Latest Updates
-
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್
ತಮಗಿಂತ ಹಿರಿಯರ ಜೊತೆ ಪ್ರೇಮ ಪಾಶದಲ್ಲಿ ಸಿಲುಕುವುದೇಕೆ ? ಇಲ್ಲಿದೆ ಕಾರಣ
ಕೆಲವೊಬ್ಬರು ತಮಗಿಂತ ಕಿರಿಯ ಅಥವಾ ಹಿರಿಯರ ಜೊತೆ ಪ್ರೇಮ ಪಾಶದಲ್ಲಿ ಸಿಲುಕುವುದೇಕೆ ? ಇಲ್ಲಿದೆ ಇದಕ್ಕೆ ಕಾರಣ
ಇದೇ ಕಾರಣಕ್ಕೆ ಹಲವರು ತಮಗಿಂತ ಹಿರಿಯ ವ್ಯಕ್ತಿಯನ್ನು ಪ್ರೀತಿಸುವುದು..!ಪ್ರೇಮ ಜೋಡಿಗಳ ನಡುವೆ ವಯಸ್ಸಿನ ಅಂತರ, ಸದ್ಯ ದೇಶದಲ್ಲಿ ಭಾರೀ ಚರ್ಚೆಯಲ್ಲಿರುವ ಹಾಟ್ ಟಾಪಿಕ್. ಅದಕ್ಕೆ ಕಾರಣ ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್. ಹೌದು, ಸುಶ್ಮಿತಾ ಸೇನ್ ತನಗಿಂತ ಹತ್ತು ವರ್ಷ ಜಾಸ್ತಿಯಿರುವ ಲಲಿತ್ ಮೋದಿ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ನಾವಿಬ್ಬರು ಡೇಟ್ ಮಾಡುತ್ತಿದ್ದೇವೆ ಎಂದು ಲಲಿತ್ ಮೋದಿ ಹೇಳಿದರೆ. ನಾನು ಪ್ರೀತಿ ಸಿಗುತ್ತಿರುವ ಜಾಗದಲ್ಲಿದ್ದೇನೆ ಎಂದು ಸುಶ್ಮಿತಾ ಸೇನ್ ಹೇಳಿದ್ದಾರೆ. ಹಾಗಾದರೆ ಪ್ರೀತಿಗೆ ವಯಸ್ಸು ಅಡ್ಡಿ ಬರುದಿಲ್ಲವೇ? ಈ ಬಗ್ಗೆಗ್ಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.


ಪ್ರೀತಿ ಮುಂದೆ ವಯಸ್ಸು ನಗಣ್ಯ!
ಹೌದು, ಅನೇಕ ಪ್ರೇಮ ಜೋಡಿಗಳು ಹೇಳುವ ಪ್ರಕಾರ ಪ್ರೀತಿ ಹಾಗೂ ವಯಸ್ಸಿಗೆ ಯಾವುದೇ ಸಂಬಂಧವಿಲ್ಲ. ಯಾರಿಗೂ ಯಾರ ಮೇಲೂ ಬೇಕಾದರೂ ಪ್ರೀತಿ ಹುಟ್ಟಬಹುದು. ಕೆಲವರಿಗೆ ತಮಗಿಂತ ದೊಡ್ಡವರ ಮೇಲೆ ಪ್ರೀತಿ ಹುಟ್ಟಬಹುದು.
ದೊಡ್ಡವರಿಗೆ ತಮಗಿಂತ ಕಿರಿಯವರ ಮೇಲೆ ಪ್ರೀತಿ ಹುಟ್ಟಬಹುದು. ಇದಕ್ಕೆ ಕಾರಣ ಅವರ ನಡುವೆ ಇರುವ ಅಂಡರ್ ಸ್ಟ್ಯಾಂಡಿಂಗ್, ಅಟ್ಯಾಚ್ ಮೆಂಟ್, ಲವ್, ಕೇರ್. ಹೌದು, ನಾವು ಭಾರತದಲ್ಲೇ ನೋಡಿದರೆ ಹಲವು ಕಪಲ್ ಗಳ ನಡುವೆ ವಯಸ್ಸಿನ ಅಂತರ ವಿಭಿನ್ನವಾಗಿದೆ.
