Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಮ್ಮಂದಿರ ದಿನ: ಮಗ/ಮಗಳು ಅಮ್ಮನಿಗೆ ಶುಭ ಕೋರಲು ಇಲ್ಲಿದೆ ಹೃದಯಸ್ಪರ್ಶಿ ಶುಭಾಶಯಗಳು
ಅಮ್ಮಂದಿರ ದಿನವನ್ನು ಪ್ರತೀವರ್ಷ ಮೇ 12ನೇ ಭಾನುವಾರ ಆಚರಿಸಲಾಗುವುದು. ಅಮ್ಮಂದಿರ ದಿನಕ್ಕೆ ಅಮ್ಮನಿಗೆ, ಅಮ್ಮನ ಸ್ಥಾನದಲ್ಲಿರುವವರಿಗೆ ಶುಭಕೋರಲು ಇಲ್ಲಿದೆ ಹೃದಯಸ್ಪರ್ಶಿ ಸಂದೇಶಗಳು... ಎಲ್ಲಾ ಅಮ್ಮಂದಿರಿಗೆ ಅಮ್ಮಂದಿರ ದಿನದ ಶುಭಾಶಯಗಳು

ಮಕ್ಕಳು ಅಮ್ಮನಿಗೆ ಕಳುಹಿಸಲು ಶುಭಾಶಯಗಳು
* ನನ್ನ ಮುದ್ದು ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು
* ಅಮ್ಮಾ ನಿನ್ನ ಮಗಳಾಗಿರುವುದು ನನ್ನ ಅದೃಷ್ಟ, ಈ ಪ್ರಪಂಚದಲ್ಲಿಯೇ ನನ್ನಮ್ಮ ದಿ ಬೆಸ್ಟ್ ಅಮ್ಮಾ.... ಲವ್ ಯೂ
* ಈ ಪ್ರಪಂಚದಲ್ಲಿ ನನ್ನನ್ನು ಅತಿಯಾಗಿ ಪ್ರೀತಿಸುವ ನನ್ನ ಮುದ್ದು ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು
* ತಾಯಿ ದೇವರ ಕೊಟ್ಟ ಅಂತಾರೆ, ಆದರೆ ನನ್ನ ಪಾಲಿಗೆ ದೇವರೇ ನೀನು, ನನ್ನ ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು
* ಹ್ಯಾಪಿ ಮದರ್ಸ್ ಡೇ... ಅಮ್ಮಾ ಲವ್ ಯೂ
* ನನ್ನ ದೊಡ್ಡ ಶಕ್ತಿ ಅಮ್ಮಂದಿರ ದಿನದ ಶುಭಾಶಯಗಳು
* ಈ ಪ್ರಪಂಚದಲ್ಲಿ ನಿನ್ನ ಸ್ಥಾನ ತುಂಬಲೂ ಯಾರಿಂದಲೂ ಸಾಧ್ಯವಿಲ್ಲ, ನಿನಗೆ ನೀನೇ ಸಾಟಿ, ನೀನೇ ನನ್ನ ಸ್ಪೂರ್ತಿ ಅಮ್ಮಾ ಐ ಲವ್ ಯೂ, ಹ್ಯಾಪಿ ಮದರ್ಸ್ ಡೇ
* ನನಗೆ ಏನು ಬೇಕು ಎಂಬುವುದು ನನಗಿಂತ ಮೊದಲೇ ನಿನಗೆ ಗೊತ್ತಿರುತ್ತೆ, ನನಗೆ ಏನಾದರೂ ನೋವಾದರೆ ನಿನಗೇ ಆದಂತೆ ಅನುಭವಿಸಿ, ಕೆಲವೊಮ್ಮೆ ನನ್ನಿಂದ ನೋವಾದರು ನಗು ನಗುತ್ತಲೇ ನನ್ನಪ್ಪಿ ಮುದ್ದಾಡುವೆ, ಇದೆಲ್ಲಾ ನನ್ನ ಮುದ್ದಿನ ಅಮ್ಮನಿಂದಲೇ ಮಾಡಲು ಸಾಧ್ಯ... ಅಮ್ಮಾ ನಿನ್ನನ್ನು ನಿನ್ನ ಕೊನೆಯ ಕ್ಷಣವರೆಗೂ ಕಣ್ರೆಪ್ಪೆಯಂತೆ ಕಾಯುವೆ, ನಿನ್ನ ಋಣವನ್ನಂತೂ ತೀರಿಸಲು ಸಾಧ್ಯವಿಲ್ಲ, ಇಷ್ಟೇ ನನ್ನಿಂದ ಮಾಡಲು ಸಾಧ್ಯ, ಅಮ್ಮಾ ಅಮ್ಮಂದಿರ ದಿನ ಶುಭಾಶಯಗಳು
* ಈ ಭೂಮಿಗೆ ನನ್ನ ತಂದ ಜೀವ ನೀನು
ಜೀವನನ್ನೇ ನಮಗಾಗಿ ಮೀಸಲಿಟ್ಟ ಜೀವ ನೀನು
ನಿನ್ನ ಸೇವೆ ಎಷ್ಟೇ ಮಾಡಿದರೂ ಸಾಲು ಅಮ್ಮಂದಿರ ದಿನದ ಶುಭಾಶಯಗಳು.
