Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅರೇಂಜ್ ಮ್ಯಾರೇಜ್ ಆದ್ರೂ ನಮ್ಮದು ಒಂಥರಾ ಲವ್ ಸ್ಟೋರಿನೆ!
'ಇವತ್ತು ನಿನ್ನ ನೋಡಲು ಹುಡುಗನ ಕಡೆಯವರು ಬರ್ತಾ ಇದ್ದಾರೆ' ಎಂದಾಗ ಮನಸ್ಸಿನಲ್ಲಿ ಏನೋ ಅವ್ಯಕ್ತ ಭಯ. ಅಪ್ಪ-ಅಮ್ಮನ ಮುದ್ದಿನ ಮಗಳಾಗಿ ಬೆಳೆದ ನನಗೆ ಮದುವೆಯಾದ ಮೇಲೆ ಅಪ್ಪ-ಅಮ್ಮನ ಬಿಟ್ಟು ಹೋಗ್ತೀನಿ ಎಂಬ ಸಂಕಟ, ಅದರ ಜೊತೆಗೆ ಬರುವ ಹುಡುಗ ಹೇಗಿರ್ತಾನೆ, ಅವನ ಗುಣ ಹೇಗಿರುತ್ತದೆ ಎಂಬ ಕುತೂಹಲ, ಆತಂಕ ಎಲ್ಲವೂ ಇತ್ತು.
ನಾನು ನಿನ್ನ ಮೊದಲ ಬಾರಿ ನೋಡಿದಾಗ ನೀ ನನ್ನನ್ನ ಇಷ್ಟೊಂದು ಆವರಿಸಿಕೊಳ್ಳುತ್ತಿ ಎಂದು ನನಗೆ ಗೊತ್ತಿರಲಿಲ್ಲ ದೀಪು. ನಿನ್ನ ನೋಡಿದಾಗ ಇಷ್ಟವಾದೆ ಮನೆಯವರಿಗೆ ಹುಡುಗ ನಂಗೆ ಓಕೆ ಅಂತ ಅಂದೆ. ನಂತರ ನಮ್ಮಿಬ್ಬರ ಭೇಟಿ ಇಸ್ಕಾನ್ ಟೆಂಪಲ್‌ನಲ್ಲಿ. 'ಲೈಫ್ ಲಾಂಗ್ ಜೊತೆ ಜೊತೆಯಲೇ ಇರುತ್ತೀನಿ' ಅಂತಾ ನೀನು ನನಗೆ ಪಿಸು ಮಾತಲಿ ನುಡಿದ ಆ ದಿನವನ್ನು ಮರೆಯೋಕಾಗುತ್ತ.!!??
ನಾವಿಬ್ಬರು ಸಪ್ತಪದಿ ತುಳಿದು ಮಾರ್ಚ್ 4ಕ್ಕೆ ಮೂರು ವರುಷ ಆಗುತ್ತೆ ಅಂದ್ರೆ ನಂಬೋಕೇ ಆಗ್ತಿಲ್ಲ. ಈ ಬೆಂಗಳೂರಿನಲ್ಲಿ ಒಂಟಿಯಾಗಿ ಬದುಕುತ್ತಿದ್ದ ನನಗೆ ನನ್ನ ತಂದೆ ತಾಯಿ ನೀಡಿದ ಬೆಲೆಕಟ್ಟಲಾಗದ ಗಿಫ್ಟ್ ನೀನು.

ಮೊದಲ ಭೇಟಿಯಲ್ಲೇ ಮೂಡಿತು ಅನುರಾಗ
ಮೊದಲ ಭೇಟಿಯಲ್ಲಿ ನಿನ್ನ ಕಣ್ತುಂಬಿಕೊಂಡ ಕ್ಷಣ, ಆಡಿದ ಕೆಲವೇ ಕೆಲವು ಮಾತುಗಳು, ಬೇಸರವಾದಾಗ ನಿನ್ನ ತೋಳತೆಕ್ಕೆಯಲ್ಲಿ ನೀ ಹೇಳಿದ ಸಾಂತ್ವನ, ಆಗಗ ಮುನಿಸು, ಮತ್ತೆ ಚಿಕ್ಕ ಜಗಳ, ಮಗದೊಮ್ಮೆ ಪ್ರೇಮ ಗೀತೆ, ಮಾತನಾಡದೆ ಮೌನವಾಗಿ ರಾಜಿ ಮಾಡಿಕೊಂಡ ಕ್ಷಣಗಳು.

