Latest Updates
-
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ!
ಸೆಕ್ಸ್ ಮಾಡೋ ಮುನ್ನ, ಪ್ರತಿಯೊಬ್ಬ ಪುರುಷರು ಈ ಸಂಗತಿಗಳನ್ನು ನೆನಪಿಟ್ಟುಕೊಳ್ಳಿ!
ಮಹಿಳೆಯರ ದೇಹದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರುವ ವ್ಯಕ್ತಿ ಈ ಭೂಮಿ ಮೇಲೆ ಇರಲಿಕ್ಕಿಲ್ಲ ಎಂದರೆ ಅದು ತಪ್ಪಾಗಲಾರದು. ಯಾಕೆಂದರೆ ಮಹಿಳೆಯ ದೇಹವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡದ್ದೇ ಕಡಿಮೆ. ಹಾಸಿಗೆ ಮೇಲೆ ಕೂಡ ಪುರುಷರು ಆಕೆಯ ಭಾವನೆ ಹಾಗೂ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು ಅದರಂತೆ ವರ್ತಿಸುವುದಿಲ್ಲ. ತಮ್ಮ ಮನಸ್ಸಿಗೆ ಬಂದ ರೀತಿ ಪುರುಷರು ವರ್ತಿಸುವರು.
ಮಹಿಳೆಯ ದೇಹವೊಂದು ಆಟಿಕೆಯ ವಸ್ತು ಎನ್ನುವಂತೆ ಕೆಲವು ಪುರುಷರು ವರ್ತಿಸುವರು. ಆದರೆ ಲೈಂಗಿಕ ಕ್ರಿಯೆಗೆ ಮೊದಲು ಪುರುಷರು ಮಹಿಳೆಯರ ಬಗ್ಗೆ ತಿಳಿದುಕೊಳ್ಳಬೇಕಾದ ಹಲವಾರು ವಿಚಾರಗಳು ಇವೆ. ಈ ಲೇಖನದಲ್ಲಿ ಅವುಗಳ ಸಂಪೂರ್ಣ ವಿವರ ನೀಡಲಾಗಿದೆ. ತಿಳಿಯಲು ತಯಾರಾಗಿ...

ದೇಹದ ಮೇಲಿರುವ ಪ್ರೀತಿ!
ತನ್ನ ದೇಹದ ಬಗ್ಗೆ ಮಹಿಳೆಗೆ ಯಾವ ರೀತಿಯ ಭಾವನೆಯಿದೆ ಎನ್ನುವುದರ ಮೇಲೆ ಆಕೆ ಲೈಂಗಿಕ ಕ್ರಿಯೆ ಆನಂದಿಸುವುದು ಅವಲಂಬಿಸಿದೆ. ಮಹಿಳೆಯರಿಗೆ ತಮ್ಮ ದೇಹದ ಮೇಲಿರುವ ಪ್ರೀತಿಯು ಅವರ ಲೈಂಗಿಕ ಕ್ರಿಯೆ ಮೇಲೆ ಪರಿಣಾಮ ಬೀರುವುದು. ದೇಹದ ಬಗ್ಗೆ ಧನಾತ್ಮಕವಾಗಿರುವ ಭಾವನೆಗಳಿದ್ದರೆ ಆಗ ಲೈಂಗಿಕ ಜೀವನವು ತೃಪ್ತಿದಾಯಕ ವಾಗಿರುವುದು ಮತ್ತು ನಕಾರಾತ್ಮಕ ವಾಗಿದ್ದರೆ ಆಗ ಲೈಂಗಿಕ ಜೀವನ ತೃಪ್ತಿ ನೀಡಲ್ಲ.

