Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
Kiss Day: ಚುಂಬನದ ವಿಧಗಳು ಹಾಗೂ ಅದರ ಅರ್ಥಗಳು
ಒಂದು ಚುಂಬನ ಪ್ರೀತಿಯ ಆಳವನ್ನು ತಿಳಿಸುತ್ತದೆ, ಹೇಳದೇ ಇದ್ದರೂ ಮನಸ್ಸಿನ ಭಾವನೆಗಳನ್ನು ತಿಳಿಸುತ್ತದೆ, ದೇಹದ ಆಸೆಗಳನ್ನೂ ಹೇಳುತ್ತೆ.
ನಮಗೆ ತುಂಬಾ ಪ್ರೀತಿ ಉಕ್ಕಿ ಬಂದಾಗ ಅದನ್ನು ಮುತ್ತಿನ ವ್ಯಕ್ತಪಡಿಸುತ್ತೇವೆ. ಆದರೆ ನಾವು ಯಾವ ರೀತಿ ಚುಂಬನ ನೀಡುತ್ತೇವೆ, ಆ ಚುಂಬನಕ್ಕೆ ಒಂದೊಂದು ಅರ್ಥ ಇದೆ ಎಂಬುವುದು ಗೊತ್ತೇ? ಹೌದು ನೀವು ಹಣೆಗೆ, ಕೆನ್ನೆಗೆ, ತುಟಿಗೆ ಹೀಗೆ ಪ್ರತಿಯೊಂದು ಮುತ್ತಿಗೆ ಅದರದೇ ಆದ ಅರ್ಥ ಇದೆ. ಯಾವ ಮುತ್ತು ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಕೆನ್ನೆಯ ಮೇಲೆ ನೀಡುವ ಚುಂಬನ
ಕೆನ್ನೆಯ ಮೇಲೆ ನೀಡುವ ಚುಂಬನ ಆತ್ಮೀಯತೆ, ವಾತ್ಸಾಲ್ಯವನ್ನು ಸೂಚಿಸುತ್ತದೆ. ನಾವು ಮಕ್ಕಳನ್ನು ನೋಡಿದಾಗ ಪ್ರೀತಿಯಿಂದ ಕೆನ್ನೆಗೆ ಮುತ್ತಿಕ್ಕುತ್ತೇವೆ, ಅಪ್ಪ-ಅಮ್ಮನಿಗೆ ಕೆನ್ನೆಗೆ ಮುತ್ತು ಕೊಡುತ್ತೇವೆ. ಈ ಮುತ್ತು ಮಧುರ ಬಾಂಧವ್ಯವನ್ನು ಸೂಚಿಸುತ್ತದೆ.
ಅಲ್ಲದೆ ನಮ್ಮ ಸಂಗಾತಿ ಕೆನ್ನೆಗೆ ಮುತ್ತಿಕ್ಕಿದ್ದಾಗ ಅದು ಕೂಡ ಆತ್ಮೀಯತೆ ಸೂಚಿಸುತ್ತದೆ.

ಹಣೆಗೆ ನೀಡುವ ಮುತ್ತು
ಹಣೆಗೆ ನೀಡುವ ಮುತ್ತು ವಾತ್ಸಲ್ಯ ಹಾಗೂ ಮೆಚ್ಚುಗೆಯನ್ನು ಸೂಚಿಸುತ್ತದೆ. ನಮ್ಮ ಪ್ರೀತಿಯ ವ್ಯಕ್ತಿಗಳಿಗೆ ಹಣೆಗೆ ಮುತ್ತಿಕ್ಕುತ್ತೇವೆ. ಮಲಗಿದ್ದಾಗ ಮಗುವಿನ ಹಣೆಗೆ ತಾಯಿ ಮುತ್ತಿಕ್ಕುತ್ತಾಳೆ. ಮಗ/ಮಗಳು ಏನಾದರೂ ಸಾಧನೆ ಮಾಡಿದಾಗ ಅಪ್ಪ ಬಿಗಿದಪ್ಪಿ ಹಣೆಗೆ ಮುತ್ತಿಕ್ಕುತ್ತಾನೆ. ಈ ಮುತ್ತಿನಲ್ಲಿ ವಾತ್ಸಲ್ಯ ಎದ್ದು ಕಾಣುತ್ತದೆ.
ಇನ್ನು ಸಂಗಾತಿಗೂ ಪ್ರೀತಿಯಿಂದ ಹಣೆಗೆ ಮುತ್ತಿಕ್ಕಿದಾಗ ಅದು ಸುರಕ್ಷತೆಯ ಭಾವವನ್ನು ಮೂಡಿಸುವುದು, ಅಲ್ಲದೆ ರೊಮ್ಯಾನ್ಸ್‌ನ ಪ್ರಾರಂಭ ಕೂಡ ಈ ಚುಂಬನದಿಂದ ಶುರುವಾಗುವುದು.

