Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹುಡುಗಿಯನ್ನು ಇಂಪ್ರೆಸ್ ಮಾಡಿ ಕಿಸ್ ಪಡೆಯುವುದು ಹೇಗೆ?
ಸತಿ-ಪತಿ ಅಥವಾ ಲವರ್ಸ್ ಗಳ ವಿಚಾರದಲ್ಲಿ ಕಿಸ್ ಅನ್ನೋದು ತುಂಬಾನೇ ಇಂಪಾರ್ಟೆಂಟ್ ವಿಷ್ಯ. ಇದು ಕಾಮನ್ ವಿಷ್ಯ ಕೂಡ ಹೌದು. ಆದರಲ್ಲೂ ಮೊದಲ ಕಿಸ್ ಮಾಡೋದು ಅಂದರೆ ತುಂಬಾನೇ ಇಂಟ್ರೆಸ್ಟಿಂಗ್. ಹುಡುಗಿಯನ್ನು ಇಂಪ್ರೆಸ್ ಮಾಡಿ ಚುಂಬನ ಪಡೆದುಕೊಳ್ಳುವ ಟಾಸ್ಕ್ ಇದ್ಯಾಲ್ವಾ? ಅದರಷ್ಟು ರೋಮಾಂಚನಕಾರಿ ಮತ್ತೊಂದು ಇಲ್ಲ.
ಇನ್ನು ಕಿಸ್ ಮಾಡೋವಾಗ ಸಿಗೋ ಫೀಲ್ ಕೂಡ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರುತ್ತಿರುವ ಅನುಭವ ನೀಡುತ್ತದೆ. ಕಿಸ್ ಅಂದ್ರೆ ಹಾಗೇ ಆದರ ಫೀಲಿಂಗ್ ಒಂದು ಅದ್ಭುತ ಅನುಭವ. ಈಗ ಕಿಸ್ ನಲ್ಲೂ ಅನೇಕ ವಿಧಗಳನ್ನು ಕಾಣಬಹುದು. ಸಾಮಾನ್ಯ ಕಿಸ್, ಲಿಪ್ ಲಾಕ್, ಸ್ಮೂಚ್ ಹೀಗೆ ವಿವಿಧ ಕಿಸ್ ಗಳು ಇವೆ. ಅದರಲ್ಲೂ ಫ್ರೆಂಚ್ ಕಿಸ್, ಅಮೆರಿಕನ್ ಕಿಸ್, ಇಂಡಿಯನ್ ಕಿಸ್ ಹೀಗೆ ಬೇರೆ ಬೇರೆ ದೇಶದ ಕಿಸ್ ಗಳು ಕೂಡ ವಿಭಿನ್ನವಾಗಿದೆ. ಅದೇನೆ ಇದ್ದರೂ ಕಿಸ್ ಮಾಡಬೇಕು ಅಂತ ನಮಗೊಬ್ಬರಿಗೆ ತೋಚಿದ್ರೆ ಆಗೋದಿಲ್ಲ ನಾವು
ಕಿಸ್ ಮಾಡುವ ಹುಡುಗಿಯು ನಮಗೆ ಕಿಸ್ ಮಾಡ್ಬೇಕು ಅಂತ ಅನಿಸಬೇಕು. ಹಾಗಾದ್ರೆ ನೀವು ಇಷ್ಟಪಡುವ ಹುಡುಗಿಯಿಂದ ಹೇಗೆ ಕಿಸ್ ಪಡೆಯುತ್ತೀರಾ? ಈ ಪ್ರಶ್ನೆ ನಿಮಗೆ ಕಾಡುತ್ತಿದ್ದರೆ ಇದಕ್ಕೆ ಒತ್ತರ ಇಲ್ಲಿದೆ. ಕಿಸ್ ಪಡೆಯಲು ಇಲ್ಲಿದೆ ವಿವಿಧ ಟಿಪ್ಸ್.

ನೀವು ಕಿಸ್ ಗೆ ತಯಾರಾಗಿರಿ!
