ಫಸ್ಟ್​ ನೈಟ್​ನಲ್ಲಿ ನವವಿವಾಹಿತರು ಏನು ಮಾಡುತ್ತಾರೆ? ಈ ಸರ್ವೆ ಹೇಳುತ್ತೆ ಸತ್ಯ

'ಫಸ್ಟ್ ನೈಟ್'.. ಇದು ನೀವು ಊಹಿಸಿದಂತೆ ಇರಲ್ಲ. ಬಹುತೇಕರಿಗೆ 'ಮೊದಲ ರಾತ್ರಿ' ಅಥವಾ 'ಶೋಭನದ ದಿನ' ಎಂದ ಕೂಡಲೇ, ಗುಲಾಬಿ ಹೂವು, ಮಂದ ಬೆಳಕು, ಪ್ರಣಯ ಗೀತೆ ಮತ್ತು ಇನ್ನಿತರ ವಿಷಯಗಳು ನೆನಪಿಗೆ ಬರುತ್ತವೆ. ಆದರೆ, ಸಿನಿಮಾ ಅಥವಾ ಪ್ರಣಯ ಕಾದಂಬರಿಗಳಲ್ಲಿ ತೋರಿಸುವಂತೆ ಇದು ಯಾವಾಗಲೂ ಇರುವುದಿಲ್ಲ. ಲವ್‌ಮ್ಯಾಟರ್ಸ್ ಇಂಡಿಯಾ (LoveMatters India) ಇತ್ತೀಚೆಗೆ 8 ಪ್ರಮುಖ ನಗರಗಳಲ್ಲಿ ಸಮೀಕ್ಷೆ ನಡೆಸಿದೆ. ನವವಿವಾಹಿತರು (Couples) ಅಥವಾ ಲಿವ್-ಇನ್ ಸಂಬಂಧದಲ್ಲಿರುವವರು ಒಟ್ಟಿಗೆ ತಮ್ಮ ಬಹುನಿರೀಕ್ಷಿತ ಮೊದಲ ರಾತ್ರಿಯಲ್ಲಿ (First Night) ಏನು ಮಾಡುತ್ತಾರೆ ಎಂಬ ಬಗ್ಗೆ ಕೆಲವು ಅಚ್ಚರಿ ಸತ್ಯಗಳನ್ನು ಬಹಿರಂಗಪಡಿಸಿದೆ.

ಮದುವೆಯ ಬಳಿಕದ ಮೊದಲ ರಾತ್ರಿ ಅಥವಾ ಶೋಭನವು ಸಂಪ್ರದಾಯ. ಈ ದಿನ ದಂಪತಿಗಳಿಗೆ ಮಧುರ ಅನುಭವವನ್ನು ನೀಡುತ್ತದೆ. ನೂತನ ಪತಿ ಮತ್ತು ಪತ್ನಿ ಆ ರಾತ್ರಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಒಂದಾಗುತ್ತಾರೆ. ಮೊದಲ ರಾತ್ರಿಯ ಬಗ್ಗೆ ಬಹುತೇಕ ಜನರು ಹಲವು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಆದರೆ, ಮೊದಲ ರಾತ್ರಿಯಲ್ಲಿ ನಿಜವಾಗಿಯೂ ಏನಾಗುತ್ತದೆ? ಮನಶ್ಶಾಸ್ತ್ರಜ್ಞರು ಏನು ಹೇಳುತ್ತಾರೆ? ಮತ್ತು ಸಮೀಕ್ಷೆಯ ಅಂಕಿಅಂಶಗಳು ಮತ್ತು ನವವಿವಾಹಿತರು ಬಹಿರಂಗಪಡಿಸಿರುವ ಕೆಲವು ಸತ್ಯಾಂಶಗಳು ಇಲ್ಲಿವೆ.

