Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ದುಂದುವೆಚ್ಚ ಮಾಡುವ ಪತ್ನಿಯನ್ನು ಹೀಗೆ ಸಂಭಾಳಿಸಿ
ಹೆಂಗಸರು ಅತಿ ಜಿಪುಣರಾಗಿರುತ್ತಾರೆ ಇಲ್ಲವೆ ದುಂದುವೆಚ್ಚ ಮಾಡುವವರಾಗಿರುತ್ತಾರೆ. ಇದೆಲ್ಲವೂ ಆಕೆ ಹಣವನ್ನು ಮತ್ತು ತನ್ನ ಅಗತ್ಯಗಳನ್ನು ಹೇಗೆ ಅರ್ಥೈಸಿಕೊಂಡಿದ್ದಾಳೆ ಎನ್ನುವುದರ ಮೇಲೆ ಅವಲಂಭಿತವಾಗಿದೆ. ಗಂಡಸರು ಸಾಮಾನ್ಯವಾಗಿ ಮದುವೆಯಾಗಿ ತಮ್ಮ ಜೇಬು ಖಾಲಿಯಾಯಿತು ಎಂದು ಹೇಳುವುದನ್ನು ಕೇಳಿರುತ್ತೇವೆ. ದುಂದುವೆಚ್ಚ ಮಾಡುವ ಹೆಂಡತಿಯಿದ್ದರೆ ಅದು ನಿಜಕ್ಕೂ ಸಮಸ್ಯೆ.
ಹೆಂಗಸರಿಗೆ ಶಾಪಿಂಗ್ ಮಾಡುವುದು ಇಷ್ಟ. ನೀವು ತಡೆಯದೆ ಹೋದರೆ ಅವರು ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸುವುದಿಲ್ಲ. ಬಹಳಷ್ಟು ಗಂಡಸರು ತಮ್ಮ ಹೆಂಡತಿಯರನ್ನು ದುಂದುವೆಚ್ಚ ಮಾಡದಂತೆ ತಡೆಯಲು ಹೋಗುವುದಿಲ್ಲ ಅಥವ ಅನಾವಶ್ಯಕ ವಸ್ತುಗಳನ್ನು ಕೊಳ್ಳುವುದಕ್ಕೆ ಬೇಡ ಎಂದು ಹೇಳುವುದಿಲ್ಲ. ನಿಮ್ಮ ಹೆಂಡತಿ ಹೀಗೆ ದುಂದು ವೆಚ್ಚ ಮಾಡುವವಳಾಗಿದ್ದರೆ ಆಕೆಯನ್ನು ಬದಲಾಯಿಲಸಲು ಇಲ್ಲಿವೆ ಕೆಲವು ಮಾರ್ಗಗಳು.

ಆಕೆಯೊಂದಿಗೆ ಚರ್ಚಿಸಿ: ದುಂದುವೆಚ್ಚವನ್ನು ತಡೆಯಲು ಇದೊಂದು ಒಳ್ಳೆಯ ಮಾರ್ಗ. ನಿಮ್ಮ ಹೆಂಡತಿ ಅನಾವಶ್ಯಕವಾಗಿ ಖರ್ಚು ಮಾಡುತ್ತಿದ್ದಾಳೆ ಎಂದು ನಿಮಗನ್ನಿಸಿದಾಗ ಆಕೆಯೊಂದಿಗೆ ಈ ಕುರಿತು ಮಾತನಾಡಿ. ಆಕೆಗೆ ಈ ಖರ್ಚಿನಿಂದಾಗಿ ಉಳಿತಾಯಕ್ಕೆ ಮತ್ತು ಆರ್ಥಿಕತೆಗೆ ಹೇಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿ. ಆಕೆಗೆ ಉಳಿತಾಯದ ಮಹತ್ವ ಅರ್ಥವಾದರೆ ಖರ್ಚು ಮಾಡುವುದನ್ನು ನಿಲ್ಲಿಸುತ್ತಾಳೆ.
ನಿಮ್ಮ ಉಳಿತಾಯ ಅಥವ ಸಂಬಳದ ಬಗ್ಗೆ ಆಕೆಗೆ ಹೇಳದಿರಿ: ನಿಮ್ಮ ಹೆಂಡತಿ ಬಹಳ ಸ್ವಾರ್ಥಿಯಾಗಿದ್ದು ತನಗೆ ಬೇಕಾದದ್ದನ್ನು ಹೇಗಾದರೂ ಗಳಿಸಿಕೊಳ್ಳುವವಳಾಗಿದ್ದರೆ ನಿಮ್ಮ ಉಳಿತಾಯ ಖಾತೆಯನ್ನು ಆಕೆಯಿಂದ ಮುಚ್ಚಿಡುವುದು ಬಹಳ ಒಳ್ಳೆಯದು. ನಿಮ್ಮ ಹತ್ತಿರ ಹಣವಿದೆ ಎಂದು ತಿಳಿದರೆ ಆಕೆ ಇರುವ ಹಣವನ್ನು ನೀರಿನಂತೆ ಖರ್ಚು ಮಾಡಿಬಿಡುತ್ತಾಳೆ. ಆದ್ದರಿಂದ ನಿಮ್ಮ ಉಳಿತಾಯ ಮತ್ತು ಸಂಬಳದ ವಿವರಗಳನ್ನು ನಿಮ್ಮ ಹೆಂಡತಿಯಿಂದ ಮುಚ್ಚಿಡಿ.
ಭವಿಷ್ಯದ ಬಗ್ಗೆ ಯೋಜನೆಗಳಿರಲಿ: ಹೆಂಡತಿಯರು ದುಡ್ಡು ಖರ್ಚು ಮಾಡಿಬಿಡಬಹುದು. ಇದನ್ನು ನಿಯಂತ್ರಣಕ್ಕೆ ತರಲು ಇರುವ ಒಂದು ಮಾರ್ಗವೆಂದರೆ ಭವಿಷ್ಯಕ್ಕೆ ಹಣವನ್ನು ಉಳಿಸುವ ಯೋಜನೆಗಳು, ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಉಳಿಸುವುದು. ಇವೆಲ್ಲವೂ ಆಕೆಗೆ ಹಣದ ಮಹತ್ವವನ್ನು ಅರಿಯುವಂತೆ ಮಾಡುತ್ತದೆ.
ತಡಮಾಡಿ: ನಿಮ್ಮ ಹೆಂಡತಿ ಏನನ್ನಾದರೂ ಕೊಡಿಸುವಂತೆ ಕೇಳಿದರೆ ಅದನ್ನು ತಕ್ಷಣ ಕೊಡಿಸಬೇಡಿ. ತಡಮಾಡಿ. ಇದರಿಂದ ನಿಮ್ಮ ಮತ್ತು ಆಕೆಯ ನಡುವೆ ಜಗಳವಾಗಬಹುದು ಆದರೆ ಅದು ಮರೆತು ಹೋಗುತ್ತದೆ.
ಈ ಮಾರ್ಗಗಳನ್ನು ಬಳಸಿ ನಿಮ್ಮ ದುಂದುವೆಚ್ಚ ಮಾಡುವ ಹೆಂಡತಿಯನ್ನು ಉಳಿತಾಯಮಾಡುವ ಹೆಂಡತಿಯಾಗಿ ಪರಿವರ್ತಿಸಿ.



Click it and Unblock the Notifications