ಕಿಸ್ ಕೊಡುವ ಮುನ್ನ ನೀವು ತಯಾರಾಗಿ ಹೋಗುವುದು ಒಳ್ಳೆಯದು. ಹೌದು, ಏಕಾಏಕಿ ಕಿಸ್ ನಡೆದು ಕೆಟ್ಟ ಅಭಿಪ್ರಾಯ ಮೂಡುವುದಕ್ಕಿಂತ ನೀವು ನಿಮ್ಮ ಮೈಂಡ್ ನಲ್ಲಿ ಕಿಸ್ ಪಡೆಕೊಳ್ಳುತ್ತೇನೆ ಎನ್ನುವ ನಿರ್ಧಾರವನ್ನು ಮಾಡಿಕೊಳ್ಳಿ. ಅದಕ್ಕಾಗಿ ತಯಾರಾಗಿ. ಹೌದು, ಶೇವಿಂಗ್ ಮಾಡಿ, ಸ್ನಾನ ಮಾಡಿ ಒಳ್ಳೆ ಬಟ್ಟೆ ತೊಟ್ಟು ಹೋಗಿ. ಹಲ್ಲು, ಬಾಯಿಯನ್ನು ಸರಿಯಾಗಿ ತೊಳೆದುಕೊಂಡು ಹೋಗಿ. ಒಳ್ಳೆ ಪರ್ಫ್ಯೂಮ್ ಬಳಸಿ. ಈ ಎಲ್ಲಾ ಚಟುವಟಿಕೆ ಸರಿಯಾಗಿ ಮಾಡಿದರೆ ನಿಮ್ಮ ಗೆಳತಿಗೂ ನಿಮ್ಮನ್ನ ನೋಡುವಾಗ ಇಂಪ್ರೆಸ್ ಆಗುತ್ತದೆ ಕಿಸ್ ಕೊಡುವ ಎಂದು ಅನಿಸುತ್ತದೆ. ಅದೇ ನೀವು ಬಟ್ಟೆ ಗಲೀಜು ಮಾಡಿಕೊಂಡು, ಬಾಯಿಯಲ್ಲಿ ಕೊಳಕಿದ್ದರೆ ಯಾರು ಕೂಡ ಕಿಸ್ ಮಾಡ್ಬೇಕು ಅಂತ ಅನಿಸೋದಿಲ್ಲ. ಹೀಗಾಗಿ ಕಿಸ್ ಮಾಡಿಸಿಕೊಳ್ಳಲು ನೀವು ತಯಾರಿಯಿಂದ ಹೋಗಬೇಕು.

ಸರಿಯಾದ ಸ್ಥಳಕ್ಕೆ ಕರೆದುಕೊಂಡು ಹೋಗಿ!
ನಿಮ್ಮ ಹುಡುಗಿ ಕಿಸ್ ಮಾಡಬೇಕು ಅಂದರೆ ನೀವು ಅವರನ್ನು ಸರಿಯಾದ ಸ್ಥಳಕ್ಕೆ ಕರೆದುಕೊಂಡು ಹೋಗಬೇಕು. ಉದಾಹರಣೆಗೆ ಪಾರ್ಕ್ ಗೆ ಹೋಗಿ ಕಿಸ್ ಮಾಡೋಡ ಎಂದರೆ ಕೆಲವು ಹುಡುಗಿಯರು ಇದನ್ನು ಇಷ್ಟ ಪಡೋದಿಲ್ಲ. ಸಾರ್ವಜನಿಕ ಸ್ಥಳ ಎಂದು ಬೈಯೋದು ಉಂಟು. ಹೀಗಾಗಿ ನೀವು ಚೂಸ್ ಮಾಡುವ ಸ್ಥಳ ಮುಖ್ಯವಾಗಿರುತ್ತದೆ. ನಿಮ್ಮ ಯುವತಿ ಇಷ್ಟಪಡುವ ಸ್ಥಳವನ್ನು ಚೂಸ್ ಮಾಡಿದರೆ ಅವ್ರೇ ಖುಷಿಯಿಂದ ನಿಮಗೆ ಮುತ್ತಿಕ್ಕಬಹುದು. ಉದಾಹರಣೆಗೆ ಒಂದೊಳ್ಳೆ ಪ್ರೈವಸಿ ಇರುವ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಬೇಕು. ಅದು ರೊಮ್ಯಾಂಟಿಕ್ ವಾತಾವರಣದಿಂದ ಕೂಡಿರಬೇಕು. ಇಂತಹ ಸ್ಥಳದಲ್ಲಿ ಅವರು ನಿಮ್ಮಿಂದ ಆಕರ್ಷಿತರಾಗಿ ಕಿಸ್ ಮಾಡಬಹುದು. ಈ ಮೂಲಕ ನೀವು ಚುಂಬನ ಪಡೆಯಬಹುದು.

