Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
Raksha Bandhan Wishes: ರಕ್ಷಾ ಬಂಧನಕ್ಕೆ ಕಳುಹಿಸಲು ಹೃದಯಸ್ಪರ್ಶಿ ಕೋಟ್‌ಗಳು ಇಲ್ಲಿವೆ ನೋಡಿ
ಆಗಸ್ಟ್ 09ಕ್ಕೆ ಅಣ್ಣ-ತಂಗಿಯ ಮಧುರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುವ ರಕ್ಷಾ ಬಂಧನ ಹಬ್ಬ. ಈ ಹಬ್ಬದಂದು ಸಹೋದರಿ ತನ್ನ ಸಹೋದರ ಕೈಗೆ ರಾಖಿ ಕಟ್ಟುವ ಸಂಭ್ರಮದಲ್ಲಿದ್ದರೆ, ಅಣ್ಣ ಮುದ್ದಿನ ಸಹೋದರಿಗೆ ಆಕರ್ಷಕ ಗಿಫ್ಟ್ ನೀಡಿ ನಿನ್ನ ಸದಾ ರಕ್ಷಣೆ ಮಾಡುವೆ ಎಂದು ಅಭಯ ನೀಡುವ ದಿನ.

ಪುರಾಣಗಳಲ್ಲಿ ದ್ರೌಪದಿಯು ಶ್ರೀ ಕೃಷ್ಣನಿಗೆ ರಕ್ಷಾಬಂಧನವನ್ನು ಕಟ್ಟಿದಳಂತೆ. ಇದರ ಜೊತೆಗೆ ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದಳಂತೆ. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಅಭಯವನ್ನಿತ್ತನಂತೆ. ಹೀಗೆ ರಾಖಿ ಕುರಿತ ಅನೇಕ ಕತೆಗಳಿವೆ. ತನಗೊಬ್ಬ ಅಣ್ಣನಿದ್ದರೆ ಸದಾ ಆತ ನನ್ನ ರಕ್ಷಣೆ ಮಾಡುತ್ತಾನೆ ಎಂಬ ಭಾವನೆ ಸಹೋದರಿಯಲ್ಲಿರುತ್ತದೆ, ಆ ನಂಬಿಕೆ ಹಾಗೂ ರಕ್ಷೆಗಾಗಿ ಸಹೋದರಿ, ಸಹೋದರನ ಕೈಗೆ ರಾಖಿ ಕಟ್ಟುತ್ತಾಳೆ.
ಭಾರತದಲ್ಲಿ ರಕ್ಷಾಬಂಧವನ್ನುತುಂಬಾ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ನಿಮ್ಮ ಸಹೋದರ-ಸಹೋದರಿಗೆ ಈ ದಿನ ಹೃದಯಸ್ಪರ್ಶಿ ಮೆಸೇಜ್ ಕಳುಹಿಸಬೇಕೆಂದು ನೀವು ಬಯಸುವುದಾದರೆ ಈ ಕೋಟ್‌ಗಳನ್ನು ಕಳುಹಿಸಿ...

ಸಹೋದರಿಗೆ ಕೋಟ್
1. ಮುದ್ದಿನ ಸಹೋದರಿ
ರಕ್ಷಾ ಬಂಧನದ ಶುಭಾಶಯಗಳು
ಈ ರಕ್ಷಾ ಬಂಧನಲ್ಲಿ ನಾನು ನಿನಗೊಂದು ಪ್ರಾಮಿಸ್ ಮಾಡುತ್ತಿದ್ದೇನೆ
ಸದಾ ನಿನ್ನ ರಕ್ಷಕನಾಗಿರುತ್ತೇನೆ, ಯಾವಾಗ ನೀನು ಹಿಂತಿರುಗಿ ನೋಡಿದರೂ ಅಲ್ಲಿ ನನ್ನ ಕಾಣುವೆ

ಸಹೋದರಿಗೆ ಕೋಟ್
2. ನನ್ನ ಮುದ್ದಿನ ಕೂಸೆ
ಜೀವನ ಹೇಗೆ ಬದಲಾಗುತ್ತೆ ಗೊತ್ತಿಲ್ಲ
ಆದರೆ ನನ್ನ ಹೃದಯದಲ್ಲಿ ನಿನಗಿರುವ ಸ್ಥಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ
ಹ್ಯಾಪಿ ರಕ್ಷಾ ಬಂಧನ

