Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕಳೆದಿದ್ದು ಕಳೆದು ಹೋಯ್ತು, ಹೊಸ ವರ್ಷದಲ್ಲಿ ಸಂಬಂಧ ಸುಂದರವಾಗಿಸಲು 5 ಸಲಹೆಗಳು
ಈ ಸಂಬಂಧ ಸುಂದರವಾಗಿಸಲು ಅಷ್ಟೇ ಪ್ರಯತ್ನ ಕೂಡ ಮುಖ್ಯ, ಆದರೆ ಪ್ರೀತಿಸುವಾಗ ಅಥವಾ ಮದುವೆಯಾದ ಹೊಸದರಲ್ಲಿ ಸಂಗಾತಿಯ ಮೇಲೆ ತೋರುವ ಪ್ರೀತಿ, ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಹಾಕುವ ಪ್ರಯತ್ನ ಇವೆಲ್ಲವೂ ವರ್ಷಗಳು ಕಳೆದಂತೆ ಕಡಿಮೆಯಾಗುತ್ತದೆ.
ಪ್ರೀತಿಯಲ್ಲಿರುವಾಗ ಪ್ರೇಮಿ ಜೊತೆ ಸಮಯ ಸಿಕ್ಕಾಗೆಲ್ಲಾ ಮಾತನಾಡುತ್ತಿದ್ದ ವ್ಯಕ್ತಿಗೆ ಮದುವೆಯಾಗಿ ಕೆಲ ವರ್ಷಗಳು ಕಳೆದ ದಿನದಲ್ಲಿ ಒಂದೆರಡು ಫೋನ್ ಮಾಡುವುದು ಕೂಡ ಕಷ್ಟವಾಗುವುದು, ಅದೇ ಪ್ರೀತಿಯಿಂದ ಒಂದೆರಡು ಮಾತುಗಳನ್ನಾಡಲು ಮರೆತೇ ಹೋಗಿರುತ್ತದೆ ಅಲ್ವಾ? ಹೊಸ ವರ್ಷದಲ್ಲಿ ನಿಮ್ಮ ಸಂಬಂಧವನ್ನು ಮತ್ತಷ್ಟು ಸುಂದರವಾಗಿಸಲು ಹಾಗೂ ಆ ಹಳೆಯ ಸುಂದರ ದಿನಗಳಿಗೆ ಮರಳು ಈ ಟಿಪ್ಸ್ ಅನುಸರಿಸಿ:

ಭವಿಷ್ಯದ ಬಗ್ಗೆ ಇಬ್ಬರು ಚರ್ಚಿಸಿ
ನೀವಿಬ್ಬರು ಭವಿಷ್ಯದ ಬಗ್ಗೆ ಚರ್ಚೆ ಮಾಡಿದ್ದೀರಾ? ನಿಮ್ಮ ಪ್ಲ್ಯಾನ್‌ಗಳನ್ನು ಹೇಳಿಕೊಂಡಿದ್ದೀರಾ? ಇಲ್ಲಾಂದ್ರೆ ಟ್ರೈ ಮಾಡಿ, ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚರ್ಚಿಸಿ. ಈಗಷ್ಟೇ ಮದುವೆಯಾಗಿದ್ದರೆ ಮಕ್ಕಳು ಈಗ ಮಾಡಬೇಕಾ? ಎಷ್ಟು ವರ್ಷದ ಬಳಿಕ ಮಕ್ಕಳು ಮಾಡಿಕೊಳ್ಳುವುದರ ಬಗ್ಗೆ ಯೋಚಿಸುವ? ಆರ್ಥಿಕ ಯೋಜನೆಗಳು ಹೀಗೆ ಪ್ರತಿಯೊಂದು ವಿಷಯಗಳನ್ನು ಚರ್ಚಿಸಿ. ಈ ಬಗ್ಗೆ ಮಾತುಕತೆ ನೀವಿಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಒಬ್ಬರಿಗೊಬ್ಬರು ಸರ್‌ಪ್ರೈಸ್‌ಗಳನ್ನು ನೀಡಿ
ಈ ಹಿಂದೆ ಎಷ್ಟು ಸರ್ಪ್ರೈಸ್‌ಗಳನ್ನು ನೀಡುತ್ತಿದ್ದೀರಿ ಎಂಬುವುದರ ಬಗ್ಗೆ ನೆನಪಿಸಿಕೊಳ್ಳಿ, ಆದರೆ ಈಗ ಆ ಬಗ್ಗೆ ಆಲೋಚನೆ ಕೂಡ ಮಾಡುತ್ತಿಲ್ಲ ಎಂದು ಹೇಳುವುದಾದರೆ ಆ ಬಗೆಯ ಸರ್‌ಪ್ರೈಸ್ ಮತ್ತೆ ಪ್ರಾರಂಭಿಸಿ ಎಂದು ಸಲಹೆ ನೀಡಲಾಗುವುದು. ನೀವು ಸಂಗಾತಿಗೆ ನೀಡುವ ಸರ್‌ಪ್ರೈಸ್‌ಗಳು, ಗಿಫ್ಟ್ಸ್ ಇವೆಲ್ಲಾ ನಿಮ್ಮಿಬ್ಬರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ.