ಕೆಲವು ಸುಳಿವುಗಳನ್ನು ನೀಡಿ!
ಕಿಸ್ ಅನ್ನೋದು ನಾಚಿಕೆ ಸಂಗತಿಯಾದ್ರು ಅದರ ಫೀಲ್ ಬೇರೆನೆ ಇದೆ. ಅದರ ಮಜಾ ಹಾಗೂ ಖುಷಿಯೇ ಬೇರೆ. ಹೀಗಾಗಿ ಕಿಸ್ ಮಾಡ್ಬೇಕು ಅಥವಾ ತಗೋಬೇಕು ಅನ್ನೋವಾಗ ನಿಮಗೆ ಕೊಂಚ ನಾಚಿಕೆ ಅನಿಸಬಹುದು. ನಿಮ್ಮ ಹುಡುಗಿಗೂ ಇದೇ ರೀತಿಯ ಅನುಭವ ಆಗಬಹುದು. ಹೀಗಾಗಿ ನೀವು ಅವರಿಗೆ ಕೆಲವೊಂದು ಸನ್ನೆ ನೀಡಬೇಕಾಗಬಹುದು. ಅಂದರೆ ಕೈಯನ್ನು ಹಿಡಿದುಕೊಳ್ಳೋದು, ಕೈಗೆ ಕೈ ತಾಕಿಸೋದು, ಹತ್ತಿರ ಕೂರೋದು, ಫ್ಲರ್ಟ್ ಮಾಡೋದು, ಕಣ್ಣನ್ನೇ ನೋಡುವುದು. ಹೀಗೆ ವಿವಿಧ ಸನ್ನೆಗಳ ಮೂಲಕ ಕಿಸ್ ಗೆ ತನ್ನ ಹೃದಯ ಹಾಗೂ ತುಟಿ ಬಯಸುತ್ತಿದೆ ಎಂದು ನಿಮ್ಮ ಗೆಳತಿಗೆ ತೋರಿಸಬೇಕು. ಹೀಗೆ ಮಾಡಿದಾಗ ಖಂಡಿತವಾಗ್ಲೂ ನಿಮಗೆ ನಿಮ್ಮ ಸಂಗಾತಿಯಿಂದ ಕಿಸ್ ಸಿಕ್ಕೇ ಸಿಗುತ್ತೆ.

ಸ್ಪರ್ಶಿಸೋದು ಮತ್ತು ಹೊಗಳುವುದು!
