Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪ್ರೀತಿಗಾಗಿ ರಾಜಕುಮಾರಿ ಲಿಯೊನರ್ ಅನ್ನೇ ನಿರಾಕರಿಸಿದ ಸ್ಪ್ಯಾನಿಷ್ ಫುಟ್ಬಾಲ್ ಆಟಗಾರ: ರಾಜಮನೆತನಕ್ಕೆ ಆಘಾತ!
ಪ್ರೀತಿಗಾಗಿ ಜೋಡಿಗಳು ಏನೆಲ್ಲಾ ತ್ಯಾಗ ಮಾಡುತ್ತಾರೆ ಅನ್ನೋದನ್ನು ನಾವೆಲ್ಲಾ ಕೇಳಿ್ದೇವೆ, ನೋಡಿದ್ದೇವೆ. ಹಾಗೆ ಅದನ್ನು ಪಡೆಯಲು ಹೇಗೆ ಕಷ್ಟಪಡುತ್ತಾರೋ ಅದೇ ರೀತಿ ಆ ಪ್ರೀತಿಯನ್ನು ಉಳಿಸಿಕೊಳ್ಳಲು ಕೂಡ ಬಹಳ ಕಷ್ಟಪಡುತ್ತಾರೆ. ಹಾಗೆ ಮತ್ತೆ ಕೆಲವರು ಪ್ರೀತಿಯಲ್ಲಿ ಮೋಸ ಮಾಡುವುದು ಕೂಡ ನೋಡುತ್ತೇವೆ. ತಮ್ಮ ಪ್ರತಿಯನ್ನು ಬಿಟ್ಟು ಮತ್ತೊಬ್ಬರ ಪ್ರೀತಿಯಲ್ಲಿ ಬೀಳುವುದು ಹೊಸದೇನಲ್ಲ.
ಇನ್ನು ಆಸ್ತಿ, ಅಂತಸ್ತು ನೋಡಿ ಪ್ರೀತಿಯಲ್ಲಿ ಬೀಳುವುದು ಕೂಡ ನೋಡಬಹುದು. ಆದ್ರೆ ಇಲ್ಲೊಬ್ಬ ಆಸ್ತಿ, ಹಣ ಎಲ್ಲದಕ್ಕಿಂತ ತನ್ನ ಪ್ರೀತಿಯೇ ಮುಖ್ಯ ಅನ್ನೋದನ್ನು ಇಡೀ ವಿಶ್ವಕ್ಕೆ ತೋರಿಸಿರುವುದು ಬಹಳಷ್ಟು ಪ್ರಶಂಸೆಗೆ ಕಾರಣವಾಗಿದೆ. ಅದರಲ್ಲೂ ಆತ ರಾಜಕುಮಾರಿಯನ್ನೇ ನಿರಾಕರಿಸಿ ತನ್ನ ಪ್ರೀತಿಗೆ ತಲೆಬಾಗಿದ್ದಾನೆ.

ಸ್ಪೇನ್ ಮತ್ತು ಎಫ್‌ಸಿ ಬಾರ್ಸಿಲೋನಾದ ಫುಟ್‌ಬಾಲ್ ಆಟಗಾರ ಗವಿ ಈಗ ಸುದ್ದಿಯಲ್ಲಿರುವ ಯುವಕ. ಆತ ಸ್ಪೇನ್ ರಾಜಕುಮಾರಿ ಲಿಯೊನರ್ ಅನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಸ್ಪೇನ್‌ನ ಈ ಯುವ ಆಟಗಾರ ಹಾಗೂ ಸ್ಪೇನ್ ರಾಜಕುಮಾರಿಯ ನಡುವೆ ಯಾವುದೇ ಪರಿಚಯ ಇರಲಿಲ್ಲ. ಇಬ್ಬರು ಮೊದಲಿನಿಂದ ಒಬ್ಬರನೊಬ್ಬರು ಅರಿತವರಲ್ಲ. ಆದ್ರೆ ಆಕೆಯೇ ಈ ಫುಟ್‌ಬಾಲ್ ಆಟಗಾರನಿಗೆ ಮನಸೋತಿದ್ದಾಳೆ ಎನ್ನಲಾಗಿದೆ. ಆದ್ರೆ ಗವಿ ಈಗಾಗಲೇ ತನ್ನ ಪ್ರೇಯಸಿಯ ಹೊಂದಿದ್ದು, ರಾಜಕುಮಾರಿಯನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಯಾರು ಈ ರಾಜಕುಮಾರಿ?
ಮ್ಯಾಡ್ರಿಟ್‌ನ ಅಸ್ಟೊರಿಯಸ್‌ನಲ್ಲಿ ಜನಿಸಿದ ಲಿಯೊನರ್, ಸ್ಪೇನ್‌ನ ರಾಜ ಫೆಲಿಪೆ ಮತ್ತು ರಾಣಿ ಲೆ ಟಿಜಿಯಾ ಅವರ ಹಿರಿಯ ಮಗಳು, ಆಕೆ 2005 ಅಕ್ಟೋಬರ್ 31ರಂದು ಜನಿಸಿದಳು. ಸ್ಪ್ಯಾನಿಷ್ ಸಿಂಹಾಸನದ ಉತ್ತರಾಧಿಕಾರಿಯಾಗಿರುವ ಆಕೆ ನೋಡಲು ಕೂಡ ಸುಂದರಿಯಾಗಿದ್ದಾಳೆ. ಆಕೆಯ ತಂದೆ 2014ರಲ್ಲಿ ರಾಜ ಎಂದು ಘೋಷಿಸಲ್ಪಟ್ಟಾಗಿನಿಂದ ಆಕೆ ಉತ್ತರಾಧಿಕಾರಿಯಾಗಿದ್ದಾಳೆ.
