Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಅಡುಗೆಯ ರುಚಿಗೆ ಆಕೆ ಫುಲ್ ಫಿದಾ ಆಗಿಬಿಡಬೇಕು!
ಮಹಾಭಾರತದಲ್ಲಿ ಭೀಮ ಮತ್ತು ನಳ ಮಹಾರಾಜರ ಕಥೆಯನ್ನು ನೀವು ಕೇಳಿರಬಹುದು. ಭೀಮ ಬಾಹುಬಲಕ್ಕೆ ಎಷ್ಟು ಹೆಸರುವಾಸಿಯೋ, ಆತನ ಭೀಮಪಾಕಕ್ಕು ಸಹ ಅಷ್ಟೇ ಹೆಸರುವಾಸಿ. ಇನ್ನು ಬೆಂಕಿ ಮತ್ತು ಪಾತ್ರೆಗಳ ಸಹಾಯವಿಲ್ಲದಿದ್ದರು ರುಚಿಕರವಾದ ಅಡುಗೆಯನ್ನು ತಯಾರಿಸುತ್ತಿದ್ದ ನಳ ಮಹಾರಾಜನ ನಳ ಪಾಕದ ಹೆಸರನ್ನು ಕೇಳದಿದ್ದಲ್ಲಿ ತಪ್ಪಾಗುತ್ತದೆ ಬಿಡಿ. ಆ ಮಟ್ಟಿಗೆ ನಮ್ಮ ನಳನ ನಳಪಾಕದ ಮಹಿಮೆ ಎಲ್ಲೆಡೆ ಹಬ್ಬಿದೆ.
ಇಂದಿಗು ತಕ್ಷಣ ರುಚಿಕರವಾದ ಅಡುಗೆ ಮಾಡಿದರೆ, ಅದನ್ನು ನಳಪಾಕ ಎಂದು ಕರೆಯುತ್ತಾರೆ!. ಅರೆ ಇವರ ಕಥೆ, ನಮಗೇಕೆ ಎಂದುಕೊಳ್ಳಬೇಡಿ. ನಿಮ್ಮ ಶ್ರೀಮತಿ ಆಫೀಸಿನಿಂದ ಕಚೇರಿಗೆ ಬರುವ ಹೊತ್ತಿಗೆ ಆಕೆಗೆ ಇಷ್ಟವಾಗುವಂತೆ ಕಾಫಿ ಅಥವಾ ಟೀ ಮತ್ತು ಸ್ವಲ್ಪ ಸ್ನ್ಯಾಕ್ಸ್ ಮಾಡಿಟ್ಟರೆ ಆಕೆಗೆ ಎಷ್ಟು ಖುಷಿಯಾಗುವುದಿಲ್ಲ?
ಸಂಜೆಗೆ ನಿಮಗೆ ಬರುವ ರುಚಿಕರವಾದ ಅಡುಗೆಯನ್ನು ಮಾಡಿಟ್ಟರಂತೂ ಆಕೆಯ ಸಂತೋಷಕ್ಕೆ ಪಾರವೇ ಇರುವುದಿಲ್ಲ. ತನ್ನ ಹೆಂಡತಿಯನ್ನು ಒಲಿಸಿಕೊಳ್ಳುವುದಕ್ಕೆ ಅಡುಗೆ ಕಲೆಯು ಸಹ ಗಂಡಸಿನ ನೆರವಿಗೆ ಬರುತ್ತದೆ. ಬನ್ನಿ ಗಂಡಸು ಈ ನಿಟ್ಟಿನಲ್ಲಿ ಏನೆಲ್ಲಾ ತಿಳಿದುಕೊಂಡಿದ್ದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳೋಣ...

ಕೆಲವು ತಂತ್ರ ಮತ್ತು ಉಪಕರಣಗಳ ಕುರಿತು ತಿಳಿದುಕೊಳ್ಳಿ
ಅಡುಗೆ ಮನೆಯಲ್ಲಿನ ಮಿಕ್ಸರ್, ಗ್ರೈಂಡರ್, ಓವೆನ್, ಇಂಡಕ್ಷನ್ ಸ್ಟವ್ ಇತ್ಯಾದಿಗಳ ಬಗ್ಗೆ ಕನಿಷ್ಠ ಜ್ಞಾನವನ್ನು ಸಂಪಾದಿಸಿಕೊಳ್ಳಿ. ಪ್ಯಾನ್, ಚಾಕು, ತರಕಾರಿ ಕತ್ತರಿಸುವ ಸಣ್ಣ ಯಂತ್ರಗಳ ಬಗ್ಗೆ ಜ್ಞಾನವು ನಿಮ್ಮ ಉಪಯೋಗಕ್ಕೆ ಬರುತ್ತವೆ. ಇವುಗಳನ್ನು ಹೇಗೆ ಬಳಸುವುದು ಎಂದು ನಿಮಗೆ ಗೊತ್ತಾದಾಗ, ನೀವು ನಿಮಗೆ ದೊರೆಯುವ ಸಮಯಾವಕಾಶದಲ್ಲಿ, ಒಂದು ಒಳ್ಳೆಯ ಅಡುಗೆಯನ್ನು ಮಾಡಬಹುದು.

