Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದೇ ವಯಸ್ಸಿನ ಸೋದರ ಸಂಬಂಧಿಗಳಿದ್ದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ? ಇಲ್ಲಿದೆ ಬೆಸ್ಟ್ ಕಸಿನ್ಸ್ ಸ್ಟೋರಿ
ಮನುಷ್ಯ ಎಂದರೆ ಸಂಘ ಜೀವಿ. ಆತನಿಗೆ ಯಾರದರೂ ಜೊತೆಯಾಗಲೇ ಬೇಕು. ಈ ಜೊತೆಗೆ ಈಗ ಫ್ರೆಂಡ್ಸ್ ಎಂದು ಹೆಸರಿಡಲಾಗಿದೆ. ಹೌದು, ಎಲ್ಲರಿಗೂ ಫ್ರೆಂಡ್ಸ್ ಅಥವಾ ಗೆಳೆಯರು ಇದ್ದೆ ಇರುತ್ತಾರೆ. ತಮ್ಮ ನೋವು, ಖುಷಿಯನ್ನು ಹಂಚಿಕೊಳ್ಳಲು ಸ್ನೇಹಿತರು ಅತೀ ಮುಖ್ಯ. ಹೊರಗಡೆ ಸುತ್ತಾಡಲು, ಬೆರೆಯಲು ಸ್ನೀಹಿತರು ಬೇಕೆ ಬೇಕು. ಆದರೆ ನಿಮಗೊಂದು ಗೊತ್ತಾ ಈ ಸ್ನೇಹಿತರು ನಿಮ್ಮ ಫ್ಯಾಮಿಲಿಯಲ್ಲೇ ಸಿಕ್ಕರೆ ಹೇಗೆ..? ಹೌದು, ನಿಮ್ಮ ವಯಸ್ಸಿನ ಕಸಿನ್ಸ್ ಗಳು ನಿಮ್ಮ ಕ್ಲೋಸ್ ಫ್ರೆಂಡ್ಸ್ ಆದರೆ ನಿಮಗೆ ಡಬಲ್ ಧಮಾಕ ಸಿಕ್ಕಿದಂತೆ. ಈ ರೀತಿಯ ಅನೇಕ ಟ್ರೆಂಡ್ ಗಳು ಈಗ ನಡೆಯಿತ್ತಿದೆ. ಅನೇಕ ಕಸಿನ್ಸ್ ಗಳು ಉತ್ತಮ ಸ್ನೇಹಿತರಾಗಿದ್ದಾರೆ. ಈ ರೀತಿ ಕಸಿನ್ಸ್ ಅಥವಾ ಸೋದರ ಸಂಬಂಧಿಗಳೇ ಕುಚಿಕು ಗೆಳೆಯರಾದರೆ ಹಲವು ಲಾಭಗಳು ಇದೆ. ಹೇಗೆ ಅಂತೀರಾ..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಸ್ನೇಹ ಯಾವತ್ತು ಅರಳುತ್ತಿರುತ್ತದೆ!
ಒಂದೇ ವಯಸ್ಸಿನ ಕಸಿನ್ಸ್ ಗಳು ಕುಟುಂಬದಲ್ಲಿ ಸಿಗುವುದು ಎಂದರೆ ಅದು ದೇವರ ದಯೆ ಅಥವಾ ದೇವರ ಆಶೀರ್ವಾದ ಎಂದೆ ಹೇಳಬಹುದು. ಯಾಕೆಂದರೆ ನೀವು ಒಂದೇ ಕುಟುಂಬದವರು ಆಗಿರುವುದರಿಂದ ಸಣ್ಣದಿನಿಂದಲೇ ಬಾಂಡಿಂಗ್ ಇರುತ್ತದೆ. ಸ್ನೇಹದ ವಿಚಾರದಲ್ಲಿ ನಿಮ್ಮ ನಡುವೆ ಬೇಗೆ ಕನೆಕ್ಟ್ ಆಗುತ್ತದೆ. ನಿಮ್ಮ ಸ್ನೇಹ ಗಾಢವಾಗುತ್ತದೆ. ಕೆಲವೊಂದು ವಿಚಾರಗಳನ್ನು ಹೊರಗಿನ ಗೆಳೆಯ ಅಥವಾ ಗೆಳತಿಗೆ ಹೇಳಲು ಸಾಧ್ಯವಿಲ್ಲ. ಆದರೆ ಕಸಿನ್ಸ್ ಆದರೆ ತೆರೆದ ಮನಸ್ಸಿನಿಂದ ಹೇಳಬಹುದು. ಯಾಕೆಂದರೆ ಆ ರೀತಿಯ ಬಾಂಡಿಂಗ್ ಬೆಳೆದಿರುತ್ತದೆ. ಕುಟುಂಬದ ಸಿಕ್ರೇಟ್ ಕೂಡ ಹಂಚಿಕೊಳ್ಳಬಹುದು. ಒಂದು ಒಳ್ಳೆಯ ಸ್ನೇಹವೂ ಆಗುತ್ತದೆ.

