Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಮ್ಮಂದಿರ ದಿನ 2021: ಆಕೆಗೆ ಅಚ್ಚರಿಯ ಉಡುಗೊರೆ ಕೊಟ್ಟು ಸಂತೋಷಗೊಳಿಸಿ
ಜೀವಮಾನವಿಡಿ ರಜೆ ತೆಗೆದುಕೊಳ್ಳದೆ ಕೆಲಸ ಮಾಡುವಂತಹ ಜೀವವೆಂದರೆ ಅದು ತಾಯಿ. ಆಕೆಗೆ ವಿಶ್ರಾಂತಿ ಎನ್ನವುದೇ ಇರಲ್ಲ, ಮಕ್ಕಳು ಸಣ್ಣವರಿದ್ದಾಗಿನಿಂದ ಹಿಡಿದು ದೊಡ್ಡವರಾದ ಬಳಿಕ ಕೂಡ ಆಕೆ ಅವರ ಆರೈಕೆಯಲ್ಲಿ ತೊಡಗಿಕೊಳ್ಳುವಳು. ಇದರಿಂದ ತಾಯಿ ಎನ್ನುವುದು ಈ ಭೂಮಿ ಮೇಲಿನ ಒಂದು ಅದ್ಭುತ ಶಕ್ತಿ ಎಂದರೆ ತಪ್ಪಾಗಲಾರದು. ಮದರ್ಸ್ ಡೇ ದಿನ ತಾಯಿಗೆ ನೀವು ಪ್ರೀತಿ ವ್ಯಕ್ತಪಡಿಸಲು ಒಳ್ಳೆಯ ದಿನವಾಗಿದೆ. ಮದರ್ಸ್ ಡೇ ಎನ್ನುವುದು ವಿದೇಶಿ ಸಂಸ್ಕೃತಿಯಾದರೂ ಇಂದು ಭಾರತದಲ್ಲಿ ಕೂಡ ವಕ್ಕರಿಸಿಕೊಂಡಿದೆ.
ಎಲ್ಲರು ಇದನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮದರ್ಸ್ ಡೇ ದಿನ (ಅಮ್ಮಂದಿರ ದಿನ) ನೀವು ಒಂದು ಸಣ್ಣ ಉಡುಗೊರೆ ಕೊಟ್ಟು ಆಕೆಯನ್ನು ಸಂತೋಷಗೊಳಿಸಬಹುದು. ತಾಯಿಗೆ ಯಾವ ರೀತಿಯ ಉಡುಗೊರೆ ಕೊಡಬೇಕು ಎಂದು ನಿಮಗೆ ಗೊಂದಲವಾಗಿದ್ದರೆ ಆಗ ನೀವು ಈ ಲೇಖನವನ್ನು ಓದಲೇಬೇಕು. ಯಾಕೆಂದರೆ ಇಲ್ಲಿ ತಾಯಿಗೆ ಉಡುಗೊರೆ ನೀಡುವ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡಲಿದ್ದೇವೆ. ಇದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ಮದರ್ಸ್ ಡೇಗೆಂದೇ ತಯಾರಿಸಿದ ಉಡುಗೊರೆ
ಇಂದಿನ ದಿನಗಳಲ್ಲಿ ಪ್ರತಿಯೊಂದು ದಿನಕ್ಕೂ ಅದರದ್ದೇ ಆಗಿರುವಂತಹ ಕೆಲವೊಂದು ಉಡುಗೊರೆಯನ್ನು ತಯಾರಿ ಮಾಡಲಾಗುತ್ತದೆ. ಇದನ್ನು ಆ ವಿಶೇಷ ದಿನಕ್ಕೆ ತಯಾರಿಸುವರು. ಆನ್ ಲೈನ್ ನಲ್ಲಿ ಹಲವಾರು ರೀತಿಯ ಆಯ್ಕೆಗಳು ಲಭ್ಯವಿದೆ. ತಾಯಿಗೆ ನೀವು ಇಂತಹ ಉಡುಗೊರೆ ನೀಡಬಹುದು. ಮನೆಯಲ್ಲೇ ತಯಾರಿಸಿದ ಉಡುಗೊರೆ ಖರೀದಿ ಮಾಡಿ. ಈ ಉಡುಗೊರೆಯು ಸ್ವಲ್ಪ ಅಗ್ಗವಾಗಿರುವುದು.

ಸುತ್ತಾಡಲು ಕರೆದುಕೊಂಡು ಹೋಗಿ
ನಿಮ್ಮ ತಾಯಿಯನ್ನು ಒಂದು ದಿನ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಿ. ಇದಕ್ಕಾಗಿ ನೀವು ಒಂದು ರೀತಿಯ ಯೋಜನೆ ತಯಾರಿಸಿಕೊಳ್ಳಿ ಮತ್ತು ಅಲ್ಲಿಗೆ ಕರೆದುಕೊಂಡು ಹೋದರೆ ಆಗ ತಾಯಿ ಸಂತೋಷಗೊಳ್ಳುವರು. ತಾಯಿಯು ಎಲ್ಲಾ ರೀತಿಯ ಚಿಂತೆಯನ್ನು ಬದಿಗಿಟ್ಟು ಆ ದಿನವನ್ನು ಆನಂದಿಸಲಿ. ಆ ದಿನವನ್ನು ನೀವು ಸಂಪೂರ್ಣವಾಗಿ ಆನಂದಿಸಿ.

