Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
Valentines Day Special : ತಿರುನಲ್ವೇಲಿ ಹುಡುಗನಿಗೆ ಬೆಂಗಳೂರು ಹುಡುಗಿ ಮೇಲಾಯ್ತು ಲವ್
ನನ್ನ-ಅವಳ ಪ್ರೀತಿಯ ಬಗ್ಗೆ ಹೇಳುವುದಾದರೆ ನನಗೆ ಅವಳು ಚಿಕ್ಕಂದಿನಿಂದಲೇ ಗೊತ್ತು, ನನ್ನ ಮಾವನ ಮಗಳು, ನನ್ನೂರು ತಮಿಳುನಾಡಿನ ತಿರುನಲ್ವೇಲಿ, ನಮ್ಮೂರಿಗೆ ವರ್ಷಕ್ಕೊಮ್ಮೆ ಬರುತ್ತಿದ್ದರು, ಜೊತೆಯಲ್ಲಿ ಆಟ ಆಡುತ್ತಿದ್ದೇವೆ, ಆದರೆ ಇನ್ನೊಮ್ಮೆ ಅವಳು ಮನೆಗೆ ಬಂದಾಗ ನನ್ನ ಮಾತಿಲ್ಲ, ಆಟಕ್ಕೆ ಕರೆದರೆ ಬರುತ್ತಿಲ್ಲ.

ಅರೇ ಇವಳಿಗೇನಾಯ್ತು ಅಂತ ಅಮ್ಮನ ಬಳಿ ಹೋಗಿ ಅವಳನ್ನು ಮಾತನಾಡಿಸಿದರೂ ಜಂಭದಲ್ಲಿ ಹೋಗ್ತಾಳೆ ಎಂದಾಗ ಅಮ್ಮ ಅವಳು ದೊಡ್ಡವಳಾಗಿದ್ದಾಳೆ, ಆ ಶಾಸ್ತ್ರಕ್ಕೆ ಬಂದಿದ್ದಾರೆ, ನೀನು ಮಾತನಾಡಿಸಬಾರದು ಎಂದು, ದೊಡ್ಡವಳಾಗುವುದು ಅಂದರೆ ಏನು? ಹಾಗಾದರೆ ನಾನು ದೊಡ್ಡವನಾಗುವುದು ಯಾವಾಗ ಎಂದೆಲ್ಲಾ ಯೋಚಿಸುತ್ತಿದ್ದೆ. ಅವರು ಬೆಂಗಳೂರಿಗೆ ಹೊರಟಾಗ ಇವಳು ನನ್ನ ಜೊತೇ ಮಾತೇ ಆಡಲಿಲ್ಲ ಅಲ್ವಾ? ಎಂದು ಮನಸ್ಸಿಗೆ ಒಂಥರಾ ಬೇಸರವಾಗಿತ್ತು. ನಂತರ ಅವಳ ನಡುವೆ ಅಷ್ಟೇ ಸ್ನೇಹವಿರಲಿಲ್ಲ.
ವಾಟ್ಸಾಪ್, ಫೇಸ್‌ಬುಕ್‌ನ ಮೂಲಕ ಹರಿದಾಡಿದ ಪ್ರೇಮ ಸಂದೇಶ
ಶಾಲಾ ದಿನಗಳು ಮುಗಿದು ಕಾಲೇಜಿಗೆ ಹೋಗಲು ಪ್ರಾರಂಭಿಸಿದಾಗ ಇಬ್ಬರು ಫೋನ್‌ನಲ್ಲಿ ಮಾತನಾಡುವುದಕ್ಕೆ ಶುರು ಮಾಡಿದ್ವಿ, ನನಗೆ ಅವಳ ಕಡೆ ಏನೋ ಒಂದು ಆಕರ್ಷಣೆ, ಅವಳಿಗೆ ನನ್ನ ಮೇಲೆ ಪ್ರೀತಿ ಇತ್ತೋ ತಿಳಿಯದು. ನಾನು ಎಂಜಿನಿಯರಿಂಗ್ ಒದುತ್ತಿರುವಾಗ ಈ ವಾಟ್ಸಾಪ್ ಬಂತು, ನಾವಿಬ್ಬರು ವಾಟ್ಯಾಪ್‌ನಲ್ಲಿ ಚಾಟ್ ಮಾಡುತ್ತಿದ್ವಿ, ಒಂದು ದಿನ ನಾನು ಅವಳಿಗೆ ಪ್ರಪೋಸ್ ಮಾಡಿದೆ, ಪ್ರಪೋಸ್ ಮಾಡುವಾಗ ಒಪ್ಪಿಕೊಳ್ಳುತ್ತಾಳೋ ಎಂಬ ಆತಂಕವಿತ್ತು, ಆದರೆ ಅವಳು ಒಪ್ಪಿಗೊಂಡಾಗ ಸ್ವರ್ಗಕ್ಕೆ ಮೂರು ಗೇಣು ಎಂದ ಎಂದನಿಸಿತ್ತು. ನಮ್ಮಿಬ್ಬರ ಪ್ರೇಮ ಕತೆ ಹೀಗೆ ಮುಂದುವರೆಯುತ್ತಿತ್ತು.
