Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಂಗಾತಿಯನ್ನು ತಿಳಿಯಲು ಕೆಲವೊಂದು ಟಿಪ್ಸ್
ಭಾರತದಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಮದುವೆಯೆಂದರೆ ಅದು ಗುರುಹಿರಿಯರು ನಿಶ್ಚಯಿಸಿ ಮಾಡಿರುವಂತಹ ಅರೇಂಜ್ಡ್ ಮ್ಯಾರೇಜ್. ಇಂಟರ್ ನೆಟ್ ಯುಗದಲ್ಲೂ ಭಾರತದಲ್ಲಿ ಅರೇಂಜ್ಡ್ ಮ್ಯಾರೇಜ್ ನಡೆಯುತ್ತಿದೆ. ಪರಸ್ಪರದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲದೆ ಜತೆಯಾಗಿ ಬಾಳುವುದೇ ಅರೇಂಜ್ಡ್ ಮ್ಯಾರೇಜ್. ಹೆತ್ತವರು ಹುಡುಕಿದಂತಹ ಹುಡುಗನೊಂದಿಗೆ ಒಂದೆರಡು ಭೇಟಿಯಲ್ಲೇ ಜೀವನದ ನಿರ್ಧಾರವಾಗಿ ಬಿಡುತ್ತದೆ. ಮದುವೆಗೆ ಮೊದಲು ಸಂಗಾತಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಿಲ್ಲ.
ಅರೇಂಜ್ಡ್ ಮ್ಯಾರೇಜ್ ಅಂದರೆ ಅದು ಲಾಟರಿ ಇದ್ದಂತೆ. ನೀವು ಅದೃಷ್ಟವಂತರಾಗಿದ್ದರೆ ನಿಮ್ಮ ಸಂಗಾತಿ ನೀವು ಕನಸು ಕಂಡಂತೆ ಇರಬಹುದು. ಆದರೆ ನಿಮ್ಮ ಅದೃಷ್ಟ ಚೆನ್ನಾಗಿಲ್ಲವೆಂದಾದರೆ ನೀವು ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಬೇಕಾಗುತ್ತದೆ. ಕೆಲವೊಂದು ಸಲ ಅಪರಿಚಿತರಾಗಿರುವ ಕಾರಣ ಮದುವೆ ಬಳಿಕ ಕುತೂಹಲವಿರುತ್ತದೆ. ಪರಸ್ಪರರನ್ನು ತಿಳಿದುಕೊಂಡ ಬಳಿಕ ನಿಧಾನವಾಗಿ ಪ್ರೀತಿ ಆರಂಭವಾಗುತ್ತದೆ. ಅರೇಂಜ್ಡ್ ಮ್ಯಾರೇಜ್ ಗಳಲ್ಲಿ ತಮ್ಮ ಸಂಗಾತಿಯ ಬೇಕುಬೇಡಗಳನ್ನು ತಿಳಿದುಕೊಳ್ಳುವುದೇ ದೊಡ್ಡ ಸವಾಲು. ಇದು ತುಂಬಾ ಕಠಿಣವೇನಲ್ಲ. ಆದರೆ ಅಷ್ಟು ಸುಲಭವೂ ಅಲ್ಲ. ಅರೇಂಜ್ಡ್ ಮ್ಯಾರೇಜ್ ನಲ್ಲಿ ನಿಮ್ಮ ಸಂಗಾತಿಗೆ ತಿಳಿಯದಂತೆ ನಿಮ್ಮ ಆತನ ಬಗ್ಗೆ ಶೀಘ್ರವಾಗಿ ತಿಳಿದುಕೊಳ್ಳುವ ಕೆಲವೊಂದು ವಿಧಾನಗಳಿವೆ.