ನಕಾರಾತ್ಮಕ ಭಾವನೆ
ನಕಾರಾತ್ಮಕ ಭಾವನೆ ಹೊಂದಿರುವ ಮಹಿಳೆಯು ಲೈಂಗಿಕ ಕ್ರಿಯೆ ವೇಳೆ ಚಂಚಲತೆ ಹಾಗೂ ಸ್ವಯಂ ಜಾಗೃತ ವಾಗಿರುವರು. ಇದರಿಂದ ಲೈಂಗಿಕ ಪರಾಕಾಷ್ಠೆ ಮೇಲೆ ಪರಿಣಾಮ ಬೀರುವುದು. ತುಂಬಾ ಸುಂದರವಾಗಿ ಕಾಣುವ ಮಹಿಳೆಯೊಂದಿಗೆ ಹಾಸಿಗೆ ಹಂಚಿಕೊಳ್ಳುವ ಪುರುಷರು ಇಂತಹ ವಿಷಯಗಳನ್ನೆಲ್ಲಾ ಅರಗಿಸಿಕೊಳ್ಳುವರು. ಆದರೆ ಆಕೆ ತುಂಬಾ ಸುಂದರವಾಗಿ ಕಾಣುತ್ತಾಳೆನ್ನುವ ಕಾರಣಕ್ಕೆ ಒಳ್ಳೆಯ ಭಾವನೆ ಕೂಡ ಮೂಡಬೇಕೆನ್ನುವ ಅರ್ಥವಲ್ಲ.

ಮಹಿಳೆಯರ ಪರಾಕಾಷ್ಠೆಗಿಂತ ಪುರುಷರ ಪರಾಕಾಷ್ಠೆ ಮುಖ್ಯ!
ಪುರುಷರಿಗಿಂತ ಮಹಿಳೆಯರು ಲೈಂಗಿಕ ಕ್ರಿಯೆ ಆನಂದಿಸುವುದು ತುಂಬಾ ಕಡಿಮೆ ಎಂದು ಅಧ್ಯಯನಗಳು ಹೇಳಿವೆ. ಅದರಲ್ಲೂ ಹದಿಹರೆಯ ಮಹಿಳೆಯರು ಹದಿಹರೆಯದ ಪುರುಷರಿಗಿಂತ ಅರ್ಧದಷ್ಟು ಮಾತ್ರ ಪರಾಕಾಷ್ಠೆ ತಲುಪುವರು. ಇದು ಯಾಕೆಂದರೆ ನಾವು ಹಿಂದಿನಿಂದಲೂ ಪುರುಷರು ಮಾತ್ರ ಪರಾಕಾಷ್ಠೆ ತಲುಪಬೇಕು ಎಂದು ನಂಬಿಕೊಂಡು ಬಂದಿರುವವರು. ಲೈಂಗಿಕ ಕ್ರಿಯೆ ವೇಳೆ ಶೇ. 8ಷ್ಟು ಮಹಿಳೆಯರು ಮಾತ್ರ ಪರಾಕಾಷ್ಠೆ ತಲುಪಬಹುದು. ಆದರೆ ಪ್ರತಿಯೊಬ್ಬ ಪುರುಷ ಕೂಡ ಪರಾಕಾಷ್ಠೆಗೆ ತಲುಪುತ್ತಾನೆ.

ಸಮೀಕ್ಷೆಯೊಂದರ ಪ್ರಕಾರ
ಹದಿಹರೆಯದ ಮಹಿಳೆಯರು ತಮ್ಮ ಇಚ್ಛೆಗಿಂತಲೂ ಪುರುಷರ ಲೈಂಗಿಕ ಬೇಡಿಕೆಗಳ ಕಡೆ ಹೆಚ್ಚಿನ ಗಮನಹರಿಸುವರು. 2012ರಲ್ಲಿ ನಡೆಸಿರುವ ಸಮೀಕ್ಷೆಯೊಂದರ ಪ್ರಕಾರ ಕಾಲೇಜು ವಿದ್ಯಾರ್ಥಿನಿ ಯೊಬ್ಬಳು, ತನಗೆ ಮೊದಲ ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ಪರಾಕಾಷ್ಠೆಗೆ ತಲುಪುವ ಯಾವುದೇ ಹಕ್ಕಿಲ್ಲವೆಂದು ಹೇಳಿದ್ದಳು.