Newlywed First Night Survey

ಫಸ್ಟ್ ನೈಟ್‌ ಸಮೀಕ್ಷೆಯ ಮುಖ್ಯಾಂಶಗಳು

ಸಮೀಕ್ಷೆಯಲ್ಲಿ ಭಾಗವಹಿಸಿದ ವ್ಯಕ್ತಿಗಳು: 2,500
ವಯಸ್ಸು: 22 ರಿಂದ 38 ವರ್ಷಗಳು
ಸಂಬಂಧದ ಸ್ಥಿತಿ: ಹೊಸದಾಗಿ ಮದುವೆಯಾದವರು (ಕಾನೂನುಬದ್ಧ ಅಥವಾ ಸಂಪ್ರದಾಯ ಬದ್ಧವಾಗಿ ಮದುವೆ), ಲಿವ್-ಇನ್ ಸಂಬಂಧ ಅಥವಾ ಇತ್ತೀಚೆಗೆ ದೈಹಿಕವಾಗಿ ಸಂಬಂಧ ಹೊಂದಿರುವ ದಂಪತಿಗಳು
ಸಮೀಕ್ಷೆ ನಡೆಸಿದ ನಗರಗಳು: ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್, ಜೈಪುರ, ಕೊಚ್ಚಿ, ಚಂಡೀಗಢ ಮತ್ತು ಇಂದೋರ್

ಮೊದಲ ರಾತ್ರಿಯಲ್ಲಿ ನಿಜವಾಗಿಯೂ ಏನಾಗುತ್ತದೆ?

'ನಾವು ಏನು ಮಾಡಲು ಸಾಧ್ಯವಾಗದಷ್ಟು ಸುಸ್ತಾಗಿದ್ದೆವು

ಶೇ.42 ರಷ್ಟು ಜನರು 'ನಾವು ಏನು ಮಾಡಲು ಸಾಧ್ಯವಾಗದಷ್ಟು ಸುಸ್ತಾಗಿದ್ದೆವು' ಎಂದು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು ಅರ್ಧದಷ್ಟು ಜನರು ತಮ್ಮ ಮೊದಲ ರಾತ್ರಿ ಲೈಂಗಿಕ ಕ್ರಿಯೆಗಿಂತ ಹೆಚ್ಚಾಗಿ ನಿದ್ರೆಗೆ ಮೀಸಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕೆ ಸಾಮಾನ್ಯ ಕಾರಣಗಳಿವೆ.

ದಣಿವು ತರಿಸುವ ವಿವಾಹ ಪದ್ಧತಿಗಳು

- ಭಾವನಾತ್ಮಕ ಒತ್ತಡ
- ಪ್ರಯಾಣ ಅಥವಾ ದೀರ್ಘ ಸಮಾರಂಭಗಳಿಂದ ದೈಹಿಕ ಆಯಾಸ
- ಆತಂಕ ಮತ್ತು ಹೆದರಿಕೆ

ಜೈಪುರದ ನವವಿವಾಹಿತೆ ಸ್ವಾತಿ ಅವರು, '16 ಗಂಟೆಗಳ ವಿವಾಹ ಸಮಾರಂಭದ ಬಳಿಕ, ನಾನು ನನ್ನ ಲೆಹೆಂಗಾವನ್ನು ತೆಗೆದು, ಮುಖ ತೊಳೆದು ಮಲಗಬೇಕೆಂದು ಬಯಸಿದ್ದೆ' ಎಂದು ಹೇಳಿದ್ದಾರೆ.

ಶೇ.23 ರಷ್ಟು ಜನರು ರಾತ್ರಿಯಿಡೀ ಮಾತನಾಡಿದ್ದಾರೆ

ನಾಲ್ವರಲ್ಲಿ ಒಬ್ಬ ದಂಪತಿಗಳಿಗೆ, ಮೊದಲ ರಾತ್ರಿ ಒಂದು ಆಳವಾದ ಸಂಭಾಷಣೆಯಾಗಿ ಬದಲಾಗಿದೆ. ಇದು ಅವರ ಮೊದಲ ಖಾಸಗಿ ಕ್ಷಣವಾಗಿತ್ತು. ಈ ಸಮಯದಲ್ಲಿ ಅವರು ಬಾಲ್ಯದ ನೆನಪುಗಳು, ಮದುವೆಯ ಬಗೆಗಿನ ಭಯ, ಸಂಬಂಧಿಕರ ಬಗೆಗಿನ ಸಂಗತಿಗಳು, ಫ್ಯೂಚರ್ ಪ್ಲಾನ್, ವೃತ್ತಿ ಅಥವಾ ಪ್ರವಾಸದ ಕನಸುಗಳ ಬಗ್ಗೆ ಮಾತನಾಡಿದ್ದಾರೆ. ಪುಣೆಯ ರಿತೇಶ್, 'ನಮ್ಮ ಮೊದಲ ರಾತ್ರಿಯು ಅವ್ಯವಸ್ಥೆಯಿಲ್ಲದ ನಮ್ಮ ನಿಜವಾದ ಡೇಟ್‌ನಂತಿತ್ತು. ನಾವು ಬೆಳಗ್ಗೆ 4 ಗಂಟೆಯವರೆಗೆ ಮಾತನಾಡುತ್ತಾ ಇದ್ದೆವು' ಎಂದು ಹೇಳಿಕೊಂಡಿದ್ದಾರೆ.