ಬಟ್ಟೆ ಬಳಸಬಹುದು!
ಇದು ನಿಜಕ್ಕೂ ತ್ರಿಬಲ್ ಧಮಾಕವಾಗಿದೆ. ಹೌದು, ನಿಮ್ಮ ಕಸಿನ್ ನಿಮ್ಮ ಪ್ರೀತಿಯ ಗೆಳೆಯ ಅಥವಾ ಗೆಳತಿ ಆಗಿದ್ದರೆ ನೀವು ಒಂದೇ ದೇಹದ ತೂಕವನ್ನು ಹೊಂದಿದ್ದರೆ ಅವರ ಬಟ್ಟೆಯನ್ನು ನೀವು ಬಳಸಬಹುದು. ಅವರು ಹೊಸ ಬಟ್ಟೆ ತೆಗೆದುಕೊಂಡು ಬಂದರೆ ಕಾರ್ಯಕ್ರಮಕ್ಕೆ ನೀವು ಕೂಡ ಹಾಕಿಕೊಂಡು ಹೋಗಬಹುದು. ಈ ಮೂಲಕ ಇಬ್ಬರು ಬಟ್ಟೆಯನ್ನು ಎಕ್ಸ್ ಚೇಂಜ್ ಮಾಡಿಕೊಳ್ಳಬಹುದು. ಅಲ್ಲದೇ ನೀವು ಯಾವುದೇ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾದರೆ ನೀವು ಒಂದೇ ರೀತಿಯ ಬಟ್ಟೆಯನ್ನು ಧರಿಸಬಹುದು. ಒಂದೇ ರೀತಿ ಇರಬಹುದು. ಹೀಗೆ ಬಟ್ಟೆ ವಿಚಾರದಲ್ಲಿ ಭಾರೀ ಲಾಭವಿದೆ.

ಪ್ರವಾಸ ಅದ್ಭುತವಾಗಿರುತ್ತದೆ!
ಫ್ಯಾಮಿಲಿ ಜೊತೆ ಟ್ರಿಪ್ ಹೋಗುವುದು ಎಂದರೆ ಈಗೀನ ಯುವಕರಿಗೆ ಬೋರ್. ತಮಗಿಂತ ವಯಸ್ಸಿನಲ್ಲಿ ಜಾಸ್ತಿ ಇರುವವರ ತಲೆ ಕೊರೆಯುವ ಪ್ರಶ್ನೆಗಳು ಇರುತ್ತದೆ ಎನ್ನುವ ಕಾರಣಕ್ಕೆ ಟ್ರಿಪ್ ಗೆ ಹೋಗುವುದನ್ನು ಕ್ಯಾನ್ಸಲ್ ಮಾಡುತ್ತಾರೆ. ಆದರೆ, ನಿಮ್ಮ ವಯಸ್ಸಿನ ಕಸಿನ್ಸ್ ನಿಮ್ಮ ಕುಟುಂಬ ಮತ್ತು ಆ ಟ್ರಿಪ್ ನಲ್ಲಿ ಇದ್ದರೆ ನೀವು ಖಂಡಿತವಾಗ್ಲು ನಿಮ್ಮ ಟ್ರಿಪ್ ನೀವು ಕ್ಯಾನ್ಸಲ್ ಮಾಡಲ್ಲ. ಹೌದು, ನಿಮ್ಮ ವಯಸ್ಸಿನ ಕಸಿನ್ಸ್ ಜೊತೆ ನಿಮ್ಮ ಅನ್ಯೋನ್ಯತೆ ಜಾಸ್ತಿ ಇರುತ್ತೆ. ನೀವು ಮೋರ್ರ್ ಕ್ಲೋಸ್ ಫ್ರೆಂಡ್ಸ್ ಆಗಿರುತ್ತಿರಿ. ಹೀಗಾಗಿ ನಿಮಗೆ ಅದು ಉತ್ತಮ ಅನುಭವ ನೀಡುತ್ತದೆ. ಪ್ರವಾಸದಲ್ಲಿ ಒಟ್ಟಿಗೆ ಕೂತುಕೊಳ್ಳುವುದು, ಒಟ್ಟಿಗೆ ಆಹಾರ ಸೇವಿಸುವುದು, ಒಟ್ಟಿಗೆ ಮಲಗುವುದು, ಒಟ್ಟಿಗೆ ಫೋಟೊ ತೆಗೆಸಿಕೊಳ್ಳುವುದು. ಹೀಗೆ ಹಲವು ನೆನಪುಗಳನ್ನು ನೀವು ಸೃಷ್ಟಿಸಬಹುದು.

