Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಪ್ರಪೋಸ್ ದಿನ: ಲವ್ ಪ್ರಪೋಸ್ ಮಾಡುವಾಗ ಈ 4 ತಪ್ಪು ಯಾರು ಮಾಡಲೇಬಾರದು
ಯುವಕ-ಯುವತಿಯರನ್ನು ಪ್ರೇಮ ಜ್ವರದಿಂದ ಕನವರಿಸುವಂತೆ ಮಾಡಲು ವ್ಯಾಲೆಂಟೈನ್ಸ್ ವೀಕ್ ಬಂದಾಗಿದೆ, ಫೆಬ್ರವರಿ 7-14ರವರೆಗೆ ವ್ಯಾಲೆಂಟೈನ್ಸ್ ವೀಕ್, ಫೆಬ್ರವರಿ 7ಕ್ಕೆ ರೋಸ್ ಡೇಯಾದರೆ , ಫೆಬ್ರವರಿ 8ಕ್ಕೆ ಪ್ರಪೋಸ್ ಡೇ. ತುಂಬಾ ಪ್ರೇಮಿಗಳು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ, ತಮ್ಮ ಪ್ರೀತಿಯನ್ನು ತುಂಬಾ ಸುಂದರವಾಗಿ, ರೊಮ್ಯಾಂಟಿಕ್ ಆಗಿ ಅವರಿಗೆ ಹೇಳಲು ಸಿದ್ಧತೆ ಮಾಡಿಕೊಳ್ಳುತ್ತಾರೆ.
ಲವ್ ಪ್ರಪೋಸ್ ಎಂಬುವುದು ಪ್ರತಿಯೊಬ್ಬರ ಬದುಕಿನಲ್ಲಿ ವಿಶೇಷವಾ ದಿನವಾಗಿರುತ್ತದೆ. ತನ್ನ ಸಂಗಾತಿ ಪ್ರಪೋಸ್ ಮಾಡಿದ ದಿನ ಸದಾ ನೆನಪಿನಲ್ಲಿ ಉಳಿಯುವಂಥದ್ದು. ನಾವು ಪ್ರಪೋಸ್ ಮಾಡಿದಾಗ ಆ ಕ್ಷಣ ತುಂಬಾ ಮಧುರ ನೆನಪಾಗಿ ಉಳಿಯಬೇಕೆಂದರೆ ಕೆಲ ತಪ್ಪುಗಳನ್ನು ಮಾಡಲೇಬಾರದು, ಪ್ರಪೋಸ್ ಮಾಡುವಾಗ ಈ ವಿಷಯಗಳು ನಿಮ್ಮ ಗಮನದಲ್ಲಿರಲಿ:

ತುಂಬಾನೇ ಆರ್ಡಿನರಿಯಾಗಿ ಪ್ರಪೋಸ್ ಮಾಡುವುದು
ಪ್ರಪೋಸ್ ಮಾಡುವಾಗ ಆ ದಿನ, ಮಾಡುವ ಘಳಿಗೆ, ಪ್ರೀತಿಯನ್ನು ಹೇಳುವ ರೀತಿ ಎಲ್ಲವೂ ಸ್ಪೆಷಲ್ ಆಗಿದ್ದರೆ ಎಷ್ಟು ಚೆಂದ ಅಲ್ವಾ? ಪ್ರಪೋಸ್ ಡೇ ಅಂಥ ಒಂದು ವಿಶೇಷ ದಿನವೂ ಹೌದು. ನನಗೆ ನೀನು ಇಷ್ಟ ಎಂದು ಸಿಂಪಲ್ ಆಗಿ ಹೇಳುವ ಬದಲಿಗೆ ನಿಮ್ಮ ಪ್ರೀತಿಯನ್ನು ಬಹಳ ಸುಂದರವಾಗಿ, ಕ್ರಿಯೇಟಿವ್ ಆಗಿ ವ್ಯಕ್ತಪಡಿಸಿ, ಹಾಗಂತ ತುಂಬಾನೇ ಫ್ಯಾಂಟಸಿ ಆಗಿ ಮಾಡಬೇಕೆಂದು ಏನೂ ಇಲ್ಲ, ಆದರೆ ಅಟ್‌ಲೀಸ್ಟ್ ಮಂಡಿಯೂರಿ ಲವ್ ಪ್ರಪೋಸ್ ಮಾಡಬಹುದು ಅಲ್ವಾ? ನಿಜ ಹೇಳಬೇಕೆಂದರೆ ಈ ರೀತಿಯ ಪ್ರಪೋಸ್ ಇಷ್ಟಪಡದವರೇ ಇರಲ್ಲ. ಪ್ರೀತಿಯೆಂಬುವುದು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಕ್ಕಿಂತ ನೀವು ಅದನ್ನು ವ್ಯಕ್ತಪಡಿಸುವುದು ಸೂಕ್ತ.
