ಮುರಿದ ದಾಂಪತ್ಯ: ವಿಚ್ಛೇದನಕ್ಕೆ ಅನುಭವದ ಅರ್ಥ ನೀಡಿದ ಶಿಖರ್ ಧವನ್‌ ಪತ್ನಿ ಆಯೇಷಾ

ಶಿಖರ್ ಧವನ್ ಹಾಗೂ ಪತ್ನಿ ಕಾನೂನು ರೀತಿಯಲ್ಲಿ ಬೇರೆ-ಬೇರೆಯಾಗಿದ್ದಾರೆ. ವಿಚ್ಛೇದನಕ್ಕಾಗಿ ಮೂರು ವರ್ಷದ ಹಿಂದೆಯೇ ಅರ್ಜಿ ಹಾಕಿದ್ದರು. ವಿಚ್ಛೇದನ ಸುದ್ದಿ ಹೊರಬರುತ್ತಿದ್ದಂತೆ ಅವರ ಪತ್ನಿ ಭಾವನಾತ್ಮಕವಾಗಿ ಕೆಲ ಸಾಲುಗಳನ್ನು ಬರೆದುಕೊಂಡಿದ್ದರು, ಅವರು ಏನು ಹೇಳಿದ್ದರು ಎಂದು ಇಲ್ಲಿ ಹೇಳಲಾಗಿದೆ ನೋಡಿ.

ಯಾವುದೇ ಅಡೆತಡೆ ನಮ್ಮನ್ನು ಬೇರೆ ಮಾಡಲ್ಲ, ಎಂದೆಂದೂ ಜೊತೆಯಾಗಿ ಇರುತ್ತೇವೆ ಎಂಬ ದೊಡ್ಡ ಕನಸಿನಿಂದ ಪ್ರೇಮಿಸಿ ಮದುವೆಯಾಗಿದ್ದ ಜೋಡಿ ತಮ್ಮ ಸಂಬಂಧವನ್ನು ವಿಚ್ಛೇದನದಲ್ಲಿ ಕೊನೆಗೊಳಿಸಲು ಬಯಸಿದಾಗ ಅದು ಅವರ ಮನಸ್ಸಿಗೆ ತರುವ ನೋವು ಎಂಥದ್ದು, ಈ ವಿಚ್ಛೇದನ ಎಂಬ ಪದ ಎಷ್ಟೊಂದು ಭಯಾನಕ, ಅದರ ನಂತರದ ಬದುಕು ಹೀಗೆ ತಮ್ಮ ಬದುಕಿನಲ್ಲಿ ನಡೆದ ಎರಡು ಕಹಿ ಘಟನೆಗಳ ಬಗ್ಗೆ ಶಿಖರ್‌ ಧವನ್‌ ಪತ್ನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವಿಚ್ಛೇದನ ಎಂಬುವುದು ಅವರ ಪಾಲಿಗೆ ಎಷ್ಟು ಭಯಾನಕವಾಗಿತ್ತು, ಆ ವಿಚ್ಛೇದನ ಏಕೆ ಅನಿವಾರ್ಯವಾಗಿರುತ್ತೆ ಎಂಬೆಲ್ಲಾ ಕುರಿತು ಹೇಳಿದ್ದಾರೆ. ಅವರು ತಮ್ಮ ಬದುಕಿನ ಕತೆ, ತಮ್ಮ ಮುಂದಿನ ನಿರ್ಧಾರ ಇವುಗಳ ಬಗ್ಗೆ ಹೇಳಿದ್ದಾರೆ. ಅವರು ವಿಚ್ಛೇದನ ಅರ್ಥವನ್ನು ವಿವರಿಸಿರುವ ರೀತಿ ವಿಚ್ಛೇದನ ಕುಗ್ಗಿ ಹೋದವರಿಗೆ ಸ್ಪೂರ್ತಿ ತುಂಬುವಂತಿದೆ. ಅವರು ಹೇಳಿರುವ ವಿಚ್ಛೇದನ ಕತೆ, ಏಕೆ ಅನಿವಾರ್ಯವಾಯ್ತು ಎಂದು ಹೇಳಿರುವ ರೀತಿ ಇವುಗಳನ್ನು ಅನುವಾದಿಸಿ ನೀಡಲಾಗಿದೆ ನೋಡಿ:

