Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ನಿಜವಾದ ಪ್ರೀತಿಯನ್ನು ಕಂಡುಹಿಡಿದುಕೊಳ್ಳುವುದು ಹೇಗೆ? ಉತ್ತಮ ಸಂಗಾತಿಯ ಆಯ್ಕೆಯು ಹೀಗಿರಲಿ
ಮನುಷ್ಯ ಭಾವನಾತ್ಮಕ ಜೀವಿ. ಪ್ರೀತಿ ಪ್ರೇಮಕ್ಕಾಗಿ ಮನಸ್ಸು ತುಡಿಯುತ್ತದೆ. ನಮ್ಮನ್ನು ಪ್ರೀತಿಸುವವರಿಂದ ಮನಸ್ಸಿಗೆ ಹಿತವಾದ ಭಾವ ಉಂಟಾಗುತ್ತದೆ. ನಮ್ಮನ್ನು ತುಂಬಾ ಪ್ರೀತಿಸುತ್ತಾರೆ ಎಂದಾಗ, ಸಾಮಾನ್ಯವಾಗಿ ನಮ್ಮ ಮನಸ್ಸು ಅವರತ್ತ ವಾಲುವುದು ಸಹಜ. ಎಷ್ಟೋ ಬಾರಿ ಚಲನಚಿತ್ರಗಳಲ್ಲಿ ಪ್ರೀತಿಯ ಸನ್ನಿವೇಶಗಳು, ಪ್ರೇಮಿಗಳ ಅವಿನಾಭಾವ ಸಂಬಂಧಗಳನ್ನು ನೋಡಿದಾಗ, ಇದು ನಿಜವೇ? ನಿಜ ಜೀವನದಲ್ಲಿ ಇಂತಹ ಪ್ರೇಮಿಗಳು ಇರುತ್ತಾರೆಯೇ? ಎಂಬ ಭಾವನೆ ಹುಟ್ಟುತ್ತದೆ. ಕೆಲವರಿಗೆ ಪ್ರೀತಿಯಲ್ಲಿ ನಂಬಿಕೆಯೇ ಇರುವುದಿಲ್ಲ. ಸಕಾರಾತ್ಮಕವಾಗಿ ಯೋಚಿಸುವವರಿಗೆ ಪ್ರೀತಿಯಲ್ಲಿ ಅಪಾರವಾದ ನಂಬಿಕೆ ಇರುತ್ತದೆ.

ಅಷ್ಟೇ ಅಲ್ಲದೆ, ಉತ್ತಮ ಸಂಗಾತಿಯು ಖಂಡಿತ ನಮಗಾಗಿ ಎಲ್ಲೋ ಇದ್ದೇ ಇರುತ್ತಾರೆ, ಎಂದು ಕೂಡ ಅನಿಸುತ್ತದೆ. ಆದರೆ, ದೊಡ್ಡ ಸಮಸ್ಯೆ ಎಂದರೆ ಅಂತಹ ನಿಜವಾದ ಪ್ರೀತಿಯನ್ನು ಪತ್ತೆ ಹಚ್ಚುವುದು ಹೇಗೆ ಎಂಬುವುದು. ಏಕೆಂದರೆ,ವಾಸ್ತವದಲ್ಲಿ ಎಲ್ಲರದ್ದೂ ನಿಜವಾದ ಪ್ರೀತಿಯಾಗಿರುವುದಿಲ್ಲ.ಪವಿತ್ರವಾದ ಪ್ರೀತಿಯನ್ನು ಕಂಡುಹಿಡಿದುಕೊಳ್ಳುವುದು ಬಹಳ ಮುಖ್ಯ.ಇಲ್ಲದಿದ್ದಲ್ಲಿ, ಮುಂದೆ ಎದುರಿಸಬೇಕಾಗಿ ಬರುವ ಆಘಾತಗಳನ್ನು ಯಾರು ತಾನೆ ಬರ ಮಾಡಿಕೊಳ್ಳಲು ಇಚ್ಚಿಸುತ್ತಾರೆ?ಇದು ಮನಸ್ಸನ್ನಷ್ಟೇ ಕುಗ್ಗಿಸುವುದಿಲ್ಲ ಎಷ್ಟೋ ಬಾರಿ ಜೀವನವನ್ನೇ ಅಲ್ಲೋಲಕಲ್ಲೋಲವನ್ನಾಗಿಸುತ್ತದೆ. ಇದಕ್ಕೆ ನಮ್ಮ ತಪ್ಪು ಆಯ್ಕೆ ಎಂದಿಗೂ ಕಾರಣವಾಗಬಾರದು. ಜರಡಿ ಹಿಡಿದಾಗ ಪದಾರ್ಥವು ಹೇಗೆ ಆಕಾರಗಳಿಗನುಸಾರವಾಗಿ ಬೇರ್ಪಡುವುದೋ ಅಂತೆಯೇ ಅಸಲಿ-ನಕಲಿ ಪ್ರೀತಿಯ ನಡುವಿನ ಅಂತರವನ್ನು ಕಂಡುಹಿಡಿದುಕೊಳ್ಳಬೇಕು.
ಹೀಗಾಗಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ಅಂಶಗಳನ್ನು ಪರಿಶೀಲಿಸಿಕೊಂಡು ಹೆಜ್ಜೆ ಇಡಿ.

