Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಶಾಲೆಗೆ ಹೋಗಬೇಕೆಂದರೆ ಮದುವೆ ಮಾಡಿಕೊಡಿ ಎಂದ 13ರ ಬಾಲಕ ಮದುವೆ ವೀಡಿಯೋ ವೈರಲ್
ಚಿಕ್ಕ ಹುಡುಗರು ಮದುವೆ ಮಾಡು ನನಗೆ ಎಂದರೆ ನಕ್ಕು ಸುಮ್ಮನಾಗುತ್ತೇವೆ,ಆ ಮಕ್ಕಳಿಗೂ ಸ್ವಲ್ಪ ದಿನಗಳು ಕಳೆದ ಮೇಲೆ ನಾವು ದೊಡ್ಡವರು ಆದ ಮೇಲೆ ಮದುವೆಯಾಗಲು ಸಾಧ್ಯ ಎಂದು ತಿಳಿಯುತ್ತದೆ, ಇನ್ನು ಕೆಲವರು ಹದಿಹರೆಯದ ಪ್ರಾಯದಲ್ಲಿಯೇ ಪ್ರೀತಿಯ ಮೋಹಕ್ಕೆ ಬಿದ್ದು ಮನೆಬಿಟ್ಟು ಓಡಿಹೋಗುತ್ತಾರೆ. ಆದರೆ ಅಂಥವರನ್ನು ಪೊಲೀಸರು ಹುಡುಕಿ ತಂದು ಮನೆಯವರಿಗೆ ಒಪ್ಪಿಸುತ್ತಾರೆ, ಇದು ಸಾಮಾನ್ಯವಾಗಿ ಕಾಣುವ ಸಂಗತಿ.
ಆದರೆ 13 ವರ್ಷ ಹುಡುಗನಿಗೆ, ಇನ್ನು ಚಿಗುರು ಮೀಸೆ ಕೂಡ ಮೂಡಿಲ್ಲ, ಆ ಹುಡುಗನಿಗೆ ಮನೆಯವರೇ ಮದುವೆ ಮಾಡಿದ್ದಾರೆ, ಅಷ್ಟಕ್ಕೂ ಈ ಒಂದು ಕಾರಣಕ್ಕೆ ಅವನಿಗೆ 13ರ ಪ್ರಾಯದಲ್ಲಿ ಮದುವೆ ಮಾಡಲಾಗಿದೆ.

ಸ್ಕೂಲ್‌ಗೆ ಹೋಗಲು ಮದುವೆಯಾಗಬೇಕೆಂದು ಹಠ ಹಿಡಿದ ಬಾಲಕ
ಆ ಬಾಲಕನಿಗೆ ಜಸ್ಟ್ 13, ಶಾಲೆಗೆ ಹೋಗುವುದು ಎಂದರೆ ಅವನಿಗೆ ಅಲರ್ಜಿ, ಆದರೆ ಮಗ ಶಾಲೆಗೆ ಹೋಗದಿದ್ದರೆ ಅವನ ಭವಿಷ್ಯ ಏನಾಗಬೇಡ ಎಂಬ ಚಿಂತೆ ಪೋಷಕರದ್ದು, ಹಾಗಾಗಿ ನೀನು ಶಾಲೆಗೆ ಹೋಗಲು ನಾವೇನು ಮಾಡಬೇಕು? ಎಂದು ಕೇಳುತ್ತಾರೆ, ಆದರೆ ಹುಡುಗನ ಉತ್ತರ ಕೇಳಿ ಬೆಚ್ಚಿ ಬೀಳುವ ಪರಿಸ್ಥಿತಿ ಬರುವುದು ಎಂದು ಪಾಪ ಆ ಪೋಷಕರಿಗೂ ಗೊತ್ತಿರಲಿಲ್ಲ. ಅವರೇನೋ ಏನಾದರೂ ಆಟ ಸಾಮಾನು, ಮೊಬೈಲ್ , ಸೈಕಲ್, ಲ್ಯಾಪ್‌ಟಾಪ್ ಹೀಗೆ ಯಾವುದಾದರೂ ವಸ್ತುಗಳನ್ನು ಕೇಳಬಹುದು ಎಂದು ಭಾವಿಸಿದ್ದರು. ಆದರೆ ಆ ಹುಡುಗ ಮಾತ್ರ ಸಾಮಾನ್ಯದ್ದವನಲ್ಲ, ಏಕೆಂದರೆ ಅವನು ಕೇಳಿದ್ದು ಮದುವೆ ಮಾಡಿಕೊಡು ಎಂದು.
