Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ವೈರಲ್ ಆಗುತ್ತಿದೆ ಬೆಂಗಳೂರಿನ ವ್ಯಕ್ತಿಗೆ ಟ್ರಾಫಿಕ್‌ನಲ್ಲಿ ಪತ್ನಿ ಸಿಕ್ಕ ಲವ್‌ಸ್ಟೋರಿ
ಬೆಂಗಳೂರು ಟ್ರಾಫಿಕ್‌ನಿಂದಾಗಿ ನನಗೆ ಪತ್ನಿ ಸಿಕ್ಕಿದಳು ಎಂದು ರೆಡಿಟ್ ಯೂಸರ್‌ರೊಬ್ಬರು ತಮ್ಮ ಲವ್‌ಸ್ಟೋರಿ ಹೇಳಿಕೊಂಡಿದ್ದು ಆ ಲವ್‌ಸ್ಟೋರಿ ಟ್ವಿಟರ್‌ನಲ್ಲಿ ತುಂಬಾನೇ ವೈರಲ್ ಆಗಿದೆ.
ಬೆಂಗಳೂರು ಟ್ರಾಫಿಕ್ ಬಗ್ಗೆ ಹೇಳಬೇಕೆ? ಇಲ್ಲಿ ತಲುಪುವ ದೂರವನ್ನು ಕಿ.ಮೀನಲ್ಲಿ ನೋಡಿ ಪ್ರಯಾಣಿಸಿದರೆ ನಮ್ಮ ನಂಬಿಕೆ ಹುಸಿಯಾಗುತ್ತದೆ. ಕೆಲವೊಮ್ಮೆ 1 ಕಿ.ಮೀ ತಲುಪಲು 15-20 ನಿಮಿಷ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಒದ್ದಾಡಬೇಕಾಗುತ್ತದೆ. ಇನ್ನು ಫ್ಲೈಓವರ್, ಮೆಟ್ರೋಕಾಮಗಾರಿ, ರಸ್ತೆ ದುರಸ್ಥಿ ನಡೆಯುತ್ತಿರುವ ಕಡೆ ಹೋದರಂತೂ ಕತೆ ಮುಗಿಯಿತು, ತಲುಪಬೇಕಾದ ಜಾಗವನ್ನು ನಾವು ಬಯಸಿದ ಸಮಯದಲ್ಲಿ ತಲುಪಲು ಸಾಧ್ಯನೇ ಇಲ್ಲ... ದಿನಾ ಕೆಟ್ಟ ಟ್ರಾಫಿಕ್ ಬಗ್ಗೆ ಗೊಣಗುತ್ತಾ ಜೀವನ ಸಾಗಿಸುವುದಲ್ಲದೆ ಬೇರೆ ಮಾರ್ಗವಲ್ಲ.

ಐಟಿ ಹಬ್‌ಗೆ ಟ್ರಾಫಿಕ್ ಜಾಮ್ ಕಪ್ಪು ಚುಕ್ಕಿ
ಹೇಳಿಕೊಳ್ಳಲು ಬೆಂಗಳೂರು ಐಟಿ ಹಬ್. ಆದರೆ ಕೆಟ್ಟ ಟ್ರಾಫಿಕ್ ಸಮಸ್ಯೆ ಬೆಂಗಳೂರಿಗೆ ಒಂದು ಕಪ್ಪುಚುಕ್ಕಿಯೇ ಸರಿ. ಜನ ಈ ಟ್ರಾಫಿಕ್ ಸಮಸ್ಯೆಯಿಂದ ಯಾವಾಗ ಮುಕ್ತಿ ಕಾಣುತ್ತಾರೋ... ಆ ದೇವರಿಗೇ ಗೊತ್ತು...
ಆದರೆ ಬೆಂಗಳೂರಿನ ಟ್ರಾಫಿಕ್ ಜಾಮ್ ವ್ಯಕ್ತಿಯೊಬ್ಬರಿಗೆ ಬಾಳಸಂಗಾತಿ ಸಿಗುವಂತೆ ಮಾಡಿದೆ. ಅವರು ತಮ್ಮ ಲವ್ ಸ್ಟೋರಿ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ....

ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕ ಬಾಳ ಸಂಗಾತಿ
ನಾನು ನನ್ನ ಪತ್ನಿಯನ್ನು ಸೋನಿ ವರ್ಲ್ಡ್ ಸಿಗ್ನಲ್‌ನಲ್ಲಿ ಭೇಟಿಯಾದೆ, ನಾನು ಇಲ್ಲಿ ಸಂಪೂರ್ಣ ಕತೆ ಹಾಕಿಲ್ಲ ಸಂಕ್ಷಿಪ್ತವಾಗಿ ಹೇಳಿದ್ದೇನೆ. ಒಂದು ದಿನ ನಾನು ಆಕೆಯನ್ನು ಮನೆಗೆ ಡ್ರಾಪ್ ಮಾಡಲು ಹೋಗಿದ್ದೆ (ಆಗ ಅವಳು ಬರೀ ಸ್ನೇಹಿತೆಯಷ್ಟೇ). ನಾವು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಾಕಿಕೊಂಡ್ವಿ. ಆ ಸಮಯದಲ್ಲಿ ಈಜಿಪುರ ಫ್ಲೈಓವರ್ ಕೆಲಸ ನಡೆಯುತ್ತಿತ್ತು. ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ತುಂಬಾನೇ ಕೋಪ, ಕಿರಿಕಿರಿ ಎಲ್ಲಾ ಭಾವನೆ ಬರ್ತಾ ಇತ್ತು, ನಮ್ಮಿಬ್ಬರಿಗೆ ತುಂಬಾನೇ ಹಸಿವಾಗ್ತಾ ಇತ್ತು, ಅಲ್ಲಿಂದ ಗಾಡಿ ತಿರುಗಿಸಿ ಬೇರೆ ಕಡೆ ಹೋಗಿ ಡಿನ್ನರ್ ತಿಂದೆವು. ಅಲ್ಲಿಂದ ನಾವಿಬ್ಬರು ಡೇಟ್ ಮಾಡಲಾರಂಭಿಸಿದೆವು.

3 ವರ್ಷ ಡೇಟಿಂಗ್, ಮದುವೆಯಾಗಿ 2 ವರ್ಷ 2.5ಕಿ.ಮೀ ಫ್ಲೈ ಓವರ್ ಕೆಲಸ ಮಾತ್ರ ಪೂರ್ಣಗೊಂಡಿಲ್ಲ!
ನಾವಿಬ್ಬರು ಮೂರು ವರ್ಷ ಡೇಟಿಂಗ್ ಮಾಡಿ, ನಂತರ ಮದುವೆಯಾಗಿ 2 ವರ್ಷ ಆಯ್ತು, ಆದೆ 2.5 ಕಿ.ಮೀ ಫ್ಲೈ ಓವರ್ ಕಾಮಗಾರಿ ಈಗಲೂ ನಡೆಯುತ್ತಿದೆ!
ಈ ರೀತಿ ಬೆಂಗಳೂರಿನ ಟ್ರಾಫಿಕ್ ಹಾಗೂ ಕೆಲಸ ತುಂಬಾ ವಿಳಂಬವಾಗಿ ನಡೆಯುತ್ತಿರುವುದರ ಬಗ್ಗೆ ವಿಡಂಬನಾತ್ಮಕವಾಗಿ ಬರೆಯುವ ಮೂಲಕ ನೆಟ್ಟಗರ ಗಮನ ಸೆಳೆದಿದ್ದಾರೆ.



Click it and Unblock the Notifications