ಒಟ್ಟಿಗೆ ಹೊರಗೆ ಸುತ್ತಾಡಬಹುದು!
ಹೊರಗಿನ ಫ್ರೆಂಡ್ಸ್ ಅಂದರೆ ಪೋಷಕರು ಮಕ್ಕಳನ್ನು ಕಳಿಸುವುದು ಕಡಿಮೆ. ಆದರೆ ಕಸಿನ್ಸ್ ಜೊತೆಗೆ ಅಂದರೆ ಪೋಷಕರು ಯಾವತ್ತು ಬೇಡ ಅನ್ನೋದಿಲ್ಲ. ಹೌದು, ನಿಮ್ಮ ವಯಸ್ಸಿನ ಕಸಿನ್ಸ್ ನಿಮಗೆ ಸಿಕ್ಕರೆ ನೀವು ಎಲ್ಲಿ ಬೇಕಾದರೂ ಸುತ್ತಾಡಬಹುದು. ವಿವಿಧ ರೆಸ್ಟೋರೆಂಟ್, ಮಾಲ್ ಗಳಿಗೆ ಭೇಟಿ ನೀಡಬಹುದು. ವಿವಿಧ ಕಡೆಗಳಿಗೆ ಪ್ರವಾಸಕ್ಕೆ ಹೋಗಬಹುದು. ಕೆಲವು ಕುಟುಂಬದಲ್ಲಿ ಒಂದೇ ವಯಸ್ಸಿನ ಕಸಿನ್ಸ್ ಗಳೇ ವರ್ಷಕ್ಕೆ ಒಂದು ಬಾರಿ ಪ್ರವಾಸ ಆಯೋಜನೆ ಮಾಡುತ್ತಾರೆ.

ವಿಷಯಗಳನ್ನು ಮುಕ್ತವಾಗಿ ಶೇರ್ ಮಾಡಬಹುದು!
ನಿಮಗೆ ನಿಮ್ಮ ವಯಸ್ಸಿನ ಕಸಿನ್ಸ್ ಸಿಕ್ಕರೆ ನಿಮ್ಮದು ಪುಣ್ಯ ಕಣ್ರೀ. ಯಾಕೆಂದರೆ ನೀವು ಅವರ ಜೊತೆ ನಿಮ್ಮ ನೋವು, ದುಖಃವನ್ನು ಹಂಚಿಕೊಳ್ಳಬಹುದು. ಗೆಳೆಯರೊಂದಿಗೆ ಹಂಚಿಕೊಳ್ಳಲು ಆಗದ ವಿಚಾರಗಳನ್ನು ಅವರ ಜೊತೆ ಶೇರ್ ಮಾಡಿಕೊಳ್ಳಬಹುದು. ಅದನ್ನು ಅವರು ಕೂಡ ಸಂಯಮದಿಂದ ಕೇಳಿ ನಿಮ್ಮ ನೋವಿನಲ್ಲಿ ಭಾಗಿಯಾಗುತ್ತಾರೆ. ರಕ್ತ ಸಂಬಂಧದ ಶಕ್ತಿ ಅದರಲ್ಲಿ ಇರುತ್ತದೆ. ಯಾವುದೇ ವಿಚಾರವನ್ನು ಅಳುಕಿಲ್ಲದೆ ನೀವು ಹೇಳಿಕೊಳ್ಳಬಹುದು.



Click it and Unblock the Notifications