ಶೇ.12 ರಷ್ಟು ಜನರು ಒಟ್ಟಿಗೆ ಯೂಟ್ಯೂಬ್ ವೀಕ್ಷಣೆ

ಈ ಪೀಳಿಗೆಯು ಸ್ಟ್ರೀಮಿಂಗ್ ಇಲ್ಲದೆ ಎಲ್ಲಿಯೂ ಹೋಗುವುದಿಲ್ಲ. ಸುಮಾರು ಶೇ.12 ರಷ್ಟು ಜನರು ತಮ್ಮ ಮೊದಲ ರಾತ್ರಿಯನ್ನು ನೆಟ್‌ಫ್ಲಿಕ್ಸ್ ಅಥವಾ ಯೂಟ್ಯೂಬ್ ನೋಡುವಲ್ಲಿ ಕಳೆದಿದ್ದಾರೆ. ನಿತಿ ಎಂಬುವವರು, 'ನಾವು ತುಂಬಾ ಮುಜುಗರ ಮತ್ತು ನಾಚಿಕೆಯಿಂದ ವರ್ತಿಸುತ್ತಿದ್ದೆವು. ಆದ್ದರಿಂದ, ನಾವು 'ದಿ ಆಫೀಸ್' ಅನ್ನು ಮತ್ತೆ ಮತ್ತೆ ನೋಡುತ್ತಾ ಅಂತಿಮವಾಗಿ ಅಪ್ಪಿಕೊಂಡು ಮಲಗಿದೆವು' ಎಂದು ಹೇದ್ದಾರೆ.

- ಸ್ಟ್ಯಾಂಡ್ ಅಪ್ ಕಾಮಿಡಿ
- ಪ್ರಣಯ ವೆಬ್ ಸರಣಿಗಳು
- ಅಪರಾಧ ಸ್ಟೋರಿ
- ಅರ್ಥವಿಲ್ಲದ ರೀಲ್‌ಗಳು

ಶೇ.8 ರಷ್ಟು ಜನರು ಫುಡ್ ಆರ್ಡರ್ ಮಾಡಿ ಊಟ ಮುಕ್ಕಿದರು

ಕೆಲವು ದಂಪತಿಗಳು ಹೋಟೆಲ್‌ನ ಮಿನಿಬಾರ್‌ಗಳನ್ನು ಖಾಲಿ ಮಾಡಿದರು. ಬಟರ್ ಚಿಕನ್ ಮತ್ತು ಬಿರಿಯಾನಿ ತರಿಸಿಕೊಂಡು ತಿಂದರು. ತಡರಾತ್ರಿಯ ಆಹಾರವು ಅವರ ಅತ್ಯಂತ ಆಪ್ತ ಕ್ಷಣವಾಗಿತ್ತು. ದಾನಿಶ್ ಎಂಬುವವರು, 'ನಾವು ಇಡೀ ದಿನ ಏನನ್ನೂ ತಿಂದಿರಲಿಲ್ಲ. ಆ ಪನೀರ್ ಟಿಕ್ಕಾ ಬೇರೆ ಎಲ್ಲಕ್ಕಿಂತ ಹೆಚ್ಚು ರೋಮ್ಯಾಂಟಿಕ್ ಆಗಿ ಭಾಸವಾಯಿತು' ಎಂದು ನಗುತ್ತಾ ಹೇಳಿದ್ದಾರೆ.

