Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಪುರುಷರನ್ನು ಆಕರ್ಷಿಸುವ ಮಹಿಳೆಯರ 5 ಗುಣಗಳು
ಒಬ್ಬ ಮಹಿಳೆ ಆಕೆಗೆ ಇಷ್ಟವಾದ ಯಾವುದೇ ವ್ಯಕ್ತಿಯನ್ನು ಆಕರ್ಷಿಸಬಲ್ಲವಳಾಗಿದ್ದರೆ ಎಷ್ಟು ಒಳ್ಳೆಯದಲ್ಲವೇ? ನೀವು ಯಾವುದೇ ಸಂಬಂಧಗಳಲ್ಲಿ ಇಲ್ಲದೇ ಒಬ್ಬಂಟಿಯಾಗಿದ್ದರೆ, ಹುಡುಗರು ಡೇಟಿಂಗ್ ವಿಷಯ ಬಂದಾಗ ಎಷ್ಟು ಆಯ್ಕೆ ಮಾಡುವಂತವರಾಗಿರುತ್ತಾರೆ ಎಂಬುದು ನಿಮಗೆ ತಿಳಿದೇ ಇರುತ್ತದೆ.

ಮಹಿಳೆಯರಂತೆ ಪುರುಷರೂ ಕೂಡ ತಮಗೆ ಸರಿಹೊಂದುವಂತ ಹುಡುಗಿಯೇ ಬೇಕು ಎಂದು ಬಯಸುತ್ತಾರೆ. ಅಂತವರಿಗೇ ಆಕರ್ಷಿತರಾಗುತ್ತಾರೆ ಕೂಡ. ಕೆಲವೊಮ್ಮೆ ನೀವು ಅವರ ನಿರೀಕ್ಷೆಗೆ ಸರಿಹೊಂದಬಹುದು ಅಥವಾ ಸರಿ ಹೊಂದದೆಯೂ ಇರಬಹುದು. ಆದರೆ ಮಹಿಳೆಯರಂತೆ ಹುಡುಗರು ಕೂಡ ಅವರ ನಿರೀಕ್ಷೆಗೆ ತಕ್ಕಂತವರನ್ನೇ ಆಯ್ಕೆ ಮಾಡುತ್ತಾರೆ.

• ಸ್ವಂತಿಕೆಯುಳ್ಳ ಮಹಿಳೆ
ಪುರುಷರು ಸಾಮಾನ್ಯವಾಗಿ ಡೇಟಿಂಗ್ ಅಥವಾ ಹುಡುಗರ ಜೊತೆ ಹೊರಗೆಹೋಗುವ ಹುಡುಗಿಯರನ್ನು ಅಷ್ಟಾಗಿ ಇಷ್ಟಪಡುವುದಿಲ್ಲ.. ಹಾಗಾಗಿ ನಿಮಗೆ ಅತ್ಯಂತ ಇಷ್ಟವಾದ ಹುಡುಗ ನಿಮಗೆ ಕರೆ ಮಾಡಿದರೆ, ಕರೆ ಮಾಡಿದ ತಕ್ಷಣವೇ ಅವರ ಕರೆಗೆ ಉತ್ತರಿಸಬೇಡಿ.
ಸ್ವಲ್ಪ ಸಮಯದ ನಂತರ ಉತ್ತರಿಸಿ. ಗಂಡಸರಿಗೆ ಅವರನ್ನು ನಿರ್ಲಕ್ಷಿಸುವುದು ಇಷ್ಟವಾಗುವುದಿಲ್ಲ, ಆದರೆ ಅವರನ್ನು ಅಂಟಿಕೊಂಡೇ ಇರುವ ಹುಡುಗಿಯರೂ ಕೂಡ ಇಷ್ಟವಾಗುವುದಿಲ್ಲ. ಹುಡುಗರಿಗೆ ಹಿಂಬಾಲಿಸುವುದೆಂದರೆ ಇಷ್ಟ! ಮತ್ತು ನಿಮ್ಮಲ್ಲಿ ಇಂಥ ಗುಣಗಳಿದ್ದರೆ ಅವರು ಇನ್ನಷ್ಟು ಹಿಂಬಾಲಿಸುತ್ತಾರೆ.
ತಮ್ಮದೇ ಕೆಲಸದಲ್ಲಿ ನಿರತರಾಗಿ, ಸ್ವತಂತ್ರವಾಗಿ ಬದುಕುವ ಹುಡುಗಿಯರನ್ನು ಹೆಚ್ಚು ಇಷ್ಟಪಡುತ್ತಾರೆ ಹುಡುಗರು! ಹುಡುಗಿಯರ ಈ ಗುಣ ಅವರನ್ನು ಇನ್ನಷ್ಟು ಆಕರ್ಷಿಸುತ್ತದೆ.

