Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪ್ರಾಮಿಸ್ ಡೇ: ಇಷ್ಟೊಂದು ರೊಮ್ಯಾಂಟಿಕ್ ಆಗಿ ಮಾಡುವ ಪ್ರಾಮಿಸ್ ತುಂಬಾನೇ ಸ್ಪೆಷಲ್ ಅನಿಸುವುದು
ಲವ್ ಪ್ರಪೋಸ್ ಮಾತ್ರ ರೊಮ್ಯಾಂಟಿಕ್ ಆಗಿ ಇದ್ದರೆ ಸಾಕೇ, ನಾವು ಅವರಿಗೆ ನೀಡುವ ಪ್ರಾಮಿಸ್ ಕೂಡ ರೊಮ್ಯಾಂಟಿಕ್ ಆಗಿದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ? ಫೆಬ್ರವರಿ 11ರಂದು ವ್ಯಾಲೆಂಟೈನ್ಸ್ ವೀಕ್‌ನ ಪ್ರಾಮಿಸ್ ದಿನವಾಗಿದೆ. ಈ ದಿನ ನೀವು ಅವರಿಗೆ ಪ್ರಾಮಿಸ್ ನೀಡುವ, ನಿಮ್ಮ ಬದುಕಿನಲ್ಲಿ ಅವರೆಷ್ಟು ಮುಖ್ಯ, ಅವರನ್ನು ಯಾವ ರೀತಿ ನೋಡಿಕೊಳ್ಳುತ್ತೀರಿ ಎಂದೆಲ್ಲಾ ಪ್ರಾಮಿಸ್ ಮಾಡುವ ದಿನ.
ಈ ದಿನದಂದು ನೀವು ನಿಮ್ಮ ಪ್ರೇಮಿಗೆ ಕೆಲವೊಂದು ಪ್ರಾಮಿಸ್ ನೀಡಬೇಕು ಎಂದು ಬಯಸುವುದಾದರೆ ಆ ಪ್ರಾಮಿಸ್ ರೊಮ್ಯಾಂಟಿಕ್ ಆಗಿ ಹೇಳಿ, ಹೇಗೆ ಎಂದು ಕೇಳುತ್ತಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ಕೆಲ ಟಿಪ್ಸ್:

ಎಂದೆಂದಿಗೂ ನಾ ನಿನ್ನ ಜೊತೆಗಿರುವೆ
ನೀವಿಬ್ಬರು ಜೊತೆಯಾಗಿ ತೆಗೆದ ಪೋಟೋದಲ್ಲಿ 'ನಾನಾಡುವ ಉಸಿರೇ ನೀನು, ಎಂದೆಂದಿಗೂ ನಿನ್ನ ಜೊತೆಗಿರುವೆ' ಎಂಬ ಟೆಕ್ಸ್ಟ್ ಇರುವ ಫೋಟೋ ಫ್ರೇಮ್ ನೀಡುವುದು.

ನಿನ್ನನ್ನು ಎಂದಿಗೂ ನಿರ್ಲಕ್ಷ್ಯ ಮಾಡಲ್ಲ
ನಿಮ್ಮ ಪ್ರೇಮಿಗೆ ನಿಮ್ಮ ಸಂಬಂಧದಲ್ಲಿ ಸ್ವಲ್ಪ ಅಸುರಕ್ಷತೆ ಭಾವವಿದ್ದರೆ ಅದನ್ನು ಹೋಗಲಾಡಿಸುವುದು ನಿಮ್ಮ ಜವಾಬ್ದಾರಿ. ಈ ಪ್ರಪಂಚದಲ್ಲಿ ನನಗೆ ತುಂಬಾ ಇಷ್ಟವಿರುವ ವ್ಯಕ್ತಿ ಅಂದರೆ ಅದು ನೀನು, ನಿನ್ನ ಬಿಟ್ಟು ಬೇರೊಬ್ಬ ವ್ಯಕ್ತಿಗೆ ನನ್ನ ಬದುಕಿನಲ್ಲಿ ಸ್ಥಾನವಿಲ್ಲ, ಸ್ಥಾನ ನೀಡುವುದಿಲ್ಲ ಎಂದು ಅವರ ಕಣ್ಣುಗಳಲ್ಲಿ ಕಣ್ಣಿಟ್ಟು ಹೇಳಿ, ಆ ಕ್ಷಣ ಮರೆಯಲೂ ಅವರಿಗೆ ಎಂದಿಗೂ ಸಾಧ್ಯವಾಗಲ್ಲ, ಅಲ್ಲದೆ ಅವರಲ್ಲಿದ್ದ ಭಯವೂ ದೂರಾಗುವುದು.