ಕೈಗೆ ನೀಡುವ ಚುಂಬನ
ಕೈಗೆ ನೀಡುವ ಚುಂಬನ ಮೊದಲಿಗೆ ಯುರೋಪಿನಿಯನ್ ರಾಷ್ಟ್ರಗಳಲ್ಲಿ ಪ್ರಾರಂಭವಾಯಿತು. ಇದು ಗೌರವ, ಆತ್ಮೀಯತೆ ಸೂಚಿಸುವ ಸಂಕೇತವಾಗಿದೆ. ಈಗ ಕೈಗೆ ನೀಡುವ ಕಿಸ್‌ಗೆ ಅನೇಕ ಅರ್ಥಗಳಿವೆ. ಪುರುಷ ಮಹಿಳೆಯ ಕೈಗೆ ಮುತ್ತಿಕ್ಕಿದಾಗ ಆತ ಆಕೆಯ ಬಗ್ಗೆ ಕಾಳಜಿ ತೋರಿಸುತ್ತಾನೆ, ಆಸಕ್ತಿ ಹೊಂದಿದ್ದಾನೆ ಎಂದು ಸೂಚಿಸುವ ಲಕ್ಷಣವಾಗಿದೆ.

ಎಸ್ಕಿಮೋ ಕಿಸ್
ಇದೊಂದು ಭಿನ್ನವಾದ ಕಿಸ್ ಆಗಿದ್ದು ಇದು ರೊಮ್ಯಾನ್ಸ್ ಬದಲಿಗೆ ಫ್ರೆಂಡ್ಲಿನೆಸ್ ಹಾಗೂ ವಾತ್ಸಲ್ಯ ಸೂಚಿಸುತ್ತದೆ. ಇದನ್ನು ತುಂಬಾ ಕ್ಲೋಸ್ ಫ್ರೆಂಡ್ಸ್ ಮಾಡುತ್ತಾರೆ, ಮಕ್ಕಳನ್ನು ಮುದ್ದಾಡುವಾಗ ಹೆತ್ತವರು ಈ ರೀತಿ ತಮ್ಮ ಮೂಗನ್ನು ಅವರ ಮೂಗಿಗೆ ಉಜ್ಜುತ್ತಾರೆ, ಈ ಕಿಸ್ ವಾತ್ಸಲ್ಯವನ್ನು ಹೊರ ಹಾಕುವ ಒಂದು ವಿಧಾನವಾಗಿದೆ.
ಇನ್ನು ಪ್ರೇಮಿ ಅಥವಾ ಸಂಗಾತಿ ಮೇಲೆ ಪ್ರೀತಿ ಉಕ್ಕಿ ಬಂದಾಗ ಅವರ ಮೂಗನ್ನು ನಿಮ್ಮ ಮೂಗಿನಿಂದ ಉಜ್ಜಿದರೆ ನೀವು ಅವರ ಮೇಲಿಟ್ಟ ಪ್ರೀತಿ ಎದ್ದು ಕಾಣುವುದು.

ದಿ ಫ್ರೆಂಚ್ ಕಿಸ್
ತುಟಿಗೆ ತುಟಿ ಒತ್ತಿ ನೀಡುವ ಈ ಕಿಸ್ ಪ್ರೀತಿಯ ಪರಾಕಷ್ಠೆ ಸೂಚಿಸುತ್ತದೆ. ಈ ರೀತಿಯ ಕಿಸ್ ಲೈಂಗಿಕ ಆಸಕ್ತಿಯನ್ನು ಉದ್ರೇಕಿಸುವುದು. ಈ ಕಿಸ್‌ನಲ್ಲಿ ಪ್ರೀತಿ, ಕಾಮ ಎಲ್ಲವೂ ಮಿಶ್ರಿತವಾಗಿರುತ್ತದೆ.