ಮಹಿಳಾ ಸಂಗಾತಿಯ ಪರಾಕಾಷ್ಠೆ
ಮಹಿಳಾ ಸಂಗಾತಿಯ ಪರಾಕಾಷ್ಠೆಯಲ್ಲಿ ಪುರುಷರು ಹೆಚ್ಚು ಗಮನಹರಿಸಿದರೆ ಆಕೆಯೂ ಆನಂದಿಸುವಳು. ಆರಂಭಿಕ ಲೈಂಗಿಕ ಸಂಬಂಧದ ಮೇಲೆ ಪರಾಕಾಷ್ಠೆಯ ಅಂತರವು ನಿಗದಿಯಾಗಿರುವುದು. ಮೊದಲ ಸಲ ಮಹಿಳೆಯು ಪರಾಕಾಷ್ಠೆಗೆ ತಲುಪಲು ಪುರುಷರು ಹೆಚ್ಚು ಪ್ರಯತ್ನಿಸಲ್ಲ. ಸಂಬಂಧದಲ್ಲಿ ಹೆಚ್ಚು ಬದ್ಧರಾಗಿರುವಂತಹ ಪುರುಷರು ತನ್ನ ಮಹಿಳಾ ಸಂಗಾತಿಯ ಪರಾಕಾಷ್ಠೆಗೆ ಹೆಚ್ಚು ಗಮನಹರಿಸುವರು. ಇದರಿಂದ ಪರಾಕಾಷ್ಠೆಯ ಅಂತರವು ಕಡಿಮೆಯಾಗುವುದು.

ಹಾಸಿಗೆಯಲ್ಲಿ ಆಕೆ ಮಾತನಾಡದಿದ್ದರೆ ಆಕೆ ಆನಂದಿಸುತ್ತಿದ್ದಾಳೆಂದು ಅರ್ಥವಲ್ಲ!
2012ರಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ ಭಾಗಿಯಾದ ಕಾಲೇಜು ವಿದ್ಯಾರ್ಥಿನಿಯರ ಪ್ರಕಾರ ಮಹಿಳೆಯರು ತಮ್ಮ ಲೈಂಗಿಕ ಆಕಾಂಕ್ಷೆಗಳ ಬಗ್ಗೆ ಮಾತನಾಡುವುದು ಸ್ವೀಕಾರಾರ್ಹವಲ್ಲವೆಂದು ಭಾವಿಸಿರುವರು. ಸಮೀಕ್ಷೆಯಲ್ಲಿ ಭಾಗಿಯಾದವರ ಪ್ರಕಾರ, ಹೇ ಇದು ನನಗೆ ಖುಷಿ ಕೊಡುತ್ತಿದೆ ಎಂದು ಹೇಳುವುದು ಸರಿಯಾಗಿರಲ್ಲ. ಹೀಗೆ ಹೇಳಿದರೆ ಮಹಿಳೆಗೆ ಇದರ ಬಗ್ಗೆ ತುಂಬಾ ಅನುಭವವಿದೆ ಎಂದು ಪುರುಷರು ಭಾವಿಸಬಹುದು. ಇದರಿಂದ ಅವರು ತಮ್ಮ ಆಕಾಂಕ್ಷೆಗಳ ಬಗ್ಗೆ ತಿಳಿಸಲ್ಲ ಎಂದು ಸಂಬಂಧಗಳ ಮನಶಾಸ್ತ್ರಜ್ಞೆ ದೆಬ್ರಾ ಸಮೌಸೆ ಹೇಳಿದ್ದಾರೆ.