ನಮ್ ಲೈಫ್ ಒಂದು ಸುಂದರಕಾಂಡ
ನೆನಪು ಮಾಡಿಕೊಂಡಷ್ಟೂ ಮತ್ತೂ ಬೇಕೆನಿಸುವ ನಿನ್ನ ಪ್ರೀತಿ, ತಪ್ಪು-ಸರಿಗಳ ಚರ್ಚೆ, ಜೊತೆಗೊಂದಿಷ್ಟು ಪ್ರವಾಸ .ವಾಹ್..ನಮ್ ಲೈಫ್ ಒಂದು ಸುಂದರಕಾಂಡ. ಎರಡು ವರ್ಷ ಕಳೆದಿದ್ದೆ ಗೊತ್ತಾಗ್ಲಿಲ್ಲ. ನಿನ್ನ ಜೊತೆ ಇಟ್ಟ ಪ್ರತಿಯೊಂದು ಹೆಜ್ಜೆಯನ್ನೂ ನಾನು ಯಾವತ್ತೂ ಮರೆಯೋಲ್ಲ.
ಯಾವಾಗಲು ನಿನ್ನ ಜೊತೆಯಾಗಿರ್ತೀನಿ ಅನ್ನೋ ಪ್ರಮಾಣ ಮಾಡ್ತಿದ್ದೀನಿ ದೀಪು. ನಿನ್ನ ತ್ಯಾಗ, ತಾಳ್ಮೆ, ಮಗುವಿನಂತೆ ನನ್ನ ನೋಡಿಕೊಂಡ ರೀತಿ, ಭರಪೂರ ಬೆಂಬಲ,ಯಾವುದರ ಋಣವನ್ನೂ ತೀರಿಸೋಕೆ ಸಾಧ್ಯಾನೇ ಇಲ್ಲ ಬಿಡು. ನಿನ್ನ ನಿಷ್ಕಲ್ಮಶ ಪ್ರೀತಿಯಲ್ಲಿ ಜೀವನಪೂರ್ತಿ ಬಂಧಿಯಾಗಿರ್ಬೇಕು ಅನ್ನೋದು ನನ್ನಾಸೆ.

ನನ್ನ-ನಿನ್ನ ಪ್ರೇಮ ಗೀತೆ ಚೆನ್ನಾ
ಮನ ಬಿಚ್ಚಿ ಮಾತನಾಡುವೆ ನಿನ್ನ ಜೊತೆ , ಮುನಿಸಿಕೊಳ್ಳುವೆ, ಕೋಪಗೊಳ್ಳುವೆ, ಇದೆಲ್ಲ ಇರುವುದು ಪ್ರೀತಿಯಲ್ಲಿ ಅಂತ ತಿಳಿಯಿತು ನನಗೆ. ನಿನ್ನ ನಂಬಿ ಎಲ್ಲರನ್ನು ತೊರೆದು ಸಾವಿರ ಆಸೆಗಳ ಹೊತ್ತು ನಿನ್ನ ಜೊತೆಯಾದಾಗಿನಿಂದ ನನ್ನೆಲ್ಲ ಕನಸುಗಳನ್ನು ನನಸುಗೊಳಿಸುತ್ತಿದೀಯಾ.

ಜೊತೆಜೊತೆಯಲಿ
ನಮ್ಮಿಬ್ಬರದು ಸುಖ ಜೀವನದ ಬದುಕು... ಅರೋಗ್ಯ, ಆಯಸ್ಸು , ಧೈರ್ಯ ಮತ್ತು ತಾಳ್ಮೆ ನಮ್ಮಿಬ್ಬರಲ್ಲಿ ಇರಲಿ. ಮೆಟ್ಟಿ ನಿಲ್ಲೋಣ ಎಲ್ಲ ಕಷ್ಟಗಳ "ಜೊತೆಜೊತೆಯಲಿ"
ಜೀವನಪೂರ್ತಿ ನೀನು ನನ್ನ ಪಾಲಿಗೆ ನಿಜವಾದ ದೇವತಾ ಮನುಷ್ಯ..
ಇಂತಿ ನಿನ್ನ ಪ್ರೀತಿಯ
ಸುಷಿ



Click it and Unblock the Notifications
