Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
3ನೇ ಮದುವೆಯಾದ ಸಾನಿಯಾ ಮಿರ್ಜಾ ಪತಿ ಶೋಯೆಬ್ ಮಲ್ಲಿಕ್: ಮುರಿದು ಬಿತ್ತು ಮೂಗುತಿ ಸುಂದರಿಯ ವೈವಾಹಿಕ ಜೀವನ
ಸಾನಿಯಾ ಮಿರ್ಜಾ ಎಂಬ ಮೂಗುತಿ ಸುಂದರಿಯ ಬದುಕಿನಲ್ಲಿ ಮದುವೆ ಬಳಿಕ ಎಲ್ಲವೂ ಸರಿಯಲ್ಲ ಎಂಬ ರೂಮರ್ ಹರಡಿತ್ತು. ತನ್ನ ಆಟ ಹಾಗೂ ಸೌಂದರ್ಯದ ಜೊತೆಗೆ ಭಾರತೀಯರ ಮನಗೆದ್ದಿದ್ದ ಈ ಸುಂದರಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲ್ಲಿಕ್‌ರನ್ನು ಪ್ರೀತಿಸಿ ಮದುವೆಯಾದಾಗ ಭಾರತಿಯರಲ್ಲಿ ಚಿಕ್ಕ ಅಸಮಧಾನ ಉಂಟಾಗಿತ್ತು, ಆದರೂ ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದ ಆಕೆಯ ಬದುಕು ಸುಂದರವಾಗಿರಲಿ ಎಂದು ಬಯಸಿದ್ದರು.
ಆದರೆ ಮದುವೆಯಾಗಿ ಮಗುವಾದ ಬಳಿಕ ಅವರಿಬ್ಬರ ನಡುವೆ ಏನೋ ಸಮಸ್ಯೆಯಿದೆ ಎಂಬ ಗುಸುಗುಸು ಕೇಳಿ ಬರುತ್ತಿತ್ತು. ಅವರಿಬ್ಬರು ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಲಾಗುತ್ತಿತ್ತು, ಅದಕ್ಕೆಲ್ಲಾ ಉತ್ತರ ಸಾನಿಯಾ ಅಭಿಮಾನಿಗಳಿಗೆ ಇಮದು ಸಿಕ್ಕಿದೆ, ಅವರ ಪತಿ ಶೋಯೆಬ್ ಮಲ್ಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್‌ರನ್ನು ಮೂರನೇ ಮದುವೆಯಾಗಿದ್ದಾರೆ. ಸನಾಗೂ ಇದು ಎರಡನೇ ಮದುವೆ.

ಇವರಿಬ್ಬರ ಬಗ್ಗೆ ಗುಸುಗುಸು ಕಳೆದ ವರ್ಷದಿಂದಲೇ ಕೇಳಿ ಬರುತ್ತಿತ್ತು
ಶೋಯೆಬ್ ಮಲ್ಲಿಕ್ ಕಳೆದ ವರ್ಷ ಸನಾ ಜಾವೇದ್ ಹುಟ್ಟು ಹಬ್ಬಕ್ಕೆ 'Happy Birthday Buddy' ಎಂದು ಬರೆದು ವಿಶ್ ಮಾಡಿದ್ದರು, ಅಲ್ಲದೆ ಅವರ ಜೊತೆಗಿನ ಫೋಟೋ ಕೂಡ ಶೇರ್ ಮಾಡಿದ್ದರು. ಆವಾಗಲೇ ಇವರಿಬ್ಬರ ನಡುವೆ ಏನೋ ಇದೆ ಎಂಬ ರೂಮರ್ ಹರಡಿತ್ತು, ಆದರೆ ಅದು ರೂಮರ್ ಆಗಿರಲಿಲ್ಲ ಎಂಬುವುದು ಇಂದು ನಿಜವಾಗಿದೆ.