ಸಿಂಗಲ್ ಲಿಪ್ ಕಿಸ್
ಸಿಂಗಲ್ ಲಿಪ್ ಕಿಸ್ ಅನ್ನು ಫ್ರೆಂಚ್ ಕಿಸ್‌ನ ಜೊತೆ ಮಿಕ್ಸ್ ಮಾಡಬೇಡಿ. ಇದರಲ್ಲಿ ನಿಮ್ಮ ತುಟಿಗಳ ನಡುವೆ ಸಂಗಾತಿಯ ಒಂದು ತುಟಿ ಇರುತ್ತದೆ. ಎರಡೂ ದೇಹಗಳು ಒಂದಾದಾಗ ಈ ರೀತಿಯ ಕಿಸ್ ನೀಡಿದರೆ ಸಂಗಾತಿಗೆ ತುಂಬಾ ತೃಪ್ತಿಯಾಗುತ್ತದೆ.

ಇಯರ್‌ಲೋಬ್ ಕಿಸ್
ಕಿವಿಗೆ ನೀಡುವ ಕಿಸ್ ಲೈಂಗಿಕ ಭಾವನೆಯನ್ನು ಉದ್ರೇಕಿಸುವುದು. ಇದು ರೊಮ್ಯಾನ್ಸ್ ಮೂಡ್ ಹೆಚ್ಚಿಸುವ ಕಿಸ್ ಆಗಿದೆ.

ಬಟರ್‌ಫ್ಲೈ ಕಿಸ್
ಬಟರ್‌ಫ್ಲೈ ಕಿಸ್ ಇಬ್ಬರು ಒಂದಾಗುವಾಗ ನೀಡುವ ಕಿಸ್ ಆಗಿದೆ. ಎರಡು ದೇಹಗಳು ಬೆರೆತಾಗ ಸಂಗಾತಿಯ ಮುಖದ ಹತ್ತಿರಕ್ಕೆ ಬಂದು ಕಣ್ರಪ್ಪೆಯಿಂದ ಸಂಗಾತಿಯ ಮೂಗು, ಲಿಪ್‌ಗಳಿಗೆ ಮೆಲ್ಲನೆ ಬ್ರೆಷ್ ಮಾಡುವುದಾಗಿದೆ. ಈ ಕಿಸ್ ನಿಮ್ಮಿಬ್ಬರ ರೊಮ್ಯಾನ್ಸ್ ಮತ್ತಷ್ಟು ಹೆಚ್ಚಾಗಿಸುವುದು.

ನೆಕ್ ಕಿಸ್
ರೊಮ್ಯಾನ್ಸ್‌ನ ಫಸ್ಟ್ ಸ್ಟೆಪ್ ನೆಕ್‌ಕಿಸ್ ಆಗಿದೆ. ಇದು ನಿಮ್ಮ ದೈಹಿಕ ಆಸೆಯನ್ನು ಸಂಗಾತಿಗೆ ಸೂಚಿಸುತ್ತದೆ, ಅಲ್ಲದೆ ಅವರಲ್ಲೂ ಕಾಮೋತ್ತೇಜನ ಮಾಡುತ್ತದೆ. ಮೊದಲಿಗೆ ಸಂಗಾತಿಗೆ ನೆಕ್‌ಗೆ ನೀಡಿ, ನಂತರ ನಿಧಾನಕ್ಕೆ ಅವರನ್ನು ತಿರುಗಿಸಿ ತುಟಿ-ತುಟಿ ಒತ್ತಿ ಹಾಗೇ ಮುಂದುವರೆಯುವ ವಿಧಾನವಾಗಿದೆ.