ಈ ಹಿಂದೆ ಸುಶ್ಮಿತಾ ಸೇನ್ ತನಗಿಂತ 16 ವರ್ಷ ಸಣ್ಣ ವಯಸ್ಸಿನ ರೋಹನ್ ಶ್ವಾಲ್ ಎಂಬಾತನ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇನ್ನು ಬಾಲಿವುಡ್ ಖ್ಯಾತ ನಟಿ ಮಲೈಕಾ ಆರೋರಾ ತನಗಿಂತ 12 ವರ್ಷ ಸಣ್ಣ ಪ್ರಾಯದ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಲ್ಲಿ ಇದ್ದಾರೆ. ಅರ್ಜುನ್ ಕಪೂರ್ ಸೀನಿಯ ಜೊತೆ ಲವ್ ನಲ್ಲಿ ಇದ್ದಂಗೆ ಆಗಿದೆ. ಇನ್ನು ಬಾಲಿವುಡ್ ನಟ ಸೈಫ್ ಆಲಿ ಖಾನ್ ತನಗಿಂತ 12 ವರ್ಷ ದೊಡ್ಡ ವಯಸ್ಸಿನ ಅಮೃತಾ ಸಿಂಗ್ ರನ್ನು ಮದುವೆಯಾಗಿದ್ದರು. ಇನ್ನು ಇದೇ ಸೈಫ್ ಆಲಿ ಖಾನ್ ತನಗಿಂತ 10 ವರ್ಷ ಚಿಕ್ಕ ವಯಸ್ಸಿನ ಕರೀನಾ ಕಪೂರ್ ರನ್ನು ಮದುವೆಯಾಗಿದ್ದಾರೆ.
ಹೀಗೆ ಬೇರೆ ಬೇರೆ ಕಪಲ್ ಗಳು ತುಂಬಾ ಹಿರಿಯ ಹಾಗೂ ತುಂಬಾ ಕಿರಿಯರನ್ನು ಪ್ರೀತಿಸುತ್ತಿದ್ದಾರೆ. ಹೀಗೆ ತುಂಬಾನೇ ಏಜ್ ಡಿಫರೆನ್ಸ್ ಬರುವುದೇಕೆ? ಇದಕ್ಕೆ ಕಾರಣವೇನು? ಇಬ್ಬರ ನಡುವೆ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ ಏಕೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಪ್ರೀತಿ ಜಾಸ್ತಿ!
ತಮಗಿಂತ ದೊಡ್ಡ ವಯಸ್ಸಿನವರು ಯಾವಾಗಲೂ ನಮಗೆ ಹೆಚ್ಚು ಪ್ರೀತಿ ನೀಡುತ್ತಾರೆ. ಉದಾಹರಣೆಗೆ ಊರಿನಲ್ಲಿ ನೀವು ಚಿಕ್ಕವರಿದ್ದರೆ ದೊಡ್ಡವರು ಪ್ರೀತಿಯಿಂದ ಮಾತನಾಡಿಸುತ್ತಾರೆ. ಇದು ಪ್ರೀತಿಯಲ್ಲೂ ಅನ್ವಯಿಸುತ್ತದೆ. ನಿಮ್ಮ ಪಾರ್ಟ್ ನರ್ ಸೀನಿಯರ್ ಆಗಿದ್ದರೆ ಇವರಿಗೆ ಜಾಸ್ತಿ ಅನುಭವ ಇರುವುದಿಲ್ಲ ಹೀಗಾಗಿ ಎಲ್ಲವನ್ನು ಸರಿಯಾಗಿ ನಿಭಾಯಿಸಬೇಕು, ಜಾಸ್ತಿ ಪ್ರೀತಿ ಕೊಡಬೇಕು, ಎಲ್ಲ ಸಮಸ್ಯೆಗಳನ್ನು ತಾನು ಸಂಬಳಿಸಿಕೊಂಡು ಹೋಗಬೇಕು ಎನ್ನುವ ವಿಚಾರ ಸೀನಿಯರ್ ನ ತಲೆಯಲ್ಲಿ ಇರುತ್ತದೆ. ಹೀಗಾಗಿ ಈ ಸಂಬಂಧದಲ್ಲಿ ಯಾವಾಗಲೂ ಖುಷಿ, ಸಂತೋಷ, ನೆಮ್ಮದಿ ನೆಲೆಗೊಂಡಿರುತ್ತದೆ.