ಮೊದಲನೇ ಬಾರಿ ವಿಚ್ಛೇದತೆಯಾದಾಗ

ಮೊದಲನೇ ಬಾರಿ ವಿಚ್ಛೇದತೆಯಾದಾಗ

ಕೆಲವೊಂದು ಫನ್ನಿ ಶಬ್ದಗಳು ತುಂಬಾನೇ ಬಲವಾದ ಅರ್ಥವನ್ನು ಒಳಗೊಂಡಿರುತ್ತದೆ. ಮೊದಲ ಭಾರಿ ವಿಚ್ಛೇದನವಾದಾಗ ನನಗೆ ತುಂಬಾ... ಭಯವಾಗಿತ್ತು. ನಾನು ಸೋತು ಹೋದೆನಾ ಎಂಬ ಭಯ ಆವರಿಸಿತ್ತು, ಆಗ ನಾನೇನಾದರೂ ತಪ್ಪು ಮಾಡ್ತಾ ಇದ್ದೀನಾ ಎಂದು ಅನಿಸಿತ್ತು. ನನ್ನಿಂದಾಗಿ ಎಲ್ಲರೂ ತಲೆ ತಗ್ಗಿಸುವಂತಾಗಿದೆ, ನನ್ನ ಪೋಷಕರಿಗೆ, ಮಕ್ಕಳಿಗೆ ಬೇಸರವಾಗಿದೆ ಎಂದು ಅನಿಸಿತ್ತು. ನಾನೂ ಕೂಡ ಎಷ್ಟು ಕುಗ್ಗಿ ಹೋಗಿದ್ದೆ ಎಂಬುವುದು ದೇವರಿಗೇ ಗೊತ್ತು. ವಿಚ್ಛೇದನ ಎಂಬುವುದು ತುಂಬಾ ಕೆಟ್ಟ ಪದವಾಗಿದೆ.

2ನೇ ಭಾರಿಯೂ ವಿಚ್ಛೇದನ...

2ನೇ ಭಾರಿಯೂ ವಿಚ್ಛೇದನ...

ಈಗ ಯೋಚಿಸಿ, ನಾನು 2ನೇ ಭಾರಿಯೂ ವಿಚ್ಛೇದನ ಪಡೆಯುವಂತಾಗಿದೆ. Woooahhhhhh.ಇದು ಇನ್ನೂ ಭೀಕರ ಅನಿಸಿದೆ. ಮೊದಲ ಭಾರಿಗೆ ವಿಚ್ಛೇದನ ಆದಾಗ ಎರಡನೇ ಬಾರಿ ನಾನು ಹಾಗೇ ಆಗಲೇ ಬರದು, ಈ ಸಂಬಂಧದಲ್ಲಿ ಚೆನ್ನಾಗಿದ್ದು ಸಾಬೀತು ಮಾಡಬೇಕು ಎಂದು ಬಯಸಿದ್ದೆ, ಆದರೆ ಎರಡನೇ ಮದುವೆಯೂ ಮುರಿದು ಬಿದ್ದಿದೆ, ತುಂಬಾ ಭಯವಾಗುತ್ತಿದೆ. ಮೊದಲನೇ ಬಾರಿ ವಿಚ್ಛೇದನವಾದಾಗ ಅನುಭವಿಸಿದ್ದ ಭಯ, ಹತಾಶೆ, ಸೋಲು ಈ ಬಾರಿ ನೂರು ಪಟ್ಟು ಹೆಚ್ಚಿದೆ. ಈ ವಿಚ್ಛೇದನಗಳು ನನ್ನ ಬಗ್ಗೆ, ನನ್ನ ವೈವಾಹಿಕ ಸಂಬಂಧದ ಬಗ್ಗೆ ಹೇಗೆ ವ್ಯಾಖ್ಯಾನಿಸುತ್ತದೆ?