ಇದು ಈಗಾಗಲೇ ಹೇಳಿದ ಸುಳಿವಿನ ಮುಂದುವರಿಗೆ ಭಾಗವಾಗಿದೆ. ನಿಮ್ಮ ಗೆಳತಿಯ ಕಾಲು, ಕೈಯನ್ನು ಮುಟ್ಟುವುದು, ಅವರಿಗೆ ಅಂಟಿಕೊಂಡು ಕೂರುವುದು ಹೀಗೆ ಮಾಡುವ ಮೂಲಕ ಇಬ್ಬರಿಗೂ ಒಂದು ರೀತಿಯ ಟೆಮ್ಟ್ ಅನುಭವ ಆಗುತ್ತದೆ. ಈ ವೇಳೆ ಈಸೀಯಾಗಿ ಕಿಸ್ ಪಡೆಯಬಹುದಾಗಿದೆ. ಇನ್ನು ಹೀಗೆ ಕಾಲು, ಕೈ ಸ್ಪರ್ಶಿಸುವಾಗ ಅವರನ್ನು ಹೊಗಳಬೇಕು. ತುಟಿ, ಮುಖದ ಬಗ್ಗೆ ಹೊಗಳಿದರೆ ಅವರು ಪುಳಕಿತರಾಗುತ್ತಾರೆ.

ಕಣ್ಣು ನೋಡಿ ಕಿಸ್ ಕೊಡಿ!
ಕಿಸ್ ನ ಮೊದಲ ಹೆಜ್ಜೆಯೇ ಕಣ್ಣಿನಲ್ಲಿ ಕಣ್ಣನಿಟ್ಟು ನೋಡುವುದು. ನೀವು ಅನೇಕ ಸಿನಿಮಾಗಳಲ್ಲಿ ನೋಡಿರಬಹುದು ಕಣ್ಣು ನೋಡುವ ಪ್ರೇಮಿಗಳು ಮತ್ತೆ ಮೆಲ್ಲಗೆ ಕಿಸ್ ಮಾಡಲು ಆರಂಭಿಸುತ್ತಾರೆ. ಹಾಗೇ ನೀವು ಕೂಡ ನಿಮ್ಮ ಗೆಳತಿಯಿಂದ ಕಿಸ್ ಪಡೆಯಬೇಕಾದರೆ ಮೊದಲು ನಿಮ್ಮ ಹತ್ತಿರ ಹೋಗಿ ರೊಮ್ಯಾಂಟಿಕ್ ಆಗಿ ಅವಳ ಕಣ್ಣನ್ನೇ ನೋಡಬೇಕು. ಅವಳು ನಿಮ್ಮ ಕಣ್ಣನ್ನೇ ನೋಡುವಂತೆ ಮಾಡಬೇಕು. ನಂತರ ಅಲ್ಲಿಂದ ನಿಮ್ಮ ಕಣ್ಣಿನ ನೋಟ ಅವಳ ತುಟಿಯತ್ತ ವಾಲಲಿ. ಹೀಗೆ ಅವಳ ಕಣ್ಣು ಕೂಡ ನಿಮ್ಮ ತುಟಿಯತ್ತ ವಾಲಲಿ. ಈ ವೇಳೆ ನಿಮ್ಮ ಸಂಗಾತಿಯೇ ನಿಮಗೆ ಕಿಸ್ ಕೊಡುವುದರಲ್ಲಿ ಡೌಟ್ ಬೇಡ.

ಒಟ್ಟಿಗೆ ಚುಂಬಿಸುವಂತೆ ಮಾಡಿ!