ಆರ್ಥಿಕ ಸಮಸ್ಯೆ ಇರುವುದಿಲ್ಲ!
ಸಂಬಂಧದ ಬಗ್ಗೆ ಸಿನೀಯರ್ ಗಳಿಗೆ ತಿಳುವಳಿಕೆ ಜಾಸ್ತಿ!
ಅನೇಕರು ಹುಡುಗ ಅಥವಾ ಹುಡುಗಿಯಾಗಿರಲಿ ತಮಗಿಂತ ತುಂಬಾ ಸೀನಿಯರ್ ನನ್ನು ಡೇಟ್ ಮಾಡಲು ಅಥವಾ ಮದುವೆ ಮಾಡಿಕೊಳ್ಳಲು ಇಚ್ಚೆಪಡುತ್ತಾರೆ. ಅದಕ್ಕೆ ಕಾರಣ ತಮಗಿಂತ ಸೀನಿಯರ್ ಗಳಿಗೆ ಸಂಬಂಧದ ಬೆಲೆ ಗೊತ್ತಿರುತ್ತದೆ ಎನ್ನುವ ಕಾರಣಕ್ಕೆ. ಅಲ್ಲದೇ ಸಂಬಂಧದ ವಿಚಾರದಲ್ಲಿ ಅವರಿಗೆ ಹೆಚ್ಚು ತಿಳುವಳಿಕೆ ಇರುತ್ತದಂತೆ. ಅವರು ಕುಟುಂಬ ಅಥವಾ ತಮ್ಮ ಸಂಬಂಧವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎನ್ನುವುದು ಗೊತ್ತಿರುವ ಕಾರಣ ಸೀನಿಯರ್ ಗಳನ್ನು ಹುಡುಗ ಅಥವಾ ಹುಡುಗಿ ಇಷ್ಟಪಡುತ್ತಾರೆ. ಸೀನಿಯರ್ ಗಳು ಯಾವಾಗಲೂ ಆತ್ಮ ವಿಶ್ವಾಸದಿಂದ ಇರುತ್ತಾರೆ. ಅಲ್ಲದೇ ವಯಸ್ಸಾಗಿರುವ ವ್ಯಕ್ತಿ ಪ್ರಬುದ್ಧನಂತೆ ವರ್ತಿಸುತ್ತಾನೆ. ಅಲ್ಲದೇ ತಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎನ್ನುವುದೇ ವಯಸ್ಸಿನ ಅಂತರಕ್ಕೆ ಕಾರಣ. ಅಲ್ಲದೇ ಅವರಿಂದ ಹೆಚ್ಚು ಪ್ರೀತಿ ಸಿಗುತ್ತದೆ ಎನ್ನುವ ನಂಬಿಕೆ.

ಭಾರೀ ಕಾಳಜಿ!
