For Quick Alerts
ALLOW NOTIFICATIONS  
For Daily Alerts

ಲೈಂಗಿಕ ಅಪೇಕ್ಷೆ ಇಲ್ಲದೆ ಸಂಗಾತಿಯನ್ನು ಪ್ರೀತಿಸುವುದು ಹೇಗೆ? ಇಲ್ಲಿದೆ ಟಿಪ್ಸ್‌

|

ಅನೇಕರು ಪ್ರೀತಿ ಅಂದರೆ ಸೆಕ್ಸ್ ಅಂದುಕೊಂಡಿರುತ್ತಾರೆ, ಸೆಕ್ಸ್ ಪ್ರೀತಿಯ ಮುಖ್ಯ ಅಂಗ ಎಂದು ಹೇಳುತ್ತಾರೆ. ಆದರೆ ನಿಜಕ್ಕೂ ಇದು ತಪ್ಪು ಕಲ್ಪನೆ. ಸೆಕ್ಸ್ ಬೇರೆಯೇ ಪ್ರೀತಿ ಬೇರೆಯೇ. ಹೌದು, ನಮ್ಮಲ್ಲಿ ಅನೇಕರು ಸೆಕ್ಸ್ ಗೆ ಮಾನ್ಯತೆ ಕೊಡದೆ ನೈಜ ಪ್ರೀತಿಯನ್ನೇ ಅನೇಕರು ಅನುಸರಿವುದುಂಟು. ಪ್ರೀತಿಯೇ ತಮ್ಮ ಜೀವ ಎಂದು ಬಾಳುವುದುಂಟು. ಅನೇಕ ದಂಪತಿ ಸೆಕ್ಸ್ ಮಾಡದೆ ಬರೀ ಪ್ರೀತಿಯಲ್ಲೇ ಜೀವನ ಸಾಗಿಸುವುದುಂಟು. ದೈಹಿಕ ಖುಷಿಗಿಂತ ಫೀಲಿಂಗ್ ನಲ್ಲಿರುವ ಖುಷಿಯೇ ಬೇರೆ.

123

ಅದರಲ್ಲೂ ಲೈಂಗಿಕತೆಯಲ್ಲಿ ಕೇವಲ ಒಂದೇ ಖುಷಿ ಇರುತ್ತೆ. ಆದರೆ ಪ್ರೀತಿಯಲ್ಲಿ ನೂರಾರು ಖುಷಿಗಳನ್ನು , ನೈಜ ಪ್ರೇಮವನ್ನು ನಾವು ಅನುಭವಿಸಬಹುದು. ಹಾಗಾದರೆ, ಸೆಕ್ಸ್ ಇಲ್ಲದ ಜೀವನ ಎಂದರೆ ಏನು? ಅದು ಹೇಗೆ ಇರುತ್ತೆ? ಯಾವ ರೀತಿ ಸೆಕ್ಸ್ ಇಲ್ಲದೆ ನಿಮ್ಮ ಪ್ರೀತಿಯನ್ನು ನಿಮ್ಮ ಸಂಗಾತಿಗೆ ತೋರ್ಪಡಿಸಬಹುದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಕಮ್ಯೂನಿಕೇಶನ್!

ಕಮ್ಯೂನಿಕೇಶನ್!

ನಿಮ್ಮ ಸಂಗಾತಿಯೊಂದಿಗೆ ಮಾತನಾಡುವುದು ಎಂದರೆ ಅವರನ್ನು ಪ್ರೀತಿಸುವ ಒಂದು ಉತ್ತಮ ಮಾರ್ಗವಾಗಿದೆ. ಹೌದು, ಸಂಬಂಧದಲ್ಲಿ ಸಂವಹನವು ಅತೀ ಮುಖ್ಯ ಪಾತ್ರವನ್ನು ವಹಿಸುತ್ತದೆ. ಮೌಖಿಕ, ಲಿಖಿತ ಮತ್ತು ದೈಹಿಕ ಸಂವಹನ ಆಗಿರಲಿ ನೀವು ಹೆಚ್ಚೆಚ್ಚು ಸಂವಹನ ನಡೆಸಿದರೆ ಇದು ನಿಮ್ಮ ಸಂಗಾತಿಯ ಜೊತೆಗಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಜಾಸ್ತಿ ಮಾತನಾಡಿದಂತೆ ನಿಮ್ಮ ನಡುವೆ ನಂಬಿಕೆ ಹಾಗೂ ಅನ್ಯೋನ್ಯತೆ ಜಾಸ್ತಿ ಆಗುತ್ತದೆ. ಸಂವಹನದಿಂದಲೇ ಯಾವುದೇ ಸಮಸ್ಯೆ ಬಗೆಹರಿಯುತ್ತದೆ. ನೀವು ಗಮನಿಸರಬಹುದು ಅನೇಕ ಸಂಗಾತಿಗಳು ಹೆಚ್ಚಿನ ಸಮಯ ಮಾತನಾಡಲು ಬಯಸುತ್ತಾರೆ. ಮಾತನಾಡುತ್ತಲೇ ಒಂದು ದಿನ ಬೇಕಾದರೆ ಕಳೆಯುತ್ತಾರೆ. ಹೀಗೆ ಪ್ರೀತಿಯಲ್ಲಿ ಸಂವಹನ ತುಂಬಾನೇ ಮುಖ್ಯ. ಸಂವಹನದಿಂದಲೇ ನಿಮಗೆ ಉತ್ತಮ ಪ್ರೀತಿಯನ್ನು ಪಡೆಯಬಹುದು. ನೈಜ ಫೀಲಿಂಗ್ಸ್ ಅನ್ನು ಅನುಭವಿಸಬಹುದು.

