Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಮಹಿಳೆಯರು ಇಷ್ಟಪಡದೇ ಇರುವ ಪುರುಷರ ಹವ್ಯಾಸಗಳು
ಪುರುಷರನ್ನು ಮಹಿಳೆಯರು ಎಷ್ಟೇ ಇಷ್ಟಪಟ್ಟರೂ, ಪ್ರೀತಿಸಿದರೂ ಪುರುಷರ ಕೆಲವೊಂದು ಕಿರಿಕಿರಿ ಉಂಟುಮಾಡುವ ಅಭ್ಯಾಸಗಳು ಪುರುಷ ಸಹಜ ಗುರುತುಗಳೆನ್ನಬಹುದು. ಪುರುಷರ ಕೆಲವೊಂದು ಸ್ವಭಾವ ಮಹಿಳೆಯರಿಗೆ ಕಿರಿಕಿರಿ ಉಂಟುಮಾಡುತ್ತದೆ. ಎಲ್ಲಾ ಮಹಿಳೆಯರು ಒಂದೇ ರೀತಿ ಇರುವುದಿಲ್ಲ, ಹಾಗಾಗಿ ಆಕೆಗೆ ಯಾವೆಲ್ಲಾ ಅಭ್ಯಾಸಗಳು ಕಿರಿಕಿರಿ ಉಂಟು ಮಾಡುತ್ತದೆ ಎಂದು ಅರಿತುಕೊಂಡು ಅವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡೆಗಣಿಸಬಹುದು.
ಈ ರೀತಿ ನೀವು ಮುಂದೆ ಉದ್ಭವಿಸಬಹುದಾದ ಯಾವುದೇ ರೀತಿಯ ಸಂಘರ್ಷ ತಪ್ಪಿಸಬಹುದು. ಕೆಲವೊಮ್ಮೆ ನಿಮಗೆ ಸ್ಪಷ್ಟವೆಂದು ತೋರುವ ವಿಷಯಗಳಿಂದ ಆಕೆಗೆ ಕಿರಿಕಿರಿಯಾಗಬಹುದು. ದೀರ್ಘಕಾಲದ ಸಂಬಂಧಕ್ಕೆ ಆಕೆಯ ಭಾವನೆಗಳನ್ನು ಗೌರವಿಸುವುದರೊಂದಿಗೆ ಆಕೆಗೆ ಆತ್ಮೀಯ ಮತ್ತು ಹತ್ತಿರವಾಗಬಹುದು.
ಮಹಿಳೆಯರನ್ನು ಕಿರಕಿರಿ ಉಂಟು ಮಾಡುವ ಕೆಲವೊಂದು ಅಭ್ಯಾಸಗಳಲ್ಲಿ ಸೆಕ್ಸ್ ಬಳಿಕ ನಿದ್ದೆಗೆ ಜಾರುವುದು, ಮಾತನ್ನು ಕೇಳದಿರುವುದು, ಭಾವೋದ್ರೇಕ ಮತ್ತು ಜೋರಾಗಿ ನಗುವುದು, ಇತ್ಯಾದಿ. ಇಂತಹ ಕೆಲವೊಂದು ಅಭ್ಯಾಸಗಳು ಪುರುಷರಿಗೆ ಜೀವನದ ಶೈಲಿಯಾಗಿರಬಹುದು. ಆದರೆ ಇದು ಮಹಿಳೆಯರಿಗೆ ಕಿರಿಕಿರಿಯಾಗುತ್ತದೆ. ಸಂಬಂಧದ ದೃಷ್ಟಿಯಿಂದ ನಿಮ್ಮ ಅಭ್ಯಾಸದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ತುಂಬಾ ಮುಖ್ಯ. ದುಂದುವೆಚ್ಚ ಮಾಡುವ ಪತ್ನಿಯನ್ನು ಹೀಗೆ ಸಂಭಾಳಿಸಿ

ಮನೆಗೆಲಸ ತಪ್ಪಿಸುವುದು
ಪುರುಷರು ಯಾವಾಗಲೂ ತಮಗೆ ಒಪ್ಪಿಸಿರುವ ಮನೆಗೆಲಸ ತಪ್ಪಿಸಲು ಹಲವಾರು ದಾರಿಗಳನ್ನು ಹುಡುಕುತ್ತಿರುತ್ತಾರೆ. ಇದರಿಂದ ನೀವು ತಪ್ಪಿಸಬಹುದೆಂದು ಭಾವಿಸಿರಬಹುದು. ಆದರೆ ಇದರಿಂದ ಮನೆಯಲ್ಲಿ ದೊಡ್ಡ ಬಿರುಗಾಳಿ ಏಳಬಹುದು.