ಪುರುಷರಂತೆ ಮಹಿಳೆಯರಿಗೆ ಪೋಲಿ ಮಾತುಗಳು ಇಷ್ಟ
ಹಾಸಿಗೆ ಮೇಲೆ ಪುರುಷರು ತಮ್ಮ ಅಧಿಪತ್ಯವು ಹೆಚ್ಚಾಗಿರಬೇಕೆಂದು ಬಯಸುವರು. ಅದೇ ಮಹಿಳೆಯರು ದೈಹಿಕ ಸಂತೋಷಕ್ಕಿಂತ ಹೆಚ್ಚಾಗಿ ನಿಜವಾದ ಪ್ರೀತಿ ಬಯಸುವರು. ಪೋಲಿ ಮಾತುಗಳನ್ನು ಮಹಿಳೆಯರು ಹೆಚ್ಚು ಮುಕ್ತವಾಗಿ ಆಡುವುದಿಲ್ಲವೆಂದು ಹಿಂದಿನಿಂದಲೂ ತಿಳಿದುಕೊಂಡಿರುವ ವಿಚಾರಗಳು. ಆದರೆ 2011ರಲ್ಲಿ ನಡೆಸಿರುವ ಅಧ್ಯಯನವೊಂದರ ಪ್ರಕಾರ ತಮ್ಮ ಎರಡು ರೀತಿಯ ಬೇಡಿಕೆಯು ಪರಿಸ್ಥಿತಿಗೆ ಅನುಗುಣವಾಗಿದ್ದರೆ ಅವರು ಪೋಲಿ ಮಾತುಗಳಲ್ಲಿ ತೊಡಗಿಕೊಳ್ಳುವರು.

ಅವರು ಇದರ ಬಗ್ಗೆ ನಾಚಿಕೆಯಾಗಬಾರದು
ಲೈಂಗಿಕ ಸಂಗಾತಿಯು ತುಂಬಾ ಕೌಶಲ್ಯ ಹೊಂದಿರಬೇಕು ಮತ್ತು ಸಂತೋಷದ ಅನುಭವ ನೀಡಬೇಕು. ಈ ಎರಡು ಅಂಶಗಳು ಇದ್ದರೆ ಆಗ ಮಹಿಳೆಯರು ಕೂಡ ಪೋಲಿ ಮಾತುಗಳಲ್ಲಿ ತೊಡಗಿಕೊಳ್ಳುವರು.

ಸಾಮಾನ್ಯವಾಗಿ ಮಹಿಳೆ 10-20 ನಿಮಿಷದಲ್ಲಿ ಪರಾಕಾಷ್ಠೆ ತಲುಪುವಳು!
ಕ್ಲೈಮ್ಯಾಕ್ಸ್ ತಲುಪಲು ಪುರುಷರಿಗೆ ಸುಮಾರು 7ರಿಂದ 14 ನಿಮಿಷ ಬೇಕಾಗುವುದು. ಅದೇ ಮಹಿಳೆಯರಿಗೆ ನೇರವಾಗಿ ನಿಮ್ಮ ಶಿಶ್ನವನ್ನು ಅವರ ಯೋನಿ ಮೇಲೆ ಪ್ರಯೋಗ ಮಾಡಿದರೆ ಸಾಕಾಗದು. ಇದಕ್ಕೆ ಮೊದಲು ಕೆಲವು ಆಟಗಳನ್ನು ಆಡಿದರೆ ಆಗ ಅವರು ಬೇಗನೆ ಪರಾಕಾಷ್ಠೆ ತಲುಪುವರು.

