Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಪ್ರಾಮಿಸ್ ಡೇ: ಈ ರೀತಿ ಪ್ರಾಮಿಸ್ ಮಾಡಿದ ಜೋಡಿ ಸದಾ ಖುಷಿಯಿಂದ ಜೀವನ ನಡೆಸುತ್ತಾರೆ
ವ್ಯಾಲೆಂಟೈನ್ಸ್ ವೀಕ್‌ನ ಪ್ರತಿಯೊಂದು ವಿಶೇಷತೆಯಿಂದ ಕೂಡಿದೆ, ಟೆಡ್ಡಿ ಡೇ ಮುಗಿದ ಮೇಲೆ ಪ್ರಾಮಿಸ್ ಡೇ ಇದೆ, ಒಂದು ಸುಂದರ ಸಂಬಂಧಕ್ಕೆ ಪ್ರಾಮಿಸ್ ಎಂಬುವುದು ತುಂಬಾನೇ ಮುಖ್ಯವಾಗಿರುತ್ತದೆ.ಇಬ್ಬರು ಜೊತೆಯಾಗಿ ಬಾಳಲು ತೀರ್ಮಾನ ಮಾಡಿದಾಗ ಕೆಲವೊಂದು ಪ್ರಾಮಿಸ್ ಮಾಡಬೇಕು ಅಲ್ಲದೆ ಆ ಪ್ರಾಮಿಸ್‌ನಂತೆಯೇ ನಡೆದುಕೊಳ್ಳಬೇಕಾಗುತ್ತದೆ.

ಅದರಲ್ಲಿಯೂ ಈ ಬಗೆಯ ಪ್ರಾಮಿಸ್ ಇದೆಯೆಲ್ಲಾ ನಿಮ್ಮ ಬದುಕನ್ನು ಸುಂದರವಾಗಿಸುತ್ತದೆ:
ಏನೇ ಆಗಲಿ ಸದಾ ನಾನು ನಿನ್ನ ಜೊತೆ ಇರುತ್ತೇನೆ: ಈ ಪ್ರಾಮಿಸ್ ಇಬ್ಬರು ಮಾಡಿಕೊಳ್ಳಬೇಕು, ಬಾಯಿ ಮಾತನಲ್ಲಿ ಹೇಳುವುದಲ್ಲ, ಇದನ್ನು ಮನಸಾರೆ ಹೇಳಬೇಕು. ಇಬ್ಬರು ಪ್ರೀತಿಸಲಾರಂಭಿಸಿದಾಗ ಏನೇ ಆಗಲಿ ಒಬ್ಬರನ್ನೊಬ್ಬರು ಬಿಟ್ಟು ಕೊಡಬಾರದು.
ಸಂಬಂಧದಲ್ಲಿ ನಿಯತ್ತಿನಿಂದ ಇರುತ್ತೇನೆ: ಸಂಬಂಧದಲ್ಲಿ ನಿಯತ್ತು ತುಂಬಾನೇ ಮುಖ್ಯ, ನಿಯತ್ತಿಲ್ಲದಿದ್ದರೆ ಆ ಸಂಬಂಧ ಬಾಳಲ್ಲ, ಬದುಕಿನಲ್ಲಿ ಖುಷಿಯೂ ಇರಲ್ಲ ಹಾಗಾಗಿ ಇಬ್ಬರು ನಿಯತ್ತಿನಿಂದ ಇರುತ್ತೇವೆ ಎಂದು ಪ್ರಾಮಿಸ್ ಮಾಡಬೇಕು, ಅಲ್ಲದೆ ಆ ಪ್ರಾಮಿಸ್ ಯಾವುದೇ ಕಾರಣಕ್ಕೆ ಮುರಿಯಲೇಬೇಡಿ.
ಯಾವುದೇ ಕಾರಣಕ್ಕೆ ಸುಳ್ಳು ಹೇಳಲ್ಲ
ಸಂಬಂಧದಲ್ಲಿ ಸುಳ್ಳು ಇರಲೇಬಾರದು, ನಾವಿಬ್ಬರು ಯಾವುದೇ ಕಾರಣಕ್ಕೆ ಸುಳ್ಳು ಹೇಳಲ್ಲ ಎಂದು ಪ್ರಾಮಿಸ್ ಮಾಡಿ, ಅಲ್ಲದೆ ಯಾವುದೇ ಕಾರಣಕ್ಕೆ ಸುಳ್ಳು ಹೇಳಬಾರದು. ಒಮ್ಮೆ ಸುಳ್ಳು ಹೇಳುತ್ತಿದ್ದೇವೆ ಎಂದು ನಮ್ಮ ಸಂಗಾತಿಗೆ ತಿಳಿದರೆ ಅವರ ನಂಬಿಕೆಯೇ ಮುರಿದು ಹೋಗುವುದು.
