Valentines Day 2023 Special : ಮೊದಲ ಭೇಟಿಯಲ್ಲಿಯೇ ಕಳೆದು ಹೋದೆ ಆ ಕುಡಿ ನೋಟಕ್ಕೆ

ಪ್ರೀತಿ ಕಾಣಲ್ಲ ನಿಜಾ, ಪ್ರೀತ್ಸೋರು ಕಾಣಲ್ವಾ, ಪ್ರೀತ್ಸೋರು ಕಂಡಮೇಲೆ, ಪ್ರೀತಿ ಕಾಣಲ್ವಾ" ಎಂಬ ಮಾತು ಎಷ್ಟು ಸುಂದರವಾಗಿದೆ ಅಲ್ವಾ, ಇದೆ ನಿಜ ಕೂಡ.

valentines Day

ಪ್ರತಿಯೊಬ್ಬರ ಜೀವನದಲ್ಲಿ ಅವರ ಪ್ರೇಮ ಕಥೆಗಳು ವಿಶೇಷವಾಗಿರುತ್ತವೆ . ಪ್ರೀತಿ ಆಗುವುದು ಗೊತ್ತಾಗಲ್ಲ ಆದರೆ ಬಿಟ್ಟು ಹೋದಾಗ ಆಗೋ ನೋವು ವಾಸಿಯಾಗಲ್ಲ. ಒಮ್ಮೆ ಅದರ ಸವಿ ಅನುಭವಿಸೋ ಆಸೆ ಎಲ್ಲರಲ್ಲೂ ಇರುತ್ತದೆ ಅಲ್ವಾ.

ಈ ಪ್ರೇಮ ಎಷ್ಟು ವಿಚಿತ್ರ... ನಾನು ಎಲ್ಲರಂತೆ ನನ್ನದೇ ಲೋಕದಲ್ಲಿ ಇದ್ದವಳು. ಪ್ರೀತಿ ಎಂಬ ಗಾಳಿಗೆ ಸೋಕದವಳು. ಮನೆ, ಕಾಲೇಜು ಬಿಟ್ಟರೆ ಬೇರೆ ಪ್ರಪಂಚಕ್ಕೆ ಕಾಲಿಟ್ಟವಳಲ್ಲ. ಜೀವನದಲ್ಲಿ ಏನೇ ಅದರೂ ಪ್ರೀತಿಯ ಮಾಯಜಲಕ್ಕೆ ಬೀಳಬಾರದು ಅಂದುಕೊಂಡಿದ್ದೆ. ಒಂದು ದಿನ ಸಂಬಂಧಿಕರ ಮನೆ ಕಾರ್ಯಕ್ರಮಕ್ಕೆ ಹೋಗಬೇಕಾಗುತ್ತದೆ. ಮನಸಿಲ್ಲದ ಮನಸಲ್ಲಿ ಅಮ್ಮನ ಒತ್ತಾಯಕ್ಕೆ ಮಣಿದು ಕಿಲೋಮೀಟರ್ ದೂರದ ಸುಖಕರ ಪ್ರಯಾಣ. ತಲುಪುವಷ್ಟ್ರಲ್ಲಿ ಕಾರ್ಯಕ್ರಮದ ಸಿದ್ಧತೆ ಭರದಿಂದ ಸಾಗುತಿತ್ತು. ಇನ್ನೇನು ಸಡಗರ ಸಂಭ್ರಮದ ಆರಂಭ.

ಹೊಸ ಊರು ಹೊಸ ಜನ. ಒಬ್ಬರ ಪರಿಚಯ ಕೂಡ ಇಲ್ಲದ ಊರು. ಮನೆಯ ಅಂಗಳದ ಮೂಲೆಯೇ ನನ್ನ ನೆಚ್ಚಿನ ತಾಣವಾಗಿ ಬದಲಾಯಿಸಿದೆ. ನಾನಾಯಿತು ನನ್ನ ಮೊಬೈಲ್ಆಯಿತು ಅನ್ನೋಹಾಗೆ ಅಂಟಿಕೊಂಡೆ. ಆ ಒಂದು ದಿನ ಮೊಬೈಲೇ ನನ್ನ ಸ್ನೇಹಿತನಾದ. ಯಾರ ಮುಖವನ್ನು ನೋಡದೆ ತಲೆ ತಗ್ಗಿಸಿ ಮೊಬೈಲನ್ನು ನೋಡುತಿರುವ ಸಂದರ್ಭದಲ್ಲಿ ತಲೆ ಎತ್ತಿ ನೋಡುವಾಗ ಯಾರೋ ಒಬ್ಬರೂ ನನ್ನನ್ನೆ ನೋಡುವಂತೆ ಭಾಸಾವಾಯಿತು. ಯಾರೆಂದು ನೋಡುವಾಗ ನನ್ನೊಳಗೇನು ಹೊಸ ಬದಲಾವಣೆ ಸೃಷ್ಟಿಯಾಗಿತ್ತು. ಆ ಕ್ಷಣ ಎದುರಿಗಿದ್ದ ವ್ಯಕ್ತಿಯ ಮುಖ ನೋಡಿ ಒಮ್ಮೆಗೆ ಮೌನಿಯದೆ.

