Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ನೀತಾರನ್ನು ನಡು ರಸ್ತೆಯಲ್ಲಿ ಪ್ರಪೋಸ್ ಮಾಡಿದ್ದ ಅಂಬಾನಿ: ತಮ್ಮ ಲವ್‌ಸ್ಟೋರಿ ಬಗ್ಗೆ ಮುಖೇಶ್ ಅಂಬಾನಿ ಹೇಳಿದ್ದು ಹೀಗೆ
ಅನಂತ್ ಅಂಬಾನಿ ಪ್ರೀವೆಡ್ಡಿಂಗ್ ಬಳಿಕ ಅಂಬಾನಿ ಕುಟುಂಬದ ಅನೇಕ ಕತೆಗಳು ವೈರಲ್ ಆಗುತ್ತಿದೆ. ಇದೀಗ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯವರ ಹಳೆಯ ಸಂದರ್ಶನದ ವೀಡಿಯೋ ವೈರಲ್ ಆಗುತ್ತಿದ್ದು, ಈ ಸಂದರ್ಶನದಲ್ಲಿ ಮುಖೇಶ್ ಅಂಬಾನಿ ನೀತಾ ಅಂಬಿಯನ್ನು ಪ್ರಪೋಸ್ ಮಾಡಿದ್ದು ಹೇಗೆ ಎಂಬುವುದಾಗಿ ಹೇಳಿದ್ದಾರೆ.

ನೀತಾ ಅಂಬಾನಿ ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದ್ದವರು, ಭರತ ನಾಟ್ಯ ತುಂಬಾ ಚೆನ್ನಾಗಿ ಮಾಡುತ್ತಾರೆ, ಹೀಗೆ ಒಂದು ಕಾರ್ಯಕ್ರಮದಲ್ಲಿ ದೀರೂಬಾಯಿ ಅಂಬಾನಿ ಅವರ ಕಣ್ಣಿಗೆ ಈ ನೀತಾ ಎಂಬ ಹುಡುಗಿ ಬೀಳುತ್ತಾಳೆ, ನಮ್ಮ ಮಗನಿಗೆ ಈ ಹುಡುಗಿಯನ್ನು ಕೇಳಬೇಕು ಎಂದನಿಸುತ್ತದೆ. ಇದರ ಬಗ್ಗೆ ನೀತಾ ಅಂಬಾನಿ ಹೀಗೆ ಹೇಳುತ್ತಾರೆ, ಅದೊಂದು ದಿನ ನಮ್ಮ ಮನೆಯ ಲ್ಯಾಂಡ್‌ಫೋನ್‌ಗೆ ಒಂದು ಕರೆ ಬರುತ್ತೆ, ನಾನು ಆ ಫೋನ್ ಪಿಕ್ ಮಾಡುತ್ತೇನೆ, ಆ ಕಡೆಯಿಂದ ವ್ಯಕ್ತಿ ನಾನೂ ಧೀರೂಬಾಯಿ ಅಂಬಾನಿ ಎಂದು ಪರಿಚಯ ಮಾಡುತ್ತಾರೆ, ಅದನ್ನು ಕೇಳಿ ನೀತಾ ಅವರಿಗೆ ನನಗೆ ಯಾರೋ ಫ್ರಾಂಕ್ ಮಾಡುತ್ತಿದ್ದಾರೆ ಎಂದನಿಸಿ ಫೋನ್ ಇಟ್ಟು ಬಿಡುತ್ತಾರೆ.
ಮತ್ತೊಮ್ಮೆ ಕರೆ ಬರುತ್ತದೆ, ಆವಾಗಲೂ ಆ ಕಡೆಯಿಂದ ನಾನು ಧೀರೂಬಾಯಿ ಅಂಬಾನಿ ಎಂದಾಗ ಇವರು ಮತ್ತೆ ಫೋನ್ ಮಾಡಿ ಹೀಗೆ ತಮಾಷೆ ಮಾಡಬೇಡಿ ಎಂದು ಕೋಪದಿಂದ ಹೇಳಿ ಫೋನ್ ಇಡುತ್ತಾರೆ, ಮತ್ತೊಮ್ಮೆ ಫೋನ್ ರಿಂಗ್ ಆದಾಗ ಈ ಬಾರಿ ನೀತಾರವರ ತಂದೆ ಫೋನ್ ಪಿಕ್ ಮಾಡುತ್ತಾರೆ, ಅವರ ಮುಖದಲ್ಲಿ ಅಚ್ಚರಿ ಕಾಣುತ್ತದೆ, ನಂತರ ಅವರು ಮಗಳಿಗೆ ಮತ್ತಗೆ ಮಾತನಾಡು, ಇವರು ನಿಜವಾಗಲೂ ಧೀರೂಬಾಯಿ ಅಂಬಾನಿ ಅಂತಾರೆ... ಅಷ್ಟು ದೊಡ್ಡ ಶ್ರೀಮಂತ ನಮ್ಮ ಮನೆಗೆ ಪೋನ್ ಮಾಡಿದಾಗ ಅವರಿಗೆ ನಂಬಲು ಸಾಧ್ಯವಾಗಿರಲಿಲ್ಲ.