ಹಾಗೆ ಆಕೆ ಪ್ರತಿಷ್ಠಿತ ಯುಡಬ್ಯ್ಲೂಸಿ ಅಂಟ್ಲಾಟಿಕ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಬ್ಯಾಕ್‌ಲೌರಿಯೇಟ್ ಪದವಿ ಅಧ್ಯಯನ ಮಾಡಿದ್ದಾರೆ. ಹಾಗೆ ಅವರು ಮೂರು ವರ್ಷಗಳ ಮಿಲಿಟರಿ ಶಿಕ್ಷಣ ಪಡೆಯುವ ಉದ್ದೇಶದಿಂದ 2023ರಲ್ಲಿ ಜನರಲ್ ಮಿಲಿಟರಿ ಅಕಾಡೆಮಿಗೂ ಸೇರಿದ್ದಾರೆ. ಈ ಎಲ್ಲಾ ಪದವಿ ಪಡೆಯುವುದು ಸ್ಪ್ಯಾನಿಷ್ ಉತ್ತರಾಧಿಕಾರಿಯಾದವರು ಹೊಂದಬೇಕಾಗಿರುವ ಸಂಪ್ರದಾಯವಾಗಿದೆ. ಹಾಗೆ ವಾಯು ಸೇನೆ ಕುರಿತಾದ ತರಬೇತಿಯ ಬಳಿಕ ಅವರ ಅಧ್ಯಯನ ಕೊನೆಯಾಗಲಿದೆ.
ಇಬ್ಬರ ನಡುವೆ 2022ರಿಂದ ನಂಟು!
ರಾಜಕುಮಾರಿ ಲಿಯೊನರ್ ಹಾಗೂ ಸ್ಪೇನ್ ಫುಟ್‌ಬಾಲ್ ಆಟಗಾರ ಗವಿ ನಡುವಿನ ಪರಿಚಯವು 2022ರಿಂದ ಇದೆ ಎಂದು ವರದಿಗಳು ಹೇಳಿವೆ. 2022ರಲ್ಲಿ ರಾಣಿಯ ತಂದೆ ಫೆಲಿಪೆ ಗವಿಯಿಂದ ಸಹಿ ಮಾಡಲಾದ ಟೀಮ್ ಜೆರ್ಸಿಗಾಗಿ ಮನವಿ ಮಾಡಿದ್ದರು ಎಂದು ಹೇಳಲಾಗಿದೆ. ಆದ್ರೆ ರಾಣಿ ಲಿಯೊನಲ್ ಹಾಗೂ ಗವಿ ನಡುವೆ ಯಾವುದೇ ಮಾತುಕತೆಗಳು, ಅಥವಾ ಸಾರ್ವಜನಿಕವಾಗಿ ಇಬ್ಬರು ಎಲ್ಲಿಯಾದರು ಕಾಣಿಸಿಕೊಂಡಿರುವ ಕುರಿತಾದ ವರದಿಗಳಿಲ್ಲ.
ಆದ್ರೆ ಈಗ ರಾಜಕುಮಾರಿಯ ವಿಶೇಷ ಆಸಕ್ತಿಯನ್ನು ಆಟಗಾರ ಗವಿ ನಯವಾಗಿ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಅವರು ಫುಟ್‌ಬಾಲ್ ವೃತ್ತಿ ಜೀವನದ ಮೇಲೆ ಕೇಂದ್ರೀಕರಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಅದರಲ್ಲದೆ ಗವಿ ತನಗೆ ಈಗಾಗಲೇ ಗೆಳತಿ ಇರುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ. ಹಾಗೆ ಆಕೆಯೊಂದಿಗೆ ಇರುವ ಹಲವು ಫೋಟೋಗಳು ಕೂಡ ಹರಿದಡುತ್ತಿವೆ. ನಿಜವಾದ ಪ್ರೀತಿಯನ್ನು ಆತ ಬಿಟ್ಟುಕೊಡದೆ ಉಳಿಸಿಕೊಂಡಿದ್ದಾನೆ. ಹಾಗೆ ರಾಜಕುಮಾರಿಯ ಆಸ್ತಿ, ಸಂಪತ್ತಿಗೆ ಆತ ಮರುಳಾಗದೆ ನಿಜವಾದ ಪ್ರೀತಿಗೆ ಶರಣಾಗಿದ್ದಾನೆ ಎಂದು ಆತನ ನಿರ್ಧಾರಗಳ ಕುರಿತು ಪ್ರಶಂಸೆಗಳು ಕೇಳಿಬರುತ್ತಿವೆ. ಸದ್ಯ ಈಗ ಆತ ತನ್ನ ಗೆಳತಿಯೊಂದಿಗೆ ಸಂತಸದ ಕ್ದಣಗಳ ಕಳೆಯುತ್ತಿದ್ದಾರೆ.



Click it and Unblock the Notifications