1. ಈ ಸಂಬಂಧ ನಿಜಕ್ಕೂ ಸುರಕ್ಷಿತವೇ?
ಹೇಗೆ ಕೆಲವು ಸ್ಥಳಗಳಲ್ಲಿ ಸುರಕ್ಷಿತಯ ಅನುಭವವಾಗಿ ಇಲ್ಲಿ ನಾವು ಕಂಫರ್ಟಬಲ್ ಆಗಿ ಇರಬಹುದು, ಯಾವುದೇ ಚಿಂತೆ ಇಲ್ಲ ಎಂದು ನೆಮ್ಮದಿಯ ಉಸಿರು ಬಿಡುತ್ತೀರೋ ಅದರಂತೆಯೇ ಸಂಬಂಧಗಳಲ್ಲಿ ಕೂಡ ಮೊಟ್ಟಮೊದಲು ಈ ಭಾವನೆ ಹುಟ್ಟಬೇಕು. ಯಾರ ಜೊತೆ ಇರುತ್ತೀರೋ ಅವರೊಂದಿಗೆ ಸುರಕ್ಷಿತವಾಗಿ ಇರುತ್ತೀವಿ ಎಂಬ ವಿಶ್ವಾಸ ಇರಬೇಕು. ನಿಜಕ್ಕೂ ಸುರಕ್ಷಿತವಾಗಿ ಇರುತ್ತೇವೆಯೇ? ಎಂಬ ಅನುಮಾನಕ್ಕೆ ಆಸ್ಪದವೇ ಇರಬಾರದು.ಏಕೆಂದರೆ ನಿಜವಾಗಿ ಪ್ರೀತಿಸುವವರು ನಿಮ್ಮನ್ನು ಎಂದಿಗೂ ಅಸುರಕ್ಷತೆಯ ಅನುಭವವಾಗುವಂತೆ, ಮನಸ್ಸಿಗೆ ಭಯ ಉಂಟಾಗುವಂತೆ ಖಂಡಿತ ನಡೆದುಕೊಳ್ಳುವುದಿಲ್ಲ. ರೆಪ್ಪೆಯು ಕಣ್ಣನ್ನು ಕಾಪಾಡುವಂತೆ ನೋಡಿಕೊಳ್ಳುವವರೇ ನಿಜವಾದ ಸಂಗಾತಿ.

2. ಪರಸ್ಪರ ಸಾಂಗತ್ಯ ಪರಿಪೂರ್ಣವೆನಿಸುತ್ತದೆಯೇ?
ಗಾಡಿಯಲ್ಲಿ ಎರಡು ಚಕ್ರಗಳು ಇದ್ದರೆ ಮಾತ್ರ ಅದು ಪರಿಪೂರ್ಣ. ಒಂದು ಚಕ್ರವಿಲ್ಲದೆ ಹೋದರೂ ಅದು ಹೇಗೆ ಅಪೂರ್ಣವೊ, ಅಂತೆಯೇ ಒಬ್ಬರನ್ನೊಬ್ಬರು ತೊರೆದು ಬದುಕುವುದು ಅಸಾಧ್ಯವೆಂಬ ಭಾವನೆ ಹುಟ್ಟ ಬೇಕು. ಸಂಗಾತಿಯಿಂದ ಜೀವನದ ಪರಿಪೂರ್ಣತೆಯ ಅನುಭವವ ಉಂಟಾಗುವುದು ಅತಿ ಮುಖ್ಯ.