1. ಸ್ನೇಹಿತರು
ಅರೇಂಜ್ಡ್ ಮ್ಯಾರೇಜ್ ನಲ್ಲಿ ಹಲವಾರು ಗುಟ್ಟುಗಳನ್ನು ಸ್ನೇಹಿತರ ಮೂಲಕ ತಿಳಿದುಕೊಳ್ಳಬಹುದು. ನಿಮ್ಮ ಸಂಗಾತಿಯ ವ್ಯಕ್ತಿತ್ವದ ಬಗ್ಗೆ ಸ್ನೇಹಿತರಿಗೆ ಚೆನ್ನಾಗಿ ತಿಳಿದಿರುತ್ತದೆ. ಅವರಿಗೆ ನಿಮ್ಮ ಸಂಗಾತಿಯ ಬೇಕುಬೇಡಗಳು, ಕಾಲೇಜಿನ ಗುಟ್ಟು ಮತ್ತು ಕೆಲವೊಂದು ಸ್ಮರಣೀಯ ಕ್ಷಣಗಳ ಬಗ್ಗೆ ತಿಳಿಯಬಹುದು. ಸ್ನೇಹಿತರ ಮೂಲಕ ಅವರ ಇಷ್ಟದ ಕಾಲಕಳೆಯುವ ಸ್ಥಳ, ಹಿಂದಿನ ಸಂಬಂಧ ಮತ್ತು ಎಷ್ಟು ಮಂದಿಯ ಮೇಲೆ ಅವರಿಗೆ ಮೋಹವಿತ್ತು ಎಂದು ತಿಳಿಯಬಹುದು. ನಿಮ್ಮ ಸಂಗಾತಿಯ ಸ್ನೇಹಿತರ ಜತೆ ಸಂಪರ್ಕದಲ್ಲಿದ್ದು, ಅವರೊಂದಿಗೆ ಮಾತನಾಡಿ. ಸ್ನೇಹಿತರ ಮೂಲಕ ನಿಮ್ಮ ಅರೇಂಜ್ಡ್ ಮ್ಯಾರೇಜ್ ನ ಸಂಗಾತಿ ಬಗ್ಗೆ ತಿಳಿದುಕೊಂಡು ಸಂತಸಪಡಬಹುದು. ನಿಮ್ಮ ಸಂಗಾತಿಗೆ ಆ ರೀತಿಯ ಸ್ನೇಹಿತರು ಇರದಿದ್ದರೆ ನೀವು ವಿಚಿತ್ರ ವ್ಯಕ್ತಿಯೊಂದಿಗೆ ಬಾಳುತ್ತಿದ್ದೀರಿ ಎಂದರ್ಥ.
2. ಒಡಹುಟ್ಟಿದವರು
ಮನೆಯಲ್ಲಿರುವ ಹಿರಿಯರಿಗಿಂತ ಸಂಗಾತಿಯ ಒಡಹುಟ್ಟಿದವರಿಂದ ನಿಮ್ಮ ಸಂಗಾತಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಅವರ ಬಾಲ್ಯ ಮತ್ತು ಹವ್ಯಾಸಗಳ ಬಗ್ಗೆ ತಿಳಿದುಕೊಳ್ಳಲು ಸಂಗಾತಿಯ ಸೋದರಿಯರು ಅಥವಾ ಸೋದರರಿಂದ ತಿಳಿದುಕೊಳ್ಳಿ. ನಿಮ್ಮ ಅತ್ತೆಮಾವನ ಬಗ್ಗೆ ಕೂಡ ಅವರು ಮಾಹಿತಿ ನೀಡಬಹುದು. ನೀವು ಈಗ ಭಾಗವಾಗುವ ಕುಟುಂಬದ ಇತಿಹಾಸ ತಿಳಿದುಕೊಳ್ಳುವುದು ತುಂಬಾ ಆಸಕ್ತಿದಾಯಕವಾಗಿರುತ್ತದೆ.