ವಯಸ್ಸಿನ ಅಂತರಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆ, ಸಂಬಂಧದಲ್ಲಿ ದಂಪತಿಗಳು ಒಂದೇ ವಯಸ್ಸಿನವರಾಗಿದ್ದರೆ, ಅವರ ನಡುವೆ ಭಿನ್ನಾಭಿಪ್ರಾಯ ಕಡಿಮೆ ಇರುತ್ತದೆ. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಕಡಿಮೆ ಇರುತ್ತದೆ. ಆದರೆ ವಯಸ್ಸಿನ ವ್ಯಕ್ತಿ ಸಂಬಂಧದಲ್ಲಿ ಹೆಚ್ಚು ತಿಳುವಳಿಕೆಯನ್ನು ತೋರಿಸುತ್ತಾನೆ ಮತ್ತು ಅವನ ಸಂಗಾತಿಯ ಕಡೆಗೆ ಹೆಚ್ಚು ಕಾಳಜಿ ವಹಿಸುತ್ತಾನೆ. ಅವನು ಸಂಬಂಧವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಾನೆ. ಇನ್ನು ತನ್ನ ಪಾರ್ಟ್ ನರ್ ವಯಸ್ಸು ಹೆಚ್ಚಿದ್ದರೆ ಆತ ಅಥವಾ ಆಕೆಯ ಒಪಿನಿಯನ್ ಕೇಳಲು ತಾಳ್ಮೆಯನ್ನು ಹೊಂದಿರುತ್ತಾರೆ. ಒಂದೇ ವಯಸ್ಸಿನವರಾದರೆ ಅರ್ಥ ಮಾಡಿಸೋದು ಕಷ್ಟ, ಇದು ಜಗಳಕ್ಕೆ ದಾರಿ ಮಾಡಿಕೊಡಬಹುದು. ಉದಾಹರಣೆಗೆ, ಪತ್ನಿ ಸೀನಿಯರ್ ಆಗಿದ್ದರೆ ಪತಿಗೆ ಖಂಡಿತವಾಗ್ಲೂ ಅತೀ ಹೆಚ್ಚು ಕೇರ್ ಸಿಗುತ್ತದೆ. ಅದೇ ಸೇಮ್ ವಯಸ್ಸಿನ ಮದುವೆಯಲ್ಲಿ ಅನೇಕ ಸಮಸ್ಯೆಗಳು ಬರುವುದುಂಟು.

ಅನೈತಿಕ ಸಂಬಂಧದ ಬಗ್ಗೆ ಭಯ ಇರುವುದಿಲ್ಲ!
ಇದು ಕೂಡ ವಯಸ್ಸಿನ ಅಂತರಕ್ಕೆ ಇನ್ನೊಂದು ಪ್ರಮುಖ ಕಾರಣವಾಗಿದೆ. ಅನೇಕ ಯುವಕರು ಯೋಚನೆ ಮಾಡುತ್ತಾರೆ. ತನಗಿಂತ ಸಣ್ಣ ಪ್ರಾಯದ ಯುವತಿಯನ್ನು ಮದುವೆಯಾದರೆ ಅಥವಾ ಡೇಟ್ ಮಾಡಿದರೆ ಆಕೆಗೆ ತನ್ನ ವಯಸ್ಸು ಒಂದಲ್ಲ ಒಂದು ದಿನ ಸಮಸ್ಯೆಯಾಗಬಹುದು. ಆದರೆ ತನಗಿಂತ ದೊಡ್ಡ ವಯಸ್ಸಿನ ಯುವತಿಯನ್ನು ಡೇಟ್ ಅಥವಾ ಮದುವೆಯಾದರೆ ಅಂತಹ ಸಮಸ್ಯೆ ಇರೋದಿಲ್ಲ ಎಂದು ಅಂದುಕೊಂಡು ಸೀನಿಯರ್ ಗಳನ್ನು ಡೇಟ್ ಅಥವಾ ಮದುವೆಯಾಗುತ್ತಾರೆ. ಯುವತಿಯರು ಹಾಗೇ ತನಗಿಂತ ತುಂಬ ವಯಸ್ಸು ಜಾಸ್ತಿ ಇದ್ದ ಯುವಕ ಯಾವಾಗಲೂ ತನ್ನ ಮೇಲೆ ಕೇಂದ್ರಿಕೃತನಾಗಿರುತ್ತಾನೆ. ಬೇರೆ ಯುವತಿಯರ ಸಹವಾಸ ಮಾಡಲು ಹೋಗುವುದಿಲ್ಲ. ಹೀಗಾಗಿ ತಮಗಿಂತ ಜಾಸ್ತಿ ವಯಸ್ಸಿನವರನ್ನು ಮದುವೆಯಾಗುತ್ತಾರೆ.

ಸೆಕ್ಸ್ ಗೂ ವಯಸ್ಸಿಗೂ ನಂಟು ಇದೆ!