ಎಂಜಿನಿಯರಿಂಗ್ ಮಾಡಿ ಕೆಲಸವನ್ನು ಚೆನ್ನೈಯಲ್ಲಿ ಹುಡುಕುವ ಅಂದಿದ್ದೆ, ಇವಳದ್ದು ಒಂದೇ ಹಠ, ನೀನು ಬೆಂಗಳೂರಿಗೆ ಬಾ ಅಂತ ಅವಳಿಗೋಸ್ಕರವೇ ಬೆಂಗಳೂರಿಗೆ ಬಂದೆ, ನಂತರ ಇಬ್ಬರು ಪ್ರೇಮ ಪಕ್ಷಿಗಳಂತೆ ಹಾರಾಡಿದ್ವಿ.
ಈ ಖುಷಿಯಲ್ಲಿರುವಾಗಲೇ ಆಘಾತವೊಂದು ಕಾದಿತ್ತು
ತುಂಬಾ ಚೆನ್ನಾಗಿದ್ದ ಅಪ್ಪನಿಗೆ ಸ್ವಲ್ಪ ಹುಷಾರು ತಪ್ಪಿತ್ತು, ಅವರ ಧ್ವನಿ ಬದಲಾಯಿತು, ವೈದ್ಯರ ಬಳಿ ತೋರಿಸಿದಾಗ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇದೆ ಎಂದು ಹೇಳಿದರು. ಅಪ್ಪನಿಗೆ ಚಿಕಿತ್ಸೆ ಪ್ರಾರಂಭಿಸಿದ್ವಿ, ದೇವರ ದಯೆಯಿಂದಾಗಿ ಅವರ ಆರೋಗ್ಯದಲ್ಲಿ ನಿಧಾನಕ್ಕೆ ಚೇತರಿಕೆ ಕಂಡು ಬಂತು. ಈಗಲೇ ಮದುವೆ ಬಗ್ಗೆ ಯಾವುದೇ ಪ್ಲ್ಯಾನ್ ಇರಲಿಲ್ಲ, ಏಕೆಂದರೆ ಆಗಷ್ಟೇ ,ಮನೆ ಕಟ್ಟಿದ್ವಿ, ಜೊತೆಗೆ ಅಪ್ಪನ ಚಿಕಿತ್ಸೆಗೆ ತುಂಬಾ ಹಣ ಖರ್ಚಾಯ್ತು, ಕೈ ಖಾಲಿಯಾಗಿತ್ತು, ಆ ಸಂದರ್ಭದಲ್ಲಿ ಬಂತು ಮದುವೆ ಪ್ರಸ್ತಾಪ.
ಮನೆಯಲ್ಲಿ ಈ ವರ್ಷವೇ ಮದುವೆಯಾಗು ಎಂಬ ಒತ್ತಾಯ.
