Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಶ್ಚಿತಾರ್ಥ ಉಂಗುರ ಹುಡುಗಿಯ ಎಡಗೈಗೆ ಹಾಕುವುದೇಕೆ?
ಮದುವೆ ನಿಶ್ಚಿತಾರ್ಥ ಮಾಡುವಾಗ ಉಂಗುರ ಬದಲಾಯಿಸುವ ಸಂಪ್ರದಾಯ ಬಹುತೇಕ ಎಲ್ಲಾ ಧರ್ಮದಲ್ಲಿ ಇದೆ. ನಿಶ್ಚಿತಾರ್ಥ ಉಂಗುರವನ್ನು ಹಾಕುವಾಗ ಹುಡುಗ ಹುಡುಗಿಯ ಎಡಗೈಯ ಉಂಗುರ ಬೆರಳಿಗೆ ಉಂಗುರ ತೊಡಿಸಿದರೆ, ಹುಡುಗಿ ಹುಡುಗನ ಬಲಗೈಗೆ ಉಂಗುರ ತೊಡಿಸುತ್ತಾಳೆ.

ನಿಶ್ಚಿತಾರ್ಥದ ಶಾಸ್ತ್ರ ನೋಡುವಾಗ ಕೈಯಲ್ಲಿ ಐದು ಬೆರಳುಗಳಿದ್ದರೂ ಏಕೆ ಕಿರು ಬೆರಳಿನ ಪಕ್ಕದ ಬೆರಳಿಗೆ ಉಂಗುರ ತೊಡಿಸುತ್ತಾರೆ ಎಂಬ ಆಲೋಚನೆ ಎಲ್ಲರ ತಲೆಯಲ್ಲಿ ಒಮ್ಮೆಯಾದರೂ ಬಂದಿರುತ್ತದೆ. ಆದರೆ ನಾವುದನ್ನು ಏಕೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡದೆ ಅಲ್ಲಿಗೆ ಬಿಟ್ಟು ಬಿಡುತ್ತೇವೆ.
ಅದರಲ್ಲೂ ನಿಶ್ಚಿತಾರ್ಥ ಉಂಗುರವನ್ನು ಧರಿಸುವಾಗ ಪುರುಷನಿಗೆ ಬಲಗೈಯ ಉಗುರ ಬೆರಳಿಗೆ ಹುಡುಗಿ ಹಾಕಿದರೆ, ಹುಡುಗಿಗೆ ಎಡಗೈಯ ಉಂಗುರ ಬೆರಳಿಗೆ ಹಾಕುತ್ತಾರೆ. ಏಕೆ ಹುಡುಗಿಯರ ಎಡಗೈಗೆ ಉಂಗುರ ಬೆರಳಿಗೆ ಉಂಗುರು ಹಾಕುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲವೇ? ಹಾಗಾದರೆ ಈ ಲೇಖನ ನಿಮಗಾಗಿ:

ಎಡಗೈ ಬೆರಳಿನಲ್ಲಿ ಅಡಗಿರುವ ಪ್ರೀತಿಯ ಗುಟ್ಟು
ಮಹಿಳೆಯರ ಎಡಗೈಯ ಬೆರಳಿನ ನರ ಹೃದಯದೊಂದಿಗೆ ಸಂಪರ್ಕ ಹೊಂದಿರುತ್ತದೆ. ಆ ಉಗುರಿಗೆ ವೃತ್ತಾಕಾರದ ಉಂಗುರ ಧರಿಸುವುದರಿಂದ ಹೃದಯದಲ್ಲಿ ಆ ವ್ಯಕ್ತಿಯೆಡೆಗಿನ ಪ್ರೀತಿ ಹೆಚ್ಚಾಗುವುದು ಎಂಬ ನಂಬಿಕೆ ಇದೆ. ಲ್ಯಾಟಿನ್ ಭಾಷೆಯಲ್ಲಿ ಉಂಗುರ ಬೆರಳಿಗೆ ವೆನಾ ಆಮೊರಿಸ್ ಎಂದು ಕರೆಯಲಾಗುವುದು, ಅಂದರೆ ಪ್ರೀತಿಯ ನರ ಎಂದರ್ಥ. ಈ ನರ ನಮ್ಮ ಹೃದಯಕ್ಕೆ ಪ್ರೀತಿಯ ಸಂದೇಶ ಕಳಹಿಸುವುದರಿಂದ ಜೀವನ ಸಂಗಾತಿ ಮೇಲೆ ಪ್ರೀತಿ ಹೆಚ್ಚುವುದು.