ಇದು ಎಲ್ಲರಿಗೂ ಅನ್ವಯಿಸಲ್ಲ ಕೆಲವರಿಗೆ ಮಾತ್ರ. ಕೆಲವರು ತಮಗಿಂತ ಹೆಚ್ಚಿನ ವಯಸ್ಸಿನವರಲ್ಲಿ ಸೆಕ್ಸ್ ಡ್ರೈವ್ ಚೆನ್ನಾಗಿರುತ್ತದೆ ಎಂದು ನಂಬಿಕೊಂಡಿದ್ದಾರೆ. ಉದಾಹರಣೆಗೆ ಸೀನಿಯರ್ ಯುವತಿಯನ್ನು ಮದುವೆಯಾದರೆ ಆಕೆ ಉತ್ತಮ ಸೆಕ್ಸ್ ನೀಡುವಲ್ಲಿ ಸಫಲಳಾಗುತ್ತಾಳೆ. ತನ್ನನ್ನು ತೃಪ್ತಿ ಪಡಿಸುತ್ತಾಳೆ ಎನ್ನುವ ನಂಬಿಕೆ ಇರುತ್ತದೆ. ಇನ್ನು ತನಗಿಂತ ಹೆಚ್ಚು ವಯಸ್ಸಿನ ಪುರುಷ ತನ್ನನ್ನು ಲೈಂಗಿಕವಾಗಿ ತೃಪ್ತಿ ಪಡಿಸುತ್ತಾನೆ ಎನ್ನುವ ಯೋಚನೆ ಅನೇಕ ಯುವತಿಯರಿಗಿದೆ. ಆತನ ಸೆಕ್ಸ್ ಅನುಭವ ಉಪಯೋಗಕ್ಕೆ ಬರುತ್ತದೆ ಎಂದು ಕೆಲವರು ಯೋಚನೆ ಮಾಡುತ್ತಾರೆ. ಹೀಗಾಗಿ ಕೆಲವರು ಉತ್ತಮ ಸೆಕ್ಸ್ ಗಾಗಿ ಸೀನಿಯರ್ ಗಳನ್ನು ಡೇಟ್ ಮಾಡುವುದುಂಟು.

ಮತ್ತಿತರ ಸಂಗತಿಗಳ ಸುತ್ತ!
ಇನ್ನು ವಯಸ್ಸು ಹೆಚ್ಚಿನವರ ಜೊತೆ ಡೇಟ್ ಅಥವಾ ಮದುವೆಯಾಗಲು ಯಾಕೆ ಮುಂದಾಗುತ್ತಾರೆ ಎಂದರೆ. ಸಮಾನ ವಯಸ್ಸಿನ ಮದುವೆಯಲ್ಲಿ ಜಗಳಗಳು ಉಂಟಾಗುವುದು ಜಾಸ್ತಿ, ಯುವತಿಯರು ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆ ಮಾಡುವುದುಂಟು. ಆದರೆ ಇದು ಹಿರಿಯ ವಯಸ್ಸಿನ ಮಹಿಳೆ ಕಂಡಿತ ಮಾಡೋದಿಲ್ಲ. ಆಕೆ ಈ ರೀತಿಯ ವರ್ತನೆ ತೋರಿಸಲು ಹೋಗುವುದಿಲ್ಲ. ಇನ್ನು ವಯಸ್ಸು ಹೆಚ್ಚಿರುವ ಪುರುಷ ಕೂಡ ಸಣ್ಣಪುಟ್ಟ ವಿಷಯಗಳಿಗೆ ಜಗಳ ಮಾಡಲು ಹೋಗುವುದಿಲ್ಲ, ಪ್ರಬುದ್ಧವಾಗಿ ವರ್ತಿಸುತ್ತಾನೆ. ಇನ್ನು ತಮಗಿಂತ ಹೆಚ್ಚು ವಯಸ್ಸಿನವರನ್ನು ಡೇಟ್ ಮಾಡಿದರೆ ದಿನ ನಿತ್ಯ ಜೀವನದಲ್ಲಿ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಿರುತ್ತೇವೆ.



Click it and Unblock the Notifications