ಸಹೋದರಿಗೆ ಕೋಟ್
3. ನೀನು ನನ್ನ ಸಹೋದರಿಯಾಗಿ ಸಿಕ್ಕಿರುವುದಕ್ಕೆ ಹೆಮ್ಮೆ ಪಡುತ್ತೇನೆ, ಎಂದೆಂದೂ ಇದೇ ರೀತಿಯ ಧೈರ್ಯಶಾಲಿ ಹೆಣ್ಣು ನೀನಾಗಿರು, ನಿನ್ನ ಅಣ್ಣನಿಗೆ ಅದುವೇ ಸಂತೋಷ, ಹ್ಯಾಪಿ ರಕ್ಷಾ ಬಂಧನ

ಸಹೋದರಿಗೆ ಕೋಟ್
4. ಎಂದಿಗೂ ಯಾರ ಮಾತಿನ ಸಂಕೋಲೆಗೆ ಸಿಕ್ಕಿ ಹಾಕಿಕೊಳ್ಳಬೇಡ, ಯಾವುದಕ್ಕೂ ಅಂಜಬೇಡ, ಸದಾ ನಿನ್ನ ತುಟಿಯಲ್ಲಿ ನಗುವಿರಲಿ ಈ ಅಣ್ಣನ ಬೆಂಬಲ ಎಂದೆಂದಿಗೂ ನಿನಗಿರುವುದು... ಹ್ಯಾಪಿ ರಕ್ಷಾ ಬಂಧನ

ಸಹೋದರಿಗೆ ಕೋಟ್
5. ನಿನ್ನ ಸಂತೋಷವೇ ನನ್ನ ಪ್ರಪಂಚ, ನಿನ್ನಿಂದಲೇ ಬದುಕು ಇಷ್ಟೊಂದು ಸುಂದರ ಗೊತ್ತಾ ಪುಟ್ಟಿ...ಹ್ಯಾಪಿ ರಕ್ಷಾ ಬಂಧನ

ಸಹೋದರನಿಗೆ ಕೋಟ್
6. ನನ್ನ ಪ್ರೀತಿಯ ಅಣ್ಣ...ನಿನ್ನ ಜೊತೆ ತುಂಬಾ ಕಿತ್ತಾಡುವೆ, ಅದು ನನ್ನ ಹಕ್ಕು ಎಂದೇ ತಿಳಿದಿರುವವಳು ನಾನು, ಏಕೆಂದರೆ ನೀನೇ ನನ್ನ ಪ್ರಪಂಚ ಅಲ್ಲದೆ ನಿನ್ನ ತಂಗಿಯಾಗಿರುವುದಕ್ಕೆ ಹೆಮ್ಮೆಯೂ ಇದೆ... ಹ್ಯಾಪಿ ರಕ್ಷಾ ಬಂಧನ

ಸಹೋದರನಿಗೆ ಕೋಟ್
7. ನನ್ನ ಮುದ್ದಿನ ಸಹೋದರ ನೀನು ನನಗೆ ಸಿಕ್ಕಿರುವುದರಿಂದ ಫ್ರೆಂಡ್‌ನ ಅಗ್ಯತವಿಲ್ಲ. ಹ್ಯಾಪಿ ರಕ್ಷಾ ಬಂಧನ

ಸಹೋದರನಿಗೆ ಕೋಟ್
8. ನೀನು ನನಗೆ ಪೋಷಕರು ಕೊಟ್ಟಿರುವ ಅಮೂಲ್ಯವಾದ ಗಿಫ್ಟ್, ಲವ್ ಯೂ ಸೋ ಮಚ್, ಹ್ಯಾಪಿ ರಕ್ಷಾ ಬಂಧನ

ಸಹೋದರನಿಗೆ ಕೋಟ್
9. ನನ್ನ ನಗುವಿಗೆ ಯಾರು ಕಾರಣ ಎಂದರೆ ನಿನ್ನತ್ತ ಬೊಟ್ಟು ತೋರುವೆ, ಹೌದು ನಿನ್ನ ರಕ್ಷೆಯೇ ನನ್ನ ಈ ಮಟ್ಟಕ್ಕೆ ಬೆಳೆಸಿದೆ ಹ್ಯಾಪಿ ರಕ್ಷಾ ಬಂಧನ

ಸಹೋದರನಿಗೆ ಕೋಟ್
10. ಯಾರು ಈ ಮೆಸೇಜ್ ಓಸುತ್ತಿರುವವರೋ ಅವರು ನನ್ನ ಹೃದಯಕ್ಕೆ ತುಂಬಾ ಸಮೀಪವಾಗಿರುವವರು, ಅವರನ್ನು ತುಂಬಾ ಪ್ರೀತಿಸುತ್ತೇನೆ, ನನ್ನ ಹ್ಯಾಂಡ್‌ಸಮ್ ಅಣ್ಣ... ಹ್ಯಾಪಿ ರಕ್ಷಾ ಬಂಧನ



Click it and Unblock the Notifications
