Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
Rinku Singh: ಕ್ರಿಕೆಟ್ - ಸಂಸತ್ ಸಮ್ಮಿಲನ! ರಿಂಕು ಸಿಂಗ್ ಮದುವೆ ಡೇಟ್ ಫಿಕ್ಸ್.. ಯಾರು ಈ ಪ್ರಿಯಾ ಸರೋಜ್?
ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಮದುವೆಗೆ ಮುಹೂರ್ತ ಫಿಕ್ಸ್. ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ನಿಶ್ಚಿತಾರ್ಥ. ಹೌದು, ರಿಂಕು ಸಿಂಗ್ (Rinku Singh) ಮತ್ತು ಚೌನ್‌ಪುರದ ಮಚ್ಚಿಶಹರ್ ಸಂಸದೆ ಪ್ರಿಯಾ ಸರೋಜ್ (Priya Saroj) ಅವರ ಮದುವೆ ಮಾತುಕತೆ ಅಂತ್ಯವಾಗಿದೆ. ಐಪಿಎಲ್ 2025 (IPL 2025) ಮುಗಿದ ಬಳಿಕ ಜೂನ್ 8ರಂದು ಲಕ್ನೋದ ಪಂಚತಾರಾ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ನೆರವೇರಲಿದೆ. ನವೆಂಬರ್ 18 ರಂದು ವಾರಣಾಸಿಯ ತಾಜ್ ಹೋಟೆಲ್‌ನಲ್ಲಿ ಅವರು ಮದುವೆಯಾಗಲಿದ್ದಾರೆ. ಪ್ರಿಯಾ ಅವರ ತಂದೆ ರಿಂಕು ಸಿಂಗ್ ಮತ್ತು ಪ್ರಿಯಾ ವಿವಾಹವಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಐಪಿಎಲ್ 2025 ಬಳಿಕ ರಿಂಕು ತಮ್ಮ ಜೀವನದ ಹೊಸ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. ರಿಂಕು ಮತ್ತು ಪ್ರಿಯಾ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಅವರಿಬ್ಬರೂ ಒಂದು ವರ್ಷಕ್ಕೂ ಹೆಚ್ಚು ಕಾಲ ಒಬ್ಬರಿಗೊಬ್ಬರು ತಿಳಿದಿದ್ದಾರೆ. ಆದರೆ, ಈ ಸಂಬಂಧಕ್ಕೆ ಎರಡು ಕುಟುಂಬಗಳ ಒಪ್ಪಿಗೆ ಅಗತ್ಯವಾಗಿತ್ತು. ಇದೀಗ, ಎರಡೂ ಕುಟುಂಬಗಳು ಈ ಮದುವೆಗೆ ಒಪ್ಪಿಕೊಂಡಿವೆ ಎಂದು ಪ್ರಿಯಾ ತಂದೆ ತೂಫಾನ್ ಸರೋಜ್ ಹೇಳಿದ್ದಾರೆ.

ಕಳೆದ ವರ್ಷವೇ ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರಿಯಾ ಸರೋಜ್ ಅವರ ತಂದೆ ತೂಫಾನ್ ಸರೋಜ್ ನಾವಿನ್ನೂ ನಿರ್ಧಾರ ಮಾಡಿಲ್ಲ. ಮಾತುಕತೆಯ ಹಂತದಲ್ಲಿದೆ ಅಷ್ಟೇ. ಅದು ಬಿಟ್ಟರೆ ಬೇರೆ ಏನೂ ನಡೆದಿಲ್ಲ ಎಂದು ಹೇಳಿದ್ದರು. ಇದೀಗ, ಸ್ವತಃ ಅವರೇ ನಿಶ್ಚಿತಾರ್ಥ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಪ್ರಿಯಾ ಸರೋಜ್ ಯಾರು?
ಪ್ರಿಯಾ ಸರೋಜ್ ಅವರು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಯುವ ನಾಯಕಿಯಾಗಿದ್ದಾರೆ. ಇವರು ದೇಶದ ಹಾಲಿ ಎರಡನೇ ಅತಿ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 26 ವರ್ಷದ ಪ್ರಿಯಾ ಸರೋಜಾ ಕೇವಲ 25 ವರ್ಷಕ್ಕೆ ಲೋಕಸಭಾ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ವಾರಣಸಿಯಲ್ಲಿ ಜನಿಸಿರುವ ಪ್ರಿಯಾ ಅವರು ವೃತ್ತಿಯಲ್ಲಿ ವಕೀಲೆ ಆಗಿದ್ದಾರೆ. ಇವರ ತಂದೆ ತೂಫಾನ್ ಸರೋಜ್ ಮೂರು ಬಾರಿಯ ಸಂಸದರಾಗಿದ್ದರು. ಅವರು 1999, 2004 ಮತ್ತು 2009ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಪ್ರಸ್ತುತ, ಉತ್ತರ ಪ್ರದೇಶದ ಹಾಲಿ ಶಾಸಕರಾಗಿದ್ದಾರೆ.