ಒಟ್ಟಿಗೆ ಸಮಯ ಕಳೆಯುವುದು!

ಒಟ್ಟಿಗೆ ಸಮಯ ಕಳೆಯುವುದು!

ಇದು ದೈಹಿಕ ಪ್ರೀತಿಗಿಂತ ಅತ್ಯುತ್ತಮ. ಮನುಷ್ಯನ ಜೀವನ ಎಂದರೆ ನೆನಪಿನ ಸಾಗರ ಮಾತ್ರ. ಹೀಗಾಗಿ ಈ ನೆನಪುಗಳನ್ನು ನಾವು ಒಟ್ಟಿಗೆ ಸಮಯ ಕಳೆಯುವುದರ ಮೂಲಕ ಪಡೆದುಕೊಳ್ಳಬಹುದು. ಎಲ್ಲಾದರೂ ಸಂಜೆ ಬೈಕ್ ನಲ್ಲಿ ತೆರಳಿ ಸುತ್ತಾಡಿ ಬರುವುದು. ಎಲ್ಲಾದರೂ ದೂರ ಹೋಗಿ ಕೂತು ಕೊಂಚ ಹೊತ್ತು ಮಾತನಾಡುವುದು. ಇದು ಅತ್ಯಂತ ರಿಲ್ಯಾಕ್ಸ್ ನೀಡುವ ಚಟುವಟಿಕೆ ಆಗಿದೆ. ಪ್ರೀತಿಯಲ್ಲಿ ಒಟ್ಟಿಗೆ ಸಮಯ ಕಳೆಯುವುದು ಅಂದರೆ ಪ್ರೀತಿ ತೋರ್ಪಡಿಸುವುದು ಎಂದರ್ಥ. ಇದು ನಿಮ್ಮ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಸೆಕ್ಸ್ ಗಿಂತಲೂ ಈ ರೀತಿ ಕಳೆದ ಸಮಯ ಯಾವತ್ತೂ ನೆನಪಿರುತ್ತದೆ.

ಸಹಾಯ ಮಾಡುವುದು!

ಸಹಾಯ ಮಾಡುವುದು!

ನಿಮ್ಮ ಸಂಗಾತಿಗೆ ಸಹಾಯ ಮಾಡುವುದು ಎಂದರೆ ಸೆಕ್ಸ್ ಇಲ್ಲದೆ ಪ್ರೀತಿ ತೋರುವ ಇನ್ನೊಂದು ಮಾರ್ಗವಾಗಿದೆ. ಹೌದು, ಅವಶ್ಯಕತೆ ಇರುವಾಗ ನಿಮ್ಮ ಸಂಗಾತಿಗೆ ಸಹಾಯ ಹಸ್ತ ನೀಡುವುದು ಪ್ರೀತಿ ತೋರುವ ಉತ್ತಮ ಮಾರ್ಗವಾಗಿದೆ. ನಿಮ್ಮ ಪಾರ್ಟ್ನರ್ ಗೆ ಸಹಾಯದ ಅಗತ್ಯವಿದ್ದರೆ ನೀವು ಮೊದಲು ಸಹಾಯ ಮಾಡಬೇಕು ಅದುವೇ ನಿಜವಾದ ಪ್ರೇಮ. ಈ ರೀತಿ ಮಾಡಿದರೆ ಅವರಿಗೂ ನಿಮ್ಮ ಮೇಲೆ ನಂಬಿಕೆ, ಪ್ರೀತಿ ಹುಟ್ಟುತ್ತದೆ.