ನಮ್ಮ ಪ್ರೀತಿಯ ವಿಷಯ ತಿಳಿದಾಗ ವಿರೋಧ ಬಂತು
ನನ್ನ ಮನೆಯಲ್ಲಿ ಪ್ರೀತಿಯ ವಿಷಯ ಗೊತ್ತಾದಾಗ ದೊಡ್ಡ ವಿರೋಧವೇನೂ ಬರಲಿಲ್ಲ, ಹುಡುಗಿ ಮನೆಯವರನ್ನು ಕೇಳಿ ನೋಡುವ ಒಪ್ಪಿದರೆ ಮಾಡುವ ಇಲ್ಲದಿದ್ದರೆ ಬೇರೆ ಹುಡುಗಿ ನೋಡಿ ಆಗುವ ಎಂದು ಹೇಳಿದ್ದರು. ನಾನಂತೂ ಆ ಹುಡುಗಿಯಲ್ಲದೆ ಬೇರೆ ಯಾರನ್ನೂ ಮದುವೆಯಾಗಲ್ಲ, ನೀವು ಬೇರೆ ಹುಡುಗಿ ತೋರಿಸುವುದಾದರೆ ಮನೆಗೇ ಬರಲ್ಲ ಎಂದೆ, ಅತ್ತ ಅವಳ ಮನೆಯಲ್ಲಿಯೂ ಮದುವೆಗೆ ವಿರೋಧ. ಮಗಳಿಗೆ ಸರ್ಕಾರಿ ಸಂಬಳದ ಅಳಿಯ ಬೇಕೆಂದು ಬಯಸಿದ್ದರು, ಅವಳು ಕೂಡ ನಾನೇ ಬೇಕೆಂದು ಹಠ ಮಾಡಿದಳು ಕೊನೆಗೆ ಎರಡೂ ಮನೆಯವರು ಒಪ್ಪಿದರು.
ಮದುವೆಗೇನೋ ಒಪ್ಪಿಗೆ ಸಿಕ್ಕಿತ್ತು, ಆದರೆ ಮುಂದೇನು ಎಂಬ ಭಯ ಕಾಡಿತು
ಮನೆಯವರು ಒಪ್ಪಿಗೆ ಕೊಟ್ಟಾಗ ಖುಷಿಯಾತ್ತು, ಆದರೆ ಮದುವೆ ಎಂದರೆ ಹುಡುಗಾಟವೇ? ದುಡ್ಡು ಬೇಕಲ್ವಾ? ಮೊದಲೇ ಜೇಬು ಖಾಲಿಯಾಗಿದೆ, ಒಂದೆರಡು ವರ್ಷ ಕಳೆದು ಆಗೋಣ ಎಂದರೆ ಎರಡೂ ಮನೆಯಲ್ಲಿ ಒಪ್ಪಲಿಲ್ಲ, ಕೊನೆಗೆ ಆಯ್ತು ಎಂದು ಹೇಳಿದರೆ, ಆದರೆ ದುಡ್ಡು ಹೇಗೆ ಹೊಂದಿಸುವುದು ಎಂಬ ಚಿಂತೆ ಕಾಡುತ್ತಿತ್ತು. ಮದುವೆ ಕೂಡಿ ಬಂದಾಗ ಹೇಗಾದರೂ ಮದುವೆ ಆಗಿಯೇ ಆಗುತ್ತದೆ, ಮದುವೆಗೆ ಅಂತ ಮೊದಲೇ ಸಿದ್ದತೆ ಮಾಡಬೇಕಾಗಿಲ್ಲ ಅಂತ ಹಿರಿಯರು ಹೇಳಿದ್ದನ್ನು ಕೇಳಿದ್ದೆ, ಆದರೆ ನನ್ನ ವಿಷಯದಲ್ಲಿ ಅದು ನಿಜವಾಯಿತು, ನಾನು ಊಹಿಸಿಯೇ ಇರಲಿಲ್ಲ ಅಷ್ಟು ಗ್ರ್ಯಾಂಡ್ ಆಗಿ ಮದುವೆ ನಡೆಯಿತು.
ಅನೇಕ ಸುಂದರ ಕನಸುಗಳೊಂದಿಗೆ ನಮ್ಮ ಬಾಳ ಪಯಣ ಮುಂದುವರೆದಿದೆ.....



Click it and Unblock the Notifications