3. ಫೇಸ್ ಬುಕ್
ಇಂದಿನ ದಿನಗಳಲ್ಲಿ ತುಂಬಾ ಜನಪ್ರಿಯವಾಗಿರುವ ಫೇಸ್ ಬುಕ್ ಹಲವಾರು ಮಂದಿಗೆ ಮಾಹಿತಿ ನೀಡುತ್ತದೆ. ನಿಮ್ಮ ಫೇಸ್ ಬುಕ್ ನ ಫ್ರೆಂಡ್ಸ್ ಲಿಸ್ಟ್ ನಲ್ಲಿ ಅರೇಂಜ್ಡ್ ಮ್ಯಾರೇಜ್ ನ ಸಂಗಾತಿ ಇಲ್ಲದಿದ್ದರೆ ಹುಡುಕಿ. ಫೇಸ್ ಬುಕ್ ಅಕೌಂಟ್ ನಿಂದ ಫೋಟೊಗಳು, ಸ್ನೇಹಿತರು ಮತ್ತು ನಿಮ್ಮ ಸಂಗಾತಿಯ ವ್ಯಕ್ತಿತ್ವ ಹೇಗೆಂದು ತಿಳಿಯಬಹುದು. ನಿಮ್ಮ ಸಂಗಾತಿಗೆ ಇಷ್ಟವಾಗುವ ಸಂಗೀತ, ನೋಡಿರುವ ಸಿನೆಮಾ ಮತ್ತು ಶೈಕ್ಷಣಿಕ ಹಿನ್ನೆಲೆ ತಿಳಿಯಬಹುದು. ಫೇಸ್ ಬುಕ್ ನಲ್ಲಿನ ಸ್ಟೇಟಸ್ ಅಪ್ ಡೇಟ್ ನಿಮ್ಮ ಸಂಗಾತಿಯ ತಿಳಿಯಲು ನೆರವಾಗಬಹುದು.
4. ಕೋಣೆಯಲ್ಲಿ ಹುಡುಕಾಟ
ಅರೇಂಜ್ಡ್ ಮ್ಯಾರೇಜ್ ನಲ್ಲಿನ ಸಂಗಾತಿಯ ಬೆಡ್ ರೂಮ್ ಆತನ ವ್ಯಕ್ತಿತ್ವದ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಿದೆ. ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ಆಗ ನಿಮ್ಮ ಸಂಗಾತಿ ತುಂಬಾ ಉದಾಸೀನ ವ್ಯಕ್ತಿತ್ವದವನೆಂದರ್ಥ. ಬೆಡ್ ರೂಮ್ ನ ಎಲ್ಲಾ ವಸ್ತುಗಳು ಅಚ್ಚುಕಟ್ಟಾಗಿ ಮತ್ತು ಸರಿಯಾದ ಜಾಗದಲ್ಲಿದ್ದರೆ ಆಗ ನಿಮ್ಮ ಸಂಗಾತಿ ತುಂಬಾ ಶಿಸ್ತಿನ ಮತ್ತು ಸ್ವಲ್ಪ ಬೋರಿಂಗ್ ಸ್ವಭಾವದವನೆಂದರ್ಥ. ಮ್ಯಾಗಜಿನ್ ಮತ್ತು ಪುಸ್ತಕಗಳಿಗಾಗಿ ಬೆಡ್ ರೂಮ್ ನಲ್ಲಿ ಹುಡುಕಾಟ ನಡೆಸಿ. ನಿಮ್ಮ ಸಂಗಾತಿ ಓದುವ ಮ್ಯಾಗಜಿನ್ ಮತ್ತು ಪುಸ್ತಕಗಳು ಆತನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
5. ಅತ್ತೆ
ಅರೇಂಜ್ಡ್ ಮ್ಯಾರೇಜ್ ನ ಸಂಗಾತಿಯ ಬಗ್ಗೆ ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳಬೇಕಾದರೆ ಆಗ ಅತ್ತೆಯ ನೆರವು ಪಡೆಯಿರಿ. ನಿಮ್ಮ ಸಂಗಾತಿಯ ಫೇವರಿಟ್ ಆಹಾರ, ದಿನನಿತ್ಯದ ಅಗತ್ಯತೆಗಳನ್ನು ತಿಳಿದುಕೊಳ್ಳಬಹುದು. ಅರೇಂಜ್ಡ್ ಮ್ಯಾರೇಜ್ ನ ಸಂಗಾತಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನೀವು ಅತ್ತೆಯೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳುವುದು ತುಂಬಾ ಮುಖ್ಯ.



Click it and Unblock the Notifications
