Latest Updates
-
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ!
ಚಾಯ್ ವಾಲಾನನ್ನು ಪ್ರೀತಿಸಿ ಮದುವೆಯಾದ ಎಂಬಿಬಿಎಸ್ ಡಾಕ್ಟರ್, ಇವರ ಲವ್ ಸ್ಟೋರಿ ಫುಲ್ ವೈರಲ್
ಪ್ರೀತಿಗೆ ಅಂತಸ್ತಿ ಹಂಗಿಲ್ಲ, ಅಲ್ಲಿ ಪ್ರೀತಿಯಷ್ಟೇ ಮುಖ್ಯವಾಗಿರುತ್ತೆ ಎಂಬುವುದಕ್ಕೆ ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಲವ್ ಮ್ಯಾರೇಜ್ ಒಂದು ಉದಾಹರಣೆ. ಇವರ ಲವ್ ಸ್ಟೋರಿ ಇದೀಗ ವೈರಲ್ ಆಗಿದ್ದು ಕೆಲವರು ಪ್ರೀತಿಗೆ ಕಣ್ಣಿಲ್ಲ ಅಂತ ಹೇಳುವುದು ಇದಕ್ಕೆ ಎಂದು ಹೇಳಿದರೆ ಈ ಜೋಡಿ ಮುಂದೆ ಚೆನ್ನಾಗಿ ಬಾಳುತ್ತದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಇದೀಗ ಈ ಜೋಡಿಯ ಲವ್‌ಸ್ಟೋರಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಏಕೆಂದರೆ ಈ ಸ್ಟೋರಿಯ ಹೀರೋಯಿನ್ ಎಂಬಿಬಿಎಸ್ ಡಾಕ್ಟರ್, ಅವನು ನೋಡಿದರೆ ಚಾಯ್ ವಾಲಾ... ಇವರಿಬ್ಬರ ನಡುವೆ ಮೂಡಿದ ಅನುರಾಗ ತುಂಬಾನೇ ಇಂಟೆರೆಸ್ಟಿಂಗ್ ಆಗಿದೆ.

ಡಾಕ್ಟರ್‌ಗೆ ಚಾಯ್ ವಾಲಾನ ನೋಡಿದಾಗ ಮೊದಲ ನೋಟದಲ್ಲಿಯೇ ಅರಳಿದ ಪ್ರೀತಿ
ಆಕೆ ಹೆಸರು ಕಿಶ್ವಾರ್ ಸಾಹೇಬಾ, ಆಕೆ ಕೆಲಸ ಮಾಡುತ್ತಿದ್ದ ಡಾಕ್ಟರ್ಸ್‌ಗೆ ಟೀ ಕೊಡಲು ಶಹ್ಜಾದ್ ಬರ್ತಾ ಇದ್ದ. ಆತನನ್ನು ಮೊದಲ ಬಾರಿ ನೋಡಿದಾಗಲೇ ಸಾಹೇಬಾ ಆತನಿಗೆ ಸಂಪೂರ್ಣ ಮನ ಸೋತಳು. ಅವನನ್ನು ಕಳೆದುಕೊಳ್ಳಲು ಇಷ್ಟ ಇರಲಿಲ್ಲ, ಹಾಗಾಗಿ ಆಕೆಯೇ ಆತನಿಗೆ ಪ್ರಪೋಸ್ ಮಾಡಿದಳು.
ಅವಳು ಹೇಳುತ್ತಾಳೆ ನನ್ನ ಜೀವನದ ಬಗ್ಗೆ ನಿರ್ಧಾರವನ್ನು ಒಂದೇ ದಿನದಲ್ಲಿ, ತೆಗೆದುಕೊಂಡೆ, ಅವನನ್ನು ನೋಡಿದ ತಕ್ಷಣ ಅವನೊಬ್ಬ ಹೌಸ್ ಕೀಪರ್ ಅಂತ ನನಗೆ ಅನಿಸಲಿಲ್ಲ, ಅವನ ಮೇಲೆ ಪ್ರೀತಿ ಮೂಡಿತು ಎಂದು ಹೇಳಿದ್ದಾಳೆ.