ಶೇವಿಂಗ್ ಬಳಿಕದ ಅವ್ಯವಸ್ಥೆ
ಶೇವಿಂಗ್ ಮಾಡಿದ ಬಳಿಕ ಕೂದಲುಗಳನ್ನು ಸಿಂಕ್‌ನಲ್ಲಿ ಹಾಗೆ ಬಿಟ್ಟುಬಿಡುವ ಅಭ್ಯಾಸದವರಾಗಿದ್ದರೆ ಇದನ್ನು ಬದಲಾಯಿಸಲು ಸಮಯ ಬಂದಿದೆ. ಈ ಅಭ್ಯಾಸವನ್ನು ಮಹಿಳೆಯರು ತುಂಬಾ ದ್ವೇಷಿಸುತ್ತಾರೆ. ಆಲಿಸುವುದು ಮಹಿಳೆಯರು ಮಾತನಾಡಲು ಹೆಚ್ಚಿಗೆ ಇಷ್ಟಪಡುವ ಕಾರಣ ಪುರುಷರು ತಮ್ಮ ಮಾತನ್ನು ಆಲಿಸಬೇಕೆಂದು ಮಹಿಳೆಯರು ಬಯಸುತ್ತಾರೆ. ಆಲಿಸುವುದನ್ನು ನಿಲ್ಲಿಸಲು ಯಾವುದೇ ಸಭ್ಯತೆಯಿಲ್ಲ. ಆಲಿಸುವುದನ್ನು ನೀವು ನಿಲ್ಲಿಸಿದ ತಕ್ಷಣ ಸಮಸ್ಯೆ ಆರಂಭವಾಗುತ್ತದೆ.
ಕಳಪೆ ಶೈಲಿ
ಪುರುಷರೊಂದಿಗೆ ಹೊರಗೆ ಹೋಗುವಾಗ ಮಹಿಳೆಯರು ಶೃಂಗಾರ ಮಾಡಲು ಕೆಲವು ಗಂಟೆಗಳೇ ಬೇಕಾಗುತ್ತದೆ. ಆದರೆ ಪುರುಷರು ಕೆಲವೇ ನಿಮಿಷಗಳಲ್ಲಿ ತಯಾರಾಗುತ್ತಾರೆ ಮತ್ತು ಬಟ್ಟೆ ಸರಿಹೊಂದುತ್ತದೆಯಾ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ಮಹಿಳೆಯರಲ್ಲಿ ಸಿಟ್ಟನ್ನು ಉಂಟುಮಾಡುತ್ತದೆ.
ಕಡಿಮೆ ಮಾತನಾಡುವುದು
ಮಹಿಳೆಯರು ಸಾಮಾನ್ಯವಾಗಿ ಹೆಚ್ಚು ಮಾತನಾಡುತ್ತಾರೆ. ಆದರೆ ಪುರುಷರು ಕಡಿಮೆ ಮತ್ತು ಸ್ಪಷ್ಟವಾಗಿ ಮಾತನಾಡಲು ಬಯಸುತ್ತಾರೆ. ಆಕೆಯ ಮಾತುಗಳಿಗೆ ಸಣ್ಣ ಪ್ರತಿಕ್ರಿಯೆ ನೀಡಿದರೆ ಕೋಪಗೊಂಡು ನಿಮ್ಮಿಬ್ಬರ ಸಂಬಂಧಕ್ಕೆ ತೊಂದರೆಯಾಗಬಹುದು.
ಸೆಕ್ಸ್ ಬಳಿಕ ನಿದ್ದೆಗೆ ಜಾರುವುದು
ಸೆಕ್ಸ್ ಎನ್ನುವುದು ನಿಮ್ಮ ಅನ್ಯೋನ್ಯ ಸಂಬಂಧದ ಒಂದು ಭಾಗ. ಇದರಿಂದ ಸೆಕ್ಸ್ ಬಳಿಕ ನಿದ್ದೆಗೆ ಜಾರುವುದರಿಂದ ಮಹಿಳೆಗೆ ಕಿರಿಕಿರಿಯಾಗಬಹುದು. ಯಾಕೆಂದರೆ ಆಕೆ ಹೆಚ್ಚಿನ ರೋಮ್ಯಾನ್ಸ್ ಅನ್ನು ನಿರೀಕ್ಷಿಸುತ್ತಿರಬಹುದು.



Click it and Unblock the Notifications