ತನಗೆ ಗೊತ್ತಿಲ್ಲದಂತೆಯೇ ಆತನನ್ನು ಪುನಃ ಪುನಃ ನೋಡುವ ಆಸೆಯಾಗಿ ಕಣ್ಣುಗಳು ಅತ್ತಕಡೆಗೆ ಹೋಗುತಿದ್ದವು. ಕೊನೆಗೆ ಕಣ್ ಕಣ್ಣ ಸಲಿಗೆ ಎಂಬ ಹಾಡಿನಂತೆ ಈ ಹಾಳಾದ ಕಣ್ಗಳು ಅವನ ಕಣ್ಣುಗಳಿಗೆ ಬಲಿಯಾದವು. ಆಗಲೇ ಲವ್ ಅಟ್ ಫಾಸ್ಟ್ ಸೈಟ್ ಎಂಬ ಮಾತು ನನ್ನ ಜೀವನದಲ್ಲಿ ನಿಜವಾಯಿತು.ಪ್ರೇಮಿಗಳಿಗೆ ಕಣ್ಣ ಸನ್ನೆಯೇ ಮೊದಲ ಅಸ್ತ್ರ ಎಂಬ ಮಾತು ನಮಗೂ ಅನ್ವಯವಾಯಿತು.

ಇಬ್ಬರಲ್ಲೂ ಮಾತನಾಡುವ ಧೈರ್ಯ ಇರಲಿಲ್ಲ. ಕೊನೆಗೆ ಹೊರಡುವ ಘಳಿಗೆ ಏನು ಮಾಡಲಾಗದೆ ಬೈ ಅಂದು ಬಿಟ್ಟೆ. ಹೀಗೆ ಮುಂದುವರಿದ ಕಣ್ಣ ಸನ್ನೆ ಕೇವಲ ಒಂದೇ ದಿನಕ್ಕೆ ಸೀಮಿತವಾಗಿತ್ತು.ಈಗಲೂ ಅವನ ಭೇಟಿಗಾಗಿ ಮನಸ್ಸು ಹಾತೊರೆಯುತಿದ್ದೆ. ಯಾವಾಗಾದರೂ ನನ್ನ ಮುಂದೆ ಬರುವನೋ ಎನ್ನೋ ಊಹೆ ಮೂಡಿದೆ. ಆದರೆ ಅದರ ಹಿಂದಿರುವ ಭಾವನೆಗಳು ಹಲವಾರು.

ಪ್ರೀತಿ ಯಾರ ಮೇಲು ಯಾರಿಗೂ ಆಗಬಹುದು. ಅಂತಹ ಪ್ರೀತಿ ಕೆಲವರಿಗೆ ನೆನಪಾಗಿ ಜೀವನದ ಕೊನೆಯವರೆಗೂ ಉಳಿದಿರುತ್ತದೆ.

ರಕ್ಷಿತಾ
ಎಸ್. ಡಿ. ಎಂ. ಕಾಲೇಜು, ಉಜಿರೆ.

********

ದೂರದ ಊರುನಲ್ಲಿ ಕಾರ್ಯಕ್ರಮ ಹೋಗಲ್ಲ ಅಂದುಕೊಂಡೆ ಆದರೆ ಮನೆಯವರು ಬಿಡಬೇಕೆ. ಒಲ್ಲದ ಮನಸ್ಸು, ತಲುಪುವ ತನಕ ಐಡಿಯಾ ಇರ್ಲಿಲ್ಲ ಗ್ರಹಪ್ರವೇಶ ಕಾರ್ಯಕ್ರಮ ಅಂತ ಚಿಕ್ಕಮ್ಮನ ಮಗಳು ಹೇಳಿದಾಗ ಗೊತ್ತಾಯಿತು.ಒಳಗೆ ಹೋದಾಗ ಹೊಸ ಮನೆ ಅತಿಥಿಗಳಿಂದ ತುಂಬಿತು ಆದರೂ ನಮಗೆ ಮೊದಲು ಎಂಬಂತೆ ಸ್ವಾಗತ ಎಲ್ಲರ ಪರಿಚಯ ಆಯಿತು.ಹೋಗಿ ಒಂದು ಕಡೆ ಕುಳಿತುಕೊಂಡೆ. ಎರಡು ಸಾಲು ಚೇರ್ ಗಳು ದಾಟಿದರೆ ಒಂದು ಸುಂದರ ಹುಡುಗಿ. ಯಾರು,ಏನು, ಎಲ್ಲಿಯವಳು ಗೊತ್ತಿಲ್ಲ ಆದರೂ ತುಂಬಾ ಇಷ್ಟವಾದಳು.