ಪೋಷಕರು ತಮಾಷೆಗೆ ಅಂದುಕೊಂಡರು
ಪ್ರಾರಂಭದಲ್ಲಿ ಪೋಷಕರಿಗೆ ತಮಾಷೆ ಅನಿಸಿತು. 13 ವರ್ಷದ ಮಗ ಮದುವೆಯಾಗುತ್ತೇನೆ ಎಂದು ಹೇಳಿದರೆ ಯಾರು ತಾನೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಹುಡುಗನ ಹಠ ಬಿಡಲಿಲ್ಲ, ಮದುವೆಯಾಗಬೇಕೆಂದರೆ ಮದುವೆ ಮಾಡಿಕೊಡಿ ಎಂದು ಹಠ ಹಿಡಿಯುತ್ತಾನರ. ಕೊನೆಗೆ ಇವನ ಹಠದ ಮುಂದೆ ಪೋಷಕರು ಸೋಲಬೇಕಾಯಿತು. ಅಷ್ಟಕ್ಕೂ ಈ ಹುಡುಗ ಚಿಕ್ಕ ಪ್ರಾಯದಲ್ಲಿಯೇ ಪ್ರೀತಿಯಲ್ಲಿ ಬಿದ್ದಿದ್ದಾನಾ ಎಂದು ನೋಡಿದರೆ ಅದೂ ಇಲ್ಲ, ಅವನಿಗೆ ಯಾವುದೇ ಗರ್ಲ್‌ಫ್ರೆಂಡ್ ಇಲ್ಲ, ಇದು ಪೋಷಕರಿಗೆ ತುಂಬಾನೇ ತಲೆನೋವಾಯ್ತು. ಹಾಗಾಗಿ 12ರ ಪ್ರಾಯದ ಯುವತಿಯನ್ನು ಹುಡುಕಿ ಮದುವೆ ಮಾಡಿದ್ದಾರೆ, ಹುಡುಗನ ಹುಚ್ಚಾಟಕ್ಕೆ ಆತನ ಪೋಷಕರು ಮದುವೆಗೆ ಒಪ್ಪಿರಬಹುದು, ಆದರೆ ಹುಡುಗಿ ಮನೆಯವರು ಹೇಗೆ ಒಪ್ಪಿದರೋ ಗೊತ್ತಿಲ್ಲ, ಒಟ್ಟಿನಲ್ಲಿ ಅವರ ಮದುವೆ ವೀಡಿಯೋ ವೈರಲ್ ಆಗಿದೆ, ಹುಡುಗಿ ಕೂಡ ಖುಷಿ-ಖುಷಿಯಾಗಿಯೇ ಇದ್ದಾಳೆ, ಸಾಮಾನ್ಯ ಮದುವೆಯಲ್ಲ, ನೋಡಿದರೆ ಗ್ರ್ಯಾಂಡ್ ಮದುವೆ ರೀತಿ ಕಾಣುತ್ತಿದೆ.
ತಮಾಷೆಯ ಮದುವೆ
ಈ ಮದುವೆಯನ್ನು ತಮಾಷೆಯ ಮದುವೆ ಎಂದು ಹೇಳಲಾಗುತ್ತಿದೆ. ಈ ಹುಡುಗ ಪಾಕಿಸ್ತಾನದ ಹುಡುಗ ಅಲ್ಲಿಯೂ ಮದುವೆಗೆ ಹೆಣ್ಣಿಗೆ 16, ಗಂಡಿಗೆ 18 ವರ್ಷ ತುಂಬಿರಬೇಕು, ಹೀಗಾಗಿ ಇದು ಕಾನೂನು ಬಾಹಿರ ಮದುವೆ. ಈ ಮದುವೆ ಬಗ್ಗೆ ಅಲ್ಲಿಯ ಪೊಲೀಸರು ವಿಚಾರಿಸಿದ್ದಾರೆಯೇ? ಎಂಬುವುದು ಗೊತ್ತಿಲ್ಲ. ಒಟ್ಟಿನಲ್ಲಿ ಈ ಹುಡುಗನ ಹಠ ಮಾತ್ರ ಅಬ್ಬಾ! ಇದನ್ನು ನೋಡಿ ಇತರ ಮಕ್ಕಳು ಇದೇ ರೀತಿ ಹೇಳಿದರೆ? ಹಾಗಾಗಿ ಮಕ್ಕಳ ಇಂಥ ಹುಚ್ಚಾಟ ಎನ್‌ಕ್ರೇಜ್ ಮಾಡಬಾರದು, ಬದಲಿಗೆ ಕೌನ್ಸಿಲಿಂಗ್ ಕೊಡಿಸಬೇಕು. ಅಲ್ಲದೆ ಈ ಪ್ರಾಯದಲ್ಲಿ ಬರುವ ಪ್ರೀತಿ ಮುಂದೆಯೂ ಹಾಗೆ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಈ ಪ್ರಾಯದ ಮಕ್ಕಳಿಗೆ ತಿದ್ದು ಬುದ್ಧಿ ಹೇಳಬೇಕು ಅವರು ಕುಣಿಸಿದಂತೆ ಕುಣಿಯುವುದಲ್ಲ ಅಲ್ಲವೇ?



Click it and Unblock the Notifications