ಅನುಭವದಿಂದ ವಿಚ್ಛೇದನ ಅರ್ಥ ಕಂಡು ಕೊಂಡಾಗ

ಅನುಭವದಿಂದ ವಿಚ್ಛೇದನ ಅರ್ಥ ಕಂಡು ಕೊಂಡಾಗ

ವೆಲ್, ಸ್ವಲ್ಪ ಹೊತ್ತು ಕೂತು ಯೋಚಿಸಿದಾಗ ನಾನು ಏನು ಅವಶ್ಯಕವಿತ್ತೋ ಅದನ್ನೇ ಮಾಡಿದ್ದೇನೆ ಎಂದು ಅನಿಸಿದೆ. ನಾನು ಮಾಡಿದ್ದು ಸರಿಯಾಗಿಯೇ ಇದೆ. ಹೀಗೆ ಯೋಚಿಸುವಾಗ ನನ್ನಲ್ಲಿದ್ದ ಭಯ ದೂರವಾದದ್ದನ್ನು ಗಮನಿಸಿದೆ. ನಾನು ಈಗ ಮತ್ತಷ್ಟು ಶಕ್ತಿವಂತಳಾಗಿದ್ದೇನೆ ಎಂದು ಅನಿಸಲಾರಂಭಿಸಿದೆ. ನನ್ನ ಭಯವೇನು ಎಂಬುವುದು ಅರ್ಥವಾಗಿದೆ. ನಾನು ನನ್ನದೇ ಅನುಭವದಿಂದ ವಿಚ್ಛೇದನದ ಅರ್ಥಗಳೇನು ಎಂಬುವುದನ್ನು ಕಂಡು ಕೊಂಡಿದ್ದೇನೆ, ಇದನ್ನು ಶಬ್ದಗಳಲ್ಲಿ ಹೇಳುವುದಾದರೆ:

* ವಿಚ್ಛೇದನ ಎಂದರೆ ನನ್ನ ಬದುಕನ್ನು ನಾನು ಆಯ್ಕೆ ಮಾಡುವುದಾಗಿದೆ. ಮದುವೆ ಹೆಸರಿನಲ್ಲಿ ಯಾವುದೇ ಸ್ಥಿರತೆಯಿಲ್ಲದಿರುವ ಸಂಬಂಧಕ್ಕಾಗಿ ನನ್ನ ಬದುಕನ್ನು ತ್ಯಾಗ ಮಾಡುವುದಲ್ಲ ಎಂಬುವುದೇ ವಿಚ್ಛೇದನ.

* ವಿಚ್ಛೇದನ ಎಂದರೆ ನೀವು ಎಲ್ಲಾ ಪ್ರಯತ್ನ ಮಾಡಿಯೂ, ನಿಮ್ಮ ಕೈಲ್ಲಾದಷ್ಟೂ ಪ್ರಯತ್ನಿಸಿಯೂ ಆ ಸಂಬಂಧ ಗಟ್ಟಿಯಾಗದಿರುವಾಗ ಮಾಡುವ ಅತ್ಯುತ್ತಮ ಕಾರ್ಯವಾಗಿದೆ, ಅಂಥ ಸಂದರ್ಭದಲ್ಲಿ ಇದು ಇದು ಒಳ್ಳೆಯದು ಕೂಡ.

* ವಿಚ್ಛೇದನ ಎಂದರೆ ಹಿಂದಿನ ಸಂಬಂಧದಿಂದ ಕಲಿತ ಪಾಠಗಳು ಮುಂದಿನ ಹೊಸ ಸಂಬಂಧದಲ್ಲಿ ಹೇಗಿರಬೇಕು ಎಂಬುವುದನ್ನು ಕಕಲಿಸುತ್ತೆ.

* ವಿಚ್ಛೇದನ ಎಂಬುವುದು ನಿಮಗೆ ಏನು ಅನಿಸುತ್ತೋ ಆ ಅರ್ಥವನ್ನು ನೀಡುವುದಾಗಿದೆ.

ವಿಚ್ಛೇದನ ಪಡೆದ ಮಹಿಳೆಯರಿಗೆ ಶಕ್ತಿ ತುಂಬುವ ಮಾತುಗಳು

ವಿಚ್ಛೇದನ ಪಡೆದ ಮಹಿಳೆಯರಿಗೆ ಶಕ್ತಿ ತುಂಬುವ ಮಾತುಗಳು

ಈ ರೀತಿ ವಿಚ್ಛೇದನ ಅರ್ಥವನ್ನು ವಿವರಿಸಿರುವ ಆಯೇಷಾ ಮುಖರ್ಜಿ ವಿಚ್ಛೇದನ ಪಡೆದು ಕುಗ್ಗಿ ಹೋಗಿರುವ ಮಹಿಳೆಯರಿಗೆ ಈ ರೀತಿಯ ಮಾತುಗಳಿಂದ ಧೈರ್ಯವನ್ನೂ ತುಂಬಿದ್ದಾರೆ:

ವಿಚ್ಛೇದನ ಆಗಿದ್ದರೆ ನಾನು ನಿಮಗೆ ಹೇಳ ಬಯಸುವುದಿಷ್ಟೇ ಅದು NORMAL..... ನಿಮಗೊಬ್ಬರಿಗೇ ಹೀಗೆ ಆಗಿರುವುದು, ನೀವೇನೋ ತಪ್ಪು ಮಾಡಿದ್ದರಿಂದ ಹೀಗಾಯ್ತು ಎಂದೆಲ್ಲಾ ಚಿಂತಿಸಬೇಡಿ.

