Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ರಾಶಿ ಭವಿಷ್ಯ: ಇದೇ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳ ನಡೆಯುವುದು...
ಪ್ರೀತಿ ಎಂದಾಕ್ಷಣ ಮನ್ಸಸ್ಸಿಗೆ ಏನೋ ಒಂದು ಬಗೆಯ ಆನಂದ ಅಥವಾ ಖುಷಿ ಉಂಟಾಗುತ್ತದೆ. ನಮಗೆ ಇಷ್ಟವಾದ ವ್ಯಕ್ತಿಗಳೊಂದಿಗೆ ಮನಸ್ಸಿನ ಮಾತನ್ನು ಹಂಚಿಕೊಳ್ಳುವುದು ಹಾಗೂ ಒಂದಷ್ಟು ಸಮಯವನ್ನು ಅವರೊಂದಿಗೆ ಕಳೆಯುವುದು ಎಂದರೆ ಅದೇನೋ ಒಂದು ಬಗೆಯ ಸಮಾಧಾನ ಹಾಗೂ ಖುಷಿ ಉಂಟಾಗುವುದು. ಸಂಬಂಧದಲ್ಲಿರುವಾಗ ಸಂತೋಷವು ಹೇಗೆ ಹೆಚ್ಚುತ್ತದೆಯೋ ಹಾಗೆಯೇ ದುಃಖವು ಹಂಚಿಕೆಯ ಮೂಲಕ ಸಮಾಧಾನ ಕಾಣುವುದು.
ಸಂಬಂಧದಲ್ಲಿರುವಾಗ ಹೊಂದಾಣಿಕೆ ಹಾಗೂ ತ್ಯಾಗಕ್ಕೆ ಸಿದ್ಧರಿರಬೇಕು. ಆಗಲೇ ಪ್ರೀತಿ ವಿಶ್ವಾಸ ಎನ್ನುವುದು ಪ್ರೀತಿಯಲ್ಲಿ ನೆಲೆಯೂರುತ್ತದೆ. ಇಲ್ಲವಾದರೆ ಪ್ರೀತಿ ವಿಶ್ವಾಸ ಇಲ್ಲದೆ ಸಂಬಂಧ ಹಾಳಾಗುತ್ತದೆ. ಕೆಲವು ತಜ್ಞರ ಪ್ರಕಾರ ಸಂವಹನದ ಅಂತರವಿದ್ದಾಗ ಸಂಬಂಧದಲ್ಲಿ ಅನರ್ಥಗಳು ಹಾಗೂ ವಿರಸಗಳು ಉಂಟಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ವಿನಾಕಾರಣ ಒಂದಿಷ್ಟು ವಾದಗಳು ಏರ್ಪಡುತ್ತವೆ. ದಾಂಪತ್ಯದಲ್ಲಿ ವಿರಸ ಉಂಟಾಗಲು ಇನ್ನೊಂದು ಮುಖ್ಯ ಸಂಗತಿಯೆಂದರೆ ಪರಸ್ಪರ ಭಾವನೆಗಳನ್ನು ನಿರ್ಲಕ್ಷಿಸುವುದು....

ಮೇಷ: (ಮಾರ್ಚ್21-ಏಪ್ರಿಲ್19)
ಈ ರಾಶಿಯವರು ನಿರಂತರವಾಗಿ ದೂರು ನೀಡುತ್ತಲೇ ಇರುವ ವ್ಯಕ್ತಿಗಳನ್ನು ದ್ವೇಷಿಸುತ್ತಾರೆ. ಹೆಚ್ಚು ಶ್ರಮವಿಲ್ಲದೆ ಬದುಕುವ ವ್ಯಕ್ತಿಗಳ ಜೊತೆ ಇವರು ನಿಲ್ಲುವುದಿಲ್ಲ. ಸ್ವತಂತ್ರ ಗುಣವನ್ನು ಹೊಂದಿರುವ ಇವರು ತಮ್ಮದೇ ಆದ ವೇಳಾಪಟ್ಟಿಯನ್ನು ಹೊಂದಿರುತ್ತಾರೆ. ಅದರ ಬಗ್ಗೆ ಇತರರು ಪ್ರಶ್ನಿಸುವುದನ್ನು ಇವರು ಸಹಿಸುವುದಿಲ್ಲ.

ವೃಷಭ: 21 ಏಪ್ರಿಲ್ -21 ಮೇ
ಈ ರಾಶಿಯವರು ಕಟ್ಟು ನಿಟ್ಟಿನ ಯೋಜಕರಾಗಿರುತ್ತಾರೆ. ಅವರನ್ನು ನಿರ್ಲಕ್ಷಿಸುವವರನ್ನು ಅಥವಾ ಅವರು ಹೇಳಿದಂತೆ ನಡೆದುಕೊಳ್ಳದವರನ್ನು ಇವರು ದ್ವೇಷಿಸುತ್ತಾರೆ. ಇವರು ಅತ್ಯಂತ ಸಮಯ ಪ್ರಜ್ಞತೆಯನ್ನು ಹೊಂದಿರುತ್ತಾರೆ. ಹಾಗಾಗಿ ಸಮಯ ಪ್ರಜ್ಞೆ ಇಲ್ಲದವರನ್ನು ಇವರು ಸಹಿಸುವುದಿಲ್ಲ.

ಮಿಥುನ: ಮೇ 21 ಜೂನ್ 20
ಈ ರಾಶಿಯವರು ತಮಾಷೆ ಹಾಗೂ ಸಾಹಸಮಯ ಪ್ರೀತಿ ಮಾಡುವಲ್ಲಿ ಆಸಕ್ತಿ ಹೊಂದಿದವರಾಗಿರುತ್ತಾರೆ. ಕಠೋರವಾಗಿ ಅರ್ಥವಿಲ್ಲದ ಹಾಸ್ಯವನ್ನು ಇವರು ಸಹಿಸುವುದಿಲ್ಲ. ಏಕತಾನತೆಯ ವೇಳಾಪಟ್ಟಿಯನ್ನು ಸಹ ಇವರು ದ್ವೇಷಿಸುತ್ತಾರೆ. ಒಂದೇ ಬಗೆಯ ಸಮಯದಲ್ಲಿ ದುಡಿಯುವುದನ್ನು ಇವರು ಇಷ್ಟಪಡುವುದಿಲ್ಲ.

ಕರ್ಕ: ಜೂನ್ 21-ಜುಲೈ 22
ಈ ರಾಶಿಯವರು ತೀವ್ರವಾದ ಭಾವನೆಯನ್ನು ಹೊಂದಿರುತ್ತಾರೆ. ಆದರೆ ಅದು ಎಲ್ಲರಿಗೂ ಅರ್ಥವಾಗುವುದಿಲ್ಲ. ಅಗತ್ಯ ಇಲ್ಲದೆ ಇರುವಾಗ ಅವರ ಭಾವನೆಯನ್ನು ಪ್ರಶ್ನಿಸುವ ವ್ಯಕ್ತಿಗಳನ್ನು ಇವರು ಸಹಿಸುವುದಿಲ್ಲ. ತಾರ್ಕಿಕ ಜನರನ್ನು ಈ ರಾಶಿಯವರು ಸಹಿಸುವುದಿಲ್ಲ. ಏಕೆಂದರೆ ಅವರಿಗೆ ಭಾವನೆಯೇ ಪ್ರಪಂಚವನ್ನು ಆಳುತ್ತದೆ ಎನ್ನುವ ಭಾವ ಇರುತ್ತದೆ.

ಸಿಂಹ: ಜುಲೈ 23-ಆಗಸ್ಟ್ 23
ಇವರು ಅನೇಕ ವಿಚಾರಗಳಿಗೆ ಹುಡುಕಾಟ ನಡೆಸುತ್ತಿರುತ್ತಾರೆ ಎಂದು ಹೇಳಬಹುದು. ಇವರು ಗಮನವನ್ನು ಕೇಂದ್ರಿಕರಿಸಲು ಸಾಕಷ್ಟು ಶ್ರಮವಹಿಸುತ್ತಾರೆ. ಇವರು ಸದಾ ತಮ್ಮ ಭಾವನೆಗಳು ಯಾವಾಗಲೂ ಸರಿಯಾಗಿರುತ್ತದೆ ಎಂದು ಭಾವಿಸುತ್ತಾರೆ. ಯಾವುದೇ ಕಾರಣಕ್ಕಾದರೂ ಅತಿಯಾಗಿ ಕೂಗಾಡುವುದು ಹಾಗೂ ಕೋಪವನ್ನು ಹೊಂದುವುವ ಜನರನ್ನು ಇವರು ಸಹಿಸುವುದಿಲ್ಲ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23
ಈ ರಾಶಿಯವರು ಯಾವಾಗಲೂ ಸಕಾರಾತ್ಮಕ ಭಾವವನ್ನು ಹೊಂದಿರುತ್ತಾರೆ ಮತ್ತು ಉತ್ತಮ ವಿಚಾರಗಳ ಬಗ್ಗೆ ಸದಾ ಗಮನ ನೀಡುತ್ತಾರೆ. ಇವರು ತಮ್ಮ ಕೈಯಲ್ಲಿಯೇ ಅದೃಷ್ಟವನ್ನು ಕಾಣಲು ಬಯಸುತ್ತಾರೆ. ಇವರು ಸಂಗಾತಿಯಾದರವು ಅಥವಾ ಪಾಲುದಾರು ನಿರಾಶವಾದಿಗಳಾಗಿರುವುದು ಮತ್ತು ಸ್ಥಿರತೆ ಹೊಂದದವರಂತೆ ಇರುವುದನ್ನು ಇವರು ಸಹಿಸುವುದು.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23
ಈ ರಾಶಿಯವರು ಅಂತರ್ಮುಖಿಗಳಾಗಿರುತ್ತಾರೆ. ಇವರು ತಮ್ಮದೇ ಆದ ಆರಾಮದಾಯಕ ಸ್ಥಿತಿಯಲ್ಲಿ ಇರಲು ಬಯಸುತ್ತಾರೆ. ಇವರ ಸಂಗಾತಿಗಳು ಹೊಸ ಸಂಗತಿಗಳ ಬಗ್ಗೆ ಪ್ರಯತ್ನಿಸುವುದು ಮತ್ತು ಅವರನ್ನು ಆರಾಮದಾಯಕ ಮಟ್ಟದಿಂದ ಎಳೆಯುವುದನ್ನು ಸಹಿಸುವುದಿಲ್ಲ. ಇತರರ ಭಾವನೆಗಳನ್ನು ಕಡೆಗಣಿಸುವ ಪಾಲುದಾರರ ಗುಣವನ್ನು ಇವರು ಸಹಿಸುವುದಿಲ್ಲ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಈ ರಾಶಿಯವರು ಭರವಸೆಗಳಿಗೆ ಅಂಟಿಕೊಳ್ಳುವವರಾಗಿದ್ದಾರೆ. ಅವರು ಏನು ಹೇಳುತ್ತಾರೋ ಹಾಗೆಯೇ ನಡೆದುಕೊಳ್ಳುತ್ತಾರೆ. ಇವರ ಸಂಗಾತಿಯಾದವರು ಸುಳ್ಳು ಹೇಳುವುದು ಮತ್ತು ಮೋಸಮಾಡುವುದನ್ನು ಅವರು ದ್ವೇಷಿಸುತ್ತಾರೆ ಜೊತೆಗೆ ಈ ರೀತಿಯ ವರ್ತನೆಯ ವ್ಯಕ್ತಿಗಳನ್ನು ಸಹಿಸುವುದಿಲ್ಲ.

ಧನು: 23 ನವೆಂಬರ್ -22 ಡಿಸೆಂಬರ್
ಈ ರಾಶಿಯವರು ಸಾಹಸಮಯ ಪ್ರವೃತ್ತಿಯವರು ಎನ್ನಬಹುದು. ಇವರು ತಮ್ಮ ಪಾಲುದಾರರನ್ನು ಸಾಹಸಮಯ ಪ್ರವಾಸದಲ್ಲಿ ಪಾಲಿಸಲು ಬಯಸುತ್ತಾರೆ. ಯಾವುದೇ ಸಂಬಂಧವಿಲ್ಲದ ಜನರು ನಿರ್ಣಯ ನೀಡುವುದನ್ನು ಇವರು ಸಹಿಸುವುದಿಲ್ಲ.

ಮಕರ: ಡಿಸೆಂಬರ್ 23-ಜನವರಿ 20
ಇವರು ತಮ್ಮದೇ ಆದ ವಿಚಾರವನ್ನು ತೆಗೆದುಕೊಳ್ಳಲು ಇಷ್ಟಪಡುವಂತಹ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ. ಇವರು ಜೀವನವನ್ನು ಸರಳ ಹಾಗೂ ಸಂತೋಷದಿಂದ ಕಳೆಯಲು ಬಯಸುತ್ತಾರೆ. ನಿರಂತರವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರಲು ಬಯಸುವ ಇವರು ಬೇಜವಾಬ್ದಾರಿ ಹಾಗೂ ಕೆಲಸ ಮಾಡದವರನ್ನು ಇವರು ಸಹಿಸುವುದಿಲ್ಲ.

ಕುಂಭ: ಜನವರಿ 20-ಫೆಬ್ರವರಿ 18
ಈ ರಾಶಿಯವರು ಅತ್ಯಂತ ಸೃಜನಶೀಲ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು. ಸಾಂಪ್ರದಾಯಿಕ ವಿಧಾನವನ್ನು ಅನುಸರಿಸುವ ಪಾಲುದಾರರ ಗುಣವನ್ನು ನಿರಾಕರಿಸುತ್ತಾರೆ. ತಾನು ಮತ್ತು ತನ್ನ ಸಂಗಾತಿಯು ಅನನ್ಯವಾಗಿ ಇರಬೇಕು ಎಂದು ನಿರೀಕ್ಷಿಸುತ್ತಾರೆ.

ಮೀನ: 20 ಫೆಬ್ರವರಿ -20 ಮಾರ್ಚ್
ಈ ರಾಶಿಯವರು ಒತ್ತಡದ ಪರಿಸ್ಥಿತಿಯಲ್ಲೂ ಶಾಂತ ಚಿತ್ತದಿಂದ ಕಾರ್ಯನಿರ್ವಹಿಸುವ ವ್ಯಕ್ತಿಗಳು. ಪ್ರತಿಯೊಬ್ಬ ವ್ಯಕ್ತಿಯು ನ್ಯೂನತೆಯಿಂದ ಜನಿಸುತ್ತಾರೆ ಮತ್ತು ಪರಿಪೂರ್ಣತೆಯನ್ನು ಹೊಂದಿದವರಂತೆ ವರ್ತಿಸುವವರನ್ನು ಇವರು ದ್ವೇಷಿಸುತ್ತಾರೆ. ನಕಾರಾತ್ಮಕ ಭಾವವನ್ನು ಹೊಂದುವುದನ್ನು ಇವರು ಸಹಿಸುವುದಿಲ್ಲ.



Click it and Unblock the Notifications











