Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ರಣ್‌ವೀರ್-ದೀಪಿಕಾ ಬದುಕಿನಲ್ಲಿ ಅನುರಾಗದ ಕುಡಿ: ಸ್ಟಾರ್ ದಂಪತಿ ಬಾಂಧವ್ಯ ಗಟ್ಟಿಯಾಗಿಸಲು ಅನುಸರಿಸುವ ಸೂತ್ರಗಳಿವು
ರಣವೀರ್ ಸಿಂಗ್- ದೀಪಿಕಾ ಪಡುಕೋಣೆ ಬಾಲಿವುಡ್‌ನ ಪ್ರಸಿದ್ಧ ಸೆಲೆಬ್ರಿಟಿಗಳಲ್ಲಿ ಒಂದು ಜೋಡಿ, ಈ ಜೋಡಿ ಮದುವೆಗೆ ಮೊದಲು ಹಲವು ರಿಲೇಷನ್‌ಶಿಪ್ ಸಮಸ್ಯೆ ಎದುರಿಸಿದ್ದಾರೆ, ಆದರೆ ಈಗ ಜೋಡಿಯೆಂದರೆ ರಣವೀರ್-ದೀಪಿಕಾ ರೀತಿ ಇರಬೇಕು ಎಂಬಂತೆ ಜೀವಿಸುತ್ತಿದ್ದಾರೆ ಈ ಜೋಡಿ.
ಇದೀಗ ಅವರ ಪ್ರೀತಿ ಮತ್ತಷ್ಟು ಹೆಚ್ಚಾಗಿದೆ, ಏಕೆಂದರೆ ಅವರ ಬಾಳಲ್ಲಿ ಮಗುವಿನ ಆಗಮನವಾಗುತ್ತಿದೆ, ಸೆಪ್ಟೆಂಬರ್‌ನಲ್ಲಿ ನಮಗೆ ಮಗುವಾಗಲಿದೆ ಎಂಬ ಖುಷಿಯನ್ನು ಇಬ್ಬರೂ ತಮ್ಮ ಸಾಮಾಜಿಕ ತಾಣದಲ್ಲಿ ಹೇಳಿಕೊಳ್ಳುವ ಮೂಲಕ ತಮ್ಮ ಖುಷಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.

ಏಕೆ ಈ ಜೋಡಿ ಎಲ್ಲರಿಗೂ ಇಷ್ಟವಾಗುವುದು
ಹಲವು ಸೆಲೆಬ್ರಿಟಿ ಜೋಡಿಗಳಿವೆ, ಆದರೆ ಈ ಜೋಡಿ ವಿಭಿನ್ನ ಕಾರಣಗಳಿಂದ ತುಂಬಾನೇ ಗಮನ ಸೆಳೆಯುತ್ತಾರೆ, ಅವರ ಡ್ರೆಸ್ಸಿಂಗ್ ಅದರಲ್ಲೂ ರಣವೀರ್ ಡ್ರೆಸ್ಸಿಂಗ್ , ರಣವೀರ್ ಪತ್ನಿಯನ್ನು ನಡೆಸಿಕೊಳ್ಳುವ ರೀತಿಯಿಂದ ಈ ಜೋಡಿ ಗಮನ ಸೆಳೆಯುತ್ತಾರೆ. ಬಹುತೇಕ ಪುರುಷರಿಗೆ ಹೆಂಡತಿ ಹೆಸರಿನಿಂದ ತನ್ನನ್ನು ಗುರುತಿಸಿಕೊಳ್ಳಲು ಇಷ್ಟಪಡಲದಲ, ಪುರುಷ ಅಹಂ ಅದಕ್ಕೆ ಸಮ್ಮಿತಿಸುವುದಿಲ್ಲ, ಆದರೆ ರಣವೀರ್ ಸಿಂಗ್ ತಾನು ದೀಪಿಕಾ ಪಡುಕೋಣೆ ಪತಿ ಎಂದು ಪರಿಚಯಿಸಿಕೊಳ್ಳಲು ಹೆಮ್ಮೆ ಪಡುತ್ತಾರೆ, ಹಾಗಂತ ರಣವೀರ್ ಚಿಕ್ಕ ನಟನಲ್ಲ, ದೀಪಿಕಾರಷ್ಟೇ ಹೆಸರು ಮಾಡಿರುವ ನಟ, ಆದರೆ ಪತ್ನಿಯ ಸಕ್ಸಸ್ ನೋಡಿ ಖುಷಿಪಡುವ ರೀತಿಯಿದೆಯೆಲ್ಲಾ ಅದನ್ನು ನೋಡುವಾಗ ಅವರ ಅಭಿಮಾನಿಗಳಿಗೆ ರಣವೀರ್ ಮೇಲೆ ಗೌರವ ಹೆಚ್ಚಾಗುವುದು. ಹೆಂಡತಿಯ ವೃತ್ತಿ ಜೀವನಕ್ಕೆ ಅಷ್ಟೊಂದು ಗೌರವ ಕೊಡುತ್ತಾರೆ ರಣವೀರ್.
