Latest Updates
-
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು!
ಸ್ನೇಹಿತರ ದಿನ 2025: ನಿಮ್ಮ ಸ್ನೇಹಿತರಿಗೆ ಶುಭಾಶಯ ಕೋರಲು ಇಲ್ಲಿವೆ ಸುಂದರ ಸಂದೇಶಗಳು
ಗೆಳೆತನ ಎನ್ನುವುದು ಪದಗಳಿಗೆ ಅಥವಾ ಯಾವುದೇ ಕಟ್ಟುಪಾಡುಗಳಿಗೆ ಸಿಗುವ ಬಂಧವಲ್ಲ. ಎಲ್ಲಾ ರಕ್ತ ಸಂಬಂಧಗಳನ್ನು ಮೀರಿದ ಸುಂದರ ಬಂದವೇ ಗೆಳೆತನ. ಪ್ರಾಣ ಸ್ನೇಹಿತರು ಯಾವತ್ತಿದ್ದರೂ ಸ್ನೇಹಿತರೇ, ಅವರಿಗೆ ಯಾವುದೇ ಒಂದು ದಿನದ ಆಚರಣೆ ಎನ್ನುವುದು ಬೇಕಾಗಿಲ್ಲ.

ಆದರೂ ಪಾಶ್ಚಾತ್ಯ ದೇಶಗಳಲ್ಲಿ ಸ್ನೇಹಿತರಿಗಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ. ಇದನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 2011ರ ಎಪ್ರಿಲ್ 27ರಂದು ತನ್ನ ಅಧಿವೇಶನದಲ್ಲಿ ಜುಲೈ 30 ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಘೋಷಣೆ ಮಾಡಿತು. ಆದರೆ ಭಾರತದಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ.
ನಿಮ್ಮ ಸ್ನೇಹಿತರಿಗೆ ಶುಭಾಶಯ ಕೋರಲು ಇಲ್ಲಿವೆ ಸುಂದರ ಸಂದೇಶಗಳು ನೋಡಿ:

ಕೋಟ್ 1
1. ಜೀವನದಲ್ಲಿ ಅತಿ ಮೌಲ್ಯವಾದ ಗಿಫ್ಟ್ ನೀನು
ನಮ್ಮ ಸ್ನೇಹ ಸದಾ ಹೀಗಿರಲಿ
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 2
2. ನಾವು ಏನು ಎಂದು ನಮಗಿಂತ ಚೆನ್ನಾಗಿ ಗೊತ್ತಿರುವುದು ನಮ್ಮ ಫ್ರೆಂಡ್ಸ್‌ಗೆ ಮಾತ್ರ. ನಗುವಾಗ ಜೊತೆಗೂಡುವ, ಅಳುವಾಗ ಹೆಗಲು ಕೊಡುವ ಈ ಸಂಬಂಧ ಎಲ್ಲಾ ಬಂಧಗಳನ್ನು ಮೀರಿದ್ದು
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 3
3. FRIENDS
FIGHT FOR YOU
RESPECT YOU
INCLUDE YOU ENCOURAGE YOU
NEED YOU
SESERVE YOU
STAND BY YOU

ಕೋಟ್ 4
4. ಎಲ್ಲಾ ಬಂಧವೂ ನಮ್ಮಿಂದ ಏನೋ ನಿರೀಕ್ಷಿಸುತ್ತದೆ, ಆದರೆ ಏನೂ ನಿರೀಕ್ಷಿಸದೆ ಬರುವುದು ಸ್ನೇಹವೊಂದೇ.
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 5
5. ನನಗೆ ನಿನ್ನ ಎಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಇರಬಹುದು, ಆದರೆ ಅದನ್ನು ಎದುರಿಸಲು ನಿನ್ನೊಬ್ಬನೇ ಖಂಡಿತ ಬಿಡಲ್ಲ ಅಂತ ಬರುವವರೇ ಫ್ರೆಂಡ್ಸ್.
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 6
6. ಸುಖದಲ್ಲಿ ನಮ್ಮ ಜೊತೆಗೆ ಇರುವವರು ಸ್ನೇಹಿತರಲ್ಲ, ಕಷ್ಟಾ ಅಂತ ಬಂದಾಗ ಯಾರು ಜೊತೆಗಿರುತ್ತಾರೋ ಅವರೇ ನಿಜವಾದ ಸ್ನೇಹಿತರು.
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 7
7. ನನ್ನ ಮುಂದೆ ಸಾಗ ಬೇಡ, ನಾನು ನಿನ್ನ ಹಿಂಬಾಲಿಸಲ್ಲ
ನನ್ನ ಹಿಂದೆ ಬರಬೇಡ, ಮುಂದೆ ಕರೆದುಕೊಂಡು ಹೋಗಲ್ಲ
ನನ್ನ ಬದಿಗೆ ಬಾ ಗೆಳಯ, ಕೈ ಹಿಡಿದು ಸಾಗೋಣ
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 8
8. ಒಳ್ಳೆಯ ಸ್ನೇಹಿತರು ಪ್ರತಿದಿನ ಗಂಟೆ ಗಟ್ಟಲೆ ಮಾತನಾಡಬೇಕಾಗಿಲ್ಲ, ಜೊತೆಗೆ ಸಮಯ ಕಳೆಯಬೇಕಾಗಿಲ್ಲ ಅವರ ಹೃದಯಲ್ಲಿ ನೆಲೆಸಿರುವಷ್ಟು ಸಮಯ ಅವರನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ
ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 9
9. ನೀನು ನನ್ನ ಬದುಕಿಗೆ ಬಂದ ಕ್ಷಣದಿಂದ ನನ್ನ ಬದುಕು ಮತ್ತಷ್ಟು ಸುಂದರವಾಗಿದೆ ಫ್ರೆಂಡ್, ನಮ್ಮ ಫ್ರೆಂಡ್‌ಶಿಪ್ ಹೀಗೆ ಸಾಗಲು ನೂರು ಕಾಲ.... ಹ್ಯಾಪಿ ಫ್ರೆಂಡ್‌ಶಿಪ್ ಡೇ

ಕೋಟ್ 10
10. ಎಲ್ಲಾ ರಕ್ತ ಬಂಧವನ್ನು ಮೀರಿದ್ದು ಈ ಸ್ನೇಹ ಬಂಧ, ನಾವು ನಕ್ಕಾಗ ಜಗತ್ತೇ ಜೊತೆಗಿರುತ್ತದೆ, ಅತ್ತಾಗ ಮತ್ತೆ ನಗು ಮೂಡಿಸಲು ಇರುವುದು ಪವಿತ್ರ ಸ್ನೇಹವೊಂದೇ
ಹ್ಯಾಪಿ ಫ್ರೆಂಡ್‌ಶಿಪ್ ಡೇ



Click it and Unblock the Notifications