ಅವರಿಬ್ಬರ ಮಾತುಕತೆ ಶುರುವಾದ ಬಗ್ಗೆ ಆತ ಹೇಳುವುದು ಹೀಗೆ
ಆ ಆಫೀಸ್‌ನಲ್ಲಿ ಮೂರು ಜನ ಡಾಕ್ಟರ್‌ಗಳಿಗೆ ಟೀ ಕೊಡಲು ಹೋಗಿದ್ದೆ, ಆ ದಿನ ಕಿಶ್ವಾರ್ ಆತನ ಪೋನ್ ನಂಬರ್ ಕೇಳುತ್ತಾಳೆ ಅದಾದ ಬಳಿಕ ಆಕೆಯೇ ಆತನಿಗೆ ಕರೆ ಮಾಡಿ ಮಾತನಾಡುತ್ತಳೆ.
ಸೋಷಿಯಲ್ ಮೀಡಿಯಾದಲ್ಲಿ ಆತ ಹಾಕಿದ್ದ ಪೋಸ್ಟ್‌ಗಳಿಗೆ ಲೈಕ್ ಮಡುತ್ತಾಳೆ, ಮಾರನೇಯ ದಿನ ಆಸ್ಪತ್ರೆಯ ರೂಮ್‌ನಲ್ಲಿ ತನ್ನ ಪ್ರೇಮ ನಿವೇದನೆ ಮಾಡುತ್ತಾಳೆ, ಆತನಿಗೆ ಏನು ಹೇಳಬೇಕೆಂಬುವುದೇ ಗೊತ್ತಾಗಲ್ಲ.
ಒಬ್ಬ ಡಾಕ್ಟರ್ ನನ್ನನ್ನು ಲವ್ ಮಾಡ್ತಾರಾ? ಎಂದು ಆಕೆಯ ಮಾತು ಕೇಳಿ ಫುಲ್ ಶಾಕ್ ಆಗುತ್ತೆ, ಆಕೆ ಹೇಳ್ತಾ ಇರುವುದು ಸತ್ಯಾನಾ, ಸುಳ್ಳಾ ಎಂದು ನಂಬಲು ಸಾಧ್ಯವಾಗಲ್ಲ, ಆ ಶಾಕ್‌ನಲ್ಲಿ ಜ್ವರ ಕೂಡ ಬಂದಿತ್ತು ಎಂಬುವುದಾಗಿ ಹೇಳುತ್ತಾನೆ,

ಆತನಿಗಾಗಿ ಕೆಲಸವನ್ನೇ ಬಿಟ್ಟಳು
ನಂತರ ಒಬ್ಬರು ಬೇಟಿ ಮಾಡಲಾರಂಭಿಸುತ್ತಾರೆ, ಇವರಿಬ್ಬರ ಪ್ರೀತಿ ನಿಧಾನಕ್ಕೆ ಆಸ್ಪತ್ರೆಯ ಇತರ ಸಿಬ್ಬಂದಿಗಳಿಗೆ ಗೊತ್ತಾಗುತ್ತದೆ, ಇವರಿಬ್ಬರ ಪ್ರೀತಿ ಬಗ್ಗೆ ತಿಳಿದವರು ಆತನ ಬಗ್ಗೆ ತುಂಬಾ ಹೀಯಾಳಿಸುವ ಮಾತನಾಡುತ್ತಾರೆ. ಈ ಕಾರಣಕ್ಕಾಗಿ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಕೆಲಸವನ್ನು ಬಿಟ್ಟು ಆತನ ಜೊತೆ ನಿಖಾ ಮಾಡಿಕೊಂಡಿದ್ದಾಳೆ.

ಹೊಸ ಬದುಕಿನ ಬಗ್ಗೆ ನೂರೆಂಟು ಕನಸುಗಳನ್ನು ಹೊತ್ತಿರುವ ಜೋಡಿ
ಈ ಜೋಡಿ ಚಿಕ್ಕದಾಗಿ ಕ್ಲಿನಿಕ್ ಇಡುವ ಪ್ಲ್ಯಾನ್ ಮಾಡುತ್ತಿದೆ, ಅಲ್ಲದೆ ಒಂದು ಯೂಟ್ಯೂಬ್ ಚಾನಲ್ ಓಪನ್ ಮಾಡಿ ಅದರಲ್ಲಿ ತಮ್ಮ ಬದುಕಿನ ಪ್ರತಿಯೊಂದು ಘಟನೆಗಳ ಬಗ್ಗೆ ಜನರ ಜೊತೆ ಹಂಚಿಕೊಳ್ಳಬೇಕು, ಇತರರಿಗೆ ಮಾದರಿಯಾಗುವಂತೆ ಬದುಕಬೇಕೆಂಬ ಆಸೆ ಈ ಜೋಡಿಗಿದೆ.
ಈ ಜೋಡಿಯೋ ಲವ್ ಸ್ಟೋರಿ ಇದೀಗ ಸಾಮಾಜಿಕ ತಾಣದಲ್ಲಿ ತುಂಬಾನ ವೈರಲ್ ಆಗುತ್ತಿದೆ. ಹಣ-ಅಂತಸ್ತು ಅಂತ ನೋಡುವವರ ಮಧ್ಯ ಇಂಥ ಪರಿಶುದ್ಧ ಪ್ರೇಮ ನೋಡಿ ನೆಟ್ಟಿಗರು ಫುಲ್ ಥ್ರಿಲ್ ಆಗಿದ್ದಾರೆ.
ಅಂದ ಹಾಗೆ ಈ ಜೋಡಿ ಬಗ್ಗೆ ನಿಮಗೇನು ಅನಿಸಿತು?



Click it and Unblock the Notifications
