Latest Updates
-
ಲಕ್ಷ್ಮಿ ಪೂಜೆಯ ಮುಹೂರ್ತದ ಗೊಂದಲ: ಕುಟುಂಬದ ಶಾಂತಿಗಾಗಿ ಇಲ್ಲಿದೆ ಸರಳ ಪರಿಹಾರಗಳು -
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ!
ವ್ಯಾಲೆಂಟೈನ್ಸ್ ಡೇ ಸ್ಪೆಷಲ್: ಅವನು-ಅವಳು: “ಸೌಂದರ್ಯ ಲಹರಿ”
"ನಿಂಗೆ ಹೊಟ್ಟೆ ಉರಿ. ಅದಿಕ್ಕೇ ಇಷ್ಟು ಚೆನ್ನಾಗಿರೋ ಪೋಟೋನ ಚೆನ್ನಾಗಿಲ್ಲ ಅಂತಿದ್ಯಾ. ಎಲ್ರೂ 'ಸೋ... ಕ್ಯೂಟ್, ಲುಕಿಂಗ್ ಪ್ರೆಟ್ಟಿ' ಅಂತೆಲ್ಲಾ ಎಫ್.ಬಿ-ಯಲ್ಲಿ ಕಮೆಂಟ್ ಮಾಡಿದ್ದಾರೆ ಗೊತ್ತಾ?... ನೀನೋಬ್ನೇ ಏನೂ ಹೇಳಿಲ್ಲಾ. ಯೂ ಆರ್ ಜೆಲಸ್" ಅಂದು ಬುಸುಗುಡುತ್ತಾ ಅವನ ಕೈಲಿದ್ದ ಕಾದಂಬರಿ ಕಿತ್ತುಕೊಂಡು ಬದಿಗೆಸೆದು, ಸೋಪಾದ ಮೇಲೆ ಅವನಿಗೊರಗಿಕೊಂಡ ಅವಳ ಕಣ್ಣಲ್ಲಿದ್ದುದು ಅವನಿಂದ ಪ್ರಶಂಸೆಯ ಪುಟ್ಟ ಮಾತೊಂದನ್ನು ಕದಿಯುವ ಹಂಬಲ... ಒಂದಷ್ಟು ಹುಸಿಗೋಪ.

ಆದರೆ ಅವಳ ಆರೋಪವನ್ನೆಲ್ಲಾ ಸಾರಾಸಗಟಾಗಿ ಅಲ್ಲಗಳೆದ ಆವನು, ಅವಳನ್ನು ಮೆತ್ತಗೆ ಎದೆಗಾನಿಸಿಕೊಂಡು ಕಣ್ಣು ಮುಚ್ಚಿಕೊಂಡ. ಧ್ಯಾನಸ್ಥನ ಏಕಾಗ್ರತೆಯಿಂದ ಅವಳ ತಲೆಗೂದಲ ಘಮದ ಅಮಲು ಹತ್ತಿದಂತೆ ಆತ ಹೇಳಲಾರಂಭಿಸಿದ...
"ಬೆಳ್ಬೆುಳಗ್ಗೇನೆ ನಿನ್ನ ಎಬ್ಸೋಕೆ ಬಂದಾಗ ಇನ್ನೊಂದೈದು ನಿಮಿಷ ಮಲಗ್ತೀನಿ ಕಣೋ ಪ್ಲೀಸ್... ಅಂತಾ ಮಗು ಥರಾ ಮುಖ ಮಾಡ್ತಿಯಲ್ಲಾ? ಆವಾಗ ಕಾಣೋವಷ್ಟು ಚೆನ್ನಾಗಿ ಆ ಎಫ್.ಬಿ ಪೋಟೋದಲ್ಲಿ ಕಾಣ್ತಿಲ್ಲ ನೀನು..." ಕೊಸರಿಕೊಂಡ ಅವಳ ತುಟಿಯಿಂದ ಮತ್ತೊಂದು ಆಕ್ಷೇಪ ಹೊರಡುವ ಮುನ್ನ ಮತ್ತಷ್ಟು ಬಿಗಿಯಾಗಿ ಅವಳನ್ನಪ್ಪಿದ ಅವನ ಮಾತು ಮುಂದೆ ಸಾಗಿತು...
"ಎಬ್ಬಿಸೋಕೆ ಬಂದ ನನ್ನನ್ನೂ ಎಳ್ಕೊಂಡು, ಜಸ್ಟ್ 5 ಮಿನಿಟ್ಸ್ ಅಂತಾ ಮತ್ತರ್ಧ ಗಂಟೆ ಎದೆ ಮೇಲೆ ತಲೆ ಇಟ್ಕೊಂಡು ಮಲಗ್ತೀ ಅಲ್ವಾ? ಆಗ ನಿನ್ನ ಮುಖದಲ್ಲಿ ಬೇಗ ಏಳೋ ನನ್ನ ಮತ್ತೆ ಮಲಗಿಸಿದ ಖುಷಿ ಇರುತ್ತಲ್ವಾ? ಅವಾಗಿನ ಕ್ಯೂಟ್ನೆಸ್ ಆ ಎಫ್.ಬಿ ಪೋಟೋದಲ್ಲಿಲ್ಲಾ ಬಿಡು..." ಎಂದು ಮತ್ತಷ್ಟು ತನ್ಮಯತೆಯಿಂದ ಅವಳನ್ನು ಬಳಸಿಕೊಂಡ.
ಅಷ್ಟರಲ್ಲಿ ಅವನ ಮಾತಿನ ಪ್ರತೀ ಶಬ್ಧವನ್ನು ಅನುಭವಿಸುತ್ತಾ ಮೈ ಮರೆತಿದ್ದ ಆಕೆಯ ಹುಸಿಗೋಪ ಮಾಯವಾಗಿತ್ತು. ಆತ ಇನ್ನೇನೋ ಹೇಳುವ ಮುನ್ನ ಬಾಹುಬಂಧನದಿಂದ ಬಿಡಿಸಿಕೊಂಡು ಅವನನ್ನೇ ದಿಟ್ಟಿಸಿ ನೋಡುತ್ತಿದ್ದ ಅವಳ ಮುಖದಲ್ಲಿ ಮುಂಜಾನೆಯ ಸೌಂದರ್ಯ ಮತ್ತೆ ಅರಳಿತ್ತು. ಆ ಕ್ಷಣದಲ್ಲಿ ಅವರಿಬ್ಬರ ಕಣ್ಣಲ್ಲೂ ಪ್ರತಿಫಲಿಸುತ್ತಿದ್ದುದು ಅವಳದೇ ಸೌಂದರ್ಯ.
"ಆ ಪೋಟೋ..." ಎಂದು ಹೇಳಲು ಹೊರಟ ಆತನ ಬಾಯಿಂದ ಹೊರಟ ವಾಕ್ಯಗಳು ಅವಳ ಕಿವಿ ತಲುಪುವ ಬದಲು ಮುತ್ತಾಗಿ ಆಕೆಯ ಹೃದಯ ತಲುಪಿತು...
ಇತ್ತ ಮೊಬೈಲ್ ನೋಟಿಫಿಕೇಷನ್ ಅವಳ ಪೋಟೋಗೆ ಮತ್ತಷ್ಟು ಲೈಕ್ಸ್ ಬಂದ ಸೂಚನೆ ನೀಡುತ್ತಲೇ ಇತ್ತು...



Click it and Unblock the Notifications