ಹೃದಯಕ್ಕೆ ಸಮೀಪವಾದ ವ್ಯಕ್ತಿ
ಹೆಣ್ಮಕ್ಕಳು ಎಡಗೈಗೆ ನಿಶ್ಚಿತಾರ್ಥ ಉಂಗುರ ಧರಿಸುವುದರಿಂದ ಬಾಳ ಸಂಗಾತಿಯೆಡೆಗಿನ ಆಕರ್ಷಣೆ ಹಾಗೂ ಪ್ರೀತಿ ಹೆಚ್ಚುವುದು. ಎಡಗೈಗೆ ಉಂಗುರ ಧರಿಸುವುದರಿಂದ ಆ ಬೆರಳಿನ ನರ ಹೃದಯಕ್ಕೆ ಸಂಪರ್ಕ ಹೊಂದಿರುವುದರಿಂದ ಹೃದಯಕ್ಕೆ ಸಮೀಪವಾದ ವ್ಯಕ್ತಿ ಎಂಬುವುದನ್ನು ಆ ಉಂಗುರ ಸೂಚಿಸುತ್ತದೆ.

ನಂಬಿಕೆಯ ಹಿಂದಿದೆ ಮಧುರ ಬಾವನೆ
ವೈಜ್ಞಾನಿಕ ದೃಷ್ಟಿಯಲ್ಲಿ ಈ ನಂಬಿಕೆಯನ್ನು ಒಪ್ಪದೇ ಇರಬಹುದು. ಏಕೆಂದರೆ ಬೆರಳಿನ ಪ್ರತಿಯೊಂದು ನರವೂ ಹೃದಯದೊಂದಿಗೆ ಸಂಪರ್ಕ ಹೊಂದಿರುತ್ತದೆ. ಆದರೆ ಕೆಲವೊಂದು ವಿಷಯಗಳನ್ನು, ಭಾವನೆಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡು ಸಾಧ್ಯವಾಗುವುದಿಲ್ಲ ಹಾಗೂ ಹಾಗೇ ನೋಡಿದರೆ ಅದರಲ್ಲಿ ಸ್ವಾರಸ್ಯವೇ ಉಳಿಯುವುದಿಲ್ಲ. ಶತಮಾನದಿಂದಲೂ ಹೆಣ್ಮಕ್ಕಳಿಗೆ ನಿಶ್ಚಿತಾರ್ಥದ ಉಂಗುರವನ್ನು ಎಡಗೈನ ಉಂಗುರ ಬೆರಳಿಗೆ ಹಾಕುತ್ತಾರೆ, ಈಗಲೂ ಅದೇ ಸಂಪ್ರದಾಯ ಮುಂದುವರೆದಿದೆ.

ನಿಶ್ಚಿತಾರ್ಥ ಉಂಗುರ ಹಾಗೂ ಮದುವೆಯ ಉಂಗುರು
ಕೆಲವು ಕಡೆ ನಿಶ್ಚಿತಾರ್ಥಕ್ಕೆ ಮಾತ್ರ ಉಂಗುರು ಹಾಕುವ ಶಾಸ್ತ್ರ ಇದ್ದರೆ ಇನ್ನು ಕೆಲವು ಕಡೆ ಮದುವೆಯಲ್ಲೂ ಹುಡುಗ ಹುಡುಗಿಗೆ ಉಂಗುರ ತೊಡಿಸುತ್ತಾನೆ. ಇಂಥ ಸಂದರ್ಭದಲ್ಲಿ ಕೆಲವರು ನಿಶ್ಚತಾರ್ಥದ ಉಂಗುರವನ್ನು ಬಲಗೈಯ ಉಂಗುರ ಬೆರಳಿಗೆ ಧರಿಸಿ, ಎಡಗೈಗೆ ಮದುವೆಯಲ್ಲಿ ಹುಡುಗ ತೊಡಿಸಿದ ಉಂಗುರ ಧರಿಸುತ್ತಾರೆ.
ಇನ್ನು ಕೆಲವೊಂದು ಕಡೆ ಅಂದರೆ ರಷ್ಯಾ, ಗ್ರೀಸ್, ಕೊಲೆಂಬಿಯಾ ಇಲ್ಲೆಲ್ಲಾ ನಿಶ್ಚಿತಾರ್ಥ ಸಮಯದಲ್ಲಿ ಹೆಣ್ಮಕ್ಕಳ ಬಲಗೈಗೆ ಉಂಗುರ ತೊಡಿಸುತ್ತಾರೆ. ಇನ್ನು ಕೆಲವರಿಗೆ ಎಡಗೈಯಲ್ಲಿ ಉಂಗುರ ಧರಿಸಲು ಕಂಫರ್ಟ್ ಅನಿಸದಿದ್ದರೆ ಬಲಗೈಗೆ ಹಾಕುತ್ತಿದ್ದಾರೆ.
ನಿಶ್ಚಿತಾರ್ಥ ಉಂಗುರು ಎಡಗೈಯಲ್ಲಾದರೂ ಇರಲಿ, ಬಲಗೈಯಲ್ಲಾದರೂ ಇರಲಿ ಒಟ್ಟಿನಲ್ಲಿ ಉಂಗುರ ಹಾಕಿದವನ ಮೇಲೆ ಪ್ರೀತಿ ಮೂಡಬೇಕು ಎನ್ನುವುದೇ ನಿಶ್ಚಿತಾರ್ಥ ಉಂಗುರದ ಮುಖ್ಯ ಉದ್ದೇಶ ಅಲ್ಲವೇ?



Click it and Unblock the Notifications