ಸಿನಿಮಾಗೆ ಕರೆದುಕೊಂಡು ಹೋಗಿ
ಸಿನಿಮಾ ನೋಡಲು ಪ್ರತಿಯೊಬ್ಬರಿಗೂ ಇಷ್ಟವಿರುವುದು. ಸ್ನೇಹಿತರೊಂದಿಗೆ ಸಿನಿಮಾ ನೋಡುವುದು ನಿಮಗೆ ಇಷ್ಟವಿರಬಹುದು. ಆದರೆ ಮದರ್ಸ್ ಡೇ ದಿನ ನೀವು ತಾಯಿಯನ್ನು ಸಿನಿಮಾಗೆ ಕರೆದುಕೊಂಡು ಹೋಗಿ. ಹೊಸ ಸಿನಿಮಾ ನೋಡಿ ಮತ್ತು ಆ ದಿನವನ್ನು ಶ್ರೇಷ್ಠವಾಗಿ ಕಳೆಯಿರಿ. ಆಕೆಗೆ ಇಷ್ಟವಾಗಿರುವಂತಹ ಹಳೆ ಸಿನಿಮಾವನ್ನು ಮನೆಯಲ್ಲೇ ಕುಳಿತುಕೊಂಡು ನೋಡಬಹುದು.

ಒಂದು ದಿನ ರಜೆ ನೀಡಿ
ಇದು ಯಾವುದೇ ಖರ್ಚು ಇಲ್ಲದೆ ನೀಡುವಂತಹ ಉಡುಗೊರೆ ಆಗಿದೆ. ನಿಮ್ಮ ತಾಯಿಗೆ ಆರಾಮ ಮಾಡಲು ಹೇಳಿ ಮತ್ತು ಎಲ್ಲಾ ಕೆಲಸಗಳನ್ನು ನೀವು ಮಾಡಿ. ಈ ದಿನ ನೀವು ಎಲ್ಲಾ ಕೆಲಸಗಳನ್ನು ನಿಭಾಯಿಸಿ ಮತ್ತು ತಾಯಿಗೆ ಸಂಪೂರ್ಣವಾಗಿ ಆರಾಮ ಮಾಡಲು ಬಿಡಿ. ಆಕೆಗೆ ಇಷ್ಟವಾಗಿರುವ ಅಡುಗೆ ಕೂಡ ಮಾಡಿ ಬಡಿಸಿದರೆ ಆಗ ತುಂಬಾ ಖುಷಿ ಪಡುವರು. ನೀವು ಆ ದಿನದ ಎಲ್ಲಾ ಜವಾಬ್ದಾರಿ ಯನ್ನು ಪಡೆಯುವ ಮೂಲಕ ಆಕೆಗೆ ಸಂಪೂರ್ಣ ವಿಶ್ರಾಂತಿ ನೀಡಿ.

ಸ್ಪಾಗೆ ಕರೆದುಕೊಂಡು ಹೋಗಿ
ವರ್ಷವಿಡಿ ರಜೆಯಿಲ್ಲದೆ ದುಡಿಯುವಂತಹ ತಾಯಿಯನ್ನು ನೀವು ಒಂದು ದಿನ ಸ್ಪಾಗೆ ಕರೆದುಕೊಂಡು ಹೋಗಿ ಮಸಾಜ್ ಮಾಡಿಸಿ. ಇದರಿಂದ ಆಕೆಯ ದಣಿದಿರುವ ದೇಹಕ್ಕೆ ವಿಶ್ರಾಂತಿ ಸಿಗುವುದು ಮತ್ತು ಒತ್ತಡ ನಿವಾರಣೆ ಆಗುವುದು. ತಾಯಿಗಾಗಿ ಸ್ಪಾಗೆ ನೀವು ಕರೆದುಕೊಂಡು ಹೋಗಿ. ಇದರಿಂದ ಆಕೆಯ ದೇಹದ ದಣಿವು ತಣಿಯುವುದು. ಇದನ್ನು ಆಕೆ ತುಂಬಾ ವಿಶೇಷವಾಗಿ ಆನಂದಿಸುವರು. ಸ್ಪಾ ಬಗ್ಗೆ ಕುತೂಹಲ ಕೂಡ ಇದ್ದ ಆಕೆಗೆ ಇದರಿಂದ ಸಂತೋಷ ಕೂಡ ಸಿಗುವುದು.



Click it and Unblock the Notifications