ಸ್ಟಾರ್ ದಂಪತಿಗೆ ಕೆಲಸ ಮತ್ತು ಸಂಸಾರ ಬ್ಯಾಲೆನ್ಸ್ ಮಾಡುವುದು ಸುಲಭವಲ್ಲ
ಇಬ್ಬರೂ ತುಂಬಾನೇ ಬೇಡಿಕೆಯಲ್ಲಿರುವ ನಟ- ನಟಿ. ದೀಪಿಕಾರವರು ಒಂದು ಸಂದರ್ಶನಲ್ಲಿ ಹೇಳುತ್ತಾರೆ, ನಾವಿಬ್ಬರು ಕೆಲಸದಲ್ಲಿ ತುಂಬಾನೇ ಬ್ಯುಸಿ ಇರುತ್ತೇವೆ, ಆದರೂ ನಾವಿಬ್ಬರು ಒಬ್ಬರಿಗೊಬ್ಬರು ಸಮಯ ನೀಡಲು ಪ್ರಯತ್ನಿಸುತ್ತೇವೆ. ಇಬ್ಬರು ಮನೆಯಲ್ಲಿದ್ದಾಗ ಬೆಳಗ್ಗೆ 4 ಗಂಟೆಯವರೆಗೂ ಡ್ಯಾನ್ಸ್ ಮಾಡುತ್ತೇವೆ ಎಂದು ಹೇಳುತ್ತಾರೆ. ಎಷ್ಟೋ ಸಂಸಾರ ಇಂದು ವಿಚ್ಛೇದನಕ್ಕೆ ಹೋಗುವುದಕ್ಕೆ ಕಾರಣ ಪರಸ್ಪರ ಸಮಯ ನೀಡದಿರುವುದು. ಆದರೆ ಈ ಜೋಡಿ ಒಂದು ಸುಂದರ ದಾಂಪತ್ಯಕ್ಕೆ ಇಬ್ಬರು ಜೊತೆಯಾಗಿ ಸಮಯ ಕಳೆಯುವುದು ಎಷ್ಟು ಮುಖ್ಯ ಎಂಬುವುದನ್ನು ಅರಿತುಕೊಂಡಿದ್ದಾರೆ, ಎಷ್ಟೇ ಬ್ಯುಸಿಯಿದ್ದರೂ ಮನೆಗೆ ಮರಳಿದಾಗ ಇಬ್ಬರು ಖುಷಿಯಾಗಿ ಸಮಯ ಕಳೆಯುತ್ತಾರೆ, ಟ್ರಿಪ್ ಹೋಗುವುದು ಮಾಡುತ್ತಾರೆ. ಆದರೆ ಎಷ್ಟೋ ಸಂಸಾರಗಳಲ್ಲಿ ಒಬ್ಬರಿಗೊಬ್ಬರು ಸಮಯ ನೀಡದೆ ವಿಚ್ಛೇದನ ಅಂತ ಮುಂದಾಗುತ್ತಾರೆ.
ರಣವೀರ್ ಗ್ರೇಟ್ ಹಸ್ಪೆಂಡ್ ಎಂದು ಕರೆಸಿಕೊಳ್ಳುವುದು ಈ ಕಾರಣಕ್ಕೆ
ನೀವು ಗಮನಿಸಿರಬಹುದು ರಣವೀರ್ ದೀಪಿಕಾರವರ ಸಕ್ಸಸ್‌ಗೆ ಸದಾ ಖುಷಿ ವ್ಯಕ್ತಪಡಿಸುತ್ತಾರೆ, ದೀಪಿಕಾರ ಹಾಟ್ ಫೋಟೋಗಳು ನೆಗೆಟಿವ್ ಟ್ರೋಲ್ ಆದರೆ ಅದಕ್ಕೆ ಪಾಸಿಟಿವ್ ಕಮೆಂಟ್ ಮಾಡುವ ಮೂಲಕ ಉಳಿದವರ ಬಾಯಿ ಮುಚ್ಚಿಸುತ್ತಾರೆ. ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ದೀಪಿಕಾರ ಬೆಂಬಲಕ್ಕೆ ನಿಲ್ಲುತ್ತಾರೆ, ಈ ರೀತಿಯ ಗುಣ ಎಲ್ಲಾ ಪುರುಷರಲ್ಲೂ ಕಾಣಲು ಸಿಗಲ್ಲ, ಹಾಗಾಗಿ ರಣವೀರ್‌ರ ಈ ಗುಣವನ್ನು ಪ್ರತಿಯೊಬ್ಬರು ಮೆಚ್ಚಿಕೊಳ್ಳುತ್ತಾರೆ.
ಬಹುಶಃ ಈ ಗುಣಗಳೇ ಅವರ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿರಬಹುದು. ಇದರ ನಡುವೆ ಹಲವಾರು ಬಾರಿ ಇವರ ವಿಚ್ಛೇದನ ವದಂತಿಗಳು ಹಬ್ಬಿವೆ, ಏಕೆಂದರೆ ಸೆಲೆಬ್ರಿಟಿಗಳಿಗೆ ಮದುವೆ, ವಿಚ್ಛೇದನ ಎಲ್ಲವೂ ಸಹಜವಾಗಿದೆ,ಆದರೆ ಈ ಜೋಡಿ ಇದೀಗ ತಾವು ತಂದೆ-ತಾಯಿ ಪಟ್ಟಕ್ಕೇರುವ ಮೂಲಕ ತಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಿಸಿದ್ದಾರೆ, ಈ ಜೋಡಿ ಹೀಗೆಯೇ ಸದಾ ಖುಷಿಯಾಗಿರಲಿ.....



Click it and Unblock the Notifications