ಪರಾಕಾಷ್ಠೆ ತಲುಪದೇ ಇದ್ದರೆ ಎಲ್ಲವೂ ವ್ಯರ್ಥವೆಂದು ಭಾವಿಸಬೇಡಿ
ಲೈಂಗಿಕ ಕ್ರಿಯೆ ವೇಳೆ ಕೇವಲ ಪರಾಕಾಷ್ಠೆ ತಲುಪಿಸುವುದು ಮಾತ್ರ ನಿಮ್ಮ ಉದ್ದೇಶವಾದರೆ ಆಗ ಎಲ್ಲವೂ ದಾರಿ ತಪ್ಪುವುದು. ತನ್ನ ಸಂಗಾತಿಯೊಂದಿಗೆ ಪರಾಕಾಷ್ಠೆ ತಲುಪಬೇಕೆಂಬ ಆತಂಕದಲ್ಲಿ ಕೆಲವು ಮಹಿಳೆಯರು ಇರುತ್ತಾರೆ. ಇದರಿಂದಾಗಿ ಇವರಿಗೆ ಲೈಂಗಿಕ ಕ್ರಿಯೆ ಆನಂದಿಸಲು ಸಾಧ್ಯವಾಗಲ್ಲ. ಪ್ರತೀ ಸಲ ಮಹಿಳೆಯು ಪರಾಕಾಷ್ಠೆ ತಲುಪಬೇಕು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಪರಾಕಾಷ್ಠೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಲೈಂಗಿಕ ತೃಪ್ತಿಯ ಮಾನದಂಡವಾಗಿರಲ್ಲ ಎಂದು 2014ರಲ್ಲಿ ನಡೆಸಿರುವ ಅಧ್ಯಯನವೊಂದು ಹೇಳಿದೆ. ಪರಾಕಾಷ್ಠೆ ತಲುಪುವುದು ಕೂಡ ಮಹಿಳೆಯಿಂದ ಮಹಿಳೆಗೆ ತುಂಬಾ ಭಿನ್ನವಾಗಿರುವುದು.

ನಿಮ್ಮ ಸ್ಪರ್ಶವು ಆಕೆಯಲ್ಲಿ ಕಿಡಿಯೆಬ್ಬಿಸದೆ ಇದ್ದರೆ ಆಗ ನೀವು ಬೇರೆ ಜಾಗ ಆಯ್ಕೆ ಮಾಡಿ
2012ರಲ್ಲಿ ಲೇಖಕಿ ಡಿ ಡೊನಾಟೊ ಬರೆದಿರುವ ಪ್ರಕಾರ ಸುಮಾರು ಏಳು ಮಂದಿ ಮಹಿಳೆಯರಲ್ಲಿ ಆಕೆ ಒಂದು ಪ್ರಶ್ನೆ ಕೇಳಿದ್ದರು. ನಿಮ್ಮನ್ನು ಉತ್ತೇಜಿಸುವಂತಹ ಜಾಗ ಯಾವುದು? ಇದು ಬಾಯಿಯಿಂದ ಹಿಡಿದು ಕಿವಿ, ಕಾಲಿನಿಂದ ಹಿಡಿದು ಹೊಕ್ಕಳಿನ ತನಕವಿತ್ತು. ತಮ್ಮ ದೇಹದ ಬಗ್ಗೆ ತುಂಬಾ ಆತ್ಮವಿಶ್ವಾಸದಿಂದ ಇರುವ ಭಾಗದ ಬಗ್ಗೆ ಮುಟ್ಟಿದರೆ ನಮಗೆ ತುಂಬಾ ಖುಷಿಯಾಗುವುದು ಎಂದು ಕೆಲವು ಮಹಿಳೆಯರು ಹೇಳಿದ್ದಾರೆ. ಮಹಿಳೆಗೆ ಯಾವ ಭಾಗದ ಸ್ಪರ್ಶವು ಖುಷಿ ನೀಡುವುದು ಮತ್ತು ಆ ಸಂದರ್ಭದಲ್ಲಿ ಆಕೆಯನ್ನು ಸೆಳೆಯುವುದು ಯಾವುದು ಎಂದು ತಿಳಿಯುವುದು ತುಂಬಾ ಮುಖ್ಯ.