ಹೀಗೆ ನೀತಾ ಎಂಬ ಹುಡುಗಿ ಅಂಬಾನಿ ಕುಟುಂಬಕ್ಕೆ ಪರಿಚಯವಾಗುತ್ತಾರೆ, ನಂತರದ ಲವ್‌ಸ್ಟೋರಿ ಬಗ್ಗೆ ಮುಖೇಶ್ ಹೀಗೆ ಹೇಳುತ್ತಾರೆ, ನಾನು ನೋಡಿದ ಮೊದಲ ಹುಡುಗಿ, ಅವರನ್ನು ತುಂಬಾನೇ ಇಷ್ಟವಾಗಿತ್ತು, ಇವರಿಬ್ಬರು ಕಾರಿನಲ್ಲಿ ಹೋಗುತ್ತಿರುತ್ತಾರೆ, ಆವಾಗ ಮುಖೇಶ್ ಅವರು ನನ್ನ ಮದುವೆಯಾಗ್ತೀಯಾ ಅಂತ ಕೇಳ್ತಾರೆ, ಆವಾಗ ನೀತಾ ಅವರು ಏನೂ ಹೇಳಲ್ಲ, ಯೆಸ್ ಆರ್ ನೋ ಈಗಲೇ ಹೇಳಬೇಕು ಅಂತಾರೆ, ಆವಾಗ ನೀತಾ ಹೇಳ್ತಾರೆ ತುಂಬಾ ಟ್ರಾಫಿಕ್ ಜಾಮ್ ನಡುವೆ ನಾವಿದ್ದೆವು, ಗಾಡಿಗಳ ಹಾರ್ನ್, ಜನರ ಬೊಬ್ಬೆ ನನಗೆ ಏನು ಹೇಳಬೇಕು ಗೊತ್ತಾಗಿಲ್ಲ.
ಆವಾಗ ಮುಖೇಶ್ ಮೂರನೇ ಬಾರಿ ನನ್ನನ್ನು ಮದುವೆ ಆಗುವುದಕ್ಕೆ ಒಪ್ಪಿಗೆ ಇದೆಯೇ? ಯೆಸ್ ಆರ್ ನೋ ಎಂದಾಗ ಯೆಸ್ ಅಂತೀನಿ, ಅದಾದ ಬಳಿಕ ನಾನು ಒಂದು ವೇಳೆ ನೋ ಅಂದಿದ್ದರೆ ಈ ಟ್ರಾಫಿಕ್‌ನಲ್ಲಿ ಇಳಿಸಿ ಹೋಗುತ್ತಿದ್ದೀರಾ ಎಂದು ಕೇಳಿದಾಗ ಇಲ್ಲ ನಿನ್ನನ್ನು ನಿನ್ನ ಮನೆಗೆ ಬಿಡುತ್ತಿದ್ದೆ, ಫ್ರೆಂಡ್ ಆಗಿ ಇರುತ್ತಿದ್ದೆ ಅಂತಾರೆ... ಹೀಗೆ ನೀತಾ ಎಂಬ ಹುಡುಗಿ ಮುಖೇಶ್ ಅಂಬಾನಿಯರ ಪ್ರೀತಿಯಾಗುತ್ತಾಳೆ, ನೀತಾ ಅಂಬಾನಿಯಾಗುತ್ತಾರೆ. ಅಲ್ಲಿಂದ ಮುಂದೆ ಅವರ ಬದುಕೇ ಬದಲಾಗುವುದು, ಈಗ ಅವರು ಬಳಸುವ ಒಂದು ಚಿಕ್ಕ ಪರ್ಸ್ ಬೆಲೆ ಕೇಳಿದರೆ ತಲೆಸುತ್ತುತ್ತೆ, ಅಷ್ಟು ದುಬಾರಿ ವಸ್ತುಗಳನ್ನು ಬಳಸುತ್ತಾರೆ.
ಈ ದಂಪತಿಗೆ ಮೂರು ಮಕ್ಕಳು, ಇಬ್ಬರು ಮಕ್ಕಳಿಗೆ ಮದುವೆಯಾಗಿದೆ, ಮೂರನೇ ಮಗನ ಪ್ರೀವೆಡ್ಡಿಂಗ್ ತುಂಬಾನೇ ಸದ್ದು ಮಾಡುತ್ತಿದೆ, ಭಾರತದ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ತಮ್ಮ ಸಂಪತ್ತು, ಐಷಾರಾಮಿ ಜೀವನದ ಜೊತೆಗೆ ದೇವರ ಬಗ್ಗೆ ಇರುವ ಭಕ್ತಿ, ದಾನ -ಧರ್ಮ ಅಂತ ಕೂಡ ಸದ್ದು ಮಾಡುತ್ತಾರೆ.



Click it and Unblock the Notifications