ಇದು ಮೊದಲ ಬಾರಿ ಕಿಸ್ ಮಾಡುವವರಿಗಿರುವ ಟಿಪ್ಸ್ ಆಗಿದೆ. ಉದಾಹರಣೆಗೆ ನಿಮ್ಮ ಗೆಳತಿ ನಿಮಗೆ ಮೊದಲ ಬಾರಿಗೆ ನಿಮ್ಮನ್ನು ಚುಂಬಿಸಲು ಇಷ್ಟಪಡುತ್ತಿದ್ದಾಳೆ ಎಂದು ನಿಮಗೆ ಅನಿಸಿದರೆ ನೀವು ಇಂಟ್ರೆಸ್ಟ್ ತೋರಿಸಿ. ಈ ಮೂಲಕ ಅವಳಿಗೆ ಧೈರ್ಯ ತುಂಬಿ, ಅನೇಕ ಯುವತಿಯರು ನಾನೇ ಮೊದಲ ಕಿಸ್ ಮಾಡಿದರೆ ಏನು ಅಂದುಕೊಳ್ಳುತ್ತಾನೋ ಎಂದು ಯೋಚಿಸುತ್ತಾರೆ. ಹೀಗಾಗಿ ಅವರದ್ದು ಮೊದಲ ಕಿಸ್ ಆದರೆ ನೀವು ಅವರ ತುಟಿ ಅತ್ತಿತ್ತ ಓಡುತ್ತಿರುವುದನ್ನು ನೋಡುತ್ತಲೇ ಇರಬೇಕು. ಆ ತುಟಿ ನಿಮ್ಮ ಹತ್ತಿರ ಬರುತ್ತದೆ ಎಂದಾಗಲೇ ನೀವು ನಿಮ್ಮ ತುಟಿಯನ್ನು ಅವಳ ತುಟಿಗೆ ಸೇರಿಸಿ ಈ ಮೂಲಕ ಒಟ್ಟಿಗೆ ಇಕಿಸ್ ಮಾಡಿ.

ಪ್ರೀತಿ, ಕೇರ್ ಮಾಡಿ!
ಯಾವುದೇ ಕಿಸ್ ಗೆ ಎಲ್ಲದಕ್ಕಿಂತಲೂ ಮಿಗಿಲಾಗಿ ನೀವು ಅವರನ್ನು ಪ್ರೀತಿಸಬೇಕು , ಕೇರ್ ಮಾಡಬೇಕು.ಪತ್ನಿಯಾಗಿರಲಿ, ಸಂಗಾತಿಯಾಗಿರಲಿ ಅಥವಾ ಗೆಳತಿಯಾಗಿರಲಿ. ಯಾರಿಂದಲೂ ಕಿಸ್ ಪಡೆಯಬೇಕು ಅಂದರೆ ಅವರಿಗೆ ನೀವು ಪ್ರೀತಿಪಾತ್ರರಾಗಿರಬೇಕು. ನಿಮ್ಮ ನಡುವೆ ಆ ಇಂಟಿಮೇಟ್ ಇರಬೇಕು. ಹೀಗೆ ಇದ್ದರೆ ನಿಮಗೆ ಸುಲಭವಾಗಿ ಕಿಸ್ ಸಿಗುತ್ತೆ. ಪ್ರೀತಿ ಮತ್ತು ಕೇರ್ ನಿಂದ ಅದ್ಭುತಗಳೇ ನಡೆಯುತ್ತದೆ. ಬರೀ ಕಿಸ್ ಮಾತ್ರವಲ್ಲ, ರೊಮ್ಯಾನ್ಸ್ ಕೂಡ ನಡೆಯುತ್ತದೆ.
ಭದ್ರತೆ ಒದಗಿಸಿ!
ಯಾವುದೇ ಹುಡುಗಿ ನಿಮ್ಮ ಜೊತೆ ದೈಹಿಕವಾಗಿ ಮೂವ್ ಆಗಬೇಕಾದರೆ ಅವಳಿಗೆ ನಿಮ್ಮ ಮೇಲೆ ನಂಬಿಕೆ ಇರಬೇಕು. ಅವಳಿಗೆ ಭದ್ರತೆ ಫೀಲ್ ಆಗಬೇಕು. ಹೀಗಾಗಿ ಅವಳು ನಿಮ್ಮ ಜೊತೆ ಇದ್ದರೆ ಸೇಫ್ ಎನ್ನುವುದನ್ನು ತೋರಿಸಿಕೊಡಿ. ಹೀಗೆ ಮಾಡಿದರೆ ಖಂಡಿತವಾಗ್ಲೂ ನಿಮ್ಮ ಗೆಳತಿ ನಿಮಗೆ ಒಂದು ಕಿಸ್ ಅಲ್ಲ ಸಾವಿರ ಕಿಸ್ ಮಾಡಲು ರೆಡಿ ಇರುತ್ತಾಳೆ.



Click it and Unblock the Notifications
