Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಇಂಥ ಹುಡುಗನ ಪಡೆದ ಈ ಹುಡುಗಿ ಅದೃಷ್ಟವಂತಳಾ, ನತದೃಷ್ಟಳಾ ಒಂದು ಗೊತ್ತಾಗ್ತಾ ಇಲ್ಲ!
ಸಾಮಾಜಿಕ ತಾಣದಲ್ಲಿ ಪರಿಶುದ್ಧ ಪ್ರೀತಿಯ ವೀಡಿಯೋವೊಂದು ವೈರಲ್ ಆಗುತ್ತಿದೆ, ಆ ಪ್ರೀತಿ ನೋಡಿದವರ ಕಣ್ಣಂಚು ಒದ್ದೆಯಾಗುತ್ತೆ, ಛೇ! ಪಾಪ ದೇವರು ಹೀಗೆ ಮಾಡಬಾರದಿತ್ತು ಎಂದು ನಮಗೆ ನಾವೇ ಹೇಳಿಕೊಳ್ಳುತ್ತೇವೆ, ಆ ವೀಡಿಯೋದಲ್ಲಿ ಸಂಭ್ರಮವಿದ, ದುಃಖವಿದೆ, ಅಷ್ಟೇ ಗಾಢವಾದ ಪ್ರೀತಿಯಿದೆ.

ಆ ವೀಡಿಯೋದಲ್ಲಿ ಏನಿದೆ?
ಒಂದು ಕುಟುಂಬ ಹೊಸ ಕಾರ್ ಖರೀದಿಗೆ ಬಂದಿದೆ, ಕಾರು ಖರೀದಿ ಎಂದ ಮೇಲೆ ಅಲ್ಲಿ ಸಂಭ್ರಮವಿರುತ್ತೆ, ಆದರೆ ಆ ವೀಡಿಯೋ ಸಂಪೂರ್ಣ ನೋಡುವಾಗ ನಮ್ಮ ಕಣ್ಣುಗಳು ಒದ್ದೆಯಾಗುತ್ತೆ, ಹುಡುಗರ್ ಪ್ರೀತಿ ಕೊನೆವರೆಗೂ ಇರುತ್ತೆ ಅನ್ನೋಕೆ ಈ ವೀಡಿಯೋನೆ ಸಾಕ್ಷಿ ಎಂಬ ಕ್ಯಾಪ್ಷನ್ ನೀಡಿ ಈ ವೀಡಿಯೋವನ್ನು ಇನ್‌ಸ್ಟಾಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಕುಟುಂಬದವರ ಜೊತೆ ಆ ಹುಡುಗ ಕಾರ್ ಖರೀದಿಗೆ ಬಂದಿದ್ದಾನೆ, ಕಾರ್ ಖರೀದಿ ಬಳಿಕ ಮೊದಲು ಗಾಡಿಯಲ್ಲಿ ಕೂರುವ ಸಂಭ್ರಮವಿರುತ್ತಲ್ಲ, ಆದರೆ ಈ ಹುಡುಗ ಕಾರಿನಲ್ಲಿ ಮೊದಲು ತಾನ ಕೂರಲಿಲ್ಲ, ತನ್ನ ಜೊತೆ ಬಂದ ಮನೆಯವರನ್ನೂ ಕೂರಿಸಲಿಲ್ಲ ಬದಲಾಗಿ ತನ್ನ ಪ್ರಿಯತಮೆಯನ್ನು ಕೂರಿಸುತ್ತಾನೆ, ಅವನ ಕಲ್ಪನೆಯಲ್ಲಿ ಅವಳೇ ಕೂತಿದ್ದಾಳೆ, ಆದರೆ ಆಕೆಯ ಫೋಟೊವನ್ನು ಇಟ್ಟಿರುವುದು. ಆಕೆಯ ಫೋಟೊವಿಟ್ಟು ಅದಕ್ಕೆ ಹೂಗುಚ್ಚ ಅರ್ಪಿಸಿ, ಪೋಟೋಗೆ ಮುತ್ತಿಕ್ಕಿ ಬಿಕ್ಕಿ ಬಿಕ್ಕಿ ಅಳುತ್ತಿರುವ ವೀಡಿಯೋ ನೋಡುವಾಗ ಅಯ್ಯೋ ಅನಿಸುತ್ತೆ.
ಅಂಥ ಪ್ರೀತಿ ದೇವರು ಉಳಿಸಲಿಲ್ಲ!