ವಿಚ್ಛೇದನ ಆಗಿದ್ದು ಖಂಡಿತವಾಗಿಯೂ ನಿಮ್ಮ ತಪ್ಪಲ್ಲ. ಕೆಲವೊಮ್ಮೆ ಕೆಲ ಜನರು ನಿಮ್ಮ ಬದುಕಿನಿಂದ ದೂರ ಇರಲು ಬಯಸುತ್ತಾರೆ, ಮುಂದೆಂದೂ ನಿಮ್ಮ ಜೊತೆ ಇರಲು ಬಯಸುವುದಿಲ್ಲ.

1.ಕೆಲವೊಂದು ಸಂಬಂಧಗಳು ನೀವು ದಂಪತಿಯೆಂಬ ಅಡಿಪಾಯದಿಂದಾಗಿ ಮುರಿಯುತ್ತೆ

2. ಎಲವೊಂದು ಸ್ನೇಹ ಪರಿಸ್ಥಿತಿಯಿಂದಾಗಿ ಅವರಿಗೆ ನಿಮ್ಮ ಜೊತೆ ಇರಲು ಇಷ್ಟವಾಗದೆ ನಿಮ್ಮಿಂದ ದೂರ ಸರಿಯುತ್ತಾರೆ.

3. ಕೆಲವೊಂದು ಸಂಬಂಧಗಳು ಗಟ್ಟಿಯಾಗಿರಲ್ಲ ಹಾಗಾಗಿ ಮುರಿಯುತ್ತೆ.

4. ಇನ್ನು ಕೆಲವು ಸಂಬಂಧಗಳು ಇಬ್ಬರೂ ವಿಚ್ಛೇದನ ಅರ್ಥದಲ್ಲಿ ತೀರ್ಪು ನೀಡುವುದರಿಂದ ಮುರಿಯುತ್ತೆ

5. ಇನ್ನು ಕೆಲವು ಸಂಬಂಧಗಳು ಪರಸ್ಪರ ನಂಬಿಕೆ ಕಳೆದುಕೊಂಡಾಗ ಮುರಿಯುತ್ತೆ

ಬದುಕಿನಲ್ಲಿ ಆದದ್ದನ್ನು ಸ್ವೀಕರಿಸಿ, ಬದಲಾಗಿ, ಬೆಳೆಯಿರಿ

ಬದುಕಿನಲ್ಲಿ ಆದದ್ದನ್ನು ಸ್ವೀಕರಿಸಿ, ಬದಲಾಗಿ, ಬೆಳೆಯಿರಿ

ಹೀಗೆ ಅನೇಕ ಕಾರಣಗಳಿಂದ ಸಂಬಂಧಗಳು ಮುರಿಯುತ್ತದೆ. ಜನರು ಏನು ಹೇಳುತ್ತಾರೆ ಎಂದು ಯೋಚಿಸುವ ಬದಲಿಗೆ ನಿಮ್ಮ ಬದುಕಿನಲ್ಲಿ ಆದದ್ದನ್ನು ಸ್ವೀಕರಿಸಿ, ಬದಲಾಗಿ, ಬೆಳೆಯಿರಿ.

ನಿಮ್ಮಲ್ಲಿ ಇದು ಆದರೆ ಮುಂದೆ ಇವೆಲ್ಲಾ ಸಾಧ್ಯವಾಗುವುದು

* ಹೊಸ ಸಂಬಂಧ ನಿಮ್ಮ ಬದುಕನ್ನು ಪ್ರವೇಶಿಸುತ್ತದೆ

* ಹೊಸ ಸ್ನೇಹ ಬೆಳೆಯುತ್ತದೆ

* ಹೊಸ ಸಮುದಾಯ ನಿಮ್ಮೊಂದಿಗೆ ಇರುವುದು

* ನೀವು ನೀವಾಗಿ ಇರುವಿರಿ.

English summary

Shikhar Dhawan divorce: Wife Ayesha Mukherjee Explained the divorce meaning and associations

Shikhar Dhawan divorce: Wife Ayesha Mukherjee Explained the divorce meaning and associations,
X
Desktop Bottom Promotion