ನಮ್ಮಿಬ್ಬರ ನಡುವೆ ಜಗಳವಾದರೆ ಆ ಜಗಳಕ್ಕೆ ಆಯುಸ್ಸು ಕೊಡಲ್ಲ ಎಂಬ ಪ್ರಾಮಿಸ್
ಪ್ರೇಮಿಗಳಾಗಲಿ, ಗಂಡ-ಹೆಂಡತಿಯಾಗಲಿ ಯಾವುದೋ ಚಿಕ್ಕ-ಪುಟ್ಟ ವಿಷಯಕ್ಕೆ ಜಗಳವಾಗುವುದು ಸಹಜ, ಆದರೆ ಅದಕ್ಕೆ ಹೆಚ್ಚಿನ ಆಯುಸ್ಸು ಕೊಡಬಾರದು, ಹೌದು ಜಗಳವಾದರೆ ಅದು ಅಲ್ಲಿಗೆ ಮುಗಿಯಬೇಕು, ಮಾತು ಬಿಡುವುದು, ಅದೇ ವಿಷಯವನ್ನು ಎಳೆದುಕೊಂಡು ಹೋಗುವುದು ಇವೆಲ್ಲಾ ಸಂಬಂಧದಲ್ಲಿ ಸಮಸ್ಯೆ ಹೆಚ್ಚಿಸುವುದು, ಆದ್ದರಿಂದ ಏನೇ ಜಗಳವಾದರೆ ಅದನ್ನು ಬೆಳೆಯಲು ಬಿಡಲ್ಲ ಎಂಬ ಪ್ರಾಮಿಸ್ ಮಾಡಿ, ಮುಂದಿನ ಸಣ್ಣ-ಪುಟ್ಟ ಜಗಳವಾದಾಗ ಈ ಪ್ರಾಮಿಸ್ ಮರೆಯದಿರಿ.

ನಿನ್ನ ಖುಷಿಯಾಗಿಡಲು ಪ್ರಯತ್ನಿಸುವೆ
ಒಬ್ಬರಿಗೊಬ್ಬರು ಈ ರೀತಿ ಪ್ರಾಮಿಸ್ ಮಾಡಿದರೆ ಪರಸ್ಪರ ಹೊಂದಾಣಿಕೆ ಹೆಚ್ಚುವುದು. ಈ ರೀತಿ ಪ್ರಾಮಿಸ್ ಮಾಡುವಾಗ ಅವರಿಗೆ ಖುಷಿಯಾಗುವಂತೆ ಮಾಡಿ ಒಂದು ರೊಮ್ಯಂಟಿಕ್ ಮೂವಿ ನೋಡಲು ಹೋಗುವುದು ಅಥವಾ ರೊಮ್ಯಾಂಟಿಕ್ ಡಿನ್ನರ್‌ಗೆ ಹೋಗಿ, ಅವರಿಗೆ ಟ್ರಿಪ್ ಇಷ್ಟವಾದರೆ ಟ್ರಿಪ್ ಹೋಗಿ, ನಂತರ ಅವರ ಕೈಯನ್ನು ನಿಮ್ಮ ಕೈಗೆ ತೆಗೆದುಕೊಂಡು ನಿನ್ನನ್ನು ಖುಷಿಯಾಗಿಡಲೂ ಯಾವಾಗಲೂ ಪ್ರಯತ್ನಿಸುವೆ ಎಂದು ಪ್ರಾಮಿಸ್ ಮಾಡಿ ಅವರಿಗೆ ನಿಮ್ಮ ಮಾತುಗಳಿಂದ ತುಂಬಾನೇ ಖುಷಿಯಾಗುವುದು.

ನಿನ್ನ ಸಾಧನೆಗೆ ನನ್ನ ಬೆಂಬಲ ಸದಾ ಇದ್ದೇ ಇರುತ್ತದೆ
ನಿಮ್ಮ ಸಂಗಾತಿ ಏನಾದರೂ ಬ್ಯುಸ್‌ನೆಸ್ ಪ್ರಾರಂಭಿಸಬೇಕು ಅಥವಾ ಓದಬೇಕು, ಇನ್ನಿತರ ಸಾಧನೆಯ ಮಹತ್ವಾಕಾಂಕ್ಷೆ ಹೊಂದಿದ್ದರೆ ಈ ಪ್ರಾಮಿಸ್ ದಿನ ಕಷ್ಟವಿರಲಿ-ಸುಖವಿರಲಿ ನಿನ್ನ ಗುರಿ ಮುಟ್ಟಲು ಸದಾ ನನ್ನ ಬೆಂಬಲವಿರುತ್ತದೆ ಎಂದು ಪ್ರಾಮಿಸ್ ನೀಡಿ, ಅವರಿಗೆ ತುಂಬಾನೇ ಖುಷಿಯಾಗುವುದು. ನಿಮ್ಮಂಥ ಸಂಗಾತಿ ಅವರಿಗೆ ಸಿಕ್ಕಿದ್ದಕ್ಕೆ ಹೆಮ್ಮೆ ಪಡುತ್ತಾರೆ.
ಈ ರೀತಿ ಪ್ರಾಮಿಸ್ ಡೇಯನ್ನು ಸ್ಪೆಷಲ್ ಆಗಿಸಿ...



Click it and Unblock the Notifications