ಶೇ.11 ರಷ್ಟು ಜನರು ಸ್ನಾನ, ಚರ್ಮದ ಆರೈಕೆಯಲ್ಲಿ ತೊಡಗಿದರು

ನವದಂಪತಿಗಳು, ವಿಶೇಷವಾಗಿ ಮಹಿಳೆಯರು, ದೀರ್ಘಕಾಲ ಸ್ನಾನ ಮಾಡುವುದು, ಆರಾಮದಾಯಕ ರಾತ್ರಿ ಉಡುಪುಗಳನ್ನು ಧರಿಸುವುದು ಅಥವಾ ಶೀಟ್ ಮಾಸ್ಕ್ ಮಾಡಿಕೊಳ್ಳುವುದು ತಮ್ಮ ನೆಚ್ಚಿನ ಭಾಗವಾಗಿದೆ ಎಂದು ಹೇಳಿಕೊಂಡಿದ್ದಾರೆ. ಪ್ರಿಯಾ ಎಂಬುವವರು, 'ನನ್ನ ಗಂಡ 40 ಹೇರ್ ಪಿನ್‌ಗಳನ್ನು ಮತ್ತು ತೆಗೆಯಲು ಸಹಾಯ ಮಾಡಿದರು. ಅದೇ ಪ್ರೀತಿ' ಎಂದು ಹೇಳಿದ್ದಾರೆ.

ಶೇ.4 ರಷ್ಟು ಮಂದಿ ಸಿನಿಮಾಗಳಂತೆ 'ಪರಿಪೂರ್ಣ' ಮೊದಲ ರಾತ್ರಿ ಕಳೆದರು

ನೀವು ನಂಬಿ ಅಥವಾ ಬಿಡಿ. ಕೇವಲ ಶೇ.4 ರಷ್ಟು ಜನರು, ನಾವು ಬಾಲಿವುಡ್ ಅಥವಾ ಹಾಲಿವುಡ್‌ನಲ್ಲಿ ಸಾಮಾನ್ಯವಾಗಿ ನೋಡುವಂತಹ ಮೊದಲ ರಾತ್ರಿಯನ್ನು ಕಳೆದಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಈ ಸಂದರ್ಭಗಳಲ್ಲಿಯೂ ಸಹ ಭಾವನೆಗಳು ಹೆಚ್ಚಾಗಿ ಹೆದರಿಕೆ ಅಥವಾ ಮೊದಲ ಬಾರಿಯ ಆತಂಕದಿಂದ ಕೂಡಿತ್ತು ಎಂದಿದ್ದಾರೆ. ಅದು ಹೇಗೆ ಅಂತಲೂ ಹೇಳಿದ್ದಾರೆ.

- ಮೇಣದಬತ್ತಿಯ ಬೆಳಕಿನ ವ್ಯವಸ್ಥೆ
- ಆಕರ್ಷಕ ಉಡುಪುಗಳು
- ನಿಕಟತೆ ಮತ್ತು ಸಂಪೂರ್ಣ ಪ್ರಣಯ

ಶೇ.20 ರಷ್ಟು ಜನರಿಗೆ ದೊಡ್ಡ ವೈಫಲ್ಯ

ಐದರಲ್ಲಿ ಒಂದು ದಂಪತಿ, ಸಂಪೂರ್ಣವಾಗಿ ಮೊದಲ ರಾತ್ರಿಯನ್ನು ಮಿಸ್ ಮಾಡಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಅವರಿಗೆ ಅಸಮಾಧಾನ ಅಥವಾ ಕೋಪವಿಲ್ಲ. ಏಕೆಂದರೆ ಮುಜುಗರ, ಪೋಷಕರು ಪಕ್ಕದ ಕೋಣೆಯಲ್ಲಿ ಮಲಗಿರುವುದು, ದಿಡೀರ್ ಮುಟ್ಟಿನ ಸಮಸ್ಯೆ ಅಥವಾ ಮನಸ್ಥಿತಿ ಹಾಳುಮಾಡುವ ಘಟನೆಗಳು ಇದಕ್ಕೆ ಕಾರಣವಾಗಿವೆ. ಅಂಜಲಿ ಎಂಬುವವರು, 'ನನ್ನ ಅತ್ತೆ ಮತ್ತು ಮಾವಂದಿರು ಗಿಫ್ಟ್‌ಗಾಗಿ ಮಧ್ಯರಾತ್ರಿಯವರೆಗೆ ಬಾಗಿಲು ತಟ್ಟುತ್ತಿದ್ದರು. ನಾವು ಜೋಕ್ ಹೇಳುತ್ತಾ ಸುಮ್ಮನಾದೆವು' ಎಂದು ಹೇಳಿಕೊಂಡಿದ್ದಾರೆ.

ಸೈಕಾಲಜಿ ಮತ್ತು ಮನಶ್ಶಾಸ್ತ್ರಜ್ಞರು ಹೇಳಿದ್ದೇನು?