ನಿಮ್ಮದೇ ಆದ ಒಂದು ವಿಶಿಷ್ಟ ಅಡುಗೆಯನ್ನು ಮಾಡಿ
ಒಂದು ಅಡುಗೆ ನಿಮಗೆ ಒಲಿದಿರುತ್ತದೆ. ಅದನ್ನು ಮಾಡುವುದನ್ನು ನೀವು ಕಲಿಯಿರಿ. ಅದಕ್ಕೆ ನಿಮ್ಮದೇ ಆದ ಸ್ಪರ್ಶವನ್ನು ನೀಡಿ. ಇಂತಹ ಅಡುಗೆಗಳು ನಿಮ್ಮ ಹೆಂಡತಿಯನ್ನು ಮೆಚ್ಚಿಸುತ್ತವೆ. ಹಾಗೆಂದು ಇದು ಒಬ್ಬ ಶೆಫ್ ಮಾಡಿದ ರೀತಿ ಇರಬೇಕೆಂದೇನಿಲ್ಲ, ಅಲ್ಲದೆ ಪ್ರಯೋಗಾತ್ಮಕವಾಗಿ ಸಹ ಇರಬಾರದು. ನಿಮ್ಮ ಹೆಂಡತಿ ನಿಮ್ಮ ಅಡುಗೆ ಪ್ರಯೋಗವನ್ನು ಪರೀಕ್ಷಿಸುವ ಕೆಲಸ ಮಾಡುತ್ತಿಲ್ಲ. ನಿಮಗೆ ಚೆನ್ನಾಗಿ ಬರುವಂತಹ, ತಯಾರಿಸಲು ನಿಮಗೆ ಒಳ್ಳೆಯ ಆತ್ಮ ವಿಶ್ವಾಸವನ್ನು ನೀಡುವಂತಹ ಅಡುಗೆಯನ್ನು ತಯಾರಿಸಿ. ಇದಕ್ಕಾಗೊ ಮೊದಲೇ ಇದನ್ನು ತಯಾರಿಸುವ ಕಲೆಯನ್ನು ತಿಳಿದುಕೊಂಡಿರಿ.

ಬಡಿಸಿದರೆ ಹಸಿವಿರಬಾರದು
ಸರಿ ನೀವು ಅಡುಗೆ ಮಾಡುವುದರಲ್ಲಿ ಪರಿಣತಿಯನ್ನು ಪಡೆದಿದ್ದೀರಿ ಎಂದು ಭಾವಿಸಿ. ಹಾಗೆಂದು ನೀವು ಮಾಡಿದ ಅಡುಗೆಯನ್ನು ಸುಮ್ಮನೆ ಬಡಿಸಬೇಡಿ. ಅದಕ್ಕೆ ಒಂದು ರೊಮ್ಯಾಂಟಿಕ್ ಸ್ಪರ್ಶವನ್ನು ನೀಡಿ. ರಾತ್ರಿ ಹೊತ್ತು ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿ. ಬೆಳಗ್ಗೆ ಹೊತ್ತು ಕಾಫಿ ಟೀಯನ್ನು ಸಹ ಒಂದು ಅದ್ಭುತವಾದ ಕಪ್‌ನಲ್ಲಿ ನೀಡಿ. ಇದರಲ್ಲಿ ನಿಮ್ಮ ಪ್ರೀತಿ ವ್ಯಕ್ತವಾಗಲಿ. ನೀವು ಅಡುಗೆ ಮಾಡಿದಾಗ ಬಡಿಸಲು ಕೆಲವು ವಿಶೇಷವಾದ ಪಾತ್ರೆಗಳನ್ನು ತಂದು ಇರಿಸಿಕೊಳ್ಳಿ. ಅದಕ್ಕಾಗಿ ಮೊದಲೆ ಸಿದ್ಧರಾಗಿರಿ.

ಅಡುಗೆ ಮಾಡಲು ಸಿದ್ಧರಾಗಿರಿ
ನೀವು ಅಡುಗೆ ಮಾಡಿ ಬಡಿಸಿದ ನಂತರ ನಿಮ್ಮ ಕೆಲಸ ಮುಗಿಯಿತು ಎಂದು ಭಾವಿಸಬೇಡಿ. ನಿಮ್ಮಾಕೆ ಅಡುಗೆ ಮಾಡುವಾಗ ಸ್ವಲ್ಪ ಸಹಾಯವನ್ನು ಮಾಡಿ. ಆಕೆ ನಿಮ್ಮ ಬಳಿ ಸಹಾಯವನ್ನು ಕೇಳಲಿಲ್ಲವಾದರು ಸರಿ, ನಿಮ್ಮ ಕೈಯಲ್ಲಾದ ಸಹಾಯವನ್ನು ನೀವು ಆಕೆಗೆ ನೀಡಿ. ಇದರಿಂದ ಆಕೆಗೆ ಅನುಕೂಲವಾಗಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಡುಗೆ ಮಾಡಲು ಸಿದ್ಧರಾಗಿರಿ
ಪಾತ್ರೆಗಳನ್ನು ಜೋಡಿಸಲು ಮತ್ತು ಒರೆಸಿಡಲು ಸಹಾಯ ಮಾಡಿ. ಇದರಿಂದ ನಿಮ್ಮ ಮೇಲೆ ಆಕೆಗೆ ಪ್ರೀತಿ ಇನ್ನೂ ಹೆಚ್ಚಾಗಬಹುದು. ಇದರಿಂದ ನೀವು ಆಕೆಗೆ ಎಷ್ಟು ಕಾಳಜಿಯನ್ನು ತೋರಿಸುತ್ತಿದ್ದೀರಿ ಎಂದು ಅರ್ಥವಾಗುತ್ತದೆ.



Click it and Unblock the Notifications
