Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಿಮ್ಮ ಗಂಡ ಸದಾ ಫ್ರೆಂಡ್ಸ್-ಫ್ರೆಂಡ್ಸ್ ಅಂತ ಸುತ್ತುತ್ತಾರೆಯೇ?
ಮದುವೆಯಾದ ಮೇಲೆ ಹೆಂಡತಿಗೆ ದೊಡ್ಡ ಶತ್ರುಗಳೆಂದರೆ ಅವನ ಫ್ರೆಂಡ್ಸ್. ನನ್ನ ಗಂಡ ನನ್ನ ಜೊತೆ ಟೈಮ್ ಸ್ಪೆಂಡ್ ಮಾಡುವುದಕ್ಕಿಂದ ಸ್ನೇಹಿತರ ಜೊತೆ ಹೆಚ್ಚು ಸ್ಪೆಂಡ್ ಮಾಡುತ್ತಾರೆ, ಅವರಿಗೆ ನನಗಿಂತ ಅವರ ಸ್ನೇಹಿತರೇ ಹೆಚ್ಚು ಈ ರೀತಿಯ ಕಂಪ್ಲೇಂಟ್ ತುಂಬಾ ಹೆಂಡತಿಯರು ಮಾಡುತ್ತಾರೆ. ಈ ಕಾರಣಕ್ಕಾಗಿ ಗಂಡ ಸ್ನೇಹಿತರನ್ನು ಕಂಡರೆ ಇವರಿಗೆ ಆಗುವುದಿಲ್ಲ. ನಿಮಗೂ ಕೂಡ ಇಂಥದ್ದೇ ಕಂಪ್ಲೇಂಟ್ ಇದೆಯೇ? ಹಾಗಾದರೆ ಈ ಲೇಖನ ನಿಮಗಾಗಿ.....

ನಿಮ್ಮ ಗಂಡ ಸದಾ ಫ್ರೆಂಡ್ಸ್-ಫ್ರೆಂಡ್ಸ್ ಅಂತ ಸುತ್ತುತ್ತಾರೆಯೇ?
ಮದುವೆಯಾದ ತಕ್ಷಣ ಗಂಡನ ಫ್ರೆಂಡ್ಸ್ ಸರ್ಕಲ್‌ನಿಂದ ಸಂಪೂರ್ಣವಾಗಿ ದೂರ ಇರಬೇಕೆಂದು ಹೇಳಲು ಸಾಧ್ಯವಿಲ್ಲ. ಆದರೆ ನಿಮಗೂ ಅವರ ಸಮಯ ಬೇಕು ಎಂದು ಮನವರಿಕೆ ಮಾಡಲು ಪ್ರಯತ್ನಿಸಿ. ಹಾಗಾಂತ ಜಗಳವಾಡುವುದಲ್ಲ, ಬದಲಿಗೆ ಈ ಕುರಿತು ಅವರ ಜೊತೆ ಮಾತನಾಡಿ.
ಅವನ ಭಾವನೆಗಳನ್ನು ಗೌರವಿಸಿ
ಹೆಂಡತಿ, ಅಪ್ಪ-ಅಮ್ಮನ ಬಳಿ ಹೇಳಿಕೊಳ್ಳದ ಎಷ್ಟೋ ವಿಷಯಗಳನ್ನು ಫ್ರೆಂಡ್ಸ್ ಜೊತೆ ಚರ್ಚಿಸುತ್ತಾರೆ. ನನಗೆ ಕಷ್ಟದ ಸಂದರ್ಭದಲ್ಲಿ ನನ್ನ ಜೊತೆ ನಿಂತದ್ದು ನನ್ನ ಫ್ರೆಂಡ್ಸ್ ಎಂಬ ಭಾವನೆ ಅವರಲ್ಲಿದ್ದರೆ ನೀವು ಬಂದ ತಕ್ಷಣ ಫ್ರೆಂಡ್ಸ್ ಜೊತೆ ಹೆಚ್ಚು ಓಡಾಡಬೇಡಿ ಎಂದರೆ ನೀವು ಅವರ ಫ್ರೆಂಡ್ಸ್‌ನ ಅವರಿಂದ ದೂರ ಮಾಡುತ್ತಿದ್ದೀರಿ ಎಂಬ ಭಾವನೆ ಬಂದು ಬಿಡುತ್ತದೆ. ಆದ್ದರಿಂದ ಇದು ತುಂಬಾ ಸೆನ್ಸಿಟಿವ್ ಆದ ವಿಚಾರ ಆದ ಕಾರಣ ಮೊದಲಿಗೆ ನೀವು ಅವರ ಭಾವನೆಯನ್ನು ಗೌರವಿಸಿ. ಆ ಫ್ರೆಂಡ್ಸ್ ಅವರ ಬದುಕಿನಲ್ಲಿ ಎಷ್ಟು ಮುಖ್ಯ ಎಂಬುವುದು ನಿಮಗೆ ತಿಳಿಯುತ್ತದೆ, ಆಗ ನಿಮಗೆ ಬೇಸರ ಕಡಿಮೆಯಾಗುತ್ತದೆ.