ತಂದೆಯಂತೇ ಪುತ್ರಿ ಪ್ರಿಯಾ ಸಹ ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಪ್ರಿಯಾ ಸರೋಜ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಮಚ್ಲಿಶಹರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದೇಶದ ಎರಡನೇ ಕಿರಿಯ ಸಂಸದರು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದೀಗ ಪ್ರಿಯಾ ಕ್ರಿಕೆಟಿಗ ರಿಂಕು ಸಿಂಗ್ ಅವರ ಜೊತೆಗೆ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಐಪಿಎಲ್ 2023 ರಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ರಿಂಕು ಸಿಂಗ್. ಈ ಪ್ರದರ್ಶನದ ಮೂಲಕವೇ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದರು. ಭಾರತ ಪರ ಎರಡು ಏಕದಿನ ಮತ್ತು 33 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನದಲ್ಲಿ ಕೇವಲ 55 ರನ್ ಗಳಿಸಿದ್ದರು. ಟಿ20ಯಲ್ಲಿ 46.1ರ ಸರಾಸರಿಯಲ್ಲಿ 546 ರನ್ ಗಳಿಸಿದ್ದರು. ಶಾರ್ಟ್ ಫಾರ್ಮೆಟ್ ನಲ್ಲಿ ಉತ್ತಮ ಫಿನಿಶರ್ ಎಂದು ಗುರುತಿಸಿಕೊಂಡಿದ್ದಾರೆ.
5 ಎಸೆತಗಳಲ್ಲಿ 5 ಸಿಕ್ಸರ್ ಚಚ್ಚಿದ ರಿಂಕು ಸಿಂಗ್
ಕ್ರಿಕೆಟಿಗ ರಿಂಕು ಸಿಂಗ್ ಅವರು ಐಪಿಎಲ್ ಮೂಲಕ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್ ಗುಜರಾತ್ ಟೈಟಾನ್ಸ್‌ನ ಯಶ್ ದಯಾಳ್‌ಗೆ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದರು. ಬಳಿಕ ಟಿ-20 ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ರಿಂಕು ಸಿಂಗ್ ಟೀಂ ಇಂಡಿಯಾ ಪರ ಈವರೆಗೆ 30 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 46ಕ್ಕೂ ಹೆಚ್ಚು ಸರಾಸರಿಯಲ್ಲಿ 507 ರನ್ ಗಳಿಸಿದ್ದಾರೆ. ರಿಂಕು ಸಿಂಗ್ ಸ್ಟ್ರೈಕ್ ರೇಟ್ 160ಕ್ಕಿಂತ ಹೆಚ್ಚಿದೆ. ಇದಲ್ಲದೆ ರಿಂಕು ಟೀಂ ಇಂಡಿಯಾ ಪರ ಎರಡು ಏಕದಿನ ಪಂದ್ಯ ಆಡಿದ್ದಾರೆ.
ರಿಂಕು ಸಿಂಗ್ ಐಪಿಎಲ್ 2025 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಫ್ರಾಂಚೈಸಿಯು ರಿಂಕು ಸಿಂಗ್ ಅವರನ್ನು ಹರಾಜಿಗೂ ಮುನ್ನವೇ 13 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು. ಮುಂಬರುವ ದಿನಗಳಲ್ಲಿ ರಿಂಕು ಸಿಂಗ್ ಕೆಕೆಆರ್ ತಂಡದ ನಾಯಕ ಆದರೂ ಅಚ್ಚರಿ ಇಲ್ಲ. ಪ್ರಸ್ತುತ, ಅಜಿಂಕ್ಯಾ ರಹಾನೆ ಕೆಕೆಆರ್ ತಂಡದ ನಾಯಕರಾಗಿದ್ದಾರೆ.



Click it and Unblock the Notifications