ಅವರಿಗೆ ನಿಮ್ಮ ಮೇಲೆ ಇಷ್ಟವಿದೆಯೇ ಎಂದು ಅರಿತುಕೊಳ್ಳದೆ ಎಲ್ಲರ ಮುಂದೆ ಪ್ರಪೋಸ್ ಮಾಡುವುದು
ಸರ್‌ಪ್ರೈಸ್ ಆಗಿ ಪ್ರಪೋಸ್ ಮಾಡಿದಾಗ ಆಕೆ ಖುಷಿಯಿಂದ ಒಪ್ಪಿಕೊಳ್ಳುವ ಅನೇಕ ವೀಡಿಯೋಗಳನ್ನು ನೋಡುತ್ತೇವೆ. ಆದರೆ ಈ ರೀತಿಯ ಪ್ಲ್ಯಾನ್ ಮಾಡುವ ಮುನ್ನ ಆಕೆಯ ಮನಸ್ಸು ಅರಿಯಿರಿ. ಆಕೆಗೆ ನೀವೊಬ್ಬರು ಸ್ನೇಹಿತ ಮಾತ್ರನಾ ಅಥವಾ ಸ್ನೇಹಕ್ಕೂ ಮೀರಿದ ಸಂಬಂಧ ನಿಮ್ಮ ನಡುವೆ ಇದೆಯೇ ಎಂಬುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಅವರಿಗೆ ಮುಜಗರ ಉಂಟಾಗುವುದು, ನಿಮಗೆ ಅವಮಾನವಾಗುವುದು.
ಇನ್ನು ಅವರಿಗೆ ನಿಮ್ಮ ಮೇಲೆ ಇಷ್ಟವಿದ್ದರೂ ಮನೆಯವರಿಗೆ ಒಪ್ಪಿಸದೆ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದು ಆಕೆಗೂ ಕಷ್ಟವಾಗಬಹುದು, ಹಾಗಾಗಿ ನೀವು ತುಂಬಾ ಫ್ಯಾಂಟಸಿಯಾಗಿ ಪ್ರಪೋಸ್ ಮಾಡುವ ಮುನ್ನ ಇದರ ಬಗ್ಗೆ ಕೂಡ ಗಮನಹರಿಸುವುದು ಒಳ್ಳೆಯದು.
ನಿಮ್ಮ ಪ್ರೀತಿಯನ್ನು ಮೊದಲು ಪ್ರೀತಿಸಿದವರಿಗೆ ಹೇಳದೆ ಬೇರೆಯವರಿಗೆಲ್ಲಾ ಹೇಳುತ್ತಾ ಬರುವುದು
ಈ ತಪ್ಪು ಮಾಡಲೇಬೇಡಿ, ನಿಮ್ಮ ಮನಸ್ಸಿನಲ್ಲಿ ಒಬ್ಬ ವ್ಯಕ್ತಿ ಮೇಲೆ ಪ್ರೀತಿ ಮೂಡಿದರೆ ಆ ಪ್ರೀತಿಯನ್ನು ಮೊದಲು ಅವರಿಗೆ ಹೇಳಿ, ಬೇರೆಯವರ ಮೂಲಕ ಅದು ತಿಳಿಯುವಂತಾಗಬಾರದು, ನಿಮ್ಮ ಲವ್ ಪ್ರಪೋಸ್ ಮೂಲಕವೇ ಅವರಿಗೆ ತಿಳಿಯುವಂತಾಗಬೇಕು.
ಪ್ರಪೋಸ್ ಮಾಡುವ ದಿನ ಪ್ರಾಂಕ್ ಮಾಡುವುದು
ಆ ತಪ್ಪು ಮಾಡಲೇಬೇಡಿ, ವೀಡಿಯೋ ಕಂಟೆಂಟ್‌ಗಳಿಗೆ ಅದು ಚೆನ್ನಾಗಿರಬಹುದು, ಆದರೆ ನಿಮ್ಮ ಪ್ರಪೋಸ್ ಪ್ರಾಂಕ್ ಬೇರೆಯವರ ಮನಸ್ಸಿನ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಹಾಗಾಗಿ ಲವ್ ಪ್ರಾಂಕ್ ಮಾಬೇಡಿ. ಒಂದು ವೇಳೆ ನೀವು ಮಾಡುವ ಪ್ರಾಂಕ್ ಪ್ರಪೋಸ್ ಅವರು ನಿಜವೆಂದು ನಂಬಿದರೆ ಅವರಿಗೆ ಅವಮಾನ, ಮನಸ್ಸಿಗೆ ಆಘಾತ ಉಂಟಾಗುವುದು, ಆದ್ದರಿಂದ ಈ ತಪ್ಪು ಮಾಡಲೇಬೇಡಿ.
ಹಾಗಾಗಿ ನೀವು ಪ್ರಪೋಸ್ ಮಾಡುವಾಗ ಈ ಎಲ್ಲಾ ಅಂಶಗಳ ಕಡೆ ಗಮನಹರಿಸಲೇಬೇಕು, ಬೇರೆಯವರಿಗೆ ತೋರ್ಪಡಿಸಲು ಅಥವಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯನ್ನು ಫ್ಯಾಂಟಸಿ ಆಗಿ ತೋರಿಸಲು ನೀವು ಪ್ರಪೋಸ್ ಮಾಡಬೇಡಿ. ಪ್ರಪೋಸ್ ಎಂಬುವುದು ಮದುವೆ ದಿನದಷ್ಟೇ ನೆನಪಿನಲ್ಲಿಡುವ ದಿನವಾಗಿರುತ್ತದೆ, ಹಾಗಾಗಿ ಪ್ರಪೋಸ್ ದಿನ ಅಂತ ಪ್ರಪೋಸ್ ಮಾಡಬೇಕೆಂದಿಲ್ಲ, ನಿಮ್ಮ ಪ್ರಪೋಸ್ ಅನ್ನು ಸುಂದರವಾಗಿ ಮಾಡಿ....



Click it and Unblock the Notifications