ಉದಾಹರಣೆಗೆ ನಿಮ್ಮ ಸಂಗಾತಿಗೆ ದಿನಸಿ ಶಾಪಿಂಗ್‌ಗೆ ಹೋಗುವಾಗ ಜೊತೆಗೆ ಹೋಗುವುದು. ಹೊಸ ಬಟ್ಟೆ ಖರೀದಿಸಲು ಸಹಾಯ ಮಾಡುವುದು. ಮನೆಗೆಲಸದಲ್ಲಿ ಸಂಗಾತಿಗೆ ಹೆಲ್ಪ್ ಮಾಡುವುದು. ಆರೋಗ್ಯ ಸರಿ ಇಲ್ಲದಿದ್ದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು. ಈ ಮೂಲಕ ಪ್ರೀತಿ, ಕೇರ್ ಜಾಸ್ತಿ ಹುಟ್ಟುತ್ತದೆ. ಇದು ಪ್ರೀತಿಯನ್ನು ಪ್ರೀತಿಸಲು ಉತ್ತಮ ಮಾರ್ಗವಾಗಿದೆ.

ಜೊತೆಯಾಗಿ ಕೈಹಿಡಿದು ನಡೆಯುವುದು

ಜೊತೆಯಾಗಿ ಕೈಹಿಡಿದು ನಡೆಯುವುದು

ಪ್ರೀತಿಯಲ್ಲಿರುವ ಬೆಸ್ಟ್ ಥಿಂಗ್ ಎಂದರೆ, ತಮ್ಮ ಸಂಗಾತಿಯ ಕೈಹಿಡಿದುಕೊಂಡು ಹೋಗುವುದು. ಇದರಲ್ಲಿ ಇರುವ ಖುಷಿ ಬೇರೆಯಾವುದರಲ್ಲೂ ಇರುವುದಿಲ್ಲ. ಅಲ್ಲದೇ ಈ ನಡೆ ಪ್ರೀತಿಯ ಆಲ ಅಗಲವನ್ನು ಇನ್ನು ಜಾಸ್ತಿ ಮಾಡುತ್ತದೆ.

ಅನ್ಯೋನ್ಯವಾಗಿರುವುದು ಎಂದರೆ ಯಾವಾಗಲೂ ಪ್ರೀತಿಯನ್ನು ಮಾಡುವುದು ಎಂದರ್ಥವಲ್ಲ. ಅನ್ಯೋನ್ಯತೆ ಎಲ್ಲಾ ರೀತಿಯಲ್ಲೂ ಇರಬಹುದು. ಉದಾಹರಣೆಗೆ ನೀವು ಒಟ್ಟಿಗೆ ಇರುವಾಗ ನಿಮ್ಮ ಸಂಗಾತಿಯ ಕೈಯನ್ನು ಹಿಡಿದುಕೊಳ್ಳುವ ಮೂಲಕ ನೀವು ಅವರೊಂದಿಗೆ ಇರಲು ಹೆಮ್ಮೆಪಡುತ್ತೀರಿ ಎಂದು ತೋರಿಸುವುದು ಅವರನ್ನು ಪ್ರೀತಿಸುವ ಒಂದು ಮಾರ್ಗವಾಗಿದೆ. ಇನ್ನು ಅನೇಕ ಸೆಲೆಬ್ರಿಟಿಗಳು ತಮ್ಮ ಸಂಗಾತಿಯ ಕೈಯನ್ನು ಹಿಡಿದುಕೊಂಡೇ ಇರುವುದನ್ನು ನೋಡಿರುತ್ತೇವೆ.

ಅದರ ಅರ್ಥ ನಾನು ನಿನ್ನ ಜೊತೆ ಇದ್ದೇನೆ, ನಿನ್ನ ಕೈ ಯಾವತ್ತು ಬಿಡುವುದಿಲ್ಲ, ನಿನಗೆ ಭದ್ರತೆ ನೀಡುತ್ತೇನೆ ಎನ್ನುವುದು ಇದರರ್ಥ. ಹೀಗಾಗಿ ಹ್ಯಾಂಡ್ ಹೋಲ್ಡ್ ಮಾಡುವ ಖುಷಿ ಅದು ಪ್ರೀತಿಯಲ್ಲಿ ತೇಲುವಂತೆ ಮಾಡುತ್ತದೆ.

ಪ್ರೀತಿ, ವಾತ್ಸಲ್ಯ ತೋರುವುದು!

ಪ್ರೀತಿ, ವಾತ್ಸಲ್ಯ ತೋರುವುದು!