ಮಗ ಅಮ್ಮನಿಗೆ ಕಳುಹಿಸಲು ಶುಭಾಶಯಗಳು
* ನಿನ್ನ ಮಗನಾಗಿ ಸದಾ ನಿನಗೆ ಹೆಮ್ಮೆ ತರುವ ಕೆಲಸವನ್ನೇ ಮಾಡುವೆ, ನನ್ನ ಮುದ್ದು ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು
* ನನ್ನ ಜೀವನದ ಮೊದಲ ಸ್ತ್ರೀ ನೀನು, ನಿನ್ನ ನೋಡಿ ಬೆಳೆದಿದ್ದಕ್ಕೆ ನಾನಿಂದು ಒಳ್ಳೆಯ ಸಹೋದರ, ಒಳ್ಳೆಯ ಪತಿ, ಮಗಳಿಗೆ ಒಳ್ಳೆಯ ಅಪ್ಪನಾಗಿರುವೆ, ಅಮ್ಮಾ ಈ ದಿನ ನಿನ್ನ ದಿನ, ನಿನಗೆ ನನ್ನ ನಮನೆಗಳು. ಅಮ್ಮಂದಿರ ದಿನದ ಶುಭಾಶಯಗಳು ಅಮ್ಮಾ...
* ನಾನಿಂದು ಏನಾಗಿರುವೆ ಅದಕ್ಕೆ ಕಾರಣ, ನನ್ನ ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು
ಮಗಳು ಅಮ್ಮನಿಗೆ ಶುಭಾಶಯ ಕಳುಹಿಸಲು
* ಅಮ್ಮಾ ನಿನ್ನ ಸ್ಥಾನದ ಮಹತ್ವ ನಾನು ತಾಯಿಯಾದಾಗ ಅರಿತೆ, ಅದೆಷ್ಟು ಕಷ್ಟಗಳನ್ನು ಸಹಿಸಿ ನಮ್ಮನ್ನು ಸಾಕಿದೆ, ನಿನ್ನ ಸದಾ ಖುಷಿಯಾಗಿಡುವೆ ಅಮ್ಮಾ ಅಮ್ಮಂದಿರ ದಿನದ ಶುಭಾಶಯಗಳು
* ಅಮ್ಮಾ ನೀ ನನ್ನ ಜೀವನದ ದೊಡ್ಡ ಶಕ್ತಿ. ನನ್ನ ಬದುಕಿನ ಸ್ಪೂರ್ತಿ ನೀನು, ನನ್ನ ಅಮ್ಮನಿಗೆ ಅಮ್ಮಮದಿರ ದಿನದ ಶುಭಾಶಯಗಳು.
ಅಮ್ಮನ ಸ್ಥಾನದಲ್ಲಿರುವವರಿಗೆ
* ಹೆತ್ತ ಅಮ್ಮ ಅವಳಾದರೆ ನನ್ನ ಪಾಲಿನ ಯಶೋಧೆ ನೀನು, ನೀನಿಲ್ಲದಿದ್ದರೆ ಇವತ್ತು ನನ್ನ ಬದುಕು ಹೀಗಿರುತ್ತಿರಲಿಲ್ಲ, ನನ್ನ ಅಮ್ಮನಿಗೆ ಭಗವಂತ ಎಲ್ಲಾ ಖುಷಿ, ಆರೋಗ್ಯ ನೀಡಲಿ ಅಮ್ಮಂದಿರ ದಿನದ ಶುಭಾಶಯಗಳು
* ನನ್ನ ಅಮ್ಮನ್ನಷ್ಟೇ ನೀನು ನನಗೆ ಮುಖ್ಯ, ನನ್ನ ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು
* ಮಗನಂತೆ ನನ್ನ ಮೇಲೆ ಅಕ್ಕರೆ ತೋರಿದ ನನ್ನ ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು
* ಅಮ್ಮಾ ನೀವು ನನ್ನ ಅತ್ತೆಯಲ್ಲ, ನನ್ನ ಅಮ್ಮನೇ ಹೌದು, ಅಮ್ಮಂದಿರ ದಿನದ ಶುಭಾಶಯಗಳು



Click it and Unblock the Notifications