ನಿನಗೆ ಏನಾದರು ಸಮಸ್ಯೆ ಬಂದರೆ ನಿನ್ನನ್ನು ಮಾತ್ರ ಖಂಡಿತ ಒಂಟಿ ಮಾಡಲ್ಲ ಅಂತ ಪ್ರಾಮಿಸ್ ಮಾಡಿ
ನಿಜವಾದ ಸಂಗಾತಿ ನಮ್ಮ ಸುಖದಲ್ಲಿ ಇರುವವರು ಅಲ್ಲ, ನಮಗೆ ಕಷ್ಟ ಅಂತ ಬಂದಾಗ ಜೊತೆಗೆ ನಿಲ್ಲಬೇಕು. ಏನೇ ಆಗಿರಲಿ ಸದಾ ನಿನ್ನ ಜೊತೆಗಿರುತ್ತೇನೆ, ನಿನ್ನ ಖುಷಿಯಾಗಿಡಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಪ್ರಾಮಿಸ್ ಮಾಡಿ.
ನಿನ್ನ ಗೆಲುವು ನಾನು ಸಂಭ್ರಮಿಸುತ್ತೇನೆ ಅಂತ ಪ್ರಾಮಿಸ್ ಮಾಡಿ: ಸಂಗಾತಿ ನಮಗಿಂತ ಉತ್ತಮ ಸ್ಥಾನಮಾನ ಗಳಿಸಿದರೆ ಅದನ್ನು ನೋಡಿ ಯಾವತ್ತಿಗೂ ಹೊಟ್ಟೆಕಿಚ್ಚು ಪಡಲ್ಲ, ಖುಷಿ ಪಡುತ್ತೇನೆ ಎಂದು ಪ್ರಾಮಿಸ್ ಮಾಡಿ.
ಪ್ರಾಮಿಸ್ ಮಾಡುವುದು ಎಷ್ಟು ಮುಖ್ಯವೋ ನಾವು ಮಾಡಿರುವ ಪ್ರಾಮಿಸ್ ಕೊನೆಯವರೆಗೆ ಕಾಪಾಡುವುದು ಇದೆಯಲ್ಲಾ ಅದುಕೂಡ ಅಷ್ಟೇ ಮುಖ್ಯವಾಗಿರುತ್ತದೆ
ಪ್ರೀತಿಯಲ್ಲಿರುವಾಗ ನೀನೇ ಮುಖ್ಯ, ನೀನಿಲ್ಲದೆ ಬಾಳುವುದು ನನಗೆ ಊಹಿಸಲೂ ಸಾಧ್ಯವಿಲ್ಲ, ಏನೇ ಬರಲಿ ಸದಾ ನಿನ್ನ ಜೊತೆಗೆ ಇರುತ್ತೇನೆ ಎಂದು ಪ್ರಾಮಿಸ್ ಮಾಡಿದ ಎಷ್ಟೋ ಜೋಡಿ ಜೊತೆಯಾಗಿ ಬಾಳಲಾರಂಭಿಸಿದಾಗ ಆ ಪ್ರಾಮಿಸ್ ಮುರಿದಿರುವುದನ್ನು ನೋಡಿದ್ದೇವೆ. ನಿಮ್ಮಿಬ್ಬರ ಸಂಬಂಧ ತುಂಬಾ ಸುಂದರವಾಗಬೇಕೆಂದರೆ ಆ ಪ್ರಾಮಿಸ್ ಮುರುಯದಂತೆ ನೋಡಿಕೊಳ್ಳಬೇಕು. ಇಬ್ಬರ ನಡುವೆ ಏನೇ ಸಮಸ್ಯೆ ಬರಬಹುದು, ಜಗಳ ಬರಬಹುದು, ಅದೆಲ್ಲಾ ಮರೆತು ಇಬ್ಬರು ಖುಷಿಯಾಗಿ ಬಾಳುವುದು ಮುಖ್ಯವಾಗುತ್ತೆ.
ನಿಯತ್ತು ಅಂತೂ ತುಂಬಾನೇ ಮುಖ್ಯ: ಸಂಗಾತಿಗೆ ಮೋಸ ಮಾಡುವುದರ ಬಗ್ಗೆ ಕನಸಿನಲ್ಲಿಯೂ ಕೂಡ ಯೋಚಿಸಬಾರದು, ಏನೇ ಆದರೂ ಸಹಿಸಿಕೊಳ್ಳಬಹುದು, ಆದರೆ ಸಂಗಾತಿ ನನಗೆ ಮೋಸ ಮಾಡಿದ್ದಾನೆ/ಳೆ ಎಂದು ತಿಳಿದಾಗ ಅದು ಕೊಡುವ ನೋವು ಇತರ ನೋವಿಗಿಂತ ತುಂಬಾನೇ ದೊಡ್ಡದು, ಆ ನೋವು ಸಂಗಾತಿಗೆ ಕೊಟ್ಟವರು ಕೂಡ ಜೀವನದಲ್ಲಿ ನೆಮ್ಮದಿಯಾಗಿರಲು ಸಾಧ್ಯನೇ ಇಲ್ಲ. ಹಾಗಾಗಿ ನೀವು ನಿಮ್ಮ ಸಂಬಂಧ ಸುಂದರವಾಗಿಸಲು ಪ್ರಾಮಿಸ್ ಮಾಡಿ, ಆ ಪ್ರಾಮಿಸ್ ಉಸಿರುವವರೆಗೆ ಕಾಪಾಡಿ...



Click it and Unblock the Notifications