ರಿಸ್ಟ್ ಕಿಸ್
ಮಣಿಗಂಟಿಗೆ ನೀಡುವ ಕಿಸ್ ಒಂದು ಪ್ಲೆಸೆಂಟ್ ಸರ್‌ಪ್ರೈಸ್ ಆಗಿದೆ. ನೀವಿಬ್ಬರು ಕೂತು ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ತಮ್ಮ ಭಾವನೆಗಳನ್ನು ಹೇಳಿ ಕೊಳ್ಳುತ್ತಾ ಹೀಗೆ ನೀಡುವ ಕಿಸ್ ಅವರಿಗೆ ಇಷ್ಟವಾಗುವುದು ಕೂಡ.

ನೋಸ್ ಕಿಸ್
ಮಹಿಳೆಯರು ನಿಮ್ಮ ಸಂಗಾತಿಯ ಮೂಗಿಗೆ ನಿಮ್ಮ ಮೂಗಿನಿಂದ ಉಜ್ಜಿ ಮೂಗಿಗೆ ನೀಡುವ ಕಿಸ್ ಅವನಿಗೆ ತುಂಬಾನೇ ಇಷ್ಟವಾಗುವುದು.

ದಿ ಸ್ಪೈಡರ್‌ಮ್ಯಾನ್ ಕಿಸ್
ಇಬ್ಬರು ಬೆಡ್‌ನಲ್ಲಿ ಖಾಸಗಿ ಕ್ಷಣದಲ್ಲಿ ಮೈ ಮರೆತಿರುವಾಗ ನಿಮಗೆ ಕಂಫರ್ಟ್ ಆಗುವ ರೀತಿಯಲ್ಲಿ ಮಲಗಿ ನಿಮ್ಮ ಸಂಗಾತಿ ಜೊತೆ ರೊಮ್ಯಾನ್ಸ್ ಮಾಡುತ್ತಾ ಈ ರೀತಿಯ ಕಿಸ್ ನೀಡಬಹುದು.

ಶೋಲ್ಡರ್ ಕಿಸ್
ಶೋಲ್ಡರ್ ಕಿಸ್ ಕೂಡ ನಿಮ್ಮಿಬ್ಬರಲ್ಲಿ ಲೈಂಗಿಕ ಭಾವನೆಯನ್ನು ಉತ್ತೇಜಿಸುವ ಕಿಸ್ ಆಗಿದೆ. ಭುಜಕ್ಕೆ ಮುತ್ತಿಕ್ಕಿದ್ದಾಗ ಅವರು ಕೂಡ ನಿಮ್ಮತ್ತ ತಿರುಗಿ ರೊಮ್ಯಾನ್ಸ್‌ನಲ್ಲಿ ತೊಡಗುವರು.

ಬಾಡಿ ಕಿಸ್
ಸಂಗಾತಿಯ ದೇಹಕ್ಕೆ ಮುತ್ತಿನ ಮಳೆ ಸುರಿಸ ಬಯಸುವುದಾದರೆ ಈ ಕಿಸ್ ನೀಡಬಹುದು. ಆಕೆಯ ಪಾದದಿಂದ ಪ್ರಾರಂಭಿಸಿ ಹಣೆಯವರಿಗೆ ಚುಂಬನ ನೀಡುತ್ತಿದ್ದಾರೆ ನಿಮ್ಮ ಪ್ರೀತಿಯಲ್ಲಿ ಆಕೆ ಕರಗಿ ಹೋಗುವಳು.

ಆ್ಯಂಗಲ್ ಕಿಸ್
ಮನೆಯಿಂದ ಹೊರಗಡೆ ಹೊರಡುವಾಗ ಅಥವಾ ಸಂಗಾತಿಯನ್ನು ಬಿಟ್ಟು ಬ್ಯುಸ್‌ನೆಸ್ ಟ್ರಿಪ್ ಹೋಗುವಾಗ ಆಕೆಯನ್ನು ಬಿಗಿದಪ್ಪಿ ಕಣ್ಣಿನ ರೆಪ್ಪೆಗೆ ಕಿಸ್ ನೀಡಿದರೆ ಅವರ ಮನಸ್ಸಿಗೆ ಒಂದು ರೀತಿಯ ಸುರಕ್ಷತೆಯ ಭಾವ ಕಾಡುವುದು.



Click it and Unblock the Notifications