ಲೈಂಗಿಕ ವಿಷಯಗಳನ್ನೂ ಮುಕ್ತವಾಗಿ ಮಾತನಾಡಿ
ಲೈಂಗಿಕ ವಿಷಯಗಳ ಬಗ್ಗೆ ಕೂಡ ಮುಕ್ತವಾದ ಮಾತುಗಳನ್ನಾಡಿ, ನೀವು ನಿಮ್ಮ ಸಂಗಾತಿ ಜೊತೆ ಮಾತನಾಡುವುದಕ್ಕೆ ಸಂಕೋಚ ಬೇಡ. ಕೆಲವೊಂದು ರೊಮ್ಯಾಂಟಿಕ್ ಡೇಟ್‌ಗಳನ್ನು ಪ್ಲ್ಯಾನ್ ಮಾಡಿ. ಹನಿಮೂನ್ ಎಂಬುವುದು ಹೊಸದಾಗಿ ಮದುವೆಯಾದವರು ಮಾತ್ರ ಹೋಗಬೇಕು ಎಂದೇನಿಲ್ಲ, ಪ್ರತಿವರ್ಷವೂ ದಂಪತಿ ಎಲ್ಲಿಗಾದರೂ ಹನಿಮೂನ್ ಪ್ಲ್ಯಾನ್ ಮಾಡಬೇಕು, ಈ ರೀತಿಯ ಟ್ರಿಪ್ ನಿಮ್ಮ ಬಾಂಧವ್ಯವನ್ನು ವರ್ಷದಿಂದ ವರ್ಷಕ್ಕೆ ಗಟ್ಟಿಯಾಗಿಸುತ್ತದೆ ಹೋಗುತ್ತದೆ.
ನಿಮ್ಮ ಸ್ನೇಹಿತರ ಜೊತೆ ಕೂಡ ಸಮಯ ಕಳೆಯಿರಿ
ಅವರು ಅವರ ಸ್ನೇಹಿತರ ಜೊತೆ ಚಿಕ್ಕ ಪಾರ್ಟಿಗಳಿಗೆ ಹೋಗುವುದು ನೀವು ನಿಮ್ಮ ಸ್ನೇಹಿತರ ಜೊತೆ ಸಮಯ ಕಳೆಯುವುದು ಇವೆಲ್ಲಾ ಮುಖ್ಯವಾಗಿರುತ್ತದೆ. ಏಕೆ ನೀನು ಸ್ನೇಹಿತರ ಜೊತೆ ಹೋಗಬೇಕು, ಸದಾ ನನ್ನ ಜೊತೆಯೇ ಇರು ಎಂದೆಲ್ಲಾ ಹೇಳಿದರೆ ಆ ಸಂಬಂಧ ಟಾಕ್ಸಿಕ್ ಆಗುವುದು. ನೀವು ನಿಮ್ಮ ಸಂಬಂಧದಲ್ಲಿ ಅವರ ಇಷ್ಟಗಳಿಗೆ ಗೌರವ, ಸ್ವಾತಂತ್ರ್ಯ ನೀಡುವುದು ಕೂಡ ಮುಖ್ಯವಾಗಿರುತ್ತದೆ.
ಪ್ರಮುಖ ವಿಷಯವನ್ನು ಮೆಸೇಜ್‌ಗಳಲ್ಲಿ ಹೇಳಬೇಡಿ
ಏನಾದರು ಪ್ರಮುಖ ವಿಷಯಗಳನ್ನು ಮೆಸೇಜ್‌ಗಳಲ್ಲಿ ಹೇಳಬೇಡಿ, ದೂರವಿದ್ದರೆ ಒಕೆ, ದಿನನಿತ್ಯ ಕಾಣುವ ವ್ಯಕ್ತಿ ಜೊತೆಗೆ ಮೆಸೇಜ್ ಚಾಟ್ ಬದಲಿಗೆ ನೇರಾ ನೇರಾ ಮಾತನಾಡಿ. ಇಂಥ ಮಾತುಗಳು ಭಿನ್ನಾಭಿಪ್ರಾಯ ತಪ್ಪಿಸಲು ಸಹಕಾರಿ. ಮೂರನೇಯವರ ಮಾತು ಕೇಳಿ ಸಂಗಾತಿ ಜೊತೆ ಏನೂ ಹೇಳಲು ಹೋಗಬೇಡಿ, ಏನೇ ಇದ್ದರು ನೇರಾ ನೇರವಾಗಿ ಹೇಳಿ, ಆರೋಗ್ಯಕರ ಸಂಬಂಧಕ್ಕೆ ನೇರಾ ಮಾತು ಕೂಡ ಮುಖ್ಯ.
ನೀವು ನೀವಾಗಿ ಇರಿ, ನೀವು ಖುಷಿಯಾಗಿದ್ದರೆ ನಿಮ್ಮ ಸಂಗಾತಿಯನ್ನು ಖುಷಿಯಾಗಿಡಲು ಸಾಧ್ಯವಾಗುವುದು. ಅವರನ್ನು ಕೂಡ ನಿಮ್ಮಿಷ್ಟದಂತೆ ಬದಲಾಯಿಸಲು ಪ್ರಯತ್ನಿಸಬೇಡಿ.



Click it and Unblock the Notifications