3. ಸಂಗಾತಿಯ ಅವಶ್ಯಕತೆ ನಿಜಕ್ಕೂ ಇದೆಯೇ?
ಆಯ್ಕೆ ಮಾಡಿದ ಸಂಗಾತಿಯ ಬಗ್ಗೆ ಪದೇ ಪದೇ ಅನುಮಾನ ಹುಟ್ಟುವುದು, ಈ ಸಂಬಂಧ ನಿಜಕ್ಕೂ ಸರಿಯೇ ಮುಂದುವರಿಯಬೇಕೇ? ಅಂತಹ ಅವಶ್ಯಕತೆ ಇದೆಯೇ? ಇಂತಹ ಆಲೋಚನೆಗಳು ಮನಸ್ಸಿನಲ್ಲಿ ಏಳುತ್ತಿದ್ದರೆ, ಅದು ಖಂಡಿತ ಒಳ್ಳೆಯ ಲಕ್ಷಣವಲ್ಲ.

4. ಈ ಸಂಬಂಧದಲ್ಲಿ ಅರ್ಥವಿದೆಯೇ?
ಸಂಬಂಧವು ವೇಳೆ ಕಳೆಯಲಾಗಲೀ, ಮನಸ್ಸು, ಭವಿಷ್ಯ ಹಾಳು ಮಾಡಿಕೊಳ್ಳಲಾಗಲೀ ಅಲ್ಲ. ಈ ಸಂಬಂಧದಲ್ಲಿ ಸುಖವಿದೆ,ಒಳ್ಳೆಯ ಭವಿಷ್ಯವಿದೆ, ಉದ್ದೇಶವಿದೆ ಎಂಬುದುದನ್ನು ಖಾತ್ರಿಪಡಿಸಿಕೊಳ್ಳಬೇಕು. "ಪ್ರೀತಿ ನಮ್ಮ ಜೀವನಕ್ಕೆ ಉದ್ದೇಶವನ್ನು ನೀಡುತ್ತದೆ" ಎಂಬ ಮಾತನ್ನು ಗಮನದಲ್ಲಿರಿಸಿಕೊಂಡು ನಡೆಯಬೇಕು. ಅಂತಹ ಬಲವಾದ ಕಾರಣ ಕಾಣದಿದ್ದಲ್ಲಿ ಅಂತಹ ಪ್ರೀತಿಯಲ್ಲೂ ಬಲವಿಲ್ಲ ಎಂಬುದನ್ನು ಮನಗಾಣಬೇಕು.

5. ಈ ಸಂಬಂಧದಲ್ಲಿ ಪರಸ್ಪರ ಹೊಂದಾಣಿಕೆ ಇದೆಯೇ?
ಪರಸ್ಪರ ಹೊಂದಾಣಿಕೆಯು ಇಲ್ಲವಾದಲ್ಲಿ ಪದೇ ಪದೇ ಜಗಳ,ವಿತಂಡವಾದಗಳು ಕಟ್ಟಿಟ್ಟ ಬುತ್ತಿ. ಹೀಗಾದಲ್ಲಿ ಸಿಹಿಯಾಗಿರಬೇಕಾದ ಸಂಬಂಧದಲ್ಲಿ ಕಹಿಯೇ ಹೆಚ್ಚಾಗುತ್ತದೆ. ಹಾಲು-ಜೇನಿನಂತ ಸಂಬಂಧ ವಾಗಿರಬೇಕೇ ವಿನಹ, ಹಾಲು-ಹುಳಿಯಂತೆ ಆದಲ್ಲಿ ಸಂಬಂಧದಲ್ಲಿ ಒಡಕು ಉಂಟಾಗುವುದು ಸಹಜ. ಹಾಗಾಗಿ, ಪರಸ್ಪರರಲ್ಲಿ ಹೊಂದಾಣಿಕೆ, ಸಾಮರಸ್ಯ, ಸ್ಪಂದಿಸುವ ಗುಣಗಳು ಏರ್ಪಡುತ್ತಿಲ್ಲವಾದಲ್ಲಿ ಅಂತಹ ಪ್ರೀತಿಯಲ್ಲಿ ಅರ್ಥವೇ ಇರುವುದಿಲ್ಲ.
ಹೂವಿನಿಂದ ಪರಿಮಳವನ್ನು ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ ಅಂತೆಯೇ ಎಂತಹ ಪರಿಸ್ಥಿತಿಯಲ್ಲೂ ನಮ್ಮನ್ನೂ ಬೇರ್ಪಡಿಸಲಾಗುವುದಿಲ್ಲ ಎಂಬ ಮನಸ್ಥಿತಿ ಹುಟ್ಟಬೇಕು. ಅಂತಹ ಸಂಗಾತಿ, ಪ್ರೀತಿಯನ್ನು ಕಂಡುಹಿಡಿದುಕೊಂಡು ಹೆಜ್ಜೆ ಇಟ್ಟಾಗ ಮಾತ್ರ ಬಾಳ ಪಯಣ ಸುಖಮಯವಾಗಿರುತ್ತದೆ.



Click it and Unblock the Notifications