ಇದು ಪ್ರೀತಿಯಲ್ಲಿನ ಅತ್ಯಂತ್ಯ ಮುಖ್ಯ ಭಾಗ. ಹೌದು, ನಿಮ್ಮ ಪಾರ್ಟ್ನರ್ ಗೆ ವಾತ್ಸಲ್ಯ, ಪ್ರೀತಿ ತೋರಿಸುವುದು ಎಂದರೆ ಇದುವೇ ಅವರಿಗೆ ನೀಡುವ ಬೆಸ್ಟ್ ಗಿಫ್ಟ್. ಇದಕ್ಕಿಂತ ಬೆಸ್ಟ್ ಥಿಂಗ್ ಯಾವುದು ಇರುವುದಿಲ್ಲ. ದೈಹಿಕ ಖುಷಿಗಿಂತಲೂ ಪ್ರೀತಿ, ವಾತ್ಸಲ್ಯ ತೋರುವ ಫೀಲಿಂಗ್ ಗಿಂತ ದೊಡ್ಡದಲ್ಲ. ಅಲ್ಲದೇ ಸಣ್ಣಪುಟ್ಟ ರೊಮ್ಯಾನ್ಸ್ ಗಳ ಮೂಲಕ ಅಂದರೆ ಕಿಸ್ ಗಳು, ಹಗ್ ಗಳು, ಮುದ್ದಾಡುವುದು ಮತ್ತು ಅವರ ತೋಳುಗಳು ಮೇಲೆ ಮಲಗುವುದು, ಭುಜಗಳ ಮೇಲ ಕೈ ಹಾಕಿ ಕೂರುವುದು ಹೀಗೆ ಸಣ್ಣ-ಪುಟ್ಟ ರೊಮ್ಯಾಂಟಿಕ್ ಚಟುವಟಿಕೆ ನಡೆಸುವುದು ಊಟ ಮಾಡದೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

ಗೌರವ ಕೊಡುವುದು!

ಗೌರವ ಕೊಡುವುದು!

ಇಬ್ಬರ ನಡುವೆ ಗೌರವ ಇದ್ದರೆ ಮಾತ್ರ ಆ ಸಂಬಂಧ ಉತ್ತಮವಾಗಲಿದೆ. ಗೌರವ ಇದ್ದರೆ ಅಲ್ಲಿ ಪ್ರೀತಿ ಇರುತ್ತದೆ. ಅವರು ಏನು ಹೇಳಿದರು ಅದಕ್ಕೆ ಗೌರವ ಕೊಟ್ಟು ಮಾತನಾಡುವುದು, ಬೇರೆಯವರ ಬಳಿ ನಿಮ್ಮ ಸಂಗಾತಿ ಬಗ್ಗೆ ಮಾತನಾಡುವಾಗ ಆಕೆಗೆ ಗೌರವ ನೀಡುವುದು. ಮನೆಯೊಳಗೆ, ಹೊರಗೆ ಗೌರವಯುತವಾಗಿ ನಡೆಸಿಕೊಳ್ಳುವುದು. ನಿಂದನೆ ಮಾಡದೆ ಇರುವುದು. ಹೀಗೆ ಗೌರವ ಕೊಡುವ ಮೂಲಕ ಪ್ರೀತಿ ನೀಡಬಹುದು. ಇದು ಕೂಡ ಲೈಂಗಿಕ ಪ್ರೀತಿಗಿಂತ ಅತ್ಯುತ್ತಮ ಪ್ರೀತಿಯಾಗಿದೆ.

ನೈಟ್ ಡೇಟಿಂಗ್!

ನೈಟ್ ಡೇಟಿಂಗ್!

ನೈಟ್ ಡೇಟಿಂಗ್ ಮಾಡುವುದು ಕೂಡ ನಿಮ್ಮ ಸಂಗಾತಿಯನ್ನು ಕೌಂಟ್ ಲೆಸ್ ಆಗಿ ಪ್ರೀತಿಸುವ ಮತ್ತೊಂದು ಮಾರ್ಗವಾಗಿದೆ. ಹೌದು, ನಿಮ್ಮ ಇಬ್ಬರು ಹೊಸ ಬಟ್ಟೆ ತೊಟ್ಟು ರಾತ್ರಿ ಜೊತೆಗೆ ಹೊರಗೆ ಹೋಗುವುದು ಒಂದು ಖುಷಿ. ಕೆಲವರು ಒಟ್ಟಿಗೆ ಪಬ್, ಲಾಂಜ್ ಗಳಿಗೆ ಹೋಗಬಹುದು. ಅಲ್ಲದೇ ಇಬ್ಬರು ಒಟ್ಟಿಗೆ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಬಹುದು. ಈ ಮೂಲಕ ಇಬ್ಬರು ಒಟ್ಟಿಗೆ ಸಮಯ ಕಳೆಯಬಹುದು. ಹೀಗೆ ನಿಮ್ಮ ಪ್ರೀತಿಯನ್ನು ತೋರ್ಪಡಿಸಬಹುದು.

