Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಮಗಳಿಗೆ ಕಂಕಣ ಯೋಗ ಕೂಡಿ ಬರಲು ವಾಸ್ತು ಟಿಪ್ಸ್
ಮದುವೆಯೆಂಬುವುದು ಒಂದು ಯೋಗ, ಅದು ಕೂಡಿ ಬಂದಾಗಲೇ ಮದುವೆಯಾಗುವುದು. ಕೆಲವರಿಗೆ ಬೇಗನೆ ಆ ಯೋಗ ಕೂಡಿ ಬಂದರೆ ಇನ್ನು ಕೆಲವರಿಗೆ ವಯಸ್ಸು ಮೀರುತ್ತಿದ್ದರೂ ಒಂದಲ್ಲಾ ಒಂದು ಕಾರಣದಿಂದ ಮದುವೆ ತಪ್ಪುತ್ತಿರುತ್ತದೆ. ಅದರಲ್ಲೂ ಮನೆಯಲ್ಲಿ ಮದುವೆ ವಯಸ್ಸಿನ ಹೆಣ್ಮಕ್ಕಳು ಇದ್ದರೆ ಪೋಷಕರಿಗೆ ಅವಳನ್ನು ಮದುವೆ ಮಾಡಿ ಕಳುಹಿಸುವವರೆಗೂ ಸಮಧಾನ ಇರಲ್ಲ. ವಯಸ್ಸು ಮೀರಿದರೆ ನಾವು ಬಯಸಿದಂಥ ಸಂಬಂಧ ಕೂಡಿ ಬರಲ್ಲ ಎಂಬ ಆತಂಕ ಪೋಷಕರಿಗಿರುತ್ತೆ.
ಮಗಳ ಮದುವೆ ಯಾವಾಗ ಎಂದು ಪ್ರತಿಯೊಬ್ಬರು ಕೇಳಲು ಪ್ರಾರಂಭಿಸಿರುತ್ತಾರೆ, ಅವರಿಗೆಲ್ಲಾ ಉತ್ತರ ಹೇಳುವುದೇ ದೊಡ್ಡ ಪ್ರಯಾಸವಾಗಿರುತ್ತೆ. ಶಾಸ್ತ್ರಗಳಲ್ಲಿ ನಂಬಿಕೆ ಇರುವವರು ಏನಾದರೂ ದೋಷವಿದ್ದರೆ ಅದಕ್ಕೆ ಪರಿಹಾರ ಮಾಡುತ್ತಾರೆ. ವಾಸ್ತು ಶಾಸ್ತ್ರ ಕೂಡ ಮನೆ ಮಗಳಿಗೆ ಮದುವೆ ಬೇಗನೆ ಆಗಲು ಕೆಲವೊಂದು ವಾಸ್ತು ಟಿಪ್ಸ್ ನೀಡಿದೆ, ಅದೇನೆಂದು ನೊಡೋಣ ಬನ್ನಿ:

ಕೋಣೆಯ ದಿಕ್ಕು
ಮದುವೆಯಾಗ ಬೇಕಾಗಿರುವ ಹುಡುಗಿ ಬೆಡ್ ರೂಂನ ಬಾಗಿಲು ವಾಯುವ್ಯ ದಿಕ್ಕಿನಲ್ಲಿರಬೇಕು. ನೈರುತ್ಯ ದಿಕ್ಕಿನಲ್ಲಿ ಬಾಗಿಲು ಇರಲೇಬಾರದು, ಇದ್ದರೆ ಮದುವೆ ವಿಳಂಬವಾಗುವುದು.

ಬೆಡ್‌ರೂಂನ ದೀಪ
ಬೆಡ್‌ರೂಂ ಬೆಳಕು ಕೋಣೆಯೊಳಗೆ ಪಾಸಿಟಿವಿಟಿ ತುಂಬುವಂತೆ ಇರಬೇಕು. ಸ್ವಲ್ಪ ಕಲರ್‌ಫುಲ್ ಆದ ಬೆಳಕು ಕೋಣೆಯಲ್ಲಿರಲಿ.

ಬೆಡ್ ಶೀಟ್
ಹೂವಿನ ಅಲಂಕಾರದ ಪಿಂಕ್ ಅಥವಾ ಹಳದಿ ಬಣ್ಣದ ಕಲರ್ ಫುಲ್ ಬೆಡ್‌ಶೀಟ್ ಹಾಸಿ.. ಈ ಬಣ್ಣಗಳು ಮನಸ್ಸಿಗೂ ಖುಷಿ ನೀಡುವುದು, ಇವುಗಳು ಅದೃಷ್ಟದ ಬಣ್ಣಗಳೆಂದು ಹೇಳಲಾಗುವುದು.

ಗೋಡೆಯ ಬಣ್ಣ
ಗೋಡೆಗೆ ಲೈಟ್ ಬಣ್ಣವಿರಲಿ, ಕಪ್ಪು ಅಥವಾ ಕಂದು ಬಣ್ಣದ ಪೇಯಿಂಟ್ ಹಚ್ಚಬೇಡಿ.

ಮಲಗುವ ಭಂಗಿ
ತಲೆ ಪೂರ್ವದ ಕಡೆಗೆ ಇದ್ದರೆ ಕಾಲು ಪಶ್ಚಿಮದ ಕಡೆಗೆ ಇರಬೇಕು. ಆ ರೀತಿಯಲ್ಲಿ ಮಲಗಬೇಕು. ಮನೆಯಲ್ಲಿ ಪ್ರತಿಯೊಬ್ಬರೂ ಇದೇ ದಿಕ್ಕಿನಲ್ಲಿ ಮಲಗಬೇಕು.