• ರಹಸ್ಯ
ಯಾವುದೇ ಮಹಿಳೆ ತಮ್ಮ ಮೊದಲ ಭೇಟಿಯಲ್ಲೇ ತನ್ನ ಬಗ್ಗೆ ಎಲ್ಲವನ್ನೂ ಹೇಳಿಕೊಳ್ಳುವುದು ಸರಿಯೇ? ಹಾಗಿದ್ದರೆ ಖಂಡಿತ ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳುವುದು ಒಳ್ಳೆಯದು. ಮೊದಲ ಭೇಟಿಯಲ್ಲೇ ಎಲ್ಲವನ್ನು ಹೇಳಿಕೊಳ್ಳುವ ನಿಮ್ಮ ಸ್ವಭಾವದಿಂದ ಅವರು ನಿಮ್ಮನ್ನು ಬಿಟ್ಟುಬಿಡಬಹುದು.
ಮಹಿಳೆಯರು ಸ್ವಲ್ಪ ಅಂತರ ಕಾಯ್ದುಕೊಳ್ಳುವುದನ್ನು ಹುಡುಗರು ಇಷ್ಟಪಡುತ್ತಾರೆ. ಅವರೇ ಈ ಅಂತರವನ್ನು ಸರಿಸಿ ನಿಮ್ಮ ಬಗ್ಗೆ ತಿಳಿದುಕೊಳ್ಳುವವರೆಗೂ ಕಾಯಿರಿ. ನಿಮ್ಮ ಬಗ್ಗೆ ಯಾವುದಾದರೂ ರಹಸ್ಯಗಳಿದ್ದರೆ ಅದನ್ನು ತಿಳಿದುಕೊಳ್ಳಲು ಅವರೇ ಪ್ರಯತ್ನಿಸುತ್ತಾರೆ. ಹಾಗಾಗಿ ನಿಮ್ಮ ಹಾಗೂ ನಿಮ್ಮ ಜೀವನದ ಬಗ್ಗೆ ಒಂದಿಷ್ಟು ಮಾಹಿತಿಯನ್ನಷ್ಟೇ ಅವರಿಗೆ ನೀಡಿ ಹೊರತು ನಿಮ್ಮ ಬಗ್ಗೆ ಸಂಪೂರ್ಣವಾಗಿ ಹೇಳಿಕೊಳ್ಳಬೇಡಿ.

• ಆತ್ಮವಿಶ್ವಾಸ
ತಮ್ಮ ಜೀವನದಲ್ಲಿ, ತಾವು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸದಿಂದ ಇರುವ ಮಹಿಳೆಯರನ್ನು ಪುರುಷರು ಇಷ್ಟಪಡುತ್ತಾರೆ. ಯಾವ ಮಹಿಳೆಗೆ ತನ್ನ ಜೀವನದ ಗುರಿಯ ಬಗ್ಗೆ ಚೆನ್ನಾಗಿ ತಿಳಿದಿರುತ್ತದೊ ಅಂತವರು ತಮ್ಮ ಕನಸು ನನಸಾಗುವವರೆಗೆ ತಮ್ಮ ಜೀವನದಲ್ಲಿ ಬರಬೇಕಾದ ಹುಡುಗನಿಗಾಗಿ ಕಾಯುತ್ತಾರೆ.
ಅವರು ತಮ್ಮ ದೌರ್ಬಲ್ಯಗಳ ಬಗ್ಗೆ ತಿಳಿದಿರುತ್ತಾರೆ ಮತ್ತು ಅದನ್ನು ಸರಿಪಡಿಸಿಕೊಳ್ಳಲೂ ತಿಳಿದವರಾಗಿರುತ್ತಾರೆ. ಜೊತೆಗೆ ಇಂತಹ ಮಹಿಳೆಯರು ಅವರ ಸಾಮರ್ಥ್ಯದ ಬಗ್ಗೆ ಹೆಮ್ಮೆಯನ್ನು ಇಟ್ಟುಕೊಂಡವರಾಗಿರುತ್ತಾರೆ. ಮಹಿಳೆಯ ಈ ಗುಣಗಳು ಅವರು ತಮ್ಮ ಜೀವನದಲ್ಲಿ ಮಾತ್ರವಲ್ಲ ತಮ್ಮ ಸಂಬಂಧದ ಬಗ್ಗೆಯೂ ಆತ್ಮವಿಶ್ವಾಸದಿಂದಿರುವಂತೆ ಮಾಡುತ್ತವೆ. ಈ ಮಹಿಳೆಯರು ಯಾರೋಬ್ಬರ ಜೀವನದಲ್ಲಿ ಆಟ ಆಡುವುದನ್ನು ಇಷ್ಟಪದುವುದಿಲ್ಲ. ಪುರುಷರು ಪ್ರೀತಿಯಲ್ಲಿ ಬೀಳಲು ಮತ್ತೇನು ಬೇಕು?