ಮನಶ್ಶಾಸ್ತ್ರಜ್ಞರ ಪ್ರಕಾರ, ಹೆಚ್ಚಿನವರು ಮೊದಲ ರಾತ್ರಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ನವವಿವಾಹಿತರು ಅದ್ಭುತಗಳನ್ನು ನಿರೀಕ್ಷಿಸುತ್ತಾರೆ. ಆದರೆ, ಇದು ಸಾಮಾನ್ಯವಾಗಿ ಪರಿವರ್ತನೆಯ ಹಂತವಾಗಿದೆ. ದೈಹಿಕ ನಿಕಟತೆಗಿಂತ ಭಾವನಾತ್ಮಕ ಸುರಕ್ಷತೆ ಮತ್ತು ಪರಸ್ಪರ ಗೌರವವು ದೊಡ್ಡ ಪಾತ್ರ ವಹಿಸುತ್ತದೆ ಎಂದು ಸಲಹೆ ನೀಡಿದ್ದಾರೆ.

ಮೊದಲ ರಾತ್ರಿಗೆ ಕೆಲವು ಸ್ಮಾರ್ಟ್ ಸಲಹೆಗಳಿವು

- ಪರಸ್ಪರ ಮುಕ್ತವಾಗಿ ಮಾತನಾಡಿ.
- ನೀವು ದಣಿದಿದ್ದರೆ ವಿಶ್ರಾಂತಿ ಪಡೆಯಿರಿ, ತಪ್ಪಿತಸ್ಥ ಭಾವನೆ ಹೊಂದುವ ಅಗತ್ಯವಿಲ್ಲ.
- ದೈಹಿಕ ಸಂಬಂಧ ಹೊಂದಲು ಒತ್ತಡ ಹೇರಬೇಡಿ.
- ವಾತಾವರಣವನ್ನು ಆರಾಮದಾಯಕವಾಗಿಸಿ. ಆದರೆ, ನಿರೀಕ್ಷೆಗಳನ್ನು ನೈಜವಾಗಿಡಿ.
- ಮೊದಲ ರಾತ್ರಿಯನ್ನು ಸ್ನೇಹದ ಆರಂಭವೆಂದು ಪರಿಗಣಿಸಿ, ಬಲವಂತ ಬೇಡ.

ಒಟ್ಟಾರೆ, ನಿಮ್ಮ ಮೊದಲ ರಾತ್ರಿಯನ್ನು ಕಳೆಯಲು ಯಾವುದೇ ಸರಿಯಾದ ಮಾರ್ಗವಿಲ್ಲ. ನಿಜವಾದ ನಿಕಟತೆ ಅನುಕೂಲದಿಂದ ಪ್ರಾರಂಭವಾಗುತ್ತದೆ, ಕಾರ್ಯಕ್ಷಮತೆಯಿಂದಲ್ಲ. ಕೆಲವೊಮ್ಮೆ ಒತ್ತಡವು ವಾತಾವರಣವನ್ನು ಹಾಳುಮಾಡುತ್ತದೆ. ಇಬ್ಬರ ಸಂವಹನವು ಪರಿಪೂರ್ಣತೆಗಿಂತ ಮುಖ್ಯವಾಗಿರುತ್ತದೆ. ನಿಮ್ಮ ಮೊದಲ ರಾತ್ರಿ ನೀವು ಬಯಸಿದಂತೆ ಪರಿಪೂರ್ಣವಾಗಿಲ್ಲದಿದ್ದರೆ, ನೀವು ಒಬ್ಬಂಟಿಯಲ್ಲ. ಇದೀಗ ನಿಮಗೆ ತಿಳಿದಿರಬಹುದು. ನವವಿವಾಹಿತರು ತಮ್ಮ ಮೊದಲ ರಾತ್ರಿಯಂದು ಏನು ಮಾಡುತ್ತಾರೆ ಎಂದು. ಲವ್‌ಮ್ಯಾಟರ್ಸ್ ಇಂಡಿಯಾ (LoveMatters India) ಸಮೀಕ್ಷೆಯ ಸತ್ಯವು ಬಹಳಷ್ಟು ಜನರನ್ನು ಬೆರಗುಗೊಳಿಸಿದೆ.

English summary

LoveMatters India Survey Reveals What Couples Actually Do On Their First Night, It’s Not What You Imagine

LoveMatters India Survey Reveals What Couples Actually Do On Their First Night, It’s Not What You Imagine
Story first published: Monday, June 23, 2025, 15:30 [IST]
X
Desktop Bottom Promotion