ಕನ್ನಡಿ
ಕೋಣೆಯ ಒಳಗಡೆ ನಿಲುಗನ್ನಡಿ ಇಡಬೇಕು, ಆದರೆ ಬೆಡ್‌ಗೆ ವಿರುದ್ಧವಾಗಿ ಇಡಬಾರದು. ಕನ್ನಡಿಯನ್ನು ಪೂರ್ವ ಅಥವಾ ದಕ್ಷಿಣ ಭಾಗದಲ್ಲಿ ಇಡಬಹುದು, ಆದರೆ ಬೆಡ್‌ನ ಪ್ರತಿಬಿಂಬ ಕನ್ನಡಿಯಲ್ಲು ಬೀಳುವಂತೆ ಇಡಬಾರದು.

ಹೂಗಳು
ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ತಾಜಾ ಹೂಗಳನ್ನು ಹಾಕಿಡಿ. ಹಳೆಯ ಹೂಗಳನ್ನು ಬಿಸಾಡಿ ಹೊಸ ಹೂಗಳನ್ನು ಇಡಿ.

ಬೆಡ್‌ನ ಕೆಳಗಡೆ
ಬೆಡ್‌ನ ಕೆಳಗಡೆ ಏನೂ ಇಡಬಾರದು, ಖಾಲಿ ಇಡಬೇಕು. ಬೆಡ್‌ನ ಕೆಳಗಡೆ ವಸ್ತುಗಳನ್ನು ಇಡುವುದರಿಂದ ಮದುವೆ ವಿಳಂಬವಾಗುವುದು. ಅಲ್ಲದೆ ಬೆಡ್‌ನ ಮನೆಯ ಪ್ರಗತಿಗೂ ಕೂಡ ಬೆಡ್ ಕೆಳಗಡೆ ಏನೂ ಇಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಬಟ್ಟೆ
ಕೆಂಪು ಬಟ್ಟೆ ಧರಿಸುವುದು ಒಳ್ಳೆಯದು. ಕೆಂಪು ಎಂಬುವುದು ಪ್ರೀತಿಯ ಸಂಕೇತ ಅಲ್ಲದೆ ಪಾಸಿಟಿವ್ ವೈಬ್ಸ್ ಕೂಡ ತರುತ್ತದೆ ಎಂದು ಹೇಳಲಾಗುವುದು.

ಸ್ಪಟಿಕ
ಕೋಣೆಯೊಳಗೆ ಸ್ಪಟಿಕ ಇಡುವುದರಿಂದ ಮದುವೆ ಇರುವ ಅಡೆತಡೆಗಳು ದೂರವಾಗುವುದು ಎಂದು ಹೇಳಲಾಗುವುದು. ಇದನ್ನು ಕೋಣೆಯೊಳಗಡೆ ಅಥವಾ ನಿಮ್ಮ ಬೆಡ್ ಸಮೀಪ ಇಡುವಂತೆ ಸೂಚಿಸಲಾಗುವುದು.

ಅಲಂಕಾರ
ಕೋಣೆಯ ಅಲಂಕಾರಕ್ಕೆ ಲವ್‌ಬರ್ಡ್ಸ್ ಚಿತ್ರ ಅಥವಾ ಮೂರ್ತಿಗಳನ್ನು ತಂದಿಡಿ. ಇದನ್ನು ನೈರುತ್ಯ ಭಾಗದಲ್ಲಿಡಿ.
* ಅರಿಶಿಣವನ್ನು ಹೆಚ್ಚಾಗಿ ಬಳಸಬೇಕು. ತಿನ್ನುವ ಆಹಾರದಲ್ಲಿ ಕೂಡ ಅರಿಶಿಣ ಬಳಸಬೇಕು.
* ಸುಗಂಧ ದ್ರವ್ಯ ಬಳಸಬೇಕು
* ಬಡ ಹೆಣ್ಮಕ್ಕಳ ಮದುವೆಗೆ ದಾನ ಮಾಡಬೇಕು
* ನವಗ್ರಹಗಳಿಗೆ ಪೂಜೆ ಮಾಡಬೇಕು
* ಹಸುವಿಗೆ ಮಂಗಳವಾರ ಮೇವು ನೀಡಬೇಕು.
ಮಾ ಕಾತ್ಯಾಯನಿ ಮಂತ್ರವನ್ನು ಪಠಿಸುವುದರಿಂದ ಮದುವೆಗೆ ಇರುವ ಎಲ್ಲಾ ತಡೆಗಳು ದೂರವಾಗಿ ಮದುವೆ ಸಂಬಂಧ ಕೂಡಿ ಬರುವುದು. ವಿವಾಹಿತರು ಈ ಮಂತ್ರ ಹೇಳಿದರೆ ವೈವಾಹಿಕ ಜೀವನದಲ್ಲಿರುವ ಕಷ್ಟಗಳು ದೂರವಾಗುವುದು.
ಹೆಣ್ಮಕ್ಕಳ ಮದುವೆ ವಿಳಂಬವಾಗುತ್ತಿದ್ದರೆ 16 ಸೋಮವಾರ ಉಪವಾಸವಿದ್ದು ಶಿವಲಿಂಗಕ್ಕೆ ಜಲಾಭಿಷೇಕ ಮಾಡಬೇಕು. ಪಾರ್ವತಿ ದೇವಿಯ ರೀತಿ ಅಲಂಕರಿಸಿಕೊಂಡು ಶಿವ-ಪಾರ್ವತಿ ಸೇರಿಸಿ ದಾರ ಕಟ್ಟಿ ಒಳ್ಳೆಯ ಮದುವೆ ಸಂಬಂಧ ಕೂಡ ಬರಲಿ ಎಂದು ಪ್ರಾರ್ಥಿಸಬೇಕು.



Click it and Unblock the Notifications