಬಟ್ಟೆಯ ಬಗ್ಗೆ ಗಮನ ಕೊಡಿ. ಹೇಗಂದರೆ ಹಾಗೆ ಕೆಟ್ಟದಾಗಿ ಡ್ರೆಸ್ಸಿಂಗ್‌ ಮಾಡಿ ಕೊಳ್ಳಬೇಡಿ. ನಮ್ಮ ಲುಕ್‌ ಬೇರೆಯವರಲ್ಲಿ ಒಳ್ಳೆಯ ಭಾವನೆ ಕ್ರಿಯೇಟ್‌ ಮಾಡ್ಬೇಕು ಆ ರೀತಿ ಇರಲಿ ನಿಮ್ಮ ಡ್ರೆಸ್ಸಿಂಗ್‌ ಸ್ಟೈಲ್‌ ಇರಲಿ. ಖಂಡಿತ ನಿಮ್ಮ ಕ್ರಷ್‌ ನಿಮ್ಮನ್ನು ಗಮನಿಸುತ್ತಾರೆ.

5. ಎಲ್ಲರೊಂದಿಗೆ ಬೆರೆಯುವ ಗುಣ ನಿಮ್ಮದಿರಲಿ

ನೀವು ಸುಮ್ಮನೆ ಒಂದು ಮೂಲೆಯಲ್ಲಿ ಕುಳಿತಿದ್ದರೆ ಯಾರೊಬ್ಬರು ನಿಮ್ಮನ್ನು ನೋಟಿಸ್‌ ಮಾಡೋದಿಲ್ಲ. ಸಾಧ್ಯವಾದಷ್ಟು ಎಲ್ಲರ ಜೊತೆಗೆ ಸ್ನೇಹ ಬೆಳೆಸಿಕೊಳ್ಳಿ, ನಿಮ್ಮಿಂದ ಸಾಧ್ಯವಾದರೆ ಅಂತವರಿಗೆ ಸಹಾಯ ಮಾಡಿ. ಒಬ್ಬರ ಮೇಲೆ ದಯೆ ಇರಿ. ಕಷ್ಟ ಕಾಲದಲ್ಲಿ ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಿ. ಈ ಎಲ್ಲಾ ಗುಣಗಳಿಂದ ಖಂಡಿತ ನಿಮ್ಮ ಕ್ರಷ್‌ ನಿಮ್ಮನ್ನು ಗಮನಿಸುತ್ತಾರೆ.

6. ಉತ್ತಮ ನಾಯಕನಾಗಿ ಹಾಗೂ ತಾಳ್ಮೆ ಇರಲಿ

ನಿಮ್ಮಲ್ಲಿ ನಾಯಕತ್ವ ಗುಣಗಳಿದ್ದರೆ ಖಂಡಿತ ನಿಮ್ಮ ಕ್ರಷ್ ನಿಮ್ಮನ್ನು ನೋಟಿಸ್‌ ಮಾಡುತ್ತಾರೆ. ಎಲ್ಲರನ್ನೂ ಒಗ್ಗೂಡಿಸುವ ಅಥವಾ ಒಂದು ಕೆಲಸವನ್ನು ಕೈಗೆತ್ತಿಕೊಂಡು ಅದನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುವ ಗುಣಗಳಿದ್ದರೆ ಖಂಡಿತ ನಿಮ್ಮ ಕ್ರಷ್‌ಗೆ ಇಷ್ಟವಾಗುತ್ತದೆ. ಅಷ್ಟೇ ಅಲ್ಲ, ನಾಯಕ ಅಂದ ಮೇಲೆ ತಾಳ್ಮೆಯು ಆತನಿಗೆ ಮುಖ್ಯವಾಗುತ್ತದೆ.

7. ನಂಬಿಕಸ್ಥ ಅನ್ನಿಸಿಕೊಳ್ಳಿ

ನಂಬಿಕೆ ಅನ್ನೋದು ತುಂಬಾನೇ ಮುಖ್ಯ. ಯಾವುದಾದರೂ ವ್ಯಕ್ತಿ ನಿಮ್ಮನ್ನು ನೆಚ್ಚಿ ಯಾವುದಾದರೂ ಕೆಲಸ ಮಾಡುತ್ತಾನೆ ಅಂದರೆ ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಮ್ಮ ಮೇಲಿನ ನಂಬಿಕೆ ಸುಳ್ಳಾಗಲು ಅವಕಾಶ ಕೊಡಲೇಬೇಡಿ. ಆ ನಿಮ್ಮ ಗುಣಗಳು ನಿಮ್ಮ ಕ್ರಷ್‌ಗೆ ನಿಜವಾಗಿಯೂ ಇಷ್ಟವಾಗುತ್ತದೆ.

8. ಜವಾಬ್ದಾರಿಯುತವಾಗಿ ನಡೆದುಕೊಳ್ಳಿ

ಮೊದಲಿಗೆ ನೀವು ನಿಮ್ಮ ಜೀವನದ ಬಗ್ಗೆ ಎಷ್ಟು ಸೀರಿಯಸ್‌ ಆಗಿದ್ದೀರಿ ಅನ್ನೋದನ್ನು ತೋರಿಸಿ. ನಿಮ್ಮ ಭವಿಷ್ಯದ ಗುರಿಗಳು ಏನು? ಅದನ್ನು ಸಾಧಿಸಲು ನೀವೆಷ್ಟು ಶ್ರಮ ಪಡುತ್ತಿದ್ದೀರಿ ಅನ್ನೋದು ನಿಮ್ಮ ಕ್ರಷ್‌ಗೆ ಗೊತ್ತಾಗಲಿ. ಜೊತೆಗೆ ನಿಮ್ಮ ಮಾತು ಹಾಗೂ ನಡವಳಿಕೆ ಪ್ರಬುದ್ಧವಾಗಿರಲಿ.

ಈ ಎಲ್ಲಾ ಗುಣಗಳು ನಿಮ್ಮಲ್ಲಿದ್ದರೆ ನೀವು ಇಷ್ಟ ಪಟ್ಟವರು ಖಂಡಿತ ನಿಮ್ಮನ್ನು ಗಮನಿಸುತ್ತಾರೆ. ಹಾಗೂ ನಿಮ್ಮ ಗುಣಗಳನ್ನು ಮೆಚ್ಚಿ ಅವರು ನಿಮ್ಮನ್ನು ಇಷ್ಟ ಪಡೋದಕ್ಕೆ ಶುರು ಮಾಡಲೂಬಹುದು. ಹೀಗಾಗಿ ನಾವು ನಮ್ಮನ್ನು ಅವರ ಮುಂದೆ ಹೇಗೆ ಪ್ರೆಸೆಂಟ್‌ ಮಾಡುತ್ತೀವಿ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ.

English summary

Smart Ways to Get Your Crush Notice You in Kannada

Here are the some smart ways to Get Your Crush Notice You. Read More.
X
Desktop Bottom Promotion