ಸನಾ ಜಾವೇದ್ ಕೂಡ ತಮ್ಮ ಮದುವೆಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಸಾನಿಯಾ ಮಿರ್ಜಾರಿಂದ ಶೋಯೆಬ್ ಬೇರ್ಪಟ್ಟಿದ್ದಾರೆ ಎಂಬುವುದು ಬಹುತೇಕರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಸಾನಿಯಾ ಈ ಕುರಿತು ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ, ಆದರೆ ಆಗಾಗ ಕೆಲವೊಂದು ಹಿಂಟ್ ಕೊಡುವ ಅಥವಾ ತಮ್ಮ ಬೇಸರ ವ್ಯಕ್ತಪಡಿಸಿ ಪೋಸ್ಟ್ ಹಾಕುತ್ತಿದ್ದರು, ಇತ್ತೀಚೆಗೆ ಕೂಡ When something disturbs the peace of your heart , let it go ಎಂದು ಬರೆದು ಪೋಸ್ಟ್ ಮಾಡಿದ್ದರು, ಆವಾಗಲೂ ಇವರಿಬ್ಬರ ನಡುವೆ ಏನೋ ಸಮಸ್ಯೆಯಿದೆ ಎಂದು ಅನಿಸಿತ್ತೇ ಹೊರತು ಬೇರೆ-ಬೇರೆಯಾಗಿದ್ದಾರೆ ಎಂಬುವುದು ತಿಳಿದಿರಲಿಲ್ಲ, ಇದೀಗ ಮದುವೆ ಸುದ್ದಿ ಪಾಕಿಸ್ತಾನದಲ್ಲಿ ಮಾತ್ರವಲ್ಲ ಭಾರತದಲ್ಲಿಯೂ ವೈರಲ್ ಆಗಿದೆ.
ಶೋಯೆಬ್‌ಗೆ ಎರಡನೇ ಪತ್ನಿಯಾಗಿದ್ದರು ಸಾನಿಯಾ ಮಿರ್ಜಾ
ಸಾನಿಯಾ ಅವರನ್ನು ಮದುವೆಯಾಗುವ ಮೊದಲು ಆಯೇಷಾ ಸಿದ್ದಿಕ್ಕಿಯನ್ನು 2010ರಲ್ಲಿ ಮದುವೆಯಾಗಿದ್ದರು, ಅದೇ ವರ್ಷ ಸಾನಿಯಾರನ್ನು ಮದುವೆಯಾಗಿದ್ದರು, ಇವರಿಬ್ಬರಿಗೆ ಇಜಾನ್ ಮಿರ್ಜಾ ಮಲ್ಲಿಕ್ ಎಂಬ ಮಗನಿದ್ದಾನೆ. 2018ರಲ್ಲಿ ಮಗ ಜನಿಸಿ ಒಂದು ವರ್ಷದವರೆಗೆ ಎಲ್ಲವೂ ಸರಿಯಿತ್ತು, ಏಕೆಂದರೆ ಆ ಸಮಯದಲ್ಲಿ ಸಾನಿಯಾ ಹಂಚಿಕೊಳ್ಳುತ್ತಿದ್ದ ಪೋಸ್ಟ್‌ಗಳಿಂದ ತಿಳಿಯುತ್ತಿತ್ತು. ಇದೀಗ ಸಾನಿಯಾರಿಂದ ಬೇರ್ಪಟ್ಟು ಸನಾ ಜಾವೇದ್‌ರನ್ನು ಮದುವೆಯಾಗಿದ್ದಾರೆ.