ನಿನಗೆ ನನಗಿಂತ ನಿನ್ನ ಫ್ರೆಂಡ್ಸ್ ಹೆಚ್ಚು ಎಂಬ ಮಾತಗಳನ್ನಾಡದಿರಿ
ಮುತ್ತು ಒಡೆದರೆ ಹೋಯ್ತು ಮಾತು ಆಡಿದರೆ ಹೋಯ್ತು ಅಂತಾರಲ್ಲ ಆದ್ದರಿಂದ ನೀವು ನಿಮ್ಮ ಗಂಡನ ಬಳಿ ಈ ಪದ ಹೇಳಲೇಬೇಡಿ. ಅವರಿಗೂ ನಿಮ್ಮ ಮೇಲೆ ಪ್ರೀತಿ ಇರುತ್ತದೆ, ಅದರಂತೆ ಸ್ನೇಹಿತರೂ ಬೇಕು. ಅಂಥ ಸಂದರ್ಭದಲ್ಲಿ ನೀವು ಅವರ ಬಳಿ ನಿಮಗಾಗಿ ಕೂಡ ಸ್ವಲ್ಪ ಸಮಯ ಬೇಕು ಎಂಬುವುದನ್ನು ಅರ್ಥ ಮಾಡಿಸಿ, ಅವರು ಅರ್ಥ ಮಾಡಿಕೊಳ್ಳುತ್ತಾರೆ. ಇಂಥ ವಿಷಯದಲ್ಲಿ ಮಾತಿನ ಯುದ್ಧ ಮಾಡಿದರೆ ನಿಮ್ಮ ಸಂಬಂಧ ಹಾಳಾಗುವುದೇ ಹೊರತು ಮತ್ಯಾವ ಲಾಭವೂ ಇಲ್ಲ.
ಗಂಡನ ಫ್ರೆಂಡ್ಸ್ ಜೊತೆ ನಿಷ್ಠೂರವಾಗಿ ನಡೆದುಕೊಳ್ಳಬೇಡಿ
ನಿಮ್ಮ ಗಂಡ ನಿಮಗೆ ಟೈಮ್ ಕೊಡ್ತಿಲ್ಲ ಎಂದಾದರೆ ಅದಕ್ಕೆ ನಿಮ್ಮ ಗಂಡನ ಸ್ನೇಹಿತರನ್ನು ದ್ವೇಷಿಸಿ ಏನು ಪ್ರಯೋಜನ, ನೀವು ಮೊದಲು ನಿಮ್ಮ ಗಂಡನಿಗೆ ತಿಳಿ ಹೇಳಿ, ಅವರ ಜೊತೆ ಸುತ್ತಾಡಿ ಅದೇ ಸಮಯದಲ್ಲಿ ಮನೆ ಕಡೆ ಕೂಡ ಗಮನವಿರಲಿ ಎಂಬ ತಿಳಿಹೇಳಿ.
ನಿಮ್ಮ ಗಂಡನ ಫ್ರೆಂಡ್ಸ್ ಎಂಥವರು ಎಂಬುವುದನ್ನು ತಿಳಿಯಿರಿ
ನಿಮ್ಮ ಗಂಡ ಎಂಥವರ ಜೊತೆ ಫ್ರೆಂಡ್ಸ್‌ಶಿಪ್ ಇಟ್ಟುಕೊಂಡಿದ್ದಾರೆ ಎಂದು ಗಮನಿಸುವುದು ಕೂಡ ಒಳ್ಳೆಯದು. ಅದು ತಪ್ಪಾದ ಸಂಗ ಎಂದು ಗೊತ್ತಾದರೆ ಅಂಥವರ ಜೊತೆ ಸೇರದಂತೆ ನಿಮ್ಮ ಗಂಡನಿಗೆ ಹೇಳಿ, ಅಂಥ ಸಂಗವನ್ನು ಮಾತ್ರ ಯಾವುದೇ ಕಾರಣಕ್ಕೆ ಒಳ್ಳೆಯದಲ್ಲ, ಅವರಿಂದ ನಿಮ್ಮ ಗಂಡನಿಗೂ ಕೆಟ್ಟ ಹೆಸರು, ಹಾನಿ ಉಂಟಾಗಬಹುದು.



Click it and Unblock the Notifications