ಮನಸ್ಸಿನಲ್ಲಿ ಕೆತ್ತನೆ ಮಾಡಿಕೊಂಡೆ ಅವಳ ಮುಖ.ಸ್ವಲ್ಪ ಹೊತ್ತು ಅವಳನ್ನೇ ನೋಡಿ ಕುಳಿತೆ.ಅಷ್ಟರಲ್ಲಿ ನನ್ನ ಮೂರು ಕಸಿನ್ ತಂಗಿಯಾರು ಬಂದರು ಜೊತೆಗೆ ಅಪ್ಪ ಕೂಡ ಬಂದರು , ಇದು ರೆಡ್ ಹ್ಯಾಂಡ್ ಸ್ಟೋರಿ ಹಾಗುತ್ಗೆ ಅಂತ ಅಂದುಕೊಂಡೆ. ಆದ್ರೆ ಟ್ವಿಸ್ಟ್ ಇತ್ತು ನನ್ನನ್ನು ಆ ಹುಡುಗಿಯ ಅಪ್ಪನ ಮುಂದೆ ನಿಲ್ಲಿಸಿ ಇದು ನಿನ್ನ ಅಂಕಲ್ ಅಂದರೆ ನನ್ನ ದೂರದ ಸಂಬಂಧಿ ಎನ್ನುವುದೆ..!!! ಇದು ನಿನ್ನ ಆಂಟಿ ಎಂದು ಅವಳ ಅಮ್ಮನ ಕಡೆಗೆ ತೋರಿಸಿ ನನ್ನ ಲೈನ್ ಕ್ಲಿಯರ್ ಮಾಡಿದರು.

ಆದರೆ, ನಮ್ಮ ಸಂಭಾಷಣೆ ಯಾವಾಗ..? ಕೊನೆಗೆ ಊಟದ ನಂತರ ಕೈ ತೊಳೆದು ಬಂದು ಕುಳಿತು ಕೊಂಡಗ ಸ್ವಲ್ಪ ಧೈರ್ಯ ಮಾಡಿ ನೀವು ಎಷ್ಟು ಜನ ಮಕ್ಕಳು ಅಂತ ಕೇಳಿದೆ ಇಬ್ಬರು ಎಂದಳು. ಆದರೆ ಈ ಹೆಣ್ಣು ಮಕ್ಕಳು ನಂಬರ್ ಯಾರಿಗೂ ಕೊಡೂದಿಲ್ಲ. ಆದರೆ ನನ್ನ ಬಳಿ ಇದಕ್ಕೆ ಒಂದು ಪ್ಲಾನ್ ಇತ್ತು ಅದು ಪಿ.ಯು ಎಕ್ಸಾಮ್ ಸಮಯ ಅವಳು ಫೈನಲ್ ಇಯರ್ ಆದ ಕಾರಣ ಸಹಾಯ ಮಾಡಲು ಮತ್ತು ಎಕ್ಸಾಮ್ ಬಗ್ಗೆ ವಿಚಾರಿಸಲು ನಿಮ್ಮ ನಂಬರ್ ಕೊಡಬಹುದೆ..? ಎಂದು ಕೇಳಿದೆ.

ಒಪ್ಪಿ ನಂಬರ್ ಕೊಟ್ಟಳು.ವಸಂತಗಳು ಉರುಳಿವೆ ಆದರೆ ನಮ್ಮ ಈ ಸ್ನೇಹ ಹಾಗೆ ಇದೆ. ಕೆಲವೊಂದು ಬಾರಿ ಮನಸ್ಸಿಲ್ಲದೆ ಪಯಣ ಬೆಳೆಸಿದರು ಕನಸಿನ ಪಯಣವಾಗುತದೆ.

ನಿಶಾಲ್ ಲೋಬೊ
ಎಸ್. ಡಿ.ಎಂ ಕಾಲೇಜು.ಉಜಿರೆ

English summary

Valentines Day 2023 Special : love at First Sight Love Stories

valentines Day: love at First Sight Love Stories, read on..
X
Desktop Bottom Promotion