ಮೂರು ದಶಕಕ್ಕೆ 3 ಪತ್ನಿ
ಶೋಯೆಬ್ 2002ರಿಂದ 2010ರವರೆಗೆ ಆಯೇಷಾ ಸಿದ್ಧಿಕಿ ಜೊತೆಗೆ ಸಂಬಂಧದಲ್ಲಿದ್ದರು. ಆಕೆ ಕೂಡ ಹೈದರಾಬಾದ್ ಮೂಲದವರು, ಅವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾನಿಯಾ ಜೊತೆಗೆ ಸಂಬಂಧ ಬೆಳೆದಾಗ ಆಯೇಷಾರಿಗೆ ವಿಚ್ಛೇದನ ನೀಡುತ್ತಾರೆ, ಭಾರತದ ರುಪಾಯಿ 15 ಕೋಟಿಯನ್ನು ಜೀವನಾಂಶವಾಗಿ ನೀಡಲಾಗುವುದು.
ಶೋಯೆಬ್-ಸಾನಿಯಾ ಮದುವೆ 2010ರಿಂದ 2024ರವರೆಗೆ
ಶೋಯೆಬ್ ಸಾನಿಯಾ ಮದುವೆ ಬಹುಶಃ 2021-22ರಲ್ಲಿಯೇ ಮುರಿದು ಬಿದ್ದಿರಬಹುದು, ಆದರೆ ಅಧಕೃತವಾಗಿ ಗೊತ್ತಾಗಿದ್ದು 2024ರಲ್ಲಿ. ಈ ವೈವಾಹಿಕ ಜೀವನದಲ್ಲಿ ಒಬ್ಬ ಮಗನಿದ್ದಾನೆ. ಮೊದಲು ಶೋಯೆಬ್ ಬಯೋದಲ್ಲಿ "Husband to a superwoman Sania Mirza" ಎಂದು ಬರೆದಿತ್ತು, ನಂತರ ಅದನ್ನು "Father to One True Blessing." ಎಂದು ಬದಲಾಯಸಿದ್ದರು. ಆವಾಗ ಇವರ ವೈವಾಹಿಕ ಜೀವನದ ಬಗ್ಗೆ ರೂಮರ್ ಹಬ್ಬಿತು. ಆದರೆ ದಂಪತಿ ದುಬೈನಲ್ಲಿ ಜೊತೆಯಾಗಿ ಮಗನ ಹುಟ್ಟುಹಬ್ಬ ಆಚರಿಸಿದಾಗ ಎಲ್ಲವೂ ಸರಿಯಾಗಿದೆ ಎಂದು ಭಾವಿಸಿದ್ದರು, ನಂತರ ಇಬ್ಬರು ದುಬೈಯಲ್ಲಿ ಮಿರ್ಜಾ -ಮಲ್ಲಿಕ್ ಎಂಬ ಟಿವಿ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು.
ಆದರೆ ಇದೀಗ ಶೋಯೆಬ್ ಮದುವೆ ಸುದ್ದಿ ಬರುತ್ತಿದ್ದಂತೆ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ"ಅದು ಖುಲಾ'ಎಂದರೆ ಮುಸ್ಲಿಂ ಮಹಿಳೆ ಒಪ್ಪಿ ನೀಡುವ ವಿಚ್ಛೇದನ ಎಂಬುದಾಗಿ ಹೇಳಿದ್ದಾರೆ.
2024ರಿಂದ ಶೋಯೆಬ್ ಮಲ್ಲಿಕ್ ಹಾಗೂ ಸನಾ ಜಾವೇದ್ ಜರ್ನಿ
ಸನಾ ಜಾವೇದ್ ಪಾಕಿಸ್ತಾನಿ ಟಿವಿ ನಟಿ, ಅವರು ಈ ಮೊದಲು ಹಾಡುಗಾರ ಉಮರ್ ಜಸ್ವಾಲ್‌ರನ್ನು 2020ರಲ್ಲಿ ಮದುವೆಯಾಗಿ 2023ರಲ್ಲಿ ವಿಚ್ಛೇದನ ಪಡೆದರು. ಇನ್ನು ಈ ಸಂಸಾರ ಬಂಡಿ ಹೇಗಿರಲಿದೆ ಎಂಬುವುದನ್ನು ಕಾಲವೇ ಉತ್ತರಿಸಬೇಕು...



Click it and Unblock the Notifications