ಕ್ಷಮಿಸುವವರಾಗಿರಿ!

ಕ್ಷಮಿಸುವವರಾಗಿರಿ!

ನಾವೆಲ್ಲರೂ ಜೀವನದಲ್ಲಿ ತಪ್ಪುಗಳನ್ನು ಮಾಡುತ್ತೇವೆ. ನಮ್ಮನ್ನು ಪ್ರೀತಿಸುವ ನಮ್ಮ ಪಾಲುದಾರರು ಸಹ ತಪ್ಪುಗಳನ್ನು ಮಾಡುತ್ತಾರೆ. ಈ ರೀತಿ ತಪ್ಪು ಮಾಡಿದರೆ ಅವರ ವಿರುದ್ಧ ದಂಗೆ ಏಳುವ ರೀತಿ ನಾವು ವರ್ತಿಸಬಾರದು. ಅವರ ತಪ್ಪುಗಳನ್ನು ಅವರಿಗೆ ಅರ್ಥ ಮಾಡಿಸಿ ಅವರ ತಪ್ಪಿಗೆ ಕ್ಷಮೆ ನೀಡುವುದು. ಈ ಮೂಲಕ ನಿಮ್ಮ ಪ್ರೀತಿಯನ್ನು ತೋರಿಸಬಹುದು.

ನಿಮ್ಮ ಸಂಗಾತಿ ತಪ್ಪು ಮಾಡಿದ್ದರೆ ನೀವು ಅವರನ್ನು ಕ್ಷಮಿಸಿದರೆ ಅದರ ಅರ್ಥ ನೀವು ನಿಮ್ಮ ಸಂಗಾತಿಯನ್ನು ಬೇಷರತ್ತಾಗಿ ಪ್ರೀತಿಸುತ್ತೀರಿ ಎಂದು ತೋರಿಸುತ್ತದೆ. ಸಂಬಂಧದಲ್ಲಿ ವಿಷಯಗಳು ಕಠಿಣವಾದಾಗ, ಕ್ಷಮಿಸುವುದು ಒಂದು ಕೌಶಲ್ಯವಾಗಿದೆ. ಕ್ಷಮೆಯು ನಿಮ್ಮ ಸಂಗಾತಿಯನ್ನು ಆಳವಾದ ಮತ್ತು ಅರ್ಥಪೂರ್ಣ ರೀತಿಯಲ್ಲಿ ಪ್ರೀತಿಸುವ ಮಾರ್ಗಗಳಲ್ಲಿ ಒಂದಾಗಿದೆ.

ಸರ್ಪೈಸ್ ಕೊಡುವುದು!

ಸರ್ಪೈಸ್ ಕೊಡುವುದು!

ಅನೇಕ ಸಂಗಾತಿಗಳು ಸರ್ಪೈಸ್ ಇಷ್ಟಪಡುತ್ತಾರೆ. ಹೀಗಾಗಿ ಸರ್ಪೈಸ್ ಕೊಡುವ ಮೂಲಕ ನಿಮ್ಮ ಪ್ರೀತಿಯನ್ನು ತೋರಿಸಬಹುದು.ಅವರ ಬರ್ತ ಡೇ ದಿನ ಸರ್ಪೈಸ್ ಆಗಿ ರೂಂ ಡೇಕೋರೇಟ್ ಮಾಡಿ ಕೇಕ್ ಕತ್ತರಿಸುವುದು. ಸರ್ಪೈಸ್ ಆಗಿ ಡಿನ್ನರ್ ಗೆ ಕರೆದುಕೊಂಡು ಹೋಗುವುದು. ಕೆಲಸ ಮಾಡುವ ಕಚೇರಿಗೆ ಹೂವಿನ ಬೊಕ್ಕೆ ಕಳಿಸುವುದು. ಹೀಗೆ ಹಲವು ಸರ್ಪೈಸ್ ಅನ್ನು ನಿಮ್ಮ ಸಂಗಾತಿಗೆ ಕೊಡುವ ಮೂಲಕ ಅವರನ್ನು ಖುಷಿ ಪಡಿಸಬಹುದು.

English summary

Ways to love your partner without love making in kannada

Here we are discussing about Ways to love your partner without love making in kannada. read on :
X
Desktop Bottom Promotion