ಕೆಲವು ಮಹಿಳೆಯರಿಗೆ ಲೈಂಗಿಕ ಕ್ರಿಯೆ ಸಂತೋಷ ನೀಡಲ್ಲ!
ಲೈಂಗಿಕ ಕ್ರಿಯೆಯಿಂದ ದೂರವಿರಲು ಪ್ರಮುಖವಾಗಿ ನೀಡುವಂತಹ ಕಾರಣ ನನಗೆ ಸುಸ್ತಾಗಿದೆ ಅಥವಾ ನನಗೆ ಆರೋಗ್ಯ ಸರಿಯಿಲ್ಲ ವೆನ್ನುವುದು. ಇದು ಲೈಂಗಿಕ ಕ್ರಿಯೆಯನ್ನು ಕಡೆಗಣಿಸಲು ನೀಡುತ್ತಿರುವ ಕಾರಣಗಳು ಎನ್ನುವುದನ್ನು ನೀವು ಮರೆಯಬಾರದು. ಆದರೆ ಕೆಲವೊಂದು ಸಲ ಮಹಿಳೆ ನಿಜವಾಗಿಯೂ ಸುಸ್ತಾಗಿರುವಳು. ಯೋನಿಯ ನೋವು ಮತ್ತು ಕಿರಿಕಿರಿಯು ಕೆಲವು ಮಹಿಳೆಯರು ಬೇರೆ ರೀತಿಯ ಲೈಂಗಿಕ ಕ್ರಿಯೆಯಿಂದ ದೂರ ಉಳಿಯಲು ಕಾರಣವಾಗಿದೆ. ಆದರೆ ಕೆಲವು ಮಹಿಳೆಯರಿಗೆ ಇದು ವೈದ್ಯಕೀಯ ಸಮಸ್ಯೆಯಿಂದಾಗಿ ಬರಲು ಬಹುದು. ಇದರಿಂದ ಅವರಿಗೆ ಸಂಪೂರ್ಣವಾಗಿ ಲೈಂಗಿಕ ಕ್ರಿಯೆ ಆನಂದಿಸಲು ಸಾಧ್ಯವಾಗದು. ಕಡಿಮೆ ಕಾಮಾಸಕ್ತಿ ಮತ್ತು ನೋವಿನಿಂದಾಗಿ ಅರ್ಧದಷ್ಟು ಮಹಿಳೆಯರು ಲೈಂಗಿಕ ಕ್ರಿಯೆಗಳಿಂದ ದೂರವಿರುವರು ಎಂದು ಅಧ್ಯಯನಗಳು ಹೇಳಿವೆ. ಕೆಲವೊಂದು ಸಲ ಯೋನಿಯ ಸುತ್ತಲಿನ ಸ್ನಾಯುಗಳು ತುಂಬಾ ಬಿಗಿಗೊಳ್ಳುವುದರ ಪರಿಣಾಮವಾಗಿ ನೋವು ಕಾಣಿಸಿಕೊಳ್ಳಬಹುದು. ಸಂಗಾತಿಯಲ್ಲಿ ಇಂತಹ ಸಮಸ್ಯೆಗಳು ಇದ್ದರೆ ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ, ಅರ್ಥ ಮಾಡಿಕೊಳ್ಳುವುದು ಉತ್ತಮ.

ಸಂಶಯಗಳು ಇದ್ದರೆ ನೀವು ಮಾತನಾಡಿ
ಲೈಂಗಿಕ ಕ್ರಿಯೆಯು ಉತ್ತಮವಾಗಿ ಆಗಬೇಕಿದ್ದರೆ ಆಗ ನೀವು ಒಳ್ಳೆಯ, ಪ್ರಾಮಾಣಿಕ ಹಾಗೂ ಸಂವಹನ ಮಾಡಬೇಕು. ಆಕೆಯ ಬಗ್ಗೆ ಗೊಂದಲವಿದ್ದರೆ ನೀವು ಆಕೆಯಲ್ಲಿ ಮರೆಮಾಚದೆ ಕೇಳಿ.



Click it and Unblock the Notifications