ತುಂಬಾ ಒಳ್ಳೆಯ ಪ್ರೀತಿಯನ್ನು ಸಹಿಸಲು ಆ ದೇವರಿಗೆ ಸಾಧ್ಯವಿಲ್ಲ ಎಂಬ ಮಾತು ಹೇಳುತ್ತಾರೆ, ಆದರೆ ಈ ಜೋಡಿ ನೋಡುವಾಗ ಆ ಮಾತು ಅಕ್ಷರಶಃ ನಿಜವೆನಿಸುತ್ತೆ, ಅವನು ಅವಳನ್ನು ಎಷ್ಟೊಂದು ಪ್ರೀತಿಸುತ್ತಾನೆ ಎಂಬುವುದು ಈ ವೀಡಿಯೋದಿಂದ ಗೊತ್ತಾಗುತ್ತೆ, ಆದರೆ ಆ ಹುಡುಗಿ ಈಗ ಇಲ್ಲ, ಆಕೆ ಇಂಥ ಹುಡುಗನನ್ನು ತನ್ನ ಬದುಕಿನಲ್ಲಿ ಪಡೆದಿರುವುದಕ್ಕೆ ತುಂಬಾನೇ ಅದೃಷ್ಟವಂತಳು ಅನಿಸುತ್ತೆ, ಆದರೆ ಇಂಥ ಹುಡುಗನ ಜೊತೆ ಬಾಳುವ ಅದೃಷ್ಟ ಆಕೆಗೆ ಇರದಾಯ್ತಲ್ಲ ಎಂಬ ಬೇಸರವೂ ಮೂಡುವುದು.
ಸುಂದರವಾದ, ನಿಜವಾದ ಪ್ರೀತಿ ಯಾವತ್ತಿಗೂ ಸಾಯುವುದಿಲ್ಲ
ಹೌದು ಪ್ರೀತಿ ಹುಟ್ಟಿದ ಮೇಲೆ ಅದು ನಿಜವಾದ ಪ್ರೀತಿಯಾಗಿದ್ದರೆ ಕಾರಣ ಎಷ್ಟು ದೊಡ್ಡದೇ ಆಗಿರಲಿ, ಬೇರೆಯಾಗುವುದಿಲ್ಲ ಎಂಬ ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ, ಆಕರ್ಷಣೆ, ದೈಹಿಕ ಖುಷಿಗಾಗಿ ಪ್ರೀತಿ ಎಂಬ ಹೆಸರಿಟ್ಟಾಗ ಮಾತ್ರ ಒಂದು ಚಿಕ್ಕ ಭಿನ್ನಾಭಿಪ್ರಾಯ ಬಂದರೂ ಪ್ರೀತಿ ಮುರಿದು ಹೋಗುತ್ತೆ ಅಥವಾ ಪ್ರೀತಿಯಲ್ಲಿ ಮೋಸ ಆಗುತ್ತೆ, ಅದೇ ಮನಸಾರೆ ಪ್ರೀತಿಸಿದರೆ ಆ ಪ್ರೀತಿಯಲ್ಲಿ ಎಂಥದ್ದೇ ಸವಾಲುಗಳು ಬರಲಿ ಒಂದಾಗಿ ಇರುತ್ತಾರೆ, ಸಾವೇ ಬೇರ್ಪಡಿಸಿದರೂ ಅವರ ಪ್ರೀತಿಯಂತೂ ಕಿಂಚಿತ್ತು ಕಡಿಮೆಯಾಗಲ್ಲ.
ಹುಡುಗರ ಪ್ರೀತಿ ತುಂಬಾ ಸ್ಟ್ರಾಂಗ್ ಕೂಡ ಹೌದು
ಹುಡುಗಿಯರ ಪ್ರೀತಿಹುಡಗರಿಗಿಂತ ಕಡಿಮೆ ಅಂತಲ್ಲ, ಆದರೆ ಹುಡುಗರಂತೆ ಹುಡುಗಿಯರು ಪ್ರೀತಿಸಲ್ಲ, ಪ್ರೀತಿಯಲ್ಲಿ ಸೋತಾಗ ಹುಡುಗರು ಹುಚ್ಚರಾಗುವಂತೆ ಹುಡುಗಿಯರು
ಆಗುವುದು ಕಡಿಮೆ ಅಲ್ವಾ? ತನ್ನವಳು ತೀರಿ ಹೋದ ಮೇಲೆ ತಾನು ಕೊಂಡ ಕಾರಿನಲ್ಲಿ ಮೊದಲು ಅವಳೇ ಕೂರಬೇಕೆಂದರೆ ಅವನ ಪ್ರೀತಿ ನಿಜಕ್ಕೂ ಗ್ರೇಟ್ ಅಂತ ಅನಿಸುತ್ತೆ ಅಲ್ವಾ?
ಪ್ರೀತಿ ಮಾಡಬಾರದು, ಮಾಡಿದರೆ ಹೀಗೆ ಮಾಡಬೇಕು ನೋಡಿ.....



Click it and Unblock the Notifications