• ತಮ್ಮ ಬಗ್ಗೆ ಕಾಳಜಿಯುಳ್ಳವರು
ಇದು ಪುರುಷರಿಗೆ ಹೆಚ್ಚು ಮುಖ್ಯವಾದ ವಿಷಯ.. ತಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಎಂದರೆ ಗಂಟೆ ಗಟ್ಟಲೆ ಕನ್ನಡಿಯ ಮುಂದೆ ನಿಂತು ಮೇಕಪ್ ಮಾಡುವವರಲ್ಲ, ಅಥವಾ ತೆಳ್ಳಗಿರುವವರ ಬಗ್ಗೆಯಲ್ಲ, ಕಾಳಜಿ ಮಾಡುವುದು ಎಂದರೆ ನಮ್ಮ ತ್ವಚೆ, ಕೂದಲು, ಮನಸ್ಸು ಮತ್ತು ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು.
ನಮ್ಮನ್ನು ನಾವು ಪ್ರೀತಿಸಿದರೆ ನಮ್ಮನ್ನು ನಾವು ಕಾಳಜಿ ಮಾಡಬಹುದು. ನಿಮ್ಮ ಜೀವನದಲ್ಲಿ ಯಾವುದೇ ಪುರುಷರು ಇರಲಿ, ಇಲ್ಲದಿರಲಿ ನಿಮ್ಮನ್ನು ಮೊದಲು ನೀವು ಪ್ರೀತಿಸಬೇಕು ಇದು ಬಹಳ ಮುಖ್ಯ. ಯಾವುದೇ ಪುರುಷನಿಗಿಂತ ಹೆಚ್ಚಾಗಿ ನಾವೇ ನಮಗೆ ವಿಮರ್ಶಕರಾಗಿರುತ್ತೇವೆ. ಹಾಗಾಗಿ ಮೊದಲು ನಮ್ಮ ಬಗ್ಗೆ ನಾವು ಸಾಕಷ್ಟು ಕಾಳಜಿ ವಹಿಸಿದರೆ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.

• ಗಮನವಹಿಸುವುದು
ಅಂದಹಾಗೇ ಕೊನೆಯ ಬಾರಿ ಬಾಸ್ಕೆಟ್ ಬಾಲ್ ಗೆದ್ದವರು ಯಾರು? ನಿಮಗೆ ಗೊತ್ತಿಲ್ಲವೇ, ಆದರೆ ನಿಮ್ಮ ಹುಡುಗನಿಗೆ ಗೊತ್ತಿರಬಹುದು. ನೀವು ಹುಡುಗರ ಹವ್ಯಾಸಗಳ ಬಗ್ಗೆ ಸರಿಯಾಗಿ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು. ನೀವು ನಿಮ್ಮ ಎಲ್ಲಾ ಹವ್ಯಾಸಗಳನ್ನು ಹೇಳಿಕೊಳ್ಳಲಿಕ್ಕಿಲ್ಲ, ಆದರೆ ಹುಡುಗರು ಹಾಗಲ್ಲ, ಅವರಿಗೆ ಆಸಕ್ತಿಯಿರುವ ಎಲ್ಲಾ ವಿಷಯಗಳ ಬಗ್ಗೆಯೂ ಹೇಳಿಕೊಳ್ಳುತ್ತಾರೆ. ಇದು ನಿಮಗೆ ಬೇಸರವಾಗಲೂಬಹುದು ಅಥವಾ ಸಿಟ್ಟೂ ಬರಬಹುದು, ಆದಾಗ್ಯೂ ನೀವು ಅವರ ಮಾತುಗಳಿಗೆ ಬೆಲೆಕೊಡಲೇ ಬೇಕು.
ಅವರು ಲೈಂಗಿಕ ವಿಷಯದ ಬಗ್ಗೆ ಅಥವಾ ಸಿನಿಮಾಗಳ ಬಗ್ಗೆ ಮಾತನಾಡದೇ ಇರಬಹುದು. ಆದರೆ ಅವರ ಹವ್ಯಾಸದ ಬಗ್ಗೆ ಹೇಳಿಯೇ ತೀರುತ್ತಾರೆ. ಆದರೆ ನಿಮಗೆ ಇದರಲ್ಲಿ ಆಸಕ್ತಿ ಇಲ್ಲ ಅಥವಾ ನೀವು ಅವರ ಮಾತನ್ನು ನಿರ್ಲಕ್ಷಿಸುತ್ತಿದ್ದೀರಿ ಎಂದು ಅರಿವಾದರೆ ಅವರು ನಿಮ್ಮನ್ನು ತಿರಸ್ಕರಿಸಬಹುದು. ಹೀಗಾದರೆ ಯಾರನ್ನು ದೂಷಿಸುವುದು? ನಿಮಗೂ ಈ ನಿರ್ಲಕ್ಷದ ಅನುಭವ ಆಗಬಾರದು ಎಂದಾದರೆ ಅವರ ಆಸಕ್ತಿಯ ಬಗ್ಗೆ ಇನ್ನಷ್ಟು ಗಮನ ವಹಿಸಿ.
ಹುಡುಗ ಹುಡುಗಿ ಇಷ್ಟಪಡಬೇಕಾದರೆ ಅವರ ನಡುವೆ ಹಲವು ವಿಷಯಗಳು ಹೊಂದಾಣಿಕೆಯಾಗಬೇಕು. ಹುಡುಗಿಯರ ಈ ಮೇಲಿನ ಎಲ್ಲಾ ಗುಣಗಳೂ ಹುಡುಗರನ್ನು ಆಕರ್ಷಿಸುವುದರಲ್ಲಿ ಯಾವುದೇ ಸಂಶಯವಿಲ್ಲ.



Click it and